ಸಾಮಾನ್ಯವಾಗಿ ಈ ಸಿನಿಮಾ ನಟರು ಅಂದರೆ ಕೇವಲ ಸಿನಿಮಾ ಮಾಡುತ್ತಾರೆ ತಮ್ಮ ಸಂಭಾವನೆ ತೆಗೆದುಕೊಂಡು ವೈಯಕ್ತಿಕ ಜೀವನ ನೋಡಿಕೊಳ್ಳುತ್ತಾರೆ ಎನ್ನುವುದು ಬಹುತೇಕರ ಅಭಿಪ್ರಾಯವಾಗಿದ್ದು ಸಿನಿಮಾ ರಂಗದವರು ಯಾರಿಗೂ ಸಹಾಯ ಮಾಡೋಲ್ಲ ಇವರಿಂದ ಯಾರಿಗೂ ಉಪಯೋಗವಿಲ್ಲ ಎಂಬುದೇ ಸಹಜವಾಗಿ ನಟರ ಮೇಲಿರುವ ಕಂಪ್ಲೇಟ್ಸ್ ಆಗಿರುತ್ತದೆ.
ಆದರೆ ಹೀಗೆ ಸಿನಿಮಾ ನಟರನ್ನು ತೆಗೆಳುವ ಜನರೇ ಒಬ್ಬ ನಟನನ್ನು ಮಾತ್ರ ಭಾರೀ ಹೊಗಳುತ್ತಿದ್ದು ಸಾಮಾನ್ಯ ಜನರಿಗೆ ಬಡ ವಿದ್ಯಾರ್ಥಿಗಳಿಗೆ ಸಹ ಕಲಾವಿದರ ಅವರ ಕಷ್ಟಗಳಿಗೆ ಸ್ಪಂದಿಸುವ ಗುಣ ಇವರಿಗೆ ಮಾತ್ರ ಇದೆ ಎಂದು ಕೊಂಡಾಡುತ್ತಾರೆ. ಹೌದುಹೀಗೆ ನಾವು ಹೇಳುತ್ತಿರುವುದು ಬೇರೆ ಯಾರ ಬಗ್ಗೆಯೂ ಅಲ್ಲ ಚಾಲೆಂಜಿಗ್ ಸ್ಟಾರ್ ದರ್ಶನ್ ಬಗ್ಗೆ.
ಹೌದು ನಟ ದರ್ಶನ್ ಜನರ ಕಷ್ಟಗಳಿಗೆ ಸ್ಪಂದಿಸುವ ಸಿನಿಮಾ ನಟರ ಪೈಕಿ ಒಬ್ಬರು. ಇವರು ಯಾರಿಗೆಲ್ಲಾ ನೆರವಾದರು ಎಂದು ಫೇಸ್ಬುಕ್ ಟ್ವಿಟ್ಟರ್ನಲ್ಲಿ ಅವರ ಅಭಿಮಾನಿಗಳು ಬರೆದುಕೊಳ್ಳುವುದನ್ನ ನಾವು ನೋಡಿದ್ದೇವೆ.ಆದರೀಗ ಸ್ವತಃ ದರ್ಶನ್ ಯಾರಿಗೆ ಎಲ್ಲಾ ಸಹಾಯ ಮಾಡಿದ್ಧಾರೆ ಎಂಬ ಅಧಿಕೃತ ಮಾಹಿತಿ ಸಿಕ್ಕಿದ್ದು ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಮಂದಿ ದರ್ಶನ್ ಬಗ್ಗೆ ಹೆಮ್ಮೆಯಿಂದ ಬರೆದುಕೊಂಡಿದ್ಧಾರೆ.
ರಾಜ್ಯದ 60 ಅನಾಥ ಆಶ್ರಮ ಮತ್ತು 1 ಮಠಕ್ಕೆ ಅಗತ್ಯ ವಸ್ತು 70 ಟನ್ ದವಸ ಧಾನ್ಯ ಪೂರೈಕೆ
ಸಾವಿರಾರು ಅಭಿಮಾನಿಗಳಿಂದ ಕ್ಯಾನ್ಸರ್ ಪೀಡಿತ ಪುಟ್ಟ ಮಕ್ಕಳಿಗೆ ರಕ್ತದಾನ 50 ಲಾರಿ ತುಂಬ ಗೋ ಶಾಲೆಗೆ ಮೇವು ಹಾಗೂ 2 ಲಕ್ಷಕ್ಕೂ ಹೆಚ್ಚು ಜನರಿಗೆ ತಾನು ದುಡಿದ ದುಡ್ಡಿನಿಂದ ಅನ್ನದಾನ ಮತ್ತು 20ಕ್ಕೂ ಹೆಚ್ಚು ಅಂಗವಿಕಲರಿಗೆ ವೀಲ್ ಚೇರ್ ಹಾಗೆಯೇರಾಜ್ಯದ ಪ್ರತಿ ಜಿಲ್ಲೆಯಲ್ಲೂ ಅನಾಥ ಆಶ್ರಮಕ್ಕೆ ಅಭಿಮಾನಿಗಳಿಂದ ಅನುದಾನ ಜೊತೆ ಕ್ರೀಡೆ ವಸ್ತು ನೀಡಿ ಪ್ರೋತ್ಸಾಹ ಮತ್ತು ಆಟೋ ಚಾಲಕರು ಕ್ಯಾಬ್ ಚಾಲಕರು ಸಣ್ಣಪುಟ್ಟ ವ್ಯಾಪಾರಿಗಳಿಗೆ ಅಂಗಡಿ ಮುಂಗಟ್ಟು ಮಾಲೀಕರಿಗೆ ಸಹಾಯ ಮತ್ತು ನೂರಾರು ಬಡವರಿಗೆ ಕಾಣದ ರೀತಿ ಸಹಾಯಹಸ್ತ ಮುಂತಾದವುಗಳು. ಹೀಗೆ ದಚ್ಚು ಅನೇಕರಿಗೆ ಸಹಾಯ ಮಾಡಿದ್ದು ಇವರಿಗೆ ಈ ಗುಣ ಬಂದಿದ್ದೆ ತಂದೆ ತೂಗುದೀಪ ಶ್ರೀನಿವಾಸ್ ಅವರಿಂದ.
ಇನ್ನು ತಾವು ಕೆಜಿಎಫ್ ಚಿತ್ರದಲ್ಲಿ ಕರುಡು ತಾತನ ಪಾತ್ರದಲ್ಲಿ ಬಹಳ ಅಚ್ಚುಕಟ್ಟಾಗಿ ಅಭಿನಯಿಸಿದ್ದ ತಾತನ ಬಗ್ಗೆ ಚೆನ್ನಾಗಿ ತಿಳಿದಿರುತ್ತದೆ. ಇವರ ಹೆಸರು ಕೃಷ್ಣಪ್ಪ ಎಂಬುದಾಗಿದ್ದು ಬಹಳ ವರುಷದಿಂದ ಚಿತ್ರರಂಗದಲ್ಲಿದ್ದಾರೆ. ಅಲ್ಲದೇ ತೂಗದೀಪ ಶ್ರೀನಿವಾಸ್ ಅವರ ಜೊತೆ ಕೂಡ ಕೆಲಸ ಮಾಡಿದ್ದು ಇದೀಗ ಅವರು ಮಾಡಿದ್ದ ಸಹಾಯ ಒಂದನ್ನ ನೆನಪಿಸಿಕೊಂಡಿದ್ದಾರೆ.
ನಟ ತೂಗುದೀಪ ರವರ ರಾಮ ಪರುಶುರ ಚಿತ್ರದಲ್ಲಿ ಕೃಷ್ಣಪ್ಪ ರವರು ಸಹ ನಿರ್ದೇಶಕರಾಗಿದ್ದರು. ಈ ಸಿನಿಮಾದಲ್ಲಿ ತೂಗುದೀಪ ಅವರ ಭುಜದ ಮೇಲೆ ಒಂದು ಪಕ್ಷಿ ಕುಳಿತುಕೊಳ್ಳುವ ದೃಶ್ಯವಿದೆ.ಯಾವ ಬಳ್ಳಿಯ ಸಹಾಯವಿಲ್ಲದೆ ಭುಜದ ಮೇಲೆ ಪಕ್ಷಿಯನ್ನು ಕೂರಿಸಿಕೊಂಡಿದ್ದ ತೂಗುದೀಪ ಶ್ರೀನಿವಾಸ್ ರವರು ಹಾಗೆಯೇ ಡೈಲಾಗ್ ಹೇಳಿದ್ದರು. ಈ ಕುರಿತು ಮಾತನಾಡಿದ ಕೃಷ್ಣಪ್ಪ ರವರು ಪಕ್ಷಿ ಜೊತೆ ಎಮೋಷನಲ್ ಬಾಂಡಿಂಗ್ ಹೊಂದಿದ್ದರು ಶ್ರೀನಿವಾಸ್ ರವರು.
ಆದ ಕಾರಣ ಅದು ಕೂಡ ಅಷ್ಟೇ ಸಲುಗೆಯಿಂದ ಇತ್ತು ಎಂದ ಕೃಷ್ಣಪ್ಪ ತೂಗುದೀಪ ಅವರಿಗೆ ಸಹಾಯ ಮಾಡುವ ಮನೋಭಾವ ಕೂಡ ಇತ್ತು ಎಂದಿದ್ದಾರೆ. ಒಮ್ಮೆ ಕೃಷ್ಣಪ್ಪ ರವರನ್ನು ಮೈಸೂರಿನ ಮನೆಗೆ ಕರೆಸಿ ಉತ್ತಮ ಆತಿಥ್ಯ ಕೂಡ ಕೊಟ್ಟಿದ್ದರಂತೆ. ಅದೇ ರೀತಿ ಶೂಟಿಂಗ್ ನಿಂದ ಎಲ್ಲರನ್ನು ಮನೆಗೆ ಕಳುಹಿಸಿ ಕೊಡುವ ಅನೂಕೂಲ ಮಾಡುವ ಮೂಲಕ ಸಹಾಯ ಮಾಡಿದ್ದರು ಎಂದು ಕೃಷ್ಣಪ್ಪ ಹೇಳಿದ್ದು ತಂದೆಯಂತೆಯೇ ಮಗ ಎಂದು ಕೂಡ ದರ್ಶನ್ ಬಗ್ಗೆ ಬಣ್ಣಿಸಿದ್ದಾರೆ. ಸದ್ಯ ಕೃಷ್ಣಪ್ಪ ರವರ ಸಂದರ್ಶನದ ವಿಡಿಯೋ ಅಭಿಮಾನಿಗಳಿಗೆ ಖುಷಿ ತಂದಿದೆ.