ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರಿಗೆ ಈಗಸಗಲೇ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಪ್ರಶಸ್ತಿ ಸ್ವೀಕರಿಸಿದರು. ಇನ್ನು ಕಾರ್ಯಕ್ರಮಕ್ಕೆ ಮಳೆ ಅಡ್ಡಿ ಪಡಿಸಿತು. ನವೆಂಬರ್ 1 ರಂದು ಸಂಜೆ 5 ಗಂಟೆಗೆ ಶುರುವಾದ ಕಾರ್ಯಕ್ರಮದಲ್ಲಿ ಗಣ್ಯರು ವೇದಿಕೆ ಏರುವ ವೇಳೆಗೆ ಮಳೆ ಆರಂಭವಾಗಿದ್ದು ಕೊಡೆ ಹಿಡಿದು ಪ್ರಶಸ್ತಿ ಪ್ರದಾನ ಮಾಡುವಂತಾಯಿತು.
ತೆರೆದ ವೇದಿಕೆಯಲ್ಲಿ ಕಾರ್ಯಕ್ರಮ ಅಯೋಜಿಸಲಾಗಿದ್ದು ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳ ಮೇಲೆ ವೇದಿಕೆ ಸಿದ್ಧವಾಗಿತ್ತು. ಹೌದು ಅಭಿಮಾನಿಗಳು ಮಳೆಯನ್ನು ಕೂಡ ಲೆಕ್ಕಿಸದೇ ಕೊಡೆ ಹಿಡಿದು ಮಳೆಯಲ್ಲಿ ನಿಂತೇ ಕಾರ್ಯಕ್ರಮ ವೀಕ್ಷಿಸಿದ್ದು ಕೆಲವರು ಮಳೆಯಲ್ಲಿ ನೆನೆಯುತ್ತಲೇ ಅಪ್ಪು ಅಪ್ಪು ಎಂದು ಕೂಗುತ್ತಾ ಸಮಾರಂಭ ಕಣ್ತುಂಬಿಕೊಂಡರು.
ಸೂಪರ್ ಸ್ಟಾರ್ ರಜನಿಕಾಂತ್ ಮಾತನಾಡಿ ಅಂದು ಡಾ. ರಾಜ್ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿದಾಗ ಇದೇ ರೀತಿ ಮಳೆ ಬಂದಿತ್ತು ಎಂದು ಕೇಳಿಪಟ್ಟೆ. ಇಂದು ಕೂಡ ಬಂದಿದೆ ಎಂದರು. ಇನ್ನು ಈ ನಡುವೆ ಜರ್ಮನಿಯಲ್ಲಿರುವ ಅಪ್ಪು ಮೊದಲ ಮಗಳು ದೃತಿ ಅವರಿಗೆ ಎಂತಹ ಸರ್ಪೈಸ್ ಸಿಕ್ಕಿದೆ ಗೊತ್ತಿದೆ? ಮುಂದೆ ಓದಿ.
ಇನ್ನು ಸಮಾರಂಭದಲ್ಲಿ ಮಾತಾಡಿದ ಮುಖ್ಯಮಂತ್ರಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಅಪ್ಪು ನಮ್ಮ ಜೊತೆ ಇದ್ದು ಆಕಾಶದಿಂದ ಮಳೆಯ ರೂಪದಲ್ಲಿ ಬಂದು ಅಪ್ಪು ನಮಗೆ ಶುಭಕೋರಿದ್ದಾರೆ ಎಂದರು. ಹೌದು ಇನ್ನು ಕಾರ್ಯಕ್ರಮಕ್ಕೆ ತೆಲುಗು ನಟ ಜ್ಯೂನಿಯರ್ ಎನ್ಟಿಆರ್ ಸುಧಾಮೂರ್ತಿ ಕೂಡ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದು ಸಚಿವರಾದ ಆರ್. ಅಶೋಕ್ ಮಾತನಾಡಿ ಅಂದು ಡಾ. ರಾಜ್ಕುಮಾರ್ ಅವರಿಗೆ ಪ್ರಶಸ್ತಿ ನೀಡಿದಾಗಲೂ ಮಳೆ ಬಂದಿತ್ತು. ಇಂದು ಬಂದಿದೆ. ಇದು ವರುಣ ದೇವನ ಆಶೀರ್ವಾದ ಎಂದಿದ್ದು
ಸಿಎಂ ಬಸವರಾಜ ಬೊಮ್ಮಾಯಿಯವರು ಪುನೀತ್ ರಾಜ್ಕುಮಾರ್ ಅವರಿಗೆ ಕರ್ನಾಟಕ ರತ್ನ ನೀಡಲು ಮುಂದಾಗಿದ್ದಕ್ಕೆ ಅವರಿಗೆ ಧನ್ಯವಾದಗಳು ಎಂದರು. ಅಶ್ವಿನಿ ಪುನೀತ್ ರಾಜ್ಕುಮಾರ್ ಮಾತನಾಡಿ ಸರ್ಕಾರ ಸಿಎಂ ಬೊಮ್ಮಾಯಿ ಮತ್ತು ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದರು.
1992 ನವೆಂಬರ್ 14ರಂದು ಸಂಜೆ 6.30ಕ್ಕೆ ನಿಮಿಷಕ್ಕೆ ಡಾ. ರಾಜ್ಕುಮಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು ಸಾಕಷ್ಟು ಅಭಿಮಾನಿಗಳ ಸಮ್ಮುಖದಲ್ಲಿ ಅಂದಿನ ಕರ್ನಾಟಕದ ರಾಜ್ಯಪಾಲರಾದ ಖುರ್ಷಿದ್ ಆಲಂ ಖಾನ್ ಅವರು ಮುತ್ತುರಾಜನಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿದ್ದರು. ಮುಖ್ಯಮಂತ್ರಿ ಎಸ್. ಬಂಗಾರಪ್ಪ ಸೇರಿದಂತೆ ಸಾಕಷ್ಟು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದು ಚಿತ್ರರಂಗಕ್ಕೆ ಅಣ್ಣಾವ್ರ ಸೇವೆಯ ಗುರುತಾಗಿ ಪ್ರಶಸ್ತಿ ನೀಡಲಾಗಿತ್ತು.
ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪತಿಗೆ ಅರ್ಪಿಸಿದ್ದಾರೆ. ಇನ್ನು ಅಶ್ವಿನಿ ಹಾಗೂ ಪುತ್ರಿ ವಂದಿತಾ ಇಬ್ಬರೂ ಜೊತೆಯಾಗಿ ಅಪ್ಪು ಭಾವಚಿತ್ರದ ಮುಂದೆ ನಿಂತು ಪ್ರಶಸ್ತಿಯನ್ನು ಅರ್ಪಿಸಿದ್ದು ಈ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಅಭಿಮಾನಿಗಳು ಭಾವುಕರಾಗಿದ್ದಾರೆ.
ಅಂದ್ಹಾಗೆ ಪ್ರತಿಷ್ಠಿತ ಕರ್ನಾಟಕ ರತ್ನ ಪ್ರಶಸ್ತಿಯು 50 ಗ್ರಾಂ ಚಿನ್ನದ ಪದಕ ಸೇರಿದಂತೆ ನೆನಪಿನ ಕಾಣಿಕೆಯನ್ನು ಒಳಗೊಂಡಿದೆ. ಪ್ರಶಸ್ತಿ ಪಡೆದ ಬಳಿಕ ಚಿನ್ನದ ಪದಕವನ್ನು ಅಪ್ಪು ಫೋಟೋ ಮುಂದೆ ಇರಿಸಲಾಗಿದೆ. ಈ ಮೂಲಕ ಅಪ್ಪು ಸಾಧನೆಗೆ ಮತ್ತೊಂದು ಗರಿ ಬಂದಂತಾಗಿದೆ.
ಸದ್ಯ ಜರ್ಮನಿಯಲ್ಲಿ ವಿಧ್ಯಾಭ್ಯಾಸ ಮಾಡುತ್ತಿರುವ ಮಗಳು ದೃತಿ ಅಪ್ಪನಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿದ ಸಮಾರಂಭಕ್ಕೆ ಬರಲು ಸಾಧ್ಯವಾಗಲಿಲ್ಲ. ಆದರೆ ದೃತಿಗೆ ವಿದೇಶದಲ್ಲಿ ದೊಡ್ಡ ಸರ್ಪೈಸ್ ಸಿಕ್ಕಿದ್ದು ಅಪ್ಪುಗೆ ಕರ್ನಾಟಕ ರತ್ನ ಕೊಟ್ಟಿದ್ದಕ್ಕೆ ಜರ್ಮನಿಯ ಟಿವಿ ಫಲಕದಲ್ಲಿ ಫೋಟೋ ಹಾಕಲಾಗಿದೆ. ಇದನ್ನು ನೋಡಿದ ದೃತಿ ಕೊಂಚ ಭಾವುಕರಾದರೂ ಕೂಡ ಸಂಭ್ರಮ ಮುಗಿಲು ಮುಟ್ಟಿದೆ.
ಹೌದು ತಂದೆಯ ಖ್ಯಾತಿ ಜರ್ಮಿನಿಯ ವರೆಗೂ ಬೆಳದಿರುವುದಕ್ಕೆ ಬಹಳಾನೆ ಸಂತಸವಾಗಿದ್ದು ಸ್ನೇಹಿತೆಲ್ಲರೂ ಕೂಡ ದೃತಿ ಜೊತೆಗೂಡಿ ಅಪ್ಪು ಅವರ ಫೋಟೊಗೆ ಹಾರ ಹಾಕಿ ಪೂಜೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.ಈ ಹಿಂದೆ ಕೂಡ ದೃತಿ ರಾಂಕ್ ಬಂದಿರುವುದಕ್ಕೆ ಜರ್ಮನಿಯಲ್ಲಿ ರಸ್ತೆ ಫಲಕಗಳ ಟಿವಿ ಸ್ಕ್ರೀನ್ ಮೇಲೂ ಫೋಟಿ ಹಾಕಿ ಅಭಿನಂದನೆ ತಿಳಿಸಲಾಗಿತ್ತು.
ಈ ವಿಚಾರ ಅಶ್ವಿನಿ ಮೇಡಂ ಗೆ ತಿಳಿಯುತ್ತಿದ್ದಂತೆ ಮತ್ತಷ್ಟು ಭಾವುಕರಾದ್ದರು. ಇದರ ಬೆನ್ನಲ್ಲೆ ಮಗಳು ಧೃತಿ ಜರ್ಮನಿಗೆ ಬರುವಂತೆ ಒತ್ತಾಯ ಮಾಡಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿತ್ತು. ಆದರೆ ಅಪ್ಪು ಅವರ ಕನಸನ್ನು ನನಸನ್ನು ಮಾಡುವ ಪಣ ತೊಟ್ಟಿರುವ ಅಶ್ವಿನಿ ಯವರು ಗಂಧದ ಗುಡಿ ಹಾಗೂ ಪಿ ಆರ್ ಕೆ ಸ್ಟೋಡಿಯೋ ಕೆಲಸದಲ್ಲಿ ನಿರತರಾಗಿದ್ದ ಕಾರಣ ಜರ್ಮನಿಗೆ ಹೋಗಲು ನಿರಾಕರಿಸಿದ್ದರು. ಆದರೆ ಮಗಳ ಒತ್ತಾಯಕ್ಕೆ ಮಣಿದಿದ್ದ ಅಶ್ವಿನಿ ಮೇಡಂ ಜರ್ಮನಿಗೆ ತೆರಳಿ ಮಗಳ ಜೊತೆ ಸ್ವಲ್ಪ ದಿನಗಳ ಕಾಲ ಸಮಯ ಕಳೆದು ಜರ್ಮನಿ ತಿರುಗಾಡಿ ಹಿಂದಿರುಗಿದ್ದರು.