ಜೀವನದಲ್ಲಿ ಗಗನಸಖಿಯಾಗ ಬೆಂಬ ಕನಸು ಕಂಡಿದ್ದ ಈ ಮುದ್ದು ಮುಖದ ಚೆಲುವೆ, ಕನಸನ್ನು ನನಸು ಮಾಡಿಕೊಳ್ಳಲು ಹರಸಾಹಸ ಪಟ್ಟಿದ್ದರು. ಆದರೆ ಈ ಮಧ್ಯೆ ಈ ಚೆಲುವೆಗೆ ನಟನೆಯತ್ತ ಮನಸ್ಸು ಹೊರಳಿದ್ದು, ಇದಕ್ಕೆ ಪೋಷಕರ ಬೆಂಬಲ ಕೂಡ ಸಿಗುತ್ತದೆ.
ಆದರದರಿಂದ ಪ್ರಯತ್ನ ಮಾಡಿ ಬಿಡೋಣ ಎಂದು ಪ್ರಥಮ ಬಾರಿ ಧಾರಾವಾಹಿಯ ಆಡಿಷನ್‌ಗೂ ಕೂಡ ಭಾಗವಹಿಸಿದ್ದು, ಅದ್ರುಷ್ಟವಶಾತ್ ಕಲರ್ಸ್ ಕನ್ನಡದ ಧಾರಾವಾಹಿಯೊಂದಕ್ಕೆ ಆಯ್ಕೆಯಾಗಿಯೇ ಬಿಡುತ್ತಾರೆ. ಹೌದು ಆ ಧಾರಾವಾಹಿ ಬೇರೆ ಯಾವುದು ಅಲ್ಲ ಇತ್ತೀಚಿನ ದಿನಗಳಲ್ಲಿ ಸಖತ್ ಸದ್ಧು ಮಾಡುತ್ತಿರುವ ಜನಮೆಚ್ಚಿನ ಗೀತಾ ಧಾರಾವಾಹಿ.
‘ಗೀತಾ’ ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ ಈ ಬೆಡಗಿಯ ಹೆಸರು ಭವ್ಯಾಗೌಡ. ಬೆಂಗಳೂರಿನವರೇ ಆದ ನಟಿ ಭವ್ಯಾಗೌಡ ತಾನೆಂದು ನಟಿಯಾಗುತ್ತೇನೆ ಎಂಬ ಕನಸನ್ನು ಕಂಡವರಲ್ಲ. ಸಿನಿಮಾಗಳಲ್ಲಿ ಹಾಗೂ ಧಾರಾವಾಹಿಗಳಲ್ಲಿ ನಟಿ ಮಣಿಯರ ಅಭಿನಯವನ್ನು ನೋಡುವಾಗ ಆಕೆಯ ಪೋಷಕರು ‘ನೀನೂ ಅವರಂತೆ ಆಗಬೇಕು, ನಿನ್ನಿಂದ ಅಭಿನಯ ಸಾಧ್ಯವಾಗುತ್ತದೆಯೇ?’ ಎಂದು ಹೇಳುತ್ತಿದ್ದರಂತೆ.
ತಂದೆ ತಾಯಿಯ ಆಸೆ ಹಾಗೂ ಕನಸನ್ನು ನನಸಾಗಿಸಲು ಭವ್ಯಾ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ಇದೀಗ ಕರುನಾಡ ಮನೆಮಗಳಾಗಿದ್ದಾರೆ. ಇದೀಗ ಅವರ ಕ್ಯೂಟ್ ವಿಡಿಯೋ ನೋಡಿ.