ಹೊಂಬಾಳೆ ಫಿಲ್ಸ್ಮ್ನ ನಿರ್ಮಾಣ ಮತ್ತು ನಟ ರಿಷಬ್ ಶೆಟ್ಟಿ ನಿರ್ದೇಶನದ ಭರ್ಜರಿ ಕಾಂಬಿನೇಷನ್ನಲ್ಲಿ ಬಿಡುಗಡೆ ಆಗಿರುವ Kantara ಸಿನಿಮಾಗೆ ಬಿಡುಗಡೆಯಂದೇ ಭಾರಿ ಪ್ರತಿಕ್ರಿಯೆ ಸಿಕ್ಕಿದೆ. ಇನ್ನು ಶುಕ್ರವಾರ ಜಗತ್ತಿನಲ್ಲೆಡೆ ಬರೀ ಕನ್ನಡದಲ್ಲೇ ಬಿಡುಗಡೆ ಆಗಿರುವ ಈ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ಅದ್ಭುತ ಎಂದೇ ಹೇಳಲಾಗುತ್ತಿದ್ದು ಸಿನಿಮಾ ನೋಡಿದ ಪ್ರತಿಯೊಬ್ಬರೂ ಈ ಚಿತ್ರದ ಕುರಿತು ಮೆಚ್ಚುಗೆಯ ಮಾತುಗಳನ್ನೇ ಆಡಿದ್ದು ಸೋಷಿಯಲ್ ಮೀಡಿಯಾಗಳಲ್ಲೂ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ಸಿನಿಮಾಗೆ ಬೆಂಬಲ ಸೂಚಿಸಿದ್ದಾರೆ.
ಇನ್ನು ಬಿಡುಗಡೆ ಆದ ದಿನದಿಂದ ಇದಕ್ಕೆ ಸಿಕ್ಕಿರುವ ಸ್ಪಂದನೆಯಿಂದ ಎಲ್ಲೆಡೆ ಶೋಗಳ ಸಂಖ್ಯೆ ಹೆಚ್ಚಾಗುತ್ತಿದ್ದ ಲು ಬಹಳಷ್ಟು ಕಡೆ ಟಿಕೆಟ್ ಸಿಗದಷ್ಟು ಬೇಡಿಕೆ ಉಂಟಾಗಿದೆ. ಶುಕ್ರವಾರ ಶನಿವಾರ ಬಹುತೇಕ ಎಲ್ಲೆಡೆ ಹೌಸ್ಫುಲ್ ಪ್ರದರ್ಶನವನ್ನೇ ಕಾಂಡಿದ್ದು ಕಾಂತಾರ ಚಿತ್ರದ ಕುರಿತು ಹೊಂಬಾಳೆ ಫಿಲ್ಮ್ಸ್ ಇದೀಗ ಮಾಹಿತಿಯೊಂದನ್ನು ಹಂಚಿಕೊಂಡಿದೆ. ಸಿನಿಮಾಗೆ ಸಿಕ್ಕ ಸ್ಪಂದನೆ ಕುರಿತು ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಸಿನಿಮಾಗೆ ಸಿಕ್ಕ ಸ್ಪಂದನೆಯನ್ನು ಪರ್ಸೆಂಟೇಜ್ ಲೆಕ್ಕದಲ್ಲಿ ಹೇಳಿಕೊಂಡಿದ್ದಾರೆ.
ಹೌದು ಒಂದು ಚಿತ್ರಕ್ಕೆ ಆರಂಭದ ದಿನ ದೊಡ್ಡ ಮಟ್ಟದ ಸ್ಪಂದನೆ ಸಿಗುತ್ತಿದ್ದು ಅಂದು ಅತ್ಯಧಿಕ ಪರದೆಗಳಲ್ಲಿ ಚಿತ್ರ ಪ್ರದರ್ಶನಗೊಳ್ಳುವುದಷ್ಟೇ ಅಲ್ಲದೆ ಬಹುತೇಕ ಹೌಸ್ಫುಲ್ ಆಗಿಯೇ ಇರುತ್ತದೆ. ಕಾಂತಾರದ ವಿಚಾರದಲ್ಲೂ ಆರಂಭದ ದಿನವೇ ಭರ್ಜರಿ ಸ್ಪಂದನೆ ಸಿಕ್ಕಿದ್ದು ಅದು ಶನಿವಾರ ಇನ್ನಷ್ಟು ಹೆಚ್ಚಾಗಿದೆ. ಭಾನುವಾರ ಇನ್ನೂ ಅಧಿಕ ಅಂದರೆ ಶುಕ್ರವಾರಕ್ಕೆ ಹೋಲಿಸಿದರೆ ಶೇ. 350ರಷ್ಟು ಹೆಚ್ಚಾಗಿದೆ ಎಂಬುದಾಗಿ ಕಾರ್ತಿಕ್ ಹೇಳಿಕೊಂಡಿದ್ದಾರೆ.

ಇನ್ನು ಇದರ ಜತೆಗೆ ಸಿನಿಮಾತಂಡ ಎಷ್ಟೇ ಕಾಳಜಿ ಹಾಗೂ ಎಚ್ಚರಿಕೆ ವಹಿಸಿದರೂ ಕೂಡ ಪೈರಸಿ ಕಾಟದಿಂದ ಮಾತ್ರ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.ಈ ಹಿಂದೆಯೂ ಕೂಡ ಪೈರಸಿ ಕಾಟದಿಂದಾಗಿ ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ದೊಡ್ಡ ಮಟ್ಟದಲ್ಲಿ ತೊಂದರೆಯಾಗಿತ್ತು. ಸಿನಿಮಾ ಬಿಡುಗಡೆಯಾದ ಕೇವಲ ಒಂದೆರಡು ದಿನಗಳಲ್ಲಿಯೇ ಸಿನಿಮಾದ ಲಿಂಕ್ ಗಳು ಮೊಬೈಲ್ ಗಳಲ್ಲಿ ಹರಿದಾಡುತ್ತಿತ್ತು.
ಸದ್ಯ ಇದೀಗ ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಂಡು ದೊಡ್ಡ ಮಟ್ಟದಲ್ಲಿ ಹಿಟ್ ಆಗುತ್ತಿರುವ ಕಾಂತಾರ ಸಿನಿಮಾಗೂ ಕೂಡ ಪೈರಸಿ ಜ್ವರ ಶುರುವಾಗಿದೆ. ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ ನಟ ನಿರ್ದೇಶಕ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಸಿನಿಮಾ ಈಗಾಗಲೇ ಈ ವರ್ಷದ ಹಿಟ್ ಲಿಸ್ಟ್ ಗೆ ಸೇರಿಕೊಂಡಿದೆ. ಸದ್ಯ ಸಿನಿಮಾ ನೋಡಲು ಜನರು ಮುಗಿ ಬಿದ್ದು ಚಿತ್ರಮಂದಿರಕ್ಕೆ ತೆರಳುತ್ತಿದ್ದಾರೆ.
ಸದ್ಯ ಸಿನಿಮಾ ಥಿಯೇಟರ್ ನಲ್ಲಿ ಇರುವಾಗಕೇ ಮೊಬೈಲ್ ನಲ್ಲಿ ಸಂಪೂರ್ಣ ಸಿನಿಮಾ ಹರಿದಾಡುತ್ತಿದ್ದು ಚಿತ್ರವನ್ನು ಲೀಕ್ ಮಾಡಿರುವ ಪೈರಸಿ ಕಳ್ಳರು ಈಗಾಗಲೇ ಕೆಲವು ವೆಬ್ ಸೈಟ್ ಗಳಿಗೆ ಅಪ್ ಲೋಡ್ ಮಾಡಿದ್ದಾರೆ.ಸಿನಿಮಾ ತಂಡ ಪೈರಸಿ ಯಿಂದ ತಪ್ಪಿಸಿಕೊಳ್ಳಲು ಅದೆಷ್ಟೇ ಕಟ್ಟೆಚ್ಚರ ವಹಿಸಿದ್ದರೂ ಕೂಡ ಬಿಡುಗಡೆಯಾದ ಕೇವಲ 2 ದಿನಕ್ಕೆ ಸಿನಿಮಾ ಪೈರಸಿ ಆಗಿಬಿಟ್ಟಿದೆ.ಸಾಕಷ್ಟು ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ಸಿನೆಮಾವನ್ನು ಮೊಬೈಲ್ ಮೂಲಕ ರೆಕಾರ್ಡ್ ಮಾಡುತ್ತಿದ್ದಾರೆ.
ಚಿತ್ರಮಂದಿರದವರು ಇತ್ತ ಗಮನಹರಿಸಿ ಚಿತ್ರವನ್ನು ವೀಡಿಯೋ ಮಾಡದೇ ಇರುವ ಹಾಗೆ ತಡೆಯಿರಿ. ಪೈರಸಿ ವಿಚಾರವಾಗಿ ಸಾಕಷ್ಟು ಕ್ರಮ ವಹಿಸಿದ್ದು ನಮ್ಮ ಆಂಟಿ ಪೈರಸಿ ತಂಡ ಬರೋಬ್ಬರಿ ಇಪ್ಪತ್ತಾಲ್ಕು ಗಂಟೆಗಳ ಕಾಲ ಕೆಲಸ ಮಾಡುತ್ತಲೇ ಇದೆ.ಈಗಾಗಲೇ ಸಾಕಷ್ಟು ಆನ್ ಲೈನ್ ವೆಬ್ ಸೈಟ್ ಹಾಗೂ ಯೂಟ್ಯೂಬ್ ಚಾನೆಲ್ ಗಳ ಮೇಲೆ ಕ್ರಮ ವಹಿಸಿದ್ದೇವೆ.ನಿಮ್ಮ ಖುಷಿಯನ್ನು ಹಂಚುವ ಭರದಲ್ಲಿ ಸಿನಿಮಾದ ಮುಖ್ಯ ದೃಶ್ಯಗಳನ್ನು ಶೇರ್ ಮಾಡಬೇಡಿ ದಯವಿಟ್ಟು ಯಾರೂ ಕೂಡ ನಮ್ಮ ಸಿನಿಮಾವನ್ನು ಪೈರಸಿ ಮಾಡಬೇಡಿ ಹಾಗೂ ನೋಡಬೇಡಿ ಎಂದು ರಿಷಬ್ ಶೆಟ್ಟಿ ಅವರು ಕೈ ಮುಗಿದು ಕೇಳಿಕೊಂಡಿದ್ದಾರೆ. ಸದ್ಯ ರಿಷಬ್ ಶೆಟ್ಟಿ ಅವರು ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.