ಸ್ಯಾಂಡಲ್ ವುಡ್ ಮಿಲ್ಕ್ ಬ್ಯೂಟಿ ಆಶಿಕಾ ರಂಗನಾಥ್ ಅವರಿಗೆ ಸಂಬಂಧಿಸಿದ ಒಂದು ವಿಡಿಯೋ ಕಳೆದ ವರುಷ ಬಹಳ ವೈರಲ್ ಆಗಿತ್ತು. ಅದನ್ನು ಕಂಡ ಅಭಿಮಾನಿಗಳು ನಿಜಕ್ಕೂ ಶಾಕ್ ಆದರು. ಯಾವುದೋ ಕಲರ್ಫುಲ್ ಕಾರ್ಯಕ್ರಮದ ರೆಡ್ ಕಾರ್ಪೆಟ್ ಮೇಲೆ ಆಶಿಕಾ ನಡೆದುಕೊಂಡು ಬರುತ್ತಿರುವಾಗ ಕಿಡಿಗೇಡಿಯೊಬ್ಬ ಅವರಿಗೆ ಬಲವಂತವಾಗಿ ಕಿಸ್ ಮಾಡುತ್ತಾನೆ.
ಹೌದು ತದನಂತರ ಅಲ್ಲಿಂದ ಓಡಿ ಹೋಗುತ್ತಾನೆ. ಅವನನ್ನು ಹಿಡಿಯಲು ಬೌನ್ಸರ್ಗಳು ಪ್ರಯತ್ನಪಟ್ಟರೂ ಕೂಡ ಅವರ ಕೈಗೆ ಆತ ಸಿಗುವುದಿಲ್ಲ. ಏನು ಮಾಡಬೇಕು ಎಂದು ತೋಚದೇ ಆಶಿಕಾ ಸುಮ್ಮನೇ ನಡೆದುಹೋಗುತ್ತಾರೆ. ಇನ್ನು ಈ ಎಲ್ಲ ದೃಶಗಳು ಆ ವಿಡಿಯೋದಲ್ಲಿ ಸೆರೆ ಆಗಿತ್ತು. ಅದರ ಬಗ್ಗೆ ಸ್ವತಃ ಆಶಿಕಾ ಮಾತನಾಡಿದ್ದು ಈ ಘಟನೆ ಹೇಗೆ ನಡೆಯಿತು ಎಂಬುದನ್ನು ವಿವರಿಸಿದ್ದರು.
ಹೌದು ಆಶಿಕಾ ರಂಗನಾಥ್ ಕೆನ್ನೆಗೆ ಕಿಡಿಗೇಡಿಯೊಬ್ಬ ಬಲವಂತವಾಗಿ ಕಿಸ್ ಮಾಡಿದ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಅವರ ಅಭಿಮಾನಿಗಳ ವಲಯದಲ್ಲಿ ಚರ್ಚೆ ಶುರುವಾಯಿತು. ಹೌದು ಈ ಘಟನೆ ನಡೆದಿದ್ದು ಎಲ್ಲಿ? ಆ ವ್ಯಕ್ತಿ ಯಾರು? ಸುತ್ತಮುತ್ತಲೂ ಹಲವಾರು ಜನರು ಇರುವಾಗ ಅವನಿಗೆ ಅಷ್ಟು ಧೈರ್ಯ ಹೇಗೆ ಬಂತು? ಬಳಿಕ ಆ ಕಿಡಿಗೇಡಿಗೆ ಏನಾದರೂ ಶಿಕ್ಷೆ ಕೊಡಲಾಯಿತೋ ಇಲ್ಲವೋ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ಮಾತನಾಡಿಕೊಳ್ಳಲಾರಂಭಿಸಿದರು. ಇನ್ನು ಅಸಲಿ ವಿಷಯ ಏನೆಂದರೆ ಅದು ನಿಜವಾಗಿ ನಡೆದ ಘಟನೆಯೇ ಅಲ್ಲ. ಹೌದು ಪ್ರಸ್ತುತ ಆಶಿಕಾ ರಂಗನಾಥ್ ನಟಿಸುತ್ತಿರುವ ರೇಮೋ ಸಿನಿಮಾದ ಶೂಟಿಂಗ್. ಆದರೆ ವಿಡಿಯೋ ವೈರಲ್ ಆಗಿದ್ದು ಮಾತ್ರ ವಿಪರ್ಯಾಸ.
ಇನ್ನು ಪವನ್ ಒಡೆಯರ್ ನಿರ್ದೇಶನ ಮಾಡುತ್ತಿರುವ ರೇಮೋ ಸಿನಿಮಾದಲ್ಲಿ ಆಶಿಕಾ ರಂಗನಾಥ್ ರವರು ನಾಯಕಿಯಾಗಿ ನಟಿಸುತ್ತಿದ್ದಾರೆ. ಹೌದು ಅವರಿಗೆ ರೋಗ್ ಖ್ಯಾತಿಯ ಇಶಾನ್ ಜೋಡಿಯಾಗಿದ್ದು ಬೆಂಗಳೂರಿನ ಹಲವು ಲೊಕೇಷನ್ಗಳಲ್ಲಿ ಶೂಟಿಂಗ್ ನಡೆದಿತ್ತು.
ಇನ್ನು ಇತ್ತ ಒಂದು ಫೈಟಿಂಗ್ ದೃಶ್ಯವನ್ನು ಚಿತ್ರೀಕರಿಸಲಾ ಆ ದೃಶ್ಯಕ್ಕೂ ಮೊದಲು ಬರುವ ಸನ್ನಿವೇಶದಲ್ಲಿ ಕಿಡಿಗೇಡಿಯೊಬ್ಬ ನಾಯಕಿ ಕೆನ್ನೆಗೆ ಬಲವಂತವಾಗಿ ಕಿಸ್ ಮಾಡುತ್ತಾನೆ. ಇದರ ಚಿತ್ರೀಕರಣದ ವೇಳೆ ಸೆಟ್ನಲ್ಲಿ ಇದ್ದ ಯಾರೋ ಒಬ್ಬರು ವಿಡಿಯೋ ರೆಕಾರ್ಡ್ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ಅದರ ಹಿಂದಿನ ಸತ್ಯ ಏನು ಎಂಬುದು ಗೊತ್ತಾಗುವ ಮೊದಲೇ ಆ ವಿಡಿಯೋ ವೈರಲ್ ಆಗಿತ್ತು.
ವಿಡಿಯೋ ವೈರಲ್ ಆದ ಬಳಿಕ ನನಗೆ ಹಲವಾರು ಫೋನ್ ಕರೆಗಳು ಬಂದವು. ಒಂದು ವೇಳೆ ಈ ಘಟನೆ ನಿಜವಾಗಿಯೂ ನಡೆದಿದ್ದರೆ ನಾನು ಸುಮ್ಮನೆ ಇರುತ್ತಿರಲಿಲ್ಲ. ಹೌದು ನನ್ನ ಜೊತೆ ಯಾರಾದರೂ ಅತಿರೇಕದಿಂದ ವರ್ತಿಸಿದರೆ ಅವರನ್ನು ಸುಮ್ಮನೆ ಬಿಡುವುದಿಲ್ಲ. ಈ ರೀತಿಯ ಘಟನೆ ನಡೆದಾಗ ಹೆಣ್ಣುಮಕ್ಕಳು ಎದ್ದುನಿಂತು ವಿರೋಧಿಸಬೇಕು ಎಂದು ಆಶಿಕಾ ರಂಗನಾಥ್ ಹೇಳಿಕೆ ನೀಡಿದ್ದಾರೆ.
ಅವರ ಈ ಸ್ಪಷ್ಟನೆ ಬಳಿಕ ಅಭಿಮಾನಿಗಳು ಸಮಾಧಾನ ಪಟ್ಟುಕೊಂಡಿದ್ದು ಅಂದಹಾಗೆ ಈ ರೀತಿ ಚಿತ್ರೀಕರಣದ ವೇಳೆ ವಿಡಿಯೋ ಮಾಡಿ ಹರಿಬಿಡುವುದು ಇದೇ ಮೊದಲೇನಲ್ಲ. ಹಾಲಿವುಡ್ನಿಂದ ಸ್ಯಾಂಡಲ್ವುಡ್ವರೆಗೆ ಅನೇಕ ಸಿನಿಮಾ ತಂಡಗಳು ಇಂಥ ಕಿರಿಕಿರಿ ಅನುಭವಿಸಿವೆ. ಸದ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ನಾಯಕ ಇಶಾನ್ ಗೆ ಆಶಿಕ್ ಕಿಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದು ಈ ವಿಡಿಯೋವನ್ನ ಲೇಖನಿಯ ಕೆಳಗೆ ನೋಡಬಹುದು.