ಒಂದು ಕಡೆ ನಮ್ಮ ಸ್ಯಾಂಡಲ್‌ವುಡ್ (Sandalwood) ತಾರೆಯರ ಕೆಸಿಸಿ (KCC) ಕ್ರಿಕೆಟ್ ಟೂರ್ನಿ ಎಂದು ಎರಡು ದಿನ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ (Chinnaswamy Stadium Banglore) ನಲ್ಲಿ ಬ್ಯುಸಿಯಾದಗಿದ್ದರು. ಇನ್ನು ಮತ್ತೊಂದು ಕಡೆ ವಿವಿಧ ಚಿತ್ರರಂಗದ ತಾರೆಯರ ಸಿಸಿಎಲ್ (CCL) ಕ್ರಿಕೆಟ್ ಕಲರವ. ಆದರೆ ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನ ನಟ ದರ್ಶನ್ (Darshan) ಮಾತ್ರ ಗಲ್ಲಿ ಕ್ರಿಕೆಟ್‌ನಲ್ಲಿ ತಲ್ಲೀನರಾಗಿದ್ದಾರೆ. ಹೌದು ಮಡಿಕೇರಿಯಲ್ಲಿ (Madakeri) ಸ್ನೇಹಿತರ ಜೊತೆ ಕಾಲ ಕಳೆಯುತ್ತಿರುವ ದರ್ಶನ್ ಕ್ರಿಕೆಟ್ ಆಡುತ್ತಾ ತಮ್ಮದೇ ಲೋಕದಲ್ಲಿ ಕಳೆದು ಹೋಗಿದ್ದು ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದದಲ್ಲಿ (Social Media) ವೈರಲ್ ಆಗುತ್ತಿದೆ.
ಇನ್ನು ಕ್ರಾಂತಿ (Kranti) ಸಿನಿಮಾ ಪ್ರಮೋಷನ್ (Promotion) ಬಿಡುಗಡೆ (Release) ಹುಟ್ಟುಹಬ್ಬ (Birthday) ಅಂತೆಲ್ಲಾ ಬ್ಯುಸಿಯಾಗಿದ್ದ ದರ್ಶನ್ ಈಗ ಬಿಡುವು ಮಾಡಿಕೊಂಡು ಮಡಿಕೇರಿಗೆ ಹೋಗಿದ್ದಾರೆ. ಹೌದು ಅಲ್ಲಿನ ಸ್ನೇಹಿತರ ಜೊತೆ ಜಾಲಿಯಾಗಿ ಎಂಜಾಯ್ ಮಾಡ್ತಿದ್ದು ಈ ಹಿಂದೆ ಕೂಡ ಅದೇ ಜಾಗದಲ್ಲಿ ದರ್ಶನ್ ಕ್ರಿಕೆಟ್ ಆಡಿದ್ದ ವಿಡಿಯೋ ವೈರಲ್ ಆಗಿತ್ತು. ಹೌದು ಗಲ್ಲಿ ಹುಡುಗರಂತೆ ದರ್ಶನ್ ಬೌಂಡರಿ ಔಟ್ ಅಂತೆಲ್ಲಾ ಹಠ ಹಿಡಿಯುತ್ತಾ ಕ್ರಿಕೆಟ್ ಆಡಿದ್ದಾರೆ. ಇನ್ನು ಆ ವಿಡಿಯೋ ನೋಡಿ ಅಭಿಮಾನಿಗಳು ಬಹಳ ಖುಷಿಯಾಗಿದ್ದಾರೆ.
ಒಂದು ಎಸೆತವನ್ನು ದರ್ಶನ್ ಲಾಂಗ್ ಹಾಫ್‌ನತ್ತ ಬೀಸಿದ್ದು ಅಲ್ಲಿದ್ದ ಫೀಲ್ಡರ್ ಕೈಗೆ ಬಾಲ್ ತಗುಲಿ ಪಕ್ಕಕ್ಕೆ ಹೋಗಿದೆ. ಹೌದು ಕೂಡಲೇ ದರ್ಶನ್ ಓಡಿ ಹೋಗಿ ಅದು ಫೋರ್ ಫೋರ್ (Four) ಎಂದು ವಾದಿಸಿದ್ದಾರೆ. ಬೌಂಡರಿ ಲೈನ್ ಹೊರಗೆ ನಿಂತಿದ್ದೆ ನೀನು ಎಂದು ಹೇಳಿದ್ದಾರೆ. ಕೊನೆಗೂ ಸ್ನೇಹಿತರು ಸಹ ಒಪ್ಪಿಕೊಂಡಿದ್ದಾರೆ. ಕೆಲ ಹೊತ್ತು ಬ್ಯಾಟಿಂಗ್ (Batting) ಮಾಡಿದ ನಟ ದರ್ಶನ್ ನಂತರ ಬೌಲಿಂಗ್ (Bowling) ಮಾಡಿದ್ದಾರೆ. ಒಟ್ನಲ್ಲಿ ಗಲ್ಲಿ ಕ್ರಿಕೆಟ್ ಆಡುತ್ತಾ ಮಜಾ ಮಾಡಿದ್ದಾರೆ.
ಇಮ್ನು ಕಳೆದೆರಡು ದಿನಗಳಿಂದ ನಡೆದ KCC ಸೀಸನ್ 3 ಕ್ರಿಕೆಟ್ ಟೂರ್ನಿಗೆ ತೆರೆ ಬಿದ್ದಿದ್ದು ಡಾಲಿ ಧನಂಜಯ (DaIi Dhananjay) ನಾಯಕತ್ವದ ಗಂಗಾ ವಾರಿಯರ್ಸ್ (Ganga Wariors) ತಂಡ ಚಾಂಪಿಯನ್ ಆಗಿದೆ. ಹೌದು 6 ತಂಡಗಳಾಗಿ ಸ್ಯಾಂಡಲ್‌ವುಡ್ ಕಲಾವಿದರು ಟೂರ್ನಿಯಲ್ಲಿ ಭಾಗವಹಿಸಿದ್ದು ಶುಕ್ರವಾರ ಶನಿವಾರ ಪಂದ್ಯಗಳು ನಡೆದವು. ದರ್ಶನ್ ಯಶ್ (Yash) ಬಿಟ್ಟು ಸ್ಟಾರ್ ನಟರೆಲ್ಲಾ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಆಡಿ ಖುಷಿಪಟ್ಟಿದ್ದಾರೆ. ಇನ್ನು ದರ್ಶನ್ ಅಭಿಮಾನಿಗಳು ಸ್ಟೇಡಿಯಂನಲ್ಲಿ ಡಿ ಬಾಸ್ ಡಿಬಾಸ್ ಎಂದು ಕೂಗಿದ ವಿಡಿಯೋ ವೈರಲ್ ಆಗಿತ್ತು. ತಮ್ಮ ನೆಚ್ಚಿನ ಡಿಬಾಸ್ ಆಡುತ್ತಿಲ್ಲ ಎಂದು ತಿಳಿದು ಅಭಿಮಾನಿಗಳು ಬಹಳ ಬೇಸರಗೊಂಡರು.