ಬಿಗ್ ಬಾಸ್ ಮನೆಗೆ ಪಾದಾರ್ಪಣೆ ಮಾಡಿ ಸೀಸನ್ ಎಂಟರ ವಿಜಯ ಮಾಲೆಯನ್ನು ಧರಿಸಿರುವ ಮಜಾಭಾರತ ಖ್ಯಾತಿಯ ಮಂಜು ಪಾವಗಾಡ ಅವರು ಸದ್ಯ ಇದೀಗ ಸಾಕಷ್ಟು ಸುದ್ದಿಯಲ್ಲಿದ್ದು ಬಿಗ್ ಬಾಸ್ ಕಾರ್ಯಕ್ರಮ ಗೆದ್ದ ಬಳಿಕ ಮಂಜು ಪಾವಗಡ ಅವರ ಜೀವನವೇ ಬದಲಾಗಿದೆ ಎನನ್ನಬಹದು.
ಹೌದು ಚಿತ್ರರಂಗದ ಕನಸನ್ನು ಕಾಣುವ ಸಾಕಷ್ಟು ಮಂದಿಗೆ ಮಂಜು ಮಾದರಿಯಾಗಿದ್ದು ಪೆಟ್ರೋಲ್ ಬಂಕ್ ನಿಂದ ಹಿಡಿದು ಮಜಾ ಭಾರತ ಹಾಗೂ ಬಿಗ್ ಬಾಸ್ ನ ರೋಚಕ ಜರ್ನಿ ಎಲ್ಲರಿಗೂ ಕೂಡ ನಿಜಕ್ಕುಿ ಮಾದರಿಯೇ ಸರಿ.
ಬಿಗ್ ಬಾಸ್ ಮನೆಯಲ್ಲಿದ್ದಾಗ ಶಿವಣ್ಣ ಅಂದರೆ ಬಲು ಇಷ್ಟ ಎಂದು ಹೇಳಿಕೊಳ್ಳುತಚತಿದ್ದ ಮಂಜು ವಿನ್ನರ್ ಆದ ಬಳಿಕ ಬಿಗ್ ಬಾಸ್ ಟ್ರೋಫಿಯೊಂದಿಗೆ ನಾಗವಾರದಲ್ಲಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರ ಮನೆಗೆ ಭೇಟಿ ನೀಡಿ ತಾವು ಗೆದ್ದಿರುವ ಟ್ರೋಫಿ ತೋರಿಸಿ ಶಿವಣ್ಣ ಅವರಿಂರ ಆಶೀರ್ವಾದ ಪಡೆದುಕೊಂಡಿದ್ದರು.
ಶಿವರಾಜ್ಕುಮಾರ್ ಎಂದರೆ ಮಂಜು ಪಾವಗಡಗೆ ಸಿಕ್ಕಾಪಟ್ಟೆ ಇಷ್ಟ. ಅದನ್ನು ಬಿಗ್ ಬಾಸ್ ಮನೆಯೊಳಗೇ ಅವರು ಹಲವು ಬಾರಿ ಹೇಳಿಕೊಂಡಿದ್ದು ನಾನು ಫಿನಾಲೆಯಲ್ಲಿ ಇರೋದರಿಂದ ಅವರ ಕಡೆಯಿಂದ ಒಂದೇ ಒಂದು ಆಶೀರ್ವಾದ ಬೇಕಿತ್ತು.
ಅವರಿಂದ ಒಂದು ವಿಡಿಯೋ ಸಿಕ್ಕರೂ ನನಗೆ ತುಂಬಾ ಖುಷಿ ಆಗುತ್ತದೆ. ಇದೊಂದನ್ನ ನೆರವೇರಿಸಿದರೆ ನನಗೆ ತುಂಬಾ ಖುಷಿ ಆಗುತ್ತದೆ ಬಿಗ್ ಬಾಸ್ ಎಂದು ಮಂಜು ಕೇಳಿಕೊಂಡಿದ್ದರು. ಇದೀಗ ಮಂಜು ಪಾವಗಡ ಹಾಡಿರುವ ವಿಡಿಯೋ ನೋಡಿ.