ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಎರಡನೇ ಮದುವೆ ಎಂದವರಿಗೆ ತಿರುಗೇಟು ಕೊಟ್ಟ ಮೇಘನಾ ರಾಜ್, ಖಡಕ್ ಹೇಳಿಕೆ

4,660

ನಟ ಚಿರು ದೈಹಿಕವಾಗಿ ನಮ್ಮೊಂದಿಗೆ ಇಲ್ಲವಾದರೂ, ಮೇಘನಾ ರಾಜ್, ಸರ್ಜಾ ಕುಟುಂಬದವರು ಹಾಗೂ ಅಭಿಮಾನಿಗಳು ರಾಯನ್ ನಲ್ಲಿ ಚಿರುವನ್ನು ಕಾಣುತ್ತಿದ್ದಾರೆ. ಇನ್ನು, ಯಾವತ್ತಿಗೂ ಅಭಿಮಾನಿಗಳ ಮನಸ್ಸಿನಲ್ಲಿ ಚಿರು ಎಂದಿಗೂ ಜೀವಂತವಾಗಿ ಇರುತ್ತಾರೆ. ಕಳೆದ ಒಂದೆರಡು ವರ್ಷಗಳ ಹಿಂದೆ ಸರ್ಜಾ ಕುಟುಂಬವು ಅಂದುಕೊಳ್ಳದ ರೀತಿಯ ಘಟನೆಯೊಂದು ನಡೆದು ಎಲ್ಲರಿಗೂ ಬಹುದೊಡ್ಡ ಅಘಾತವನ್ನುಂಟು ಮಾಡಿತ್ತು. ಚಿರು 2020 ರಲ್ಲಿ ಹೃದಯಘಾತದಿಂದ ಸಾವನ್ನಪ್ಪುವ ಮೂಲಕ ಇಹಲೋಕ ತ್ಯಜಿಸಿದ್ದರು. ಇದು ಸರ್ಜಾ ಕುಟುಂಬಕ್ಕೆ ಮಾತ್ರವಲ್ಲ ಚಿತ್ರರಂಗ ಹಾಗೂ ಅಭಿಮಾನಿಗಳಿಗೆ ದೊಡ್ಡ ಆಘಾತವನ್ನು ಉಂಟು ಮಾಡಿತ್ತು.

ಆದರೆ, ಇದೀಗ ರಾಯನ್ ರಾಜ್ ಸರ್ಜಾನಲ್ಲಿ ಚಿರುವನ್ನು ಇಡೀ ಕುಟುಂಬದವರು ಕಾಣುತ್ತಿದ್ದಾರೆ. ಮೇಘನಾ ರಾಜ್ ಅವರಿಗೆ ಮಗನೇ ಪ್ರಪಂಚವಾಗಿದ್ದಾನೆ. ಸದ್ಯಕ್ಕೆ ಮೇಘನಾ ರಾಜ್ ಅವರು ಮಗನಿಗಾಗಿ ವೃತ್ತಿ ಜೀವನದತ್ತ ಗಮನ ಹರಿಸುತ್ತಿದ್ದಾರೆ. ಅದರ ಜೊತೆಗೆ ಮಗನ ಲಾಲನೆ ಪಾಲನೆಯಲ್ಲಿಯೂ ಬ್ಯುಸಿಯಾಗಿದ್ದಾರೆ. ಮುದ್ದು ಮಗ ರಾಯನ್ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಆದರೆ ಇದೀಗ ಎರಡನೇಯ ಮದುವೆಯ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಮೇಘನಾ ರಾಜ್ ಅವರು ಹೇಳಿದ್ದೇನು ಎನ್ನುವುದಕ್ಕೆ ಇಲ್ಲಿದೆ ಉತ್ತರ.

ಮೇಘನಾ ರಾಜ್ ಅವರು ಬದುಕಿನಲ್ಲಿ ಎಲ್ಲಾ ಕಹಿ ಘಟನೆಯನ್ನು ಮರೆತು ಮಗನಿಗಾಗಿ ಬದುಕು ಸಾಗಿಸುತ್ತಿದ್ದಾರೆ. ಸದ್ಯಕ್ಕೆ ಸಿನಿಮಾರಂಗದಲ್ಲಿ ಸಕ್ರಿಯರಾಗಿರುವುದು ರಾಯನ್ ಸರ್ಜಾನ ಭವಿಷ್ಯಕ್ಕಾಗಿ. ಇನ್ನು, ನಟಿ ಮೇಘನಾ ರಾಜ್ ಕನ್ನಡ ಹಾಗೂ ಮಲಯಾಳಂ ಗುರುತಿಸಿಕೊಂಡಿದ್ದಾರೆ. ಮೇಘನಾ ರಾಜ್ ಅವರ ತಂದೆ ತಾಯಿಯಿಬ್ಬರೂ ಸಿನಿಮಾರಂಗದಲ್ಲಿ ಗುರುತಿಸಿಕೊಂಡವರು. ಹೀಗಾಗಿ ಇವರ ಮಗಳು ಮೇಘನಾಳಿಗೂ ಸಹಜ ವಾಗಿಯೇ ನಟನೆಯಲ್ಲಿ ಸಕ್ರಿಯರಾದರು.

ಹೌದು, ಬಾಲ್ಯದಲ್ಲಿ ತಂದೆಯೊಡನೆ ನಾಟಕದಲ್ಲಿ ಅಭಿನಯಿಸುವ ಮೂಲಕ ರಂಗದಲ್ಲಿ ಕಾಣಿಸಿಕೊಳ್ಳುತ್ತಿದ್ದರು. 2009 ರಲ್ಲಿ ಬಿಡುಗಡೆಗೊಂಡ ಬೆಂಡು ಅಪ್ಪಾರಾವ್ ರಂಪ್ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಫಿಲಂ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟರು. ಹೀಗೆ ಸಿನಿಮಾರಂಗದಲ್ಲಿಯೇ ಬದುಕು ಕಟ್ಟಿಕೊಂಡರು. ಈ ಸಿನಿಮಾಕ್ಕೂ ಮೊದಲು ಕೆ.ಬಾಲಚಂದರ್ ನಿರ್ಮಾಣದ ಕೃಷ್ಣಲೀಲೈ ಚಿತ್ರದಲ್ಲಿ ನಟಿಸಿದ್ದರು.

ಆದರೆ ಕೆಲವು ಕಾರಣಗಳಿಂದ ಸಿನಿಮಾ ಬಿಡುಗಡೆಯಾಗಲಿಲ್ಲ. ಇನ್ನು, 2010ರಲ್ಲಿ ಬಿಡುಗಡೆಗೊಂಡ ಪುಂಡ ಚಿತ್ರದ ಮೂಲಕ ಚಂದನವನದಲ್ಲಿ ಕೂಡ ನಾಯಕಿಯಾಗಿ ಕಾಣಿಸಿಕೊಂಡರು. ಕನ್ನಡದವರಾದರೂ ನಟಿ ಮೇಘನಾ ಪಾಲಿಗೆ ಮಲಯಾಳಂ ಚಿತ್ರರಂಗ ಕೈ ಹಿಡಿಯಿತು. ಮಲಯಾಳಂ ಚಿತ್ರದಲ್ಲಿ ಕಾಣಿಸಿಕೊಂಡ ಮೇಘನಾ ರಾಜ್, 2013 ರ ರಾಜಾಹುಲಿ ಚಿತ್ರದಿಂದ ಮತ್ತೆ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟರು. ಬಹುಪರಾಕ್, ಆಟಗಾರ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುವ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಮೇಘನಾ ರಾಜ್ ಅವರು ಎರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ಸದ್ಯಕ್ಕೆ ಸಿನಿಮಾ ಶೂಟಿಂಗ್ ಎಂದು ಬ್ಯುಸಿಯಾಗಿದ್ದಾರೆ.

ಮೇಘನಾ ರಾಜ್ ಅವರು ಎರಡನೇ ಮದುವೆಯಾಗಲಿದ್ದಾರೆ ಹೀಗೆ ಸಾಕಷ್ಟು ವಿಚಾರಗಳು ಕೇಳಿ ಬರುತ್ತಲೇ ಇರುತ್ತದೆ. ಹೌದು, ಇತ್ತೀಚೆಗಷ್ಟೇ ಎರಡನೇ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿಯೊಂದು ಕೇಳಿ ಬಂದಿತ್ತು. ಈ ಕುರಿತಂತೆ ಸಂದರ್ಶನವೊಂದರಲ್ಲಿ ಮೇಘನಾ ರಾಜ್‌ಗೆ ಎರಡನೇ ಮದುವೆಯ ಬಗ್ಗೆ ಯೋಚಿಸಿದ್ದೀರಾ ಎಂದು ನಿರೂಪಕ ಕೇಳಿದ್ದಾರೆ.

ಈ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ನಟಿ, ಮದುವೆಯಾಗು ಎಂದು ಸಲಹೆ ಕೊಡುವವರ ಗುಂಪಿದೆ. ಮದುವೆಯಾಗಬೇಡ ಅಂತ ಸಲಹೆ ಕೊಡುವವರ ಗುಂಪಿದೆ. ಮಗನೊಂದಿಗೆ ಖುಷಿಯಾಗಿರಬೇಕು ಎಂದು ಹೇಳುವವರ ಮತ್ತೊಂದು ಗುಂಪಿದೆ. ಹಾಗಾದರೆ ಯಾರ ಮಾತು ಕೇಳಲಿ. ಜಿರಂಜೀವಿ ಯಾವಾಗಲೂ ಹೇಳುತ್ತಿದ್ದರು, ಜಗತ್ತು ಏನೇ ಹೇಳಿದ್ದರು. ನಿನ್ನ ಹೃದಯವನ್ನ ಆಲಿಸು ಎಂದು, ನಾನು ಇನ್ನೂ ಮದುವೆಯ ಬಗ್ಗೆ ಪ್ರಶ್ನೆ ಕೇಳಿಲ್ಲ ಎಂದು ತಮ್ಮ ಮದುವೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.