ಚಿಕ್ಕ ಮಕ್ಕಳು ಏನೇ ಮಾಡಿದರೂ ಕೂಡ ಚಂದ ಎನ್ನುವ ಮಾತಿದೆ. ಹೌದು ಅವರ ಆಟ ಪಾಠ ಅಳು ನಗು ಎಲ್ಲವನ್ನೂ ಕೂಡ ನೋಡೊದಕ್ಕೆ ಖುಷಿ ಆಗತ್ತದೆ. ಮನಸ್ಸಿನಲ್ಲಿ ಏನೆ ನೋವಿದ್ದರೂ ಕೂಡ ಅದನ್ನ ಮರೆಸುವ ತಾಕತ್ತು ಮಕ್ಕಳ ನಗುವಿಗಿರುತ್ತದೆ. ಹಾಗಾಗಿ ಮಕ್ಕಳು ಮನೆಯಲ್ಲಿ ಓಡಾಡಿಕೊಂಡು ಇದ್ದರೆ ಮನೆ ತುಂಬಾ ನಗುವಿದ್ದಂತೆ. ಖುಷಿ ಇದ್ದಂತೆ.
ಇನ್ನು ಆ ಮಕ್ಕಳ ಮುದ್ದಿನ ಮಾತು ನಿಷ್ಕಲ್ಮಶ ಪ್ರೀತಿ ಎಂಥವರನ್ನಾದರೂ ಕೂಡ ಕರಗಿಸಿ ಬಿಡುತ್ತದೆ. ಇನ್ನು ಪುಟ್ಟ ಮಕ್ಕಳು ತಾಯಿಯನ್ನ ಬಿಟ್ಟರೆ ಹೆಚ್ಚು ಹಚ್ಚಿಕೊಳ್ಳೋದೆ ಶಾಲೆಯ ಶಿಕ್ಷಕಿಯರನ್ನ. ಹೌದು ಶಾಲೆಯ ಶಿಕ್ಷಕಿಯರೇ ಮಕ್ಕಳಿಗೆ ನಿಜವಾದ ಗುರು ಆಗಿದ್ದು ಅವರ ಮಾತೇ ವೇದ ವಾಕ್ಯ.
ಅದೆಷ್ಟೋ ಜನ ಮಕ್ಕಳು ಮನೆಯಲ್ಲಿ ಹೇಳಿದ್ದನ್ನು ನಂಬುವುದಿಲ್ಲ. ಅದೇ ಶಿಕ್ಷಕರು ಹೇಳಿದ್ದಾರೆ ಅಂದರೆ ಅದನ್ನು ನಂಬುತ್ತಾರೆ. ಹೌದು ಅಷ್ಟರ ಮಟ್ಟಿಗೆ ಶಿಕ್ಷಕರನ್ನು ಹಚಿಕೊಳ್ಳುತ್ತಾರೆ. ಅದರಲ್ಲೂ ಕೂಡ ಈಗ ಮಕ್ಕಳಿಗೆ ಬೈಯ್ಯುವುದಾಗಲಿ ಹೊಡೆಯುವುದಾಗಲಿ ಮಾಡುವ ಹಾಗಿಲ್ಲ.
ಮಕ್ಕಳನ್ನ ಪ್ರೀತಿಯಿಂದಲೇ ಮನವೊಲಿಸಿಕೊಳ್ಳಬೇಕಾಗುತ್ತದೆ. ಅವರಿಗೆ ಬುದ್ಧಿ ನೀತಿ ಪಾಠ ಹೇಳಬೇಕು. ಇತ್ತೀಚಿಗೆ ಒಬ್ಬ ವ್ಯಕ್ತಿ ಟ್ವಿಟ್ಟರ್ ನಲ್ಲಿ ಹಂಚಿಕೊಂಡ ಒಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಆ ಪುಟ್ಟ ಮಗು ಹಾಗೂ ಶಿಕ್ಷಕನ ಡಾನ್ಸ್ ನೋಡಿ.