ವಾರ್ತಾ ಮಂಜರಿ
Trending Stories, Viral News, Gossips & Everything in Kannada

ತಂಗಿ ಮದುವೆಗೆ ಬರಲ್ಲ ಎಂದು ಹೇಳಿ ಅಮೆರಿಕದಿಂದ ಬಂದು ಸರ್ಪ್ರೈಸ್ ಕೊಟ್ಟ ಅಣ್ಣ…ವಿಡಿಯೋ ನೋಡಿ

962

ನಮ್ಮ ಮನೆಯಲ್ಲಿ ಅಣ್ಣ ತಂಗಿ ಅಕ್ಕ-ತಮ್ಮ ಇದ್ದರೆ ಸಂತೋಷವೊ ಸಂತೋಷ ಎನ್ನಬಹುದು. ಹೌದು ಪ್ರತೀ ನಿತ್ಯ ಜಗಳ ಕಿತ್ತಾಟ ಪ್ರೀತಿ ತಪ್ಪಿದಲ್ಲ. ಅಣ್ಣನ ಪ್ರೀತಿಯನ್ನು ಕಂಡವರಿಗೆ ಅದರ ಮಹತ್ವ ತಿಳಿದಿರುತ್ತದೆ. ಹೌದು ಆದರೆ ಅಣ್ಣ ಇಲ್ಲದವರಿಗೆ ಸಂಬಂಧಗಳ ಮಹತ್ವ ಇನ್ನೂ ಜಾಸ್ತಿನೇ ತಿಳಿದಿರುತ್ತದೆ. ಈ ಅಣ್ಣಂದಿರು ಯಾವತ್ತಿದ್ದರೂ ಕೂಡ ಸ್ಪೆಷಲ್. ತನ್ನ ತಂಗಿಯನ್ನು ಮಗಳಂತೆ ಕಾಯುತ್ತಾನೆ ಗೌರವಿಸುತ್ತಾನೆ ಹಾಗೆಯೇ ಪ್ರೀತಿಯ ಜಗಳವಾಡುತ್ತಾನೆ. ತಂಗಿಗೆ ತನ್ನ ಅಣ್ಣನೇ ಜೀವ ಎನ್ನಬಹುದು.

ಹೌದು ಮನೆಯಲ್ಲಿ ಸಣ್ಣ ವಿಷಯಕ್ಕೂ ದೊಡ್ಡ ಜಗಳ ಮಾಡುವ ತಂಗಿ. ತಾನು ಎಷ್ಟೇ ಮೊಬೈಲ್ ಬಳಸಿದರೆ ಪರವಾಗಿಲ್ಲ. ಆದರೆ ತಂಗಿ ಮಿತಿ ಮೀರಿ ಬಳಸಿದರೆ ಬೈಯುವ ಅಣ್ಣ. ಹೀಗೆ ಸಣ್ಣ ಸಣ್ಣ ಕೋಪ ಸಿಕ್ಕಾಪಟ್ಟೆ ಪ್ರೀತಿ. ಇವರುಗಳ ನಡುವೆ ಖುಷಿಪಡುವ ತಂದೆ ತಾಯಿ.ತನ್ನ ತಂಗಿ ಬಗ್ಗೆ ಕೆಟ್ಟದಾಗಿ ಯಾರಾದರು ಮಾತನಾಡಿದರೆ ಅಣ್ಣನಾದವನು ಯಾವತ್ತು ಕೂಡ ಸಹಿಸುವುದಿಲ್ಲ. ಮನೆಯಲ್ಲಿ ತಂಗಿ ಎಷ್ಟೇ ಜಗಳವಾಡಿದರೂ ತನ್ನ ಸ್ನೇಹಿತರ ಜೊತೆ ತನ್ನ ಅಣ್ಣ ಬಗ್ಗೆ ಹೊಗಳುವ ತಂಗಿ ಹಾಗೆಯೇ ಅಣ್ಣ ಎಷ್ಟೇ ಜಗಳವಾಡಿದರು ಕೂಡ ಕೊನೆಗೆ ತಂಗಿಯ ಮುಂದೆ ಸೋಲುತ್ತಾನೆ. ಇದೇ ಅಣ್ಣ ತಂಗಿಯ ಪ್ರೀತಿ.

ತಂಗಿಯಾದವಳಿಗೆ ಗೆಳತಿಯರ ಮುಂದೆ ಅಣ್ಣನ ಬೈಕ್ ಮುಂದೆ ಓಡಾಡುವುದೆಂದರೆ ಏನೋ ಒಂಥರಾ ಖುಷಿಯಾಗಿದ್ದು ಸಿನಿಮಾಗಳಲ್ಲಿ ಇಬ್ಬರು ಪ್ರೇಮಿಗಳ ನಡುವೆ ಹುಡುಗಿಯ ಅಣ್ಣನೇ ವಿಲನ್ ಆಗಿರುತ್ತಾನೆ. ಅದೇ ರೀತಿಯಾಗಿ ಹುಡುಗಿಗೆ ಅಣ್ಣ ಇದ್ದಾನೆಂದು ತಿಳಿದರೆ ಆ ಹುಡುಗಿಯ ತಂಟೆಗೆ ಯಾರು ಬರುವುದಿಲ್ಲ. ಇನ್ನು ಇದೇ ಒಬ್ಬ ಅಣ್ಣನಿಂದ ತಂಗಿಗೆ ಸಿಗುವ ಶ್ರೀರಕ್ಷೆ.ಹೀಗೆ ಈ ಜಗತ್ತಿನಲ್ಲಿ ದೇವರು ಪ್ರತಿಯೊಂದನ್ನೂ ಅರ್ಥಪೂರ್ಣ ವಾಗಿ ಸೃಷ್ಟಿ ಮಾಡಿದ್ದು ಅವನ ಸೃಷ್ಟಿಯ ಪ್ರತಿ ಸಂಬಂಧಗಳು ಕೂಡ ಶ್ರೇಷ್ಠವಾದದ್ದೇ.

 

ಇನ್ನು ಈ ಜಗತ್ತಿನಲ್ಲಿ ಇರುವ ಎಲ್ಲಾ ಸಂಬಂಧಕ್ಕಿಂತ ದೊಡ್ಡ ಸಂಬಂಧ ಅಂದರೆ ಅದು ತಾಯಿ ಮಕ್ಕಳ ಸಂಬಂದ.‌ ಆ ಬಳಿಕ ಅಪ್ಪ ಮಕ್ಕಳು ಅದೇ ರೀತಿ ಅಣ್ಣ ತಂಗಿ‌ ಸಂಬಂಧ. ಅಣ್ಣ ತಂಗಿ ಅಂದರೆ ಅದರ‌ ಪ್ರೀತಿಯೇ ಬೇರೆ. ತಂಗಿಯ ಪ್ರತಿ ಕಷ್ಟ ಸುಖದಲ್ಲಿ ಅದೇ ರೀತಿ ತಂಗಿಗೆ ಯಾವುದೇ ರೀತಿಯ ಕಷ್ಟ ಬಾರದಂತೆ ಕಾಪಾಡುವ ಜವಬ್ದಾರಿ ಕೂಡ ಅಣ್ಣನ ಮೇಲಿರುತ್ತದೆ. ಅಪ್ಪ ಅಮ್ಮನ ನಂತರ ಅಣ್ಣನೇ ಆ ಮನೆಯ ಹೆಣ್ಣಿಗೆ ಸರ್ವಸ್ವವಾಗಿದ್ದು ಇನ್ನು ತಂಗಿಯಾದವಳು ಕೂಡ ಅಷ್ಟೇ ಅಣ್ಣನಿಗೆ ಎರಡನೇ ತಾಯಿ ಇದ್ದಂತೆ.

ಸದ್ಯ ಇದೀಗ ಅಣ್ಣ ತಂಗಿಯ ಬಗ್ಗೆ ಮಾತನಾಡುವುದಕ್ಕೆ ಒಂದು ಕಾರಣವಿದ್ದು ತಂಗಿಯ ಮದುವೆ ಯಲ್ಲಿ ಅಣ್ಣಾ ಕೊಟ್ಟಂತ ಸರ್ಪ್ರೈಸ್ ನೋಡಿ ತಂಗಿ ಭಾವುಕರಾಗಿ ಕಣ್ಣೀರು ಸುರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಪ್ರತಿಯೊಬ್ಬರೂ ಕೂಡ ಭಾವುಕರಾಗಿದ್ದು ಅಣ್ಣ ತಂಗಿಯ ಸಂಬಂಧವನ್ನು ವರ್ಣಿಸಲು ಸಾಧ್ಯವಾಗದು ಎನ್ನುತ್ತಿದ್ದಾರೆ. ಅಷ್ಟಕ್ಕೂ ಅಣ್ಣ ಯಾವ ರೀತಿ ಸಪ್ರೈಸ್ ಕೊಟ್ಟಿದ್ದಾನೆ ಗೊತ್ತಾ? ನೀವೆ ವಿಡಿಯೋ ನೋಡಿ.