ಕನ್ನಡ ಚಿತ್ರರಂಗ ಕಂಡ ಪ್ರತಿಭಾವನ್ವಿತ ಕಲಾವಿದರಲ್ಲಿ ನಟ ರಕ್ಷಿತ್ ಶೆಟ್ಟಿ ಅವರು ಕೂಡ ಒಬ್ಬರು. ಹೌದು ನಟನೆಯ ಜೊತೆ ನಿರ್ದೇಶಕರಾಗಿಯೂ ಕೂಡ ತಮ್ಮನ್ನು ತಾವು ಸ್ಥಾಪಿಸಿಕೊಂಡಿರುವ ನಟ ರಕ್ಷಿತ್ ಶೆಟ್ಟಿ ಸಿನಿ ಪ್ರಿಯರ ಅಚ್ಚುಮೆಚ್ಚಾಗಿದ್ದಾರೆ.
1983ರಲ್ಲಿ ಉಡುಪಿಯಲ್ಲಿ ಜನಿಸಿರುವ ನಟ ರಕ್ಷಿತ್ ಶೆಟ್ಟಿ ಅವರಿಗೆ ಇದೀಗ ಮೂವತ್ತೇಳು ವರುಷ ವಯಸ್ಸಾಗಿದ್ದು ನಿಶ್ಚಿತಾರ್ಥ ಮುರಿದು ಬಿದ್ದ ನಂತರ ವಿವಾಹದ ಬಗ್ಗೆ ಯೋಚನೆ ಮಾಡಿಲ್ಲ.
ಎನ್.ಎಮ್.ಎ.ಎಮ್. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂಜಿನೀಯರಿಂಗ್ ಪದವಿಯನ್ನು ಪಡೆದುಕೊಂಡಿರವ ನಟ ರಕ್ಷಿತ್ ಶೆಟ್ಟಿ ನಂತರ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜಿನಿಯರಿಂಗ್ ಆಗಿ ಕೆಲಸವನ್ನು ಶುರು ಮಾಡುತ್ತಾರೆ.
ಆದರೆ ರಕ್ಷಿತ್ ಶೆಟ್ಟಿ ಅವರಿಗೆ ಸಿನಿಮಾ ನಿರ್ದೇಶಕರಾಗುಬೇಕೆಂಬ ಆಸೆಯಾಗಿತ್ತು. ಅದಕ್ಕಾಗಿ ಎರಡು ವರ್ಷಗಳ ನಂತರ ಕೆಲಸವನ್ನು ಬಿಟ್ಟು ಸಿನಿಮಾ ರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ರಕ್ಷಿತ್ ಕೆಲಸ ಬಿಟ್ಟ ಕಾರಣ ಒಂದು ಹೊತ್ತಿನ ಊಟಕ್ಕೂ ಕೂಡ ಯೋಚನೆ ಮಾಡುವಂತಹ ಪರಿಸ್ಥಿತಿ ಇವರಿಗೆ ಎದುರಾಗಿತ್ತು.ಸ್ವಲ್ಪ ವರ್ಷಗಳ ಕಾಲ ರಕ್ಷಿತ್ ಶೆಟ್ಟಿ ಅವರಿಗೆ ಸಿನಿಮಾದಲ್ಲಿ ಅವಕಾಶ ದೊರೆಯಲಿಲ್ಲ.
ಇದರಿಂದ ಸಾಕಷ್ಟು ಬೇಸರವಾದ ರಕ್ಷಿತ್ ಶೆಟ್ಟಿ ಎಂದು ಕೂಡ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳಲಿಲ್ಲ. ಇನ್ನೂ ರಕ್ಷಿತ್ ಶೆಟ್ಟಿ ಅವರು ಡೆಬ್ಯೂ ಹೀರೋ ಆಗಿ ಕೆಲಸ ಮಾಡಿದಂತಹ ಸಿನೆಮಾ ಎಂದರೆ ತುಘಲಕ್. ಹೌದು ಈ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಈ ನಟ ಮೊದಲ ಸಿನಿಮಾದಲ್ಲೇ ಸೋಲನ್ನು ಅನುಭವಿಸುತ್ತಾರೆ. ಹೌದು ಚಿತ್ರಮಂದಿರಗಳಲ್ಲಿ ಹೆಚ್ಚು ವೀಕ್ಷಣೆ ಪಡೆದಿರಲಿಲ್ಲ.
ಸದ್ಯ ಇದೀಗ ರಕ್ಷಿತ್ ಸೋಲಿಲ್ಲದ ಸರದಾರನಾಗಿದ್ದು ಚಾರ್ಲಿ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಇನ್ನು ನಮ್ಮ ಶೆಟ್ರು ಹುಲಿ ಡ್ಯಾನ್ಸ್ ಗೆ ಎಷ್ಟು ಫೇಮಸ್ ಎಂದು ತಮಗೆ ತಿಳಿದಿದೆ. ಹೌದು ಯಾವುದೆ ಕಾರ್ಯಕ್ರಮಕ್ಕೆ ಹೋದರು ಅಭಿಮಾನಿಗಳು ಶೆಟ್ಟರ ಕೈಯಲ್ಲಿ ಹುಲಿ ಡ್ಯಾನ್ಸ್ ಮಾಡಿಸದೆ ಬಿಡುವುದಿಲ್ಲ. ಸದ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ವೈರಲ್ ಆಗಿದ್ದು ಬೆಂಗಳೂರಿನ ದಯಾನಂದ ಕಾಲೇಜಿನಲ್ಲಿ ಹೇಗೆ ಹುಲಿ ಡ್ಯಾನ್ಸ್ ಮಾಡಿದ್ದಾರೆ ನೀವೆ ನೋಡಿ.