ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಕರ್ನಾಟಕ ರತ್ನ ಸಮಾರಂಭದಲ್ಲಿ ಹಾಡಲು ವಿಜಯ್ ಪ್ರಕಾಶ್ ಕೇಳಿದ ಸಂಭಾವನೆ ನೋಡಿ….

37,254

ನಮ್ಮ ದಕ್ಷಿಣ ಭಾರತ ಸಂಗೀತ ಲೋಕದಲ್ಲಿ ಸಂಚಲನ ಮೂಡಿಸುತ್ತಿರುವ ತಮ್ಮ ಅದ್ಭುತವಾದ ಗಾಯನದ ಮೂಲಕ ದೊಡ್ಡ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಗಾಯಕ ಎಂದರೆ ಅದು ವಿಜಯ್ ಪ್ರಕಾಶ್ ರವರು. ಕೇವಲ ದಕ್ಷಿಣ ಭಾರತ ಮಾತ್ರವಲ್ಲದೇ ಇಡೀ ಭಾರತಾದ್ಯಂತ ಹಲವಾರು ಭಾಷೆಯ ಸಿನಿಮಾಗಳಿಗೆ ಹಾಡುಗಳನ್ನು ಹಾಡಿರುವ ಗಾಯಕ ವಿಜಯ್ ಪ್ರಕಾಶ್ ಕನ್ನಡ ಸಿನಿಮಾಗಳಿಗೆ ಮಾತ್ರ ಗಾಯನ ಮಾಡದೆ ಹಿಂದಿ ಸೇರುದಂತೆ ತಮಿಳು ತೆಲುಗು ಹಾಗೂ ತುಳು ಹೀಗೆ ಇತ್ಯಾದಿ ಭಾಷೆಯ ಸಿನಿಮಾದ ಹಾಡುಗಳಿಗೆ ತಮ್ಮ ಧ್ವನಿ ನೀಡಿದ್ದಾರೆ.

ಇದರ ಜೊತೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿತ್ತಿರುವ ಸರಿಗಮಪ ಸಂಗೀತ ಕಾರ್ಯಕ್ರಮದಲ್ಲಿ ಹಲವು ಸೀಸನ್ ಗಳಿಂದ ತೀರ್ಪುಗಾರರಾಗಿದ್ದು ಆಸ್ಕರ್ ಮತ್ತು ಗ್ರಾಮಿ ಪ್ರಶಸ್ತಿ ಪಡೆದ ಜೈ ಹೋ ಹಿಂದಿಯ ಹಾಡಿಗೆ ಕೂಡ ಧ್ವನಿ ನೀಡಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ.

ಗಾಯಕ ವಿಜಯ್ ಪ್ರಕಾಶ್ ರವರು ಹುಟ್ಟಿದ್ದು ಸಾಂಸ್ಕೃತಿಕ ನಗರಿ ನಮ್ಮ ಮೈಸೂರಿನಲ್ಲಾಗಿದ್ದು ಇವರು ಫೆಬ್ರವರಿ 21 1976 ರಲ್ಲಿ ಲೋಪಮುದ್ರ ಎಂಬ ಬ್ರಾಹ್ಮಣ ಕುಟುಂಬದಲ್ಲಿ ಜನಿಸುತ್ತಾರೆ. ಹೌದು ಇವರಿಗೆ ಪಣೀಂದ್ರ ಕುಮಾರ್ ಎಂಬ ಸಹೋದರ ಕೂಡ ಇದ್ದು ಚಿಕ್ಕ ವಯಸ್ಸಿನಿಂದಲೇ ವಿದ್ಯಾಭ್ಯಾಸಕ್ಕಿಂತ ಹೆಚ್ಚಾಗಿ ಸಂಗೀತದ ಮೇಲೆ ಆಸಕ್ತಿ ಬೆಳೆಸಿಕೊಂಡ ವಿಜಯ್ ಏನಾದರೂ ಸಾಧನೆ ಮಾಡಬೇಕು ಎಂದು ದೃಢ ವಿಶ್ವಾಸದಿಂದ ಇಂದು ಈ ಮಟ್ಟಿಗೆ ಬೆಳೆದಿದ್ದಾರೆ ಎನ್ನಬಹುದು.

ಇನ್ನು ಇವರು ಇಂಜಿನಿಯರಿಂಗ್ ಪದವಿ ಪಡೆದಿದ್ದು ಮೊದಲು ಮನೆಯಿಂದ ಹೊರಟಾಗ ತಂದೆತಾಯಿಗೆ ಹೇಳಿದೆ ಕೈಯಲ್ಲಿ ಕೇವಲ 700 ರೂಪಾಯಿಗಳನ್ನು ಹಿಡಿದುಕೊಂಡು ಮನೆಯಿಂದ ಹೊರಟವರು. ಸದ್ಯ ಇವರು ಹಲವಾರು ಸಮಸ್ಯೆಗಳನ್ನು ಎದುರಿಸಿದ ಅವರು ಉನ್ನತಮಟ್ಟಕ್ಕೆ ಬೆಳೆದು ನಿಂತಿದ್ದಾರೆ ಎನ್ನಬಹುದು.
ಇನ್ನೂ ಗಾಯನ ಮಾಡಲು ಲಕ್ಷ ಲಕ್ಷ ಹಣ ಪಡೆಯುವ ವಿಜಯ್ ಪ್ರಕಾಶ್ ರವರು ಇದೀಗ ಅಪ್ಪು ಅವರ ಕರ್ನಾಟಕ ರತ್ನ ಇವೆಂಟ್ ನಲ್ಲಿ ಗಾಯನ ಮಾಡಿದ್ದು ಇಲ್ಲಿ ಅವರು ಪಡೆದ ಸಂಭಾವನೆ ಎಷ್ಟು ಗೊತ್ತಾ? ಅಚ್ಚರಿಪಡುತ್ತೀರಿ.

ಹೌದು ಸಹಸ್ರಾರು ಅಭಿಮಾನಿಗಳ ಸಮ್ಮುಖದಲ್ಲಿ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಗಣ್ಯರ ಸಮ್ಮುಖದಲ್ಲಿ ದಿ.ಪುನೀತ್ ರಾಜ್ ಕುಮಾರ್ ಅವರಿಗೆ ನ.1 ರಂದು ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಳೆಯನ್ನೂ ಕೂಡ ಲೆಕ್ಕಿಸದೇ ಸಹಸ್ರಾರು ಮಂದಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಿದ್ದನ್ನು ಕಣ್ತುಂಬಿಕೊಂಡಿದ್ದು ಕಾರ್ಯರ್ಕಮದಲ್ಲಿ ಡಾ.ಸುಧಾಮೂರ್ತಿ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರಿಗೆ ಪ್ರಶಸ್ತಿ ನೀಡುವ ಮಾಡುವ ಮೂಲಕ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಿದರು.

ಮುಖ್ಯ ಅಥಿತಿಯಾಗಿ ಆಗಮಿಸಿ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ ನಟ ರಜನಿಕಾಂತ ಅಪ್ಪು ಸಾಧಾರಣ ವ್ಯಕ್ತಿಯಲ್ಲ ಆತ ಅಪಾರವಾದದ್ದನ್ನು ಸಾಧಿಸಿದ್ದಾರೆ. ಕಲಿಯುಗಕ್ಕೆ ಪುನೀತ್ ದೇವರ ಮಗು ನಚಿಕೆತ ಮಾರ್ಕಾಂಡೇಯರ ಸಾಲಿಗೆ ಸೇರುವವರು ಅವರು. ಎನ್ ಟಿಅರ್ ಎಂಜಿಆರ್ ಶಿವಾಜಿಗಣೇಶನ್ ರಾಜ್ ಕುಮಾರ್ ಅವರು 50 ವರ್ಷದಲ್ಲಿ ಸಾಧಿಸಿದ್ದನ್ನು ಅಪ್ಪು 20 ವರ್ಷಗಳಲ್ಲಿ ಸಾಧಿಸಿದ್ದರು. ಅಪ್ಪು ಯಾವಾಗಲೂ ನಮ್ಮೊಂದಿಗೇ ಇರ್ತಾರೆ. ಕೇವಲ ನಟನೆಯಿಂದಷ್ಟೇ ಜನರನ್ನು ಗೆಲ್ಲಲು ಸಾಧ್ಯವಿಲ್ಲ. ಆದರ್ಶಗಳ ಮೂಲಕ ಗೆಲ್ಲಬಹುದು ಅದು ನಮ್ಮ ಅಪ್ಪು ಮಾಡಿದ್ದಾರೆ ಎಂದು ಬಣ್ಣಿಸಿದ್ದಾರೆ.

ಇದೇ ವೇಳೆ 1979 ರಲ್ಲಿ ಶಬರಿ ಮಲೆ ಯಾತ್ರೆ ವೇಳೆ ತಾವು ಪುನೀತ್ ರಾಜ್ ಕುಮಾರ್ ಅವರನ್ನು ಮೊದಲ ಬಾರಿ ನೋಡಿದ್ದನ್ನು ರಜನಿಕಾಂತ್ ಸ್ಮರಿಸಿಕೊಂಡರು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜ್ಯೂ. ಎನ್ ಟಿಆರ್ ರವರು ಒಬ್ಬ ವ್ಯಕ್ತಿಗೆ ಉಪನಾಮ ಎಂಬುದು ಪರಂಪರೆಯಿಂದ ಬರುತ್ತದೆ ಆದರೆ ವ್ಯಕ್ತಿತ್ವ ಸ್ವಂತ ಸಂಪಾದನೆಯಾಗಿರುತ್ತದೆ. ಸ್ವಂತ ವ್ಯಕ್ತಿತ್ವದಿಂದ ನಗುವಿನಿಂದಲೇ ಒಂದು ರಾಜ್ಯ ಗೆದ್ದ ರಾಜ ಪುನೀತ್ ರಾಜ್ ಕುಮಾರ್ ರವರು ಎಲ್ಲಕ್ಕೂ ಮಿಗಿಲಾಗಿ ಶ್ರೇಷ್ಠ ವ್ಯಕ್ತಿತ್ವದವರಾಗಿದ್ದರು.

ಪುನೀತ್ ನಗುವಿನ ಒಡೆಯ ಅವರ ವ್ಯಕ್ತಿತ್ವದಿಂದ ಅಭಿಮಾನಿಗಳನ್ನು ಪಡೆದಿದ್ದು ಕರ್ನಾಟಕ ರತ್ನದ ಅರ್ಥವೇ ಪುನೀತ್ ರಾಜ್ ಕುಮಾರ್ ಅವರಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಹೆಮ್ಮೆಯ ಗೆಳೆಯನಾಗಿ ನಿಂತಿದ್ದೇನೆ ಈ ಅವಕಾಶ ನೀಡಿದ್ದಕ್ಕೆ ಸರ್ಕಾರಕ್ಕೆ ಡಾ. ರಾಜ್ ಕುಟುಂಬಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದ್ದಾರೆ. ಇನ್ನು ಈ ಕಾರ್ಯಕ್ರಮಕ್ಕೆ ವಿಜಯ್ ಪ್ರಕಾಶ್ ರವರು ಬೊಂಬೆ ಹೇಳುತೈತೆ ಹಾಡನ್ನು ಹೇಳುವ ಮೂಲಕ ಚಾಲನೆ ನೀಡಿದ್ದು ಸಾಕಷ್ಟು ನಿಮಿಷಗಳ ಕಾಲ ಅಭಿಮಾನಿಗಳನ್ನು ರಂಜಿಸಿದರು ವಿಜಯ್ ಪ್ರಕಾಶ್.

ಸಾಮಾನ್ಯವಾಗಿ ಒಂದು ಈವೆಂಟ್ ನಲ್ಲಿ ಭಾಗವಹಿಸಲು ಸಾಕಷ್ಟು ಹಣ ಪಡೆಯುವ ವಿಜಯ್ ಪ್ರಕಾಶ್ ರವರು ಅಪ್ಪು ಅವರ ಕರ್ನಾಟಕ ರತ್ನ ಈವೆಂಟ್ ನೆಲ್ಲಿ ಒಂದೇ ಒಂದು ರೂಪಾಯಿಯೂ ಕೂಡ ಹಣ ಪಡೆಯದೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅಪ್ಪು ಅವರಿಗೆ ಗೌರವ ಸಲ್ಲಿಸಿದ್ದಾರೆ. ಹೌದು ಈ ಮೂಲಕವಾಗಿ ವಿಜಯ್ ಪ್ರಕಾಶ್ ರವರು ಕೂಡ ಹೃದಯವಂತಿಕೆಯಲ್ಲಿ ಮೆರೆದಿತ್ತು ಇದು ಅವರು ಅಪ್ಪು ಅವಳಿಗೆ ನೀಡುತ್ತಿರುವ ಗೌರವ ಎನ್ನಬಹುದು.