ವಾರ್ತಾ ಮಂಜರಿ
Trending Stories, Viral News, Gossips & Everything in Kannada

Meghana Raj: ಅಪ್ಪು ಫೋಟೋ ನೋಡಿದ ಕೂಡಲೇ ವಾವ್ ಎಂದು ಕೂಗುತ್ತಿರುವ ರಯಾನ್ ಸರ್ಜಾ…ವಿಡಿಯೋ

795

ಚೆಂದನವನದಲ್ಲಿ ಅನೇಕ ಉತ್ತಮ ಕಲಾವಿದರು ನಿರ್ಮಾಪಕರು ಹಾಗೂ ಖ್ಯಾತ ನಟರನ್ನು ಕಳೆದುಕೊಂಡಿದ್ದು ಅವರ ನೆನಪು ಇಂದಿಗೂ ಕೂಡ ಮಾಸಿಲ್ಲ. ಹೌದು ಅವರ ಅನೇಕ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಕಳೆದುಕೊಂಡ ನೋವಿನಿಂದ ಆಚೆ ಬಂದಿಲ್ಲ ಇನ್ನೂ ಕೆಲ ಅಭಿಮಾನಿಗಳಂತು ಅವರ ಭಾವಚಿತ್ರವನ್ನು ತಮ್ಮ ಮನೆಯಲ್ಲಿ ದೇವರು ಎಂದೇ ಪೂಜಿಸುತ್ತಿದ್ದಾರೆ. ಇನ್ನು ತಮಗೆಲ್ಲ ಗೊತ್ತಿರುವ ಹಾಗೆ ನಟ ಪುನೀತ್ ರಾಜ್ ಕುಮಾರ್ ಮತ್ತು ಚಿರಂಜೀವಿ ಸರ್ಜಾ ಅವರ ಅಗಲಿಕೆ ಇಂದಿಗೂ ನಂಬಲು ಅಸಾಧ್ಯವಾದ ಮಾತಾಗಿದೆ.

ಚಿರು ಅವರು ಇಹಲೋಕ ತ್ಯಜಿಸಿದಾಗ ಅವರ ಪತ್ನಿ Meghana Raj ಚಿರಂಜೀವಿ ರವರು ಚೊಚ್ಚಲ ಗರ್ಭಿಣಿ ಆಗಿದ್ದರು. ಆದರೂ ಕೂಡ ಅಂತಹ ಸಮಯದಲ್ಲಿ ತಾಳ್ಮೆ ಸಹನೆ ಮತ್ತು ದೈರ್ಯದಿಂದ ತನ್ನ ಕಂದನ ಆರೈಕೆ ಮಾಡುತ್ತ ನವಮಾಸಗಳ ಬಳಿಕ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಹೌದು ಕೊನೆಗೆ ಅದ್ದೂರಿಯಾಗಿ ಮಗುವಿನ ನಾಮಕರಣ ಮಾಡಿ ರಾಯನ್ ರಾಜ್ ಸರ್ಜಾ ಎಂದು ನಾಮಕರಣ ಕೂಡ ಮಾಡಿ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಇನ್ಸ್ಟಗ್ರಾಮ್ ಇನ್ನಿತರ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಿಗೆ ಅಪ್ಲೋಡ್ ಮಾಡಿದ್ದಾರೆ ಇದನ್ನು ನೋಡಿದ ಅಭಿಮಾನಿಗಳು ಅಂತ್ಯಂತ ಹರುಷ ವ್ಯಕ್ತಪಡಿಸಿದ್ದಾರೆ.

ಇನ್ನು ಫೋಟೋ ಕೆಲವು ಅಭಿಮಾನಿಗಳು ಚಿರು ಅವರ ಜೊತೆಗೆ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಮತ್ತು ಯೋಚನೆಗೆ ಅನುಗುಣವಾಗಿ ತಂದೆ ಮಗನ ಫೋಟೋ ಎಡಿಟ್ ಮಾಡಿದ್ದು ಅದನ್ನು ಹಂಚಿಕೊಂಡಿದ್ದು ತಮ್ಮ ಖುಷಿಯನ್ನು ವ್ಯಕ್ತಪಡಿಸುತ್ತಾರೆ.ಇತ್ತೀಚೆಗಷ್ಟೆ ಮೇಘನಾ ರಾಜ್ ರವರು ತಮ್ಮ ಮಗನೊಂದಿಗೆ ಬಹಳ ಸಮಯವನ್ನು ಕಳೆಯುತ್ತಾರೆ ಇದರಿಂದಾಗಿ ಅವರ ಮನಸ್ಸಿಗೆ ತುಂಬಾ ಖುಷಿ ಹಾಗೂ ನೆಮ್ಮದಿ ಇದೆ ಎಂದು ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ಕೆಲವು ಜಾಹೀರಾತುಗಳಲ್ಲಿ ಮೇಘನಾ ರಾಜ್ ರವರು ಕಾಣಿಸಿದ್ದು ಡಾನ್ಸ್ ಚಾಂಪಿಯನ್ ಶೋ ನ ಒಬ್ಬ ತೀರ್ಪುಗಾರರು ಆಗಿದ್ದು ತಮ್ಮ ಸೆಟ್ ಅಲ್ಲಿ ತುಂಬಾ ಖುಷಿಯಾಗಿ ಎಲ್ಲರೊಂದಿಗೆ ಬೆರೆಯುವ ಅವರು ಆಗಾಗ ತನ್ನ ತಾಯಿಗೆ ಕರೇ ಮಾಡಿ ಮಗನ ಜೊತೆಗೂ ಸಹ ಸಮಯ ಕಳೆಯುತ್ತಾರೆ. ಇನ್ನು ಇತ್ತೀಚಿಗೆ ಎಲ್ಲರಿಗೂ ಗೊತ್ತಿರುವ ಸಂಗತಿ ಪುನೀತ ರಾಜ್ ಕುಮಾರ್ ರವರ ಅಕಾಲಿಕ ಅಗಲಿಕೆಯಿಂದಾಗಿ ಕನ್ನಡ ಇಂಡಸ್ಟ್ರಿಗೆ ತುಂಬಲಾಗದ ನಷ್ಟ ಆಗಿದ್ದು ಅವರನ್ನು ಕೂಡ ಎಲ್ಲರೂ ನೆನಪಿಸಿಕೊಳ್ಳುತ್ತಾರೆ.

ನಟ ಪುನೀತ್ ರವರು ಎಂದಿಗೂ ಚಿರಸ್ಮರಣೀಯ ಇತ್ತೀಚೆಗೆ ಅಭಿಮಾನಿಯೊಬ್ಬರು ಪುನೀತ್ ಹಾಗೂ ಚಿರು ಮತ್ತು ರಾಯನ್ ಸರ್ಜಾ ಅವರ ಫೋಟೋವನ್ನು ಎಡಿಟ್ ಮಾಡಿದ್ದು ಅದರ ಚಿತ್ರಣ ತುಂಬಾನೇ ವೈರಲ್ ಆಗಿತ್ತು. ಇದರಲ್ಲಿ ಅಪ್ಪು ಅವರು ರಾಯನ್ ಅವರನ್ನು ಎತ್ತಿಕೊಂಡು ಅವರ ಪಕ್ಕ ನಗು ಮೂಗದ ಚಿರು ನಗುತ್ತಾ ನಿಂತಿರುವ ಭಂಗಿ ಸುಂದರವಾಗಿ ಮೂಡಿಬಂದಿದ್ದು ಇದರ ಬಗ್ಗೆ ಮೇಘನಾ ರಾಜ್ ಅವರು ಚಿರು ಮತ್ತು ಅಪ್ಪು ಇಲ್ಲ ಎಂದು ನೆನಪಿಸಿಕೊಳ್ಳಲು ಕಷ್ಟಸಾಧ್ಯ.

ಆದರೆ ಅವರ ಅಭಿಮಾನಿಗಳು ಈ ರೀತಿಯ ಫೋಟೋಗಳ ಮೂಲಕ ಕಂಡಾಗ ಅವರ ನೆನಪುಗಳು ಹಸಿರಾಗಿ ಉಳಿಯುವ ಪ್ರಯತ್ನಕ್ಕೆ ನನ್ನ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು ಎಂದು ಕಣ್ಣೀರು ಹಾಕಿದ್ದಾರೆ.ಸದ್ಯ ಇದರ ನಡುವೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಒಂದು ವೀಡಿಯೋ ವೈರಲ್ ಆಗಿದ್ದು ಮೇಘನಾ ರಾಜ್ ರವರು ತನ್ನ ಮಗನನ್ನ ಎತ್ತುಕೊಂಡು ಅಪ್ಪು ಫೋಟೋ ಮುಂದೆ ಹೋಗಿದ್ದಾರೆ.
ಅಪ್ಪು ನೋಡಿದ ತಕ್ಷಣ ಗುರುತು ಹಿಡಿದ ರಾಯನ್ ರಾಜ್ ಸರ್ಜಾ ವಾವ್ ಎಂದು ಪ್ರತಿಕ್ರಿಯೆ ನೀಡಿದ್ದು ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.