ಸದ್ಯ ಸ್ಯಾಂಡಲ್ವುಡ್ ಬ್ಯೂಟಿಕ್ವೀನ್ ರಾಧಿಕಾ ಪಂಡಿತ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರ ಮುದ್ದುಗಳು ಐರಾ 4ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು ಇನ್ನು ಯಶ್ ರವರು ಐರಾ ಹೆಸರಿನಲ್ಲಿ ಸಿನಿಮಾ ಪ್ರೋಡಕ್ಷನ್ ಹೌಸ್ನ್ನು ತೆರೆಯುತ್ತಾರೆ ಎನ್ನಲಾಗಿದೆ. ಬಹುಷಃ ಈ ಕುರಿತ ವಿಚಾರ ಇಂದು ಬಹಿರಂಗವಾಗುವ ಸಾಧ್ಯತೆ ಇದೆ. ಡಿಸೆಂಬರ್ 2 2018ರಂದು ಐರಾ ಹುಟ್ಟಿದ್ದು.
ಯಶ್ ಮತ್ತು ರಾಧಿಕಾ ಪಂಡಿತ್ ಅವರ ಮಗಳು ಐರಾಗೆ ಇಂದಿಗೆ 4 ವರ್ಷ ತುಂಬಿವೆ. ಅಲ್ಲದೆ ಐರಾ ಮತ್ತು ಯಶ್ ಗಲಾಟೆಯ ಕ್ಯೂಟ್ ವಿಡಿಯೋಸ್ ಇಂಟರ್ನೆಟ್ನಲ್ಲಿ ತಂಬಾ ವೈರಲ್ ಆಗಿವೆ. ರಾಧಿಕಾ ಪಂಡಿತ್ ಮಗಳ ತುಂಟಾಟದ ವಿಡಿಯೋ ಮತ್ತು ಫೋಟೋಗಳನ್ನು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅಮ್ಮನ ಮುದ್ದುಮಗಳಾಗಿ ರಾಕಿಭಾಯ್ ಫೇವರಿಟ್ ಆಗಿರುವ ಐರಾ ಸೋಷಿಯಲ್ ಮೀಡಿಯಾದ ಮೂಲಕವೇ ಸಾಕಷ್ಟು ಜನರ ಪ್ರೀತಿಗೆ ಪಾತ್ರಳಾಗಿದ್ದಾಳೆ. ಸದ್ಯ ಇದೀಗ ಐರಾ ನಾಲ್ಕನೇ ವರುಷದ ಹುಟ್ಟುಹಬ್ಬವನ್ನು ಯಶ್ ದಂಪತಿಗಳು ಎಷ್ಟು ಕ್ಯೂಟ್ ಆಗಿ ಆಚರಿಸಿದ್ದಾರೆ ಗೊತ್ತಾ? ಲೇಖನಿಯ ಕೆಳಗಿರುವ ವಿಡಿಯೋ ನೋಡಿ.
ಜೀವನದಲ್ಲಿ ಸಂತೋಷವನ್ನು ಹೊರತುಪಡಿಸಿ ಏನನ್ನು ನೀಡಿಲ್ಲ. ಜನ್ಮ ದಿನದ ಶುಭಾಷಯಗಳು ನಮ್ಮ ಲಿಲ್ ಏಂಜೆಲ್ ಎಂದಿದ್ದಾರೆ ರಾಧಿಕಾ. ಜೊತೆಗೆ ಬೇಗ ಬೆಳೆಯಬೇಡ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ರಾಧಿಕಾ ಪಂಡಿತ್ ಮುದ್ದು ಮಗಳಿಗೆ ವಿಶ್ ಮಾಡಿ ಪೋಸ್ಟ್ ಮಾಡಿರುವ ಫೋಟೋಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಹಾಗೂ ಕಾಮೆಂಟ್ಸ್ ಹರಿದು ಬರುತ್ತಿವೆ.
ಜೊತೆಗೆ ಐರಾ ಯಶ್ ಗೆ ಹುಟ್ಟುಹಬ್ಬದ ಸುರಿಮಳೆಯೇ ಹರಿದು ಬಂದಿದ್ದು ಸಾಮಾಜಿಕ ಜಾಲತಾಣದಲ್ಲಿ ಐರಾ ಫೋಟೋ ಶೇರ್ ಮಾಡುತ್ತಿದ್ದಂತೆ ಸಿಕ್ಕಾಪಟ್ಟೆ ವೈರಲ್ ಆಗುತ್ತೆ. ಐರಾ ಕ್ಯೂಟ್ ವಿಡಿಯೋ ಮತ್ತು ಫೋಟೋಗಳನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ಇನ್ನು ಕಳೆದ ವರುಷ ಅಕ್ಟೋಬರ್ 30ರಂದು ಯಶ್ ಮತ್ತು ರಾಧಿಕಾ ದಂಪತಿ ಎರಡನೇ ಮಗನ ಹುಟ್ಟುಹಬ್ಬವನ್ನು ಗೋವಾದಲ್ಲಿ ಆಚರಣೆ ಮಾಡಿದ್ದರು. ಸಮುದ್ರದ ಮಧ್ಯೆ ಯಥರ್ವ ಯಶ್ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಿದ್ದರು. ಈ ಸಮಯದಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಕುಟುಂಬದವರು ಜೊತೆಯಲ್ಲಿದ್ದರು. ಮಗನ ಹುಟ್ಟುಹಬ್ಬದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನು ಕಳೆದ ವರ್ಷ ಯಶ್ ಸಂಪೂರ್ಣ ದಿನ ಫನ್ ವರ್ಲ್ಡ್ ನಲ್ಲಿಯೇ ಇದ್ದು ಮಗಳ ಹುಟ್ಟುಹಬ್ಬದ ಸಂಪೂರ್ಣ ಅರೇಂಜ್ಮೆಂಟ್ ಖುದ್ದು ತಾವೇ ಮಾಡಿದ್ದರು. ಈ ವರ್ಷವೂ ಮಗಳಿಗಾಗಿ ವಿಶೇಷವಾಗಿ ಕೇಕ್ ತರಿಸಿ ಕುಟುಂಬದವರ ನಡುವೆಯೇ ವಿಶೇಷವಾದ ಗೆಟ್ ಟುಗೆದರ್ ಒಂದನ್ನು ಆಯೋಜಿಸಿ ಮಗಳ ಹುಟ್ಟುಹಬ್ಬವನ್ನು ನೆನಪಿನಲ್ಲಿ ಉಳಿಯುವಂತೆ ಮಾಡಿದ್ದಾರೆ.
ಅತ್ತ ಯಶ್ ಅವರ ತಂಗಿ ನಂದಿನಿ ಹಾಗೂ ಬಾವ ಮತ್ತು ಅವರ ಎರಡು ಪುಟ್ಟ ಮಕ್ಕಳು ಕೂಡ ಪುಟಾಣಿ ಐರಾಳ ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಕೋರಿದರು. ಇತ್ತ ರಾಧಿಕಾ ಪಂಡಿತ್ ಅವರ ಆಪ್ಪ ಅಮ್ಮ ಮತ್ತು ಯಶ್ ಅವರ ಅಪ್ಪ ಅಮ್ಮ ಹಾಗೂ ಯಶ್ ಅವರ ಸಹಾಯಕರು ಮತ್ತು ಕೆಲವೇ ಕೆಲ ಆಪ್ತರಷ್ಟೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇನ್ನು ಸಾಮಾಜಿಕ ಜಾಲತಾಣದಲ್ಲಂತೂ ಪುಟಾಣಿ ಐರಾಳ ಫೋಟೋಗಳೇ ಮಿಂಚುತ್ತಿದ್ದು ಯಶ್ ಅವರ ಅಭಿಮಾನಿಗಳ ಪೇಜ್ ಗಳಲ್ಲಿ ಐರಾಳ ಫೋಟೋ ಜೊತೆಗೆ ಹುಟ್ಟುಹಬ್ಬದ ಶುಭಾಶಯ ತಿಳಿಸುವ ಪೋಸ್ಟ್ ಗಳು ವೈರಲ್ ಆಗಿದ್ದವು.
ಅತ್ತ ರಾಧಿಕಾ ಪಂಡಿತ್ ಅವರೂ ಸಹ ಮಧ್ಯರಾತ್ರಿಯಲ್ಲಿಯೇ ಮಗಳಿಗೆ ವಿಶೇಷವಾಗಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದು ಮಗಳ ಬಹಳ ವಿಶೇಷವಾದ ಫೋಟೋಗಳನ್ನು ಕೊಲಾಜ್ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ರಾಧಿಕಾ ಪಂಡಿತ್ ಹುಟ್ಟುಹಬ್ಬದ ಶುಭಾಶಯ ತಿಳಿಸಿ ಜೊತೆಗೆ ಬೇಗ ಬೆಳೆಯಬೇಡ ಎಂದು ಮನವಿಯನ್ನೂ ಸಹ ಮಾಡಿದ್ದರು. ರಾಧಿಕಾ ಪಂಡಿತ್ ಅವರ ಪೋಸ್ಟ್ ಗೆ ಸ್ನೇಹಿತರು ಅಭಿಮಾನಿಗಳು ಎಲ್ಲರೂ ಕಮೆಂಟ್ ಮೂಲಕ ಐರಾಗೆ ಶುಭಾಶಯ ತಿಳಿಸಿ ಶುಭ ಹಾರೈಸಿ ಸಂತೋಷ ಪಟ್ಟರು.