ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಮನೆಗೆ ಬರಲಿರುವ ಸೊಸೆ ಬಗ್ಗೆ ಸಿಹಿಸುದ್ದಿ ಕೊಟ್ಟ ಸುಮಲತಾ…ನೋಡಿ ಚಿಂದಿ

72,549

ಜೂನಿಯರ್‌ ರೆಬಲ್‌ ಸ್ಟಾರ್‌ ಅಭಿಷೇಕ್‌ ಅಂಬರೀಶ್‌ ರವರು ಒಂದು ತಿಂಗಳ ಹಿಂದೆ ಅಂದರೆ ಅಕ್ಟೋಬರ್ 3 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು ರೆಬಲ್‌ ಸ್ಟಾರ್‌ ಅಂಬರೀಶ್‌ ಹಾಗೂ ಖ್ಯಾತ ನಟಿ ಸುಮಲತಾ ಅಂಬರೀಶ್‌ ರವರ ಪುತ್ರನಾಗಿರುವ ಅಭಿಷೇಕ್‌ ಅಂಬರೀಶ್‌ ರವರು ಸದ್ಯ ಈಗಾಗಲೇ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.

ಹೌದು ಹುಟ್ಟುಹಬ್ಬವನ್ನು ಆಚರಿಸಿಕೊಂಡ ಜೂನಿಯರ್‌ ರೆಬಲ್‌ ಸ್ಟಾರ್ ಅಭಿಷೇಕ್‌ ಅಂಬರೀಶ್‌ ರವರಿಗೆ ಕನ್ನಡ ಚಿತ್ರರಂಗದ ನಟ-ನಟಿಯರು ಸೇರಿದಂತೆ ಅಪಾರ ಅಭಿಮಾನಿಗಳು ಸಹ ಪ್ರೀತಿಯ ಶುಭಾಶಯವನ್ನ ತಿಳಿಸಿದ್ದು ಅಕ್ಟೋಬರ್ 2 ರ ಮಧ್ಯೆರಾತ್ರಿಯಿಂದಲೇ ಅಭಿಷೇಕ್‌ ಅಂಬರೀಶ್‌ ರವರ ಮನೆಯ ಬಳಿ ಅಭಿಮಾನಿಗಳು ಜಮಾಯಿಸಿದ್ದರು ಹಾಗೂ ಮೆಚ್ಚಿನ ನಾಯಕನಿಗೆ ಶುಭಾಶಯ ತಿಳಿಸಿದ್ದಾರೆ. ಇನ್ನು ತಮ್ಮ ಮನೆಯ ಬಳಿ ಬಂದಿರುವ ಅಪಾರ ಅಭಿಮಾನಿಗಳು ಹಾಗೂ ಗೆಳೆಯರ ಜೊತೆ ಅಭಿಷೇಕ್ ಕೇಕ್‌ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡರು.

ಬಾಲ್ಯದಿಂದಲೂ ಸಹ ಕನ್ನಡ ಚಿತ್ರರಂಗದ ನಂಟಿನೊಂದಿಗೆ ಬೆಳೆದ ಅಭಿಷೇಕ್‌ ಅಂಬರೀಶ್‌ ಮೊದಲು ತಮ್ಮ ವಿದ್ಯಾಭ್ಯಾಸದತ್ತ ಗಮನ ಹರಿಸಿದ್ದು ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದರು. ತದನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಲಂಡನ್‌ನ ವೆಸ್ಟ್‍ಮಿನಿಸ್ಟರ್ ವಿಶ್ವವಿದ್ಯಾನಿಲಯಕ್ಕೆ ಸಹ ತೆರಳಿದ್ದು ವಿಶೇಷವಾಗಿತ್ತು.

ತಮ್ಮ ಶಿಕ್ಷಣ ಪೂರ್ಣಗೊಂಡ ಬಳಿಕ ಭಾರತಕ್ಕೆ ಮರಳಿದ ಅಭಿಷೇಕ್‌ ರವರು ನಟನೆಯತ್ತ ಒಲವು ತೋರಿದ್ದು 2019ರಲ್ಲಿ ತೆರೆ ಕಂಡ ಅಮರ್‌ ಸಿನಿಮಾದ ಮೂಲಕ ಅಭಿಷೇಕ್‌ ಅಂಬರೀಶ್‌ ರವರು ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.

ಹೌದು ನಾಗಶೇಖರ್‌ ನಿರ್ದೇಶನದ ಸಿನಿಮಾದ ಮೂಲಕ ಗ್ರಾಂಡ್‌ ಎಂಟ್ರಿ ಪಡೆದ ಅಭಿಷೇಕ್‌ ಅಂಬರೀಶ್‌ ಮೊದಲ ಚಿತ್ರದ ನಟಯ ಮೂಲಕವೇ ನಮ್ಮ ಕನ್ನಡ ಚಿತ್ರರಂಗದ ಭರವಸೆಯ ನಟನಾಗಿದ್ದಾರೆ. ಅಭಿಷೇಕ್‌ ಅಂಬರೀಶ್‌ ಹಾಗೂ ತಾನ್ಯಾ ಹೋಪ್ ನಟನೆಯ ಅಮರ್‌ ಸಿನಿಮಾ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದರೂ ಸಹ ಚಿತ್ರದ ಹಾಡುಗಳು ಮಾತ್ರ ಸೂಪರ್ ಹಿಟ್‌ ಆಗಿತ್ತು.

ಇನ್ನು ಜೂನಿಯರ್‌ ರೆಬಲ್‌ ಸ್ಟಾರ್‌ ಮುಂದಿನ ಚಿತ್ರದ ಹೆಸರೇ ವಿಭಿನ್ನವಾಗಿದ್ದು ಬ್ಯಾಡ್‌ ಮ್ಯಾನರ್ಸ್‌ ಚಿತ್ರದ ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿದೆ. ಸದ್ಯ ಈಗಾಗಲೇ ಟೀಸರ್‌ ಬಿಡುಗಡೆಗಾಗಿ ಟೀಸರ್‌ವೊಂದನ್ನು ರಿಲೀಸ್‌ ಮಾಡಲಾಗಿದ್ದು ಅಭಿಷೇಕ್‌ ಅಂಬರೀಶ್‌ ಸಖತ್‌ ಖದರ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಇತ್ತ ಅಭಿಷೇಕ್‌ ಅಂಬರೀಶ್‌ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬ್ಯಾಡ್‌ ಮ್ಯಾನರ್ಸ್‌ ಚಿತ್ರದ ಟೀಸರ್‌ ಸಹ ಬಿಡುಗಡೆಯಾಗಿದ್ದು ಬಹಳ ಸೆನ್ಸೇಷನ್ ಮೂಡಿಸಿದೆ ಎನ್ನಬಹುದು.

ಇನ್ನು ಈ ಬೆಳವಣಿಗೆ ನೋಡಿದ ತಾಯಿ ಸುಮಲತಾ ಅಂಬರೀಶ್ ರವರು ಈಗ ಚಿತ್ರರಂಗದಲ್ಲಿ ಸಿಕ್ವಲ್ ಸಿನಿಮಾಗಳ ಟ್ರೆಂಡ್ ಶುರುವಾಗಿದ್ದು ಅಭಿ ಸಿನಿಮಾ ಕೂಡ ಹಾಗೆಯೇ ಆಗಬೇಕು ಎಂಬ ಆಸೆಯನ್ನ ವ್ಯಕ್ತಪಡಿಸಿದ್ದು ಜೊತೆಗೆ ಅವನು ತಂದೆಯ ಹಾದಿಯಲ್ಲೆ ಸಾಗಬೇಕು ಅವರ ಎಲ್ಲಾ ಗುಣಗಳು ಇವನಿಗೆ ಬರಬೇಕು ಇವನು ಕೂಡ ಅಂಬರೀಶ್ ರಂತೆಯೇ ಆಗಬೇಕು ಎಂದಿದ್ದಾರೆ.

ಈ ನಡುವೆ ಅಭಿ ಮದುವೆಗೆ ಹುಡುಕುತ್ತಿದ್ದೇನೆ ಎಂದು ಸುಮಲತಾ ರವರು ಹೇಳಿದ್ದು ಅಮ್ಮನ ಮಾತಿಗೆ ಅಭಿ ಬಹಳ ಗರಂ ಆಗಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅಮ್ಮ ಮಗನ ಈ ಮಾತಿನ ಚಕಮುಕಿಗೆ ನೆಟ್ಟಿಗರು ತರಾವರಿ ಕಮೆಂಟ್ ಮಾಡುತ್ತಿದ್ದಾರೆ.