ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯವಾಗಿರುವ ನಟ ಹಾಗೂ ರಾಜಕಾರಣಿ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಯವರು ಆಗಾಗ ತಮ್ಮ ವೈಯಕ್ತಿಯ ವಿಚಾರದಳು ಮತಚತು ತಮ್ಮ ಅಪ್ಪ-ಅಮ್ಮನ (Parents) ಕುರಿತಾದ ವಿಷಯಗಳ ಬಗ್ಗೆ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಇನ್ನು ಇತ್ತೀಚೆಗಷ್ಟೇ ಅವರ ತಾಯಿ ಅನಿತಾ ಕುಮರಸ್ವಾಮಿ (Anitha Kumaraswamy) ಅವರ ಹುಟ್ಟುಹಬ್ಬವಿತ್ತು (Birthday).
ಹೌದು ಇದಕ್ಕಾಗಿ ಅಮ್ಮನಿಗೆ (Mother) ವಿಶೇಷವಾಗಿ ಶುಭ ಕೋರಿರುವ ನಿಖಿಲ್ ಲವ್ ಯೂ ಅಮ್ಮ ಎಂದಿದ್ದಾರೆ. ಗೌಡರ ಕುಟುಂಬದ ಸೊಸೆ ಮತ್ತು ಕುಮಾರಸ್ವಾಮಿ (Kumaraswamy) ಅವರ ಪತ್ನಿ ಅನಿತಾ ಕುಮಾರಸ್ವಾಮಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು ಪ್ರತಿವರ್ಷದಂತೆ ಈ ಸಲವೂ ಕೂಡ ನಿಖಿಲ್ ಅಮ್ಮನಿಗೆ ವಿಶೇಷವಾಗಿ ಶುಭಾಷಯ ತಿಳಿಸುತ್ತಾರೆ. ಸದ್ಯ ಇದೀಗ ಅನಿತಾ ಕುಮಾರಸ್ವಾಮಿ ಯವರ ಹುಟ್ಟುಹಬ್ಬದ ಅಪರೂಪದ ಮತ್ತು ವಿಶೇಷ ವಿಡಿಯೋವೊಂದು ವೈರಲ್ ಆಗುತ್ತಿದ್ದು ಲೇಖನಿಯ ಕೆಳಗೆ ಈ ವಿಡಿಯೋ ನೋಡಬಹುದು.
ಸ್ಯಾಂಡಲ್‌ವುಡ್ (Sandalwood) ಯುವರಾಜ ನಿಖಿಲ್ ಕುಮಾರಸ್ವಾಮಿ (ಜನವರಿ 22 ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಹೌದು 33ನೇ ವಸಂತಕ್ಕೆ ಕಾಲಿಟ್ಟಿ ನಿಖಿಲ್ ಗೆ ಚಿತ್ರರಂಗ ರಾಜಕೀಯದ ಗಣ್ಯರು ಅಭಿಮಾನಿಗಳು ಶುಭ ಹಾರೈಸಿದ್ದುಕಳೆದ ಮೂರು ವರ್ಷಗಳಿಂದ ಕೊರೊನಾ ಕಾರಣದಿಂದ ನಿಖಿಲ್ ರವರು ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿರಲಿಲ್ಲ. ಸದ್ಯ ಈ ಬಾರಿ ಅವರು ಫ್ಯಾನ್ಸ್ ಹಾಗೂ ಬೆಂಬಲಿಗರೊಂದಿಗೆ ಬರ್ತ್‌ಡೇ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಹುಟ್ಟುಹಬ್ಬದ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದುಮೊಮ್ಮಗ (ನಿಖಿಲ್ ಕುಮಾರಸ್ವಾಮಿ ಪುತ್ರ) ಅವ್ಯಾನ್ ದೇವ್ ನಿಖಿಲ್‌ಗೆ ದೇವರ ಕುಂಕುಮ ಇಡುತ್ತಿರುವ ಅನಿತಾ ಕುಮಾರಸ್ವಾಮಿಯವರ ಫೋಟೋ ಸಖತ್ ವೈರಲ್ ಆಗಿತ್ತು.
ಪುತ್ರನಿಗಾಗಿ ತಾಯಿ ಅನಿತಾ ಕುಮಾರಸ್ವಾಮಿ(Anitha Kumaraswamy) ಕ್ಷೇತ್ರವನ್ನು ತ್ಯಾಗ ಮಾಡಿದ್ದು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ(Ramangara) ಕ್ಷೇತ್ರದಿಂದ ನಿಖಿಲ್(Nikhil Kumaraswamy) ಸ್ಪರ್ಧಿಸಲಿದ್ದಾರೆ ಎಂದು ಅನಿತಾ ಕುಮಾರಸ್ವಾಮಿ ಘೋಷಿಸಿದ್ದಾರೆ. ರಾಮನಗರದ ಹಳೇ ಬಸ್ ನಿಲ್ದಾಣದಲ್ಲಿ ಪಂಚರತ್ನ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಅನಿತಾ ಅವರು ನಿಖಿಲ್ ರಾಮನಗರದ ಅಭ್ಯರ್ಥಿ ಎಂದು ಪ್ರಕಟಿಸಿದ್ದು ನಿಖಿಲ್ ಹೆಸರು ಘೋಷಣೆ ಆಗುತ್ತಿದ್ದಂತೆ ಅಭಿಮಾನಿಗಳ ಹರ್ಷೋದ್ಘಾರ ವ್ಯಕ್ತಪಡಿಸಿದ್ದಾರೆ. ನಾನು ದೇವರ ಮುಂದೆ ನಿಂತಾಗ ನನ್ನ ಪತಿ ಹಾಗೂ ಪುತ್ರನ ಏಳಿಗೆಯನ್ನು ಬಯಸುತ್ತೇನೆ. ಕೆಲವರು ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದು ಯಾವುದೇ ಗೊಂದಲಕ್ಕೂ ಎಡೆಮಾಡಿಕೊಡಬೇಡಿ ಎಂದು ಹೇಳಿ ಅನಿತಾ ಕುಮಾರಸ್ವಾಮಿ ಭಾವುಕರಾದರು.