ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಅಪ್ಪು ಮಾತಿಗೆ ಬಿದ್ದು ಬಿದ್ದು ನಕ್ಕ ತೆಲುಗು ನಟ ಬಾಲಯ್ಯ…ಚಿಂದಿ ವಿಡಿಯೋ

672

Puneeth Rajkumar talking about Balakrishna: ನಮ್ಮ ಕರುನಾಡ ಕಂದ ಅಪ್ಪು ಅಗಲಿ ಅದಾಗಲೇ ಒಂದು ವರುಷ ಕಳೆದಿದೆ. ಅಪ್ಪು ಅವರ ಅಗಲಿಕೆಗೆ ಭಾರತ ಚಿತ್ರರಂಗದ ಪ್ರತಿಯೊಬ್ಬ ನಟರು ಕೂಡ ಕಂಬನಿ ಮಿಡಿದಿದ್ದರು. ಇನ್ನು ತೆಲುಗು ನಟರಾದ ನಂದಮೂರಿ ಬಾಲಕೃಷ್ಣ ಹಾಗೂ ಪ್ರಭುದೇವ ಪುನೀತ್ ಅವರ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದ್ದು ಪುನೀತ್ ಪಾರ್ಥಿವ ಶರೀರ ನೋಡಿ ಬಾಲಕೃಷ್ಣ ಕಂಬನಿ ಮಿಡಿದಿದ್ದರು. ಶಿವಣ್ಣರನ್ನು ತಬ್ಬಿಕೊಂಡು ಅವರು ಸಾಂತ್ವನ ಹೇಳಿದ್ದು ಪುನೀತ್ ಪತ್ನಿ ಅಶ್ವಿನಿ ಅವರಿಗೂ ಬಾಲಕೃಷ್ಣ ಸಾಂತ್ವನ ಹೇಳಿದ್ದರು.

ನನ್ನ ಸೋದರ ಸ್ನೇಹಿತ ಇಲ್ಲವೆಂದು ನೋವಾಗುತ್ತಿದೆ ಎಂದು ತೆಲುಗು ನಟ ನಂದಮೂರಿ ಬಾಲಕೃಷ್ಣ ಶೋಕ ವ್ಯಕ್ತಪಡಿಸಿದ್ದು ನಾವು ಒಂದೇ ತಾಯಿ ಮಕ್ಕಳಲ್ಲದಿದ್ದರೂ ಸೋದರರಂತಿದ್ದೆವು. ದೇವರು ಏಕೆ ಇಂತಹ ಅನ್ಯಾಯ ಮಾಡಿದ್ರು ಎಂದು ಬೇಸರವಾಗುತ್ತದೆ. ಪುನೀತ್ ಕಲಾವಿದನಾಗಿ ಅಭಿಮಾನಿಗಳನ್ನು ರಂಜಿಸಿದ್ದರು. ನಟನೆ ಜತೆಗೆ ಸಮಾಜ ಸೇವೆಯೂ ಮಾಡಿದ್ದಾರೆ. ಅವರು ನೇತ್ರ ದಾನ ಕೂಡ ಮಾಡಿದ್ದಾರೆ.

ನಾನು ಯಾವುದೇ ಕಾರ್ಯಕ್ರಮಕ್ಕೆ ಕರೆದರೂ ಬರುತ್ತಿದ್ದರು. ಲೇಪಾಕ್ಷಿಗೆ ಹಲವು ಬಾರಿ ಶಿವಣ್ಣ ಪುನೀತ್ ಬಂದಿದ್ದರು. ನಟ ಪುನೀತ್ ಇಲ್ಲ ಅನ್ನೋದೇ ಅಚ್ಚರಿಯಾಗುತ್ತಿದೆ. ನಟ ಪುನೀತ್ ನಮ್ಮ ಮುಂದೆ ಇರದೇ ಇರಬಹುದು. ಆದರೆ ನಮ್ಮ ಮನಸ್ಸಿನಲ್ಲಿ ಶಾಶ್ವತವಾಗಿ ಇರುತ್ತಾರೆ. ನಟ ಪುನೀತ್ ಇಲ್ಲದಿರುವುದು ನನಗೆ ವೈಯಕ್ತಿಕವಾಗಿ ನಷ್ಟ ಎಂದು ಬಾಲಕೃಷ್ಣ ಕಂಬನಿ ಮಿಡಿದಿದ್ದಾರೆ.

ತಮಗೆಲ್ಲರಿಗೂ ಕೂಡ ಗೊತ್ತಿರುವ ಹಾಗೆ ತೆಲುಗು ಭಾಷೆಯಲ್ಲಿ ಎನ್ ಟಿ ಆರ್ ಒಬ್ಬ ದೊಡ್ಡ ನಟ. ನಮಗೆ ಅಣ್ಣಾವ್ರು ಹೇಗೋ ಅದೇ ರೀತಿ ಆಂಧ್ರ ದಲ್ಲಿ ಎನ್ ಟಿ ಆರ್ ಎಂದು ಹೇಳಿದರೆ ಖಂಡಿತ ತಪ್ಪಾಗಲಾರದು. ಸದ್ಯ ಮೂರು ವರುಷದ ಹಿಂದೆ ಎನ್ ಟಿ ಆರ್ ಅವರ ಮಗ ಬಾಲಯ್ಯ ಅವರು ಎನ್ ಟಿ ಆರ್ ಎಂಬ ಸಿನೆಮಾವನ್ನು ಮಾಡಿದ್ದರು ಅದರಲ್ಲಿ ಸ್ವತಃ ತಾವೆ ಎನ್ ಟಿ ಆರ್ ಪಾತ್ರವನ್ನು ಮಾಡಿದ್ದಯ ಇದಲ್ಲದೆ ಈ ಚಿತ್ರದಲ್ಲಿ ಬಾಲಿವುಡ್ ನಟಿ ವಿದ್ಯಾ ಬಾಲನ್ ಅವರು ಕೂಡ ನಟಿಸಿದ್ದುರು.

ಇನ್ನು ಬೆಂಗಳೂರಿನಲ್ಲಿ ತೆಲುಗು ಚಿತ್ರ ಎನ್ ಟಿ ಆರ್ ವತಿಯಿಂದ ಒಂದು ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಈ ಸಮಯದಲ್ಲಿ ನಮ್ಮ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಹಾಗು ರಾಕಿಂಗ್ ಸ್ಟಾರ್ ಯಶ್ ಕೂಡ ಬಂದಿದ್ದರು. ಪುನೀತ್ ರಾಜಕುಮಾರ್ ಅವರು ಬಾಲಯ್ಯ ಅವರ ಬಗ್ಗೆ ಎನ್ ಟಿ ಆರ್ ಅವರ ಬಗ್ಗೆ ಅಣ್ಣಾವ್ರು ಮತ್ತು ಎನ್ ಟಿ ಆರ್ ಒಡನಾಟದ ಬಗ್ಗೆ ಮಾತಾಡಿದ್ದಾರೆ. ಪುನೀತ್ ಏನ್ ಹೇಳಿದ್ದಾರೆ ಈ ಕೆಳಗಿನ ವಿಡಿಯೋ ದಲ್ಲಿ ನೋಡಬಹುದು.

ತೆಲುಗಿನ ಮೇರು ನಟ ಎನ್‌ಟಿಆರ್‌ ಮತ್ತು ಕನ್ನಡದ ಮೇರುನಟ ಡಾ.ರಾಜ್‌ಕುಮಾರ್‌ ಇಬ್ಬರೂ ಆತ್ಮೀಯ ಸ್ನೇಹಿತರಾಗಿದ್ದರು. ಅವರ ಪುತ್ರರು ಕೂಡ ಅದೇ ರೀತಿಯ ಸ್ನೇಹ ಸಂಬಂಧ ಕಾಪಾಡಿಕೊಂಡು ಬಂದಿದ್ದು ಆ ಸ್ನೇಹದಿಂದಲೇ ಎನ್‌ಟಿಆರ್‌ ಪುತ್ರ ನಂದಮೂರಿ ಬಾಲಕೃಷ್ಣ ನಟನೆಯ ಗೌತಮಿ ಪುತ್ರ ಶಾತಕರ್ಣಿ ಸಿನಿಮಾದಲ್ಲಿ ಡಾ. ಶಿವರಾಜ್‌ಕುಮಾರ್‌ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ನಂತರ ನಟ ಪುನೀತ್‌ರಾಜ್‌ಕುಮಾರ್‌ ಸಹ ಬಾಲಯ್ಯ ಅವರ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಹೌದು ಬೋಯಪಟಿ ಶ್ರೀನು ನಿರ್ದೇಶನದ ಹೊಸ ಚಿತ್ರದಲ್ಲಿ ಬಾಲಯ್ಯ ನಾಯಕರಾಗಿ ನಟಿಸುತ್ತಿದ್ದಾರೆ. ಇದೇ ಸಿನಿಮಾದಲ್ಲಿ ಒಂದು ಖಡಕ್‌ ಪೊಲೀಸ್‌ ಅಧಿಕಾರಿಯ ಪಾತ್ರವಿದ್ದು ಅದನ್ನು ಪುನೀತ್‌ ಅವರೇ ನಿರ್ವಹಿಸಬೇಕು ಎಂಬುದು ಚಿತ್ರತಂಡದ ಬೇಡಿಕೆಯಾಗಿದೆ ಎಂದು ಅನೇಕ ಕಡೆ ಸುದ್ದಿಯಾಗಿತ್ತು. ಅದು ಸಖತ್ ವೈರಲ್ ಆಗಿತ್ತು. ತೆಲುಗಿನ ಕೆಲ ವೆಬ್ ಸೈಟ್‌ಗಳಲ್ಲೂ ಅದು ಪ್ರಕಟಗೊಂಡಿತ್ತು. ಆದರೆ ಅಪ್ಪು ಸುಳ್ಳು ಸುದ್ದಿ ಹರಡಿಸಬೇಡಿ ಎಂದು ಹೇಳಿ ವಂದಂತಿಗಳಿಗೆ ತೆರೆಎಳೆದಿದ್ದರು.