ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಟ್ರಾಫಿಕ್ ತಪ್ಪಿಸಲು ಜಪಾನಿನಲ್ಲಿ ಬಂತು ವಿಚಿತ್ರ ಕಾರು…ಚಿಂದಿ ವಿಡಿಯೋ

1,962

ಸದ್ಯ ಬೆಂಗಳೂರಿನ ಸಂಚಾರ ವ್ಯವಸ್ಥೆ ವಿಶ್ವದಲ್ಲೇ ಭಾರಿ ಸದ್ದು ಮಾಡಿದೆ. ಹೌದು ಭಾರತ ಸೇರಿದಂತೆ ಹಲವು ಇತರ ದೇಶಗಳ ಜನರು ಬೆಂಗಳೂರನ್ನು ಇಷ್ಟಪಡುತ್ತಾರೆ. ಆದರೆ ಇಲ್ಲಿನ ಟ್ರಾಫಿಕ್ ವಿಚಾರ ಬಂದರೆ ಬೆಂಗಳೂರು ಸಹವಾಸವೇ ಬೇಡ ಎನ್ನುತ್ತಾರೆ.

ಹೌದು ಇಲ್ಲಿನ ಸಂಟಾರ ದಟ್ಟಣೆ ಟ್ರಾಫಿಕ್ ಜಾಮ್ ಎಲ್ಲರಿಗೂ ಬೇಸರ ತರಿಸುವ ವಿಚಾರವಾಗಿದ್ದು ಆದರೆ ಬೆಂಗಳೂರು ಟ್ರಾಫಿಕ್ ಇಲ್ಲಿನ ರಸ್ತೆ ಮೂಲಸೌಕರ್ಯ ಕುರಿತು ಸ್ಥಳೀಯರು ಏನು ಹೇಳುತ್ತಾರೆ ಗೊತ್ತಾ? ಬೆಂಗಳೂರಿನ ಶೇಕಡಾ 57ರಷ್ಟು ಮಂದಿ ನಗರದ ಸಂಚಾರ ವ್ಯವಸ್ಥೆ ಮತ್ತು ಆಡಳಿತ ತೃಪ್ತಿಕರವಾಗಿಲ್ಲ ಎಂದಿದ್ದಾರೆ. ಹೌದು ಆಡಳಿತದಲ್ಲಿನ ದೂರದೃಷ್ಟಿ ಕೊರತೆ ಸಮರ್ಪಕ ಯೋಜನೆಗಳ ಕೊರತೆಯನ್ನು ಜನ ಬೊಟ್ಟು ಮಾಡಿದ್ದು ಬೆಂಗಳೂರಿನ ಅವ್ಯವಸ್ಥೆ ಇಲ್ಲಿನ ವ್ಯವಸ್ಥೆ ಆಡಳಿತ ಟ್ರಾಫಿಕ್ ಸೇರಿದಂತೆ ಎಲ್ಲಾ ವಿಚಾರಗಳನ್ನು ಕೈಗೆತ್ತಿಕೊಂಡು ಬಿ.ಪ್ಯಾಕ್ ಸಮೀಕ್ಷೆ ನಡೆಸಿ ಉತ್ತರ ನೀಡಿದೆ.

ಹೌದು ಈ ವರ್ಷದ ಆರಂಭದಲ್ಲಿ ಬಿ ಪ್ಯಾಕ್ ಸಂಸ್ಥೆ ಬೆಂಗಳೂರು ನಾಗರೀಕರ ಅಭಿಪ್ರಾಯವನ್ನು ಸಂಗ್ರಹಿಸಿದ್ದು ಬಿಬಿಎಂಪಿಯ 198 ವಾರ್ಡ್ ಗಳ ಪೈಕಿ 186 ವಾರ್ಡ್ ಗಳನ್ನು ಒಳಗೊಂಡು 8 ವಲಯಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. 8405 ಮಂದಿಯ ಪ್ರತಿಕ್ರಿಯೆ ಸಂಗ್ರಹಿಸಲಾಗಿದ್ದು ಬೆಂಗಳೂರಿನ ಕುರಿತ ಕುತೂಹಲರ ಮಾಹಿತಿ ಇದೀಗ ಬಹಿರಂಗವಾಗಿದೆ.

ಹೌದು ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದ್ದು ಇನ್ನೂ ರಸ್ತೆ ಅಗಲೀಕರಣಕ್ಕೆ ಜಾಗವೇ ಇಲ್ಲದಾಗಿದೆ. ಫ್ಲೈ ಓವರ್ ಅಂಡರ್ ಪಾಸ್ ಸೇರಿದಂತೆ ಇರುವ ಮಾರ್ಗಗಳನ್ನು ಬಳಸಿಕೊಂಡರು ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಸಿಗುತ್ತಿಲ್ಲ. ಇತ್ತ ಮಳೆ ಬಂದರೆ ರಸ್ತೆಗಳು ನದಿಯಂತಾಗುತ್ತಿದ್ದು ಹಲವು ಪ್ರದೇಶಗಳ ಒಳಗೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿದೆ. ಅತೀ ವೇಗವಾಗಿ ಬೆಂಗಳೂರು ಬೆಳೆಯುತ್ತಿದೆ. ಆದರೆ ಮೂಲಸೌಕರ್ಯಗಳು ನಿರ್ವಹಣೆಯಲ್ಲಿ ಬೆಂಗಳೂರು ದಶಕಗಳಿಗಿಂತಲೂ ಹಿಂದಿದ್ದು ಇದು ಬಿ ಪ್ಯಾಕ್ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.

57% ಜನ ನಗರದ ಆಡಳಿತ ಮತ್ತು ಸಂಚಾರ ವ್ಯವಸ್ಥೆ ತೃಪ್ತಿಕರವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದು ಬಿಬಿಎಂಪಿ ಯ ಎಲ್ಲಾ ವಾರ್ಡ್ ಗಳಲ್ಲಿ ರಸ್ತೆ ಮತ್ತು ಹೊಂಡಗಳ ನಿರ್ವಹಣೆ ಕುಡಿಯುವ ನೀರು ಕಸ ತೆಗೆಯುವಿಕೆ ಮತ್ತು ಸಾರ್ವಜನಿಕ ಶೌಚಾಲಯ ನಿರ್ವಹಣೆಗೆ ಮೊದಲು ಆದ್ಯತೆ ನೀಡಿ ಪರಿಹಾರಗಳನ್ನು ಹುಡುಕುವಲ್ಲಿ ಗಮನಹರಿಸಬೇಕು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ ಎಂದು ಸಮೀಕ್ಷೆ ಹೇಳುತ್ತಿದೆ.

ಇನ್ನು ನಾಗರಿಕ ಸೇವೆಗಳಿಗೆ ಮೊದಲು ಆದ್ಯತೆಗಳು ನೀಡಬೇಕು ಮತ್ತು ಬೆಂಗಳೂರು ನಗರದಲ್ಲಿ ಸೇವೆಗಳ ವಿತರಣೆಯ ಗುಣಮಟ್ಟದ ಬಗ್ಗೆ ನಾಗರಿಕರ ಗ್ರಹಿಕೆಯನ್ನು ಅರ್ಥಮಾಡಿಕೊಳ್ಳುವ ಉದ್ದೇಶದಿಂದ ಈ ಸಮೀಕ್ಷೆಯನ್ನು ಕೈಗೊಳ್ಳಲಾಗಿತ್ತು.

ಸದ್ಯ ಇದೀಗ ಟ್ರಾಫಿಕ್ ಬಗ್ಗೆ ಯಾಕಪ್ಪ ಮಾತನಾಡುತ್ತಿದ್ದಾರೆ ಎಂದು ಯೋಚಿಸುತ್ತಿದ್ದೀರ? ಇದಕ್ಕೆ ಕಾರಣವಿದೆ. ಸದ್ಯ ಅಭಿವೃದ್ಧಿ ಹಾಗೂ ಅನ್ವೇಷಣೆಯಲ್ಲಿ ಮುಂದಿರುವ ಜಪಾನ್ ಇದೀಗ ಹೊಚ್ಚ ಹೊಸ ಫ್ಲೇಯಿಂಗ್ ಕಾರ್ ತಂದಿದೆ. ಇದೆ ವಿಶೇಷತೆ ಏನೆಂದರೆ ಉದ್ದನೆಯ ಟ್ರಾಫಿಕ್ ನಲ್ಲಿ ತಾವು ಸಿಲುಕಿಕೊಂಡರೆ ಕಾರನ್ನು ಆರು ಆಡಿ ಮೇಲಕ್ಕೆ ಮಾಡಿಕೊಂಡು ಸಲಿಸಾಗಿ ಮುಂದೆ ಬಂದು ನಿಲ್ಲಬಹುದು.

ಇದರಿಂದ ತಾವು ಟ್ರಾಫಿಕ್ ಫ್ರೀ ಆಗಬಹುದು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಬೆಂಗಳೂರಿಗರು ಆದಷ್ಟು ಬೇಗ ಈ ರೀತಿಯಾ ಟೆಕ್ನಾಲಜಿಯ ಕಾರನ್ನ ಮೊದಲು ನಮ್ಮ ರಾಷ್ಟ್ರಕ್ಕೂ ತರ್ಸಪ್ಪಾ ಎನ್ನುತ್ತಿದ್ದಾರೆ. ಒಮ್ಮೆ ಫ್ಲೈಯಿಂಗ್ ಕಾರ್ ವಿಡಿಯೋವನ್ನ ತಾವೂ ಕೂಡ ನೋಡಿ.