ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಮದುವೆಯಲ್ಲಿ ಕೊಡಗಿನ ಯುವತಿಯ ಚಿಂದಿ ಡಾನ್ಸ್…ನೋಡಿ ವಿಡಿಯೋ

24,393

ಕೊಡಗು ಕೇವಲ ಪ್ರವಾಸಿ ತಾಣಗಳ ತವರೂರು ಅಷ್ಟೇ ಅಲ್ಲ. ಕೊಡವರ ಆಚಾರ ವಿಚಾರಗಳು ಕೂಡ ಅತೀ ವಿಶಿಷ್ಟ ಎನ್ನಬಹುದು. ಆದರೆ ಇತ್ತೀಚೆಗೆ ಕೊಡವರ ವಿವಾಹ ಸಮಾರಂಭಗಳಲ್ಲಿ ಕೆಲವರು ಕೇಕ್ ಕತ್ತರಿಸುವುದು ಶಾಂಪೆನ್ ಹಾರಿಸೋದನ್ನು ರೂಢಿಸಿಕೊಳ್ಳುತ್ತಿದ್ದಾರೆ. ಹೌದು ಇದು ಕೊಡವ ಸಂಸ್ಕೃತಿಗೆ ಧಕ್ಕೆ ತರುವ ಆತಂಕ ಎದುರಾಗಿದ್ದು ಹೀಗಾಗಿಯೇ ಕೊಡಗಿನ ಪೊನ್ನಂಪೇಟೆ ಕೊಡವ ಸಮಾಜ ಮತ್ತು ವಿರಾಜಪೇಟೆ ಕೊಡವ ಸಮಾಜಗಳು ವಿವಾಹ ಸಮಾರಂಭದಲ್ಲಿ ಕೇಕ್ ಕತ್ತರಿಸುವುದು ಹಾಗೂ ಶಾಂಪೆನ್ ಹಾರಿಸೋದನ್ನು ನಿಷೇಧಿಸಿವೆ.

ಇನ್ನು ಇತ್ತೀಚೆಗೆ ಸಭೆ ನಡೆಸಿರುವ ಎರಡು ಸಮಾಜಗಳು ಇಂತಹದ್ದೊಂದು ನಿರ್ಧಾರ ತೆಗೆದುಕೊಂಡಿರುವುದು ಒಂದು ರೀತಿಯಲ್ಲಿ ಚರ್ಚೆಗೆ ಗ್ರಾಸವಾಗಿದ್ದು ಸಾಕಷ್ಟು ಜನರು ಇದು ಅತ್ಯಂತ ಒಳ್ಳೆಯ ನಿರ್ಧಾರ ಎಂದಿದ್ದಾರೆ. ಇನ್ನು ಮುಂದೆ ಒಂದು ವೇಳೆ ವಿವಾಹದಲ್ಲಿ ಕೇಕ್ ಕತ್ತರಿಸುವುದು ಮತ್ತು ಶಾಂಪೆನ್ ಹಾರಿಸೋದನ್ನು ಮಾಡಿದ್ರೆ ಅಂತಹ ಮದುವೆಗಳಿಗೆ ಬ್ರೇಕ್ ಹಾಕಲಾಗುತ್ತದೆ ಎನ್ನುವ ಎಚ್ಚರಿಕೆಯನ್ನು ಎರಡು ಕೊಡವ ಸಮಾಜಗಳು ನೀಡಿವೆ.

ಹಾಗಾದರೆ ಕೇಕ್ ಕತ್ತರಿಸೋದು ಹಾಗೂ ಶಾಂಪೆನ್ ಹಾರಿಸೋದನ್ನು ಕೊಡವ ಸಮಾಜಗಳು ನಿಷೇಧಿಸುತ್ತಿರುವುದಾದರೂ ಏಕೆ? ಕೊಡವರು ಪ್ರಕೃತಿ ಆರಾಧಕರು. ಅವರ ಸಂಸ್ಕೃತಿಯೇ ವಿಶಿಷ್ಟ. ಅಷ್ಟಕ್ಕೂ ವಿವಾಹಕ್ಕೆ ನಿಶ್ಚಿತಾರ್ಥ ಆಯಿತ್ತೆಂದರೆ ಬಳಿಕ ಯುವಕ ಗಡ್ಡ ಬೋಳಿಸುವಂತಿಲ್ಲ. ಹೌದು ಮದುವೆ ದಿನ ಗಡ್ಡ ತೆಗೆದು ವಿವಾಹಕ್ಕೆ ಸಿದ್ಧವಾಗಬೇಕು. ಮದುವೆಯ ದಿನ ಗಡ್ಡವನ್ನು ಬಿಡುವಂತಿಲ್ಲ. ಅಷ್ಟೇ ಏಕೆ ವಧು ವರರಿಗೆ ಆಶಿರ್ವದಿಸಲು ಬರುವ ಮಹಿಳೆಯರು ಬಿಚ್ಚು ತಲೆಯಲ್ಲಿ ಆಶಿರ್ವದಿಸುವಂತಿಲ್ಲ.

ಹೌದು ಬಿಚ್ಚು ತಲೆಯಲ್ಲಿ ಇರೋದು ಅಶುಭದ ಸಂಕೇತವಾಗಿದ್ದು ಅದರಲ್ಲೂ ಶೋಕದ ಸಂದರ್ಭದಲ್ಲಿ ಮಹಿಳೆಯರು ಬಿಚ್ಚುತಲೆಯಲ್ಲಿ ಇರುತ್ತಾರೆ ಎನ್ನೋದು ಕೊಡವ ಮುಖಂಡ ಎಂ. ಬಿ ದೇವಯ್ಯ ಅವರ ಅಭಿಪ್ರಾಯ. ಆದರೆ ಇತ್ತೀಚೆಗೆ ಆಧುನಿಕ ಜೀವನ ಶೈಲಿಗೆ ಮಾರುಹೋಗಿರುವ ಕೆಲ ಯುವಕರು ಉದ್ದದ ಗಡ್ಡವನ್ನು ಬಿಟ್ಟುಕೊಂಡೇ ವಿವಾಹವಾಗುತ್ತಿದ್ದಾರೆ. ಇನ್ನು ಮಹಿಳೆಯರು ಸಹ ಬಿಚ್ಚು ತಲೆಯಲ್ಲಿ ವಧು ವರರಿಗೆ ಆಶಿರ್ವದಿಸುತ್ತಿದ್ದಾರೆ ಎಂದು ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ರಾಜೀವ್ ಬೋಪಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಕೇಕ್ ಕತ್ತರಿಸೋದು ಶಾಂಪೇನ್ ಹಾರಿಸೋದು ಕೊಡವ ಸಂಸ್ಕೃತಿಯೇ ಅಲ್ಲ. ಅದು ಬ್ರಿಟೀಷರ ಅಥವಾ ಕ್ರೈಸ್ತರ ಸಂಸ್ಕೃತಿಯಾಗಿದ್ದು ಬ್ರಿಟೀಷರು ಭಾರತವನ್ನು ಬಿಟ್ಟು ಹೋಗಿ 8 ದಶಕಗಳಾಗುತ್ತಾ ಬಂದರು ಅವರ ಸಂಸ್ಕೃತಿಯನ್ನು ಮತ್ತೆ ನಾವು ಅಳವಡಿಕೊಳ್ಳುತ್ತಾ ಬಂದರೆ ನಮ್ಮ ಸಂಸ್ಕೃತಿ ಮೂಲೆ ಗುಂಪಾಗುತ್ತದೆ. ಹೌದು ಹೀಗಾಗಿ ಶೇಷ್ಠವಾದ ನಮ್ಮ ಸಂಸ್ಕೃತಿಯನ್ನೇ ಉಳಿಸಿ ಬೆಳೆಸಬೇಕಾದ ನಾವು ಬೇರೆಯವರ ಸಂಸ್ಕೃತಿಯನ್ನು ಆಚರಿಸಿ ನಮ್ಮ ಸಂಸ್ಕೃತಿಗೆ ಧಕ್ಕೆ ತರಬಾರದು ಎನ್ನೋದು ಹಲವರ ಅಭಿಪ್ರಾಯ.

ಹೀಗಾಗಿ ಪೊನ್ನಂಪೇಟೆ ಅಥವಾ ವಿರಾಜಪೇಟೆ ಕೊಡವ ಸಮಾಜಗಳು ಅಷ್ಟೇ ಅಲ್ಲ ಉಳಿದ ಎಲ್ಲಾ ಕೊಡವ ಸಮಾಜಗಳು ವಿವಾಹ ಸಮಾರಂಭದಲ್ಲಿ ಕೇಕ್ ಕತ್ತರಿಸುವುದು ಮತ್ತು ಶಾಂಪೇನ್ ಹಾರಿಸೋದನ್ನು ನಿಷೇಧಿಸಲು ನಿರ್ಧರಿಸಬೇಕು ಎಂದು ಎಂ. ಬಿ ದೇವಯ್ಯ ಒತ್ತಾಯಿಸಿದ್ದಾರೆ. ಇನ್ನು ಕೊಡವ ದವರ ಮದುವೆ ಹೇಗಿರುತ್ತೆ ಗೊತ್ತಾ? ಕೆಳಗಿನ ವಿಡಿಯೋ ನೋಡಿ.