Dhruva sarja: ಮಗು ಆದ ಬೆನ್ನಲ್ಲೇ ಗರ್ಭಪಾತದ ಬಗ್ಗೆ ತಿಳಿಸಿದ ಧ್ರುವ ಸರ್ಜಾ…ನಿಜಕ್ಕೂ ಏನಾಯ್ತು
ಸರ್ಜಾ ಕುಟುಂಬದಲ್ಲಿ ಸಂತಸ ಮನೆ ಮಾಡಿದ್ದು ಮಗು ಜನಿಸಿದ ಬಳಿಕ ಮೊದಲ ಬಾರಿಗೆ ಮಾಧ್ಯಮಗಳ ಜೊತೆಗೆ ಧ್ರುವ ಮಾತನಾಡಿದ್ದು ಖುಷಿಯ ಸುದ್ದಿಯನ್ನು ಹಂಚಿಕೊಂಡು ನಗು ಚೆಲ್ಲಿದ್ದಾರೆ.
ಆಕ್ಷನ್ ಫ್ರಿನ್ಸ್ ಧ್ರುವ ಸರ್ಜಾ ರವರು ಸದ್ಯ ಇದೀಗ ತಂದೆ ಆಗಿದ್ದು ಅವರ ಪತ್ನಿ ಪ್ರೇರಣಾ ಶಂಕರ್ ಅವರು ನಿನ್ನೆಯಷ್ಟೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಈ ಸುದ್ದಿ ಕೇಳಿ Dhruva sarja ಅವರ ಅಭಿಮಾನಿ ಬಳಗಕ್ಕೆ ಖುಷಿ ಆಗಿದೆ. ಹೌದು ಸರ್ಜಾ ಕುಟುಂಬದಲ್ಲಿ ಸಂತಸ ಮನೆ ಮಾಡಿದ್ದು ಮಗು ಜನಿಸಿದ ಬಳಿಕ ಮೊದಲ ಬಾರಿಗೆ ಮಾಧ್ಯಮಗಳ ಜೊತೆಗೆ ಧ್ರುವ ಮಾತನಾಡಿದ್ದು ಖುಷಿಯ ಸುದ್ದಿಯನ್ನು ಹಂಚಿಕೊಂಡು ನಗು ಚೆಲ್ಲಿದ್ದಾರೆ.
ಮಗಳು ಜನಿಸಿದ ಮೇಲೆ ಹೆಣ್ಮಕ್ಕಳ ಮೇಲಿನ ಗೌರವ ಇನ್ನೂ ಜಾಸ್ತಿ ಆಯ್ತು ಎಂದು ಧ್ರುವ ಸರ್ಜಾ ಹೇಳಿದ್ದು ಧ್ರುವ-ಪ್ರೇರಣಾ ದಂಪತಿಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಹೆಣ್ಣು ಮಗು ಜನಿಸಬೇಕು ಎಂಬುದು ಧ್ರುವ ಸರ್ಜಾ ಅವರ ಆಸೆ ಆಗಿದ್ದು ಅವರ ಆಸೆ ಈಡೇರಿದೆ.ನನಗೆ ತುಂಬ ಖುಷಿ ಆಗಿದ್ದು ಈ ಸಂದರ್ಭದಲ್ಲಿ ಒಂದು ಮಾತು ಹೇಳಲು ಇಷ್ಟಪಡುತ್ತೇನೆ. ಸಹಜವಾಗಿಯೇ ಹುಡುಗಿಯರು ಎಂದರೆ ನನ್ನ ಮನದಲ್ಲಿ ಗೌರವ ಇದ್ದು ಇಂದು ಎಲ್ಲ ಪ್ರಕ್ರಿಯೆಗಳನ್ನು ನೋಡಿದ ಮೇಲೆ ಆ ಮರ್ಯಾದೆ ಸ್ವಲ್ಪ ಜಾಸ್ತಿ ಆಯ್ತು ಎಂದು ಅವರು ಹೇಳಿದ್ದಾರೆ.
ಇನ್ನು ಎಲ್ಲರ ಜೀವನದಲ್ಲೂ ಏಳು-ಬೀಳು ಇದ್ದೇ ಇರುತ್ತದೆ. ಹೌದು ಅದೇ ರೀತಿ ನಮ್ಮಲ್ಲೂ ಇದ್ದು ಸಾಕಷ್ಟು ದಂಪತಿಗಳಿಗೆ ಗರ್ಭಪಾತ ಆಗಿರುತ್ತದೆ. ಹೌದು ಅದರ ಬಗ್ಗೆ ಕೆಲವರು ಹೇಳಿಕೊಂಡಿದ್ದು ಇನ್ನೂ ಕೆಲವರು ಹೇಳಿಕೊಳ್ಳಲ್ಲ. ಹೆಣ್ಮಕ್ಕಳು ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ ಅಂತ ನಾನು ಮನವಿ ಮಾಡಿಕೊಳ್ಳುತ್ತೇನೆ. ಇದಕ್ಕೆ ನಾವೇ ಉದಾಹರಣೆಯಾಗಿದ್ದು ಅದನ್ನೆಲ್ಲ ಈಗ ಮಾತನಾಡೋದು ಬೇಡ. ಸದ್ಯಕ್ಕೆ ನಾವು ಖುಷಿಯಾಗಿದ್ದೇವೆ. ವೈದ್ಯರಿಗೆ ಧನ್ಯವಾದ ಎಂದು ಧ್ರುವ ಸರ್ಜಾ ಹೇಳಿದ್ದಾರೆ.
ಎಲ್ಲರ ಆಶೀರ್ವಾದದಿಂದ ನಮಗೆ ಮುದ್ದಾದ ಮಗು ಜನಿಸಿದ್ದು ಇಡೀ ನಮ್ಮ ಕುಟುಂಬ ಖುಷಿಯಾಗಿದೆ. ಹೌದು ಈ ಸಮಯದಲ್ಲಿ ನಾನು ನಮ್ಮ ಅಣ್ಣನನ್ನು ಮಿಸ್ ಮಾಡಿಕೊಳ್ಳುತ್ತೇನೆ. ನಮ್ಮ ಅಜ್ಜಿಯನ್ನೂ ಮಿಸ್ ಮಾಡಿಕೊಳ್ಳುತ್ತೇನೆ. ಅಂಕಲ್ (ಅರ್ಜುನ್ ಸರ್ಜಾ) ಬರುತ್ತಾರೆ ಎಂದಿದ್ದಾರೆ ಧ್ರುವ.ಅಂದಹಾಗೆ ಧ್ರುವ ಸರ್ಜಾಗೆ ಪತ್ನಿ ಪ್ರೇರಣಾ ಶಂಕರ್ ಪಕ್ಕದ ಮನೆಯವರು. ಅಂದರೆ ಪಕ್ಕದ ಮನೆಯ ಪ್ರೇರಣಾ ಅವರನ್ನು ಚಿಕ್ಕ ವಯಸ್ಸಿನಿಂದ ಧ್ರುವ ಸರ್ಜಾ ನೋಡಿಕೊಂಡು ಬಂದಿದ್ದರು.
ಬಹಳ ವರ್ಷಗಳ ಕಾಲ ಪ್ರೀತಿ ಮಾಡಿದ್ದ ಈ ಜೋಡಿ ಮನೆಯಲ್ಲಿ ಪ್ರೀತಿ ವಿಷಯ ತಿಳಿಸಿ ಮದುವೆಯಾಗಿತ್ತು. 2019ರಲ್ಲಿ ಧ್ರುವ ಹಾಗೂ ಪ್ರೇರಣಾ ವಿವಾಹ ನೆರವೇರಿದ್ದು ಈಗ ಮೊದಲ ಮಗು ಜನಿಸಿದೆ.ಪ್ರೇರಣಾ ಶಂಕರ್ ಅವರು ಬೆಂಗಳೂರಿನಲ್ಲಿ ಖಾಸಗಿ ಕಾಲೇಜ್ನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಮದುವೆಯಾದ ನಂತರದಲ್ಲಿ ಧ್ರುವ ಸರ್ಜಾ ಸಿನಿಮಾ ಕೆಲಸಗಳಿಗೆ ಬೆಂಬಲ ನೀಡುತ್ತಿದ್ದಾರೆ.ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ನಟನಾಗಿ ಧ್ರುವ ಸರ್ಜಾ ಗುರುತಿಸಿಕೊಂಡಿದ್ದು ಪೊಗರು ಬಳಿಕ ಮಾರ್ಟಿನ್ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಇದೆ.