ಕನ್ನಡ ಚಿತ್ರರಂಗದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ರವರು ಕನ್ನಡ ಚಿತ್ರರಂಗದಲ್ಲಿ ಕಡಿಮೆ ಸಿನಿಮಾಗಳ ಮೂಲಕ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿರುವ ಯುವ ಉದಯೋನ್ಮುಖ ನಟ ಎನ್ನಬಹುದು. ಕೆಲವು ವರ್ಷಗಳ ಹಿಂದೆಯಷ್ಟೇ ಪ್ರೇರಣಶಂಕರ್ ರವರನ್ನು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮದುವೆ ಆಗಿದ್ದು ಇಬ್ಬರೂ ಕೂಡ ಬಾಲ್ಯದಿಂದಲೂ ಗೆಳೆಯ ಹಾಗೂ ಗೆಳತಿಯರಾಗಿದ್ದರಂತೆ.
ಇನ್ನು ಇವರಿಬ್ಬರ ಮದುವೆ ಎನ್ನುವುದು ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಮದುವೆಯಾಗಿದ್ದು ಇದರ ನಡುವೆ ಚಿರು ಸರ್ಜಾ ರವರ ಅಕಾಲಿಕ ಅಗಲಿಕೆ ಎನ್ನುವುದು ಸರ್ಜಾ ಮನೆತನಕ್ಕೆ ಸಾಕಷ್ಟು ದುಃಖವನ್ನು ಉಂಟು ಮಾಡಿತು ಎನ್ನಬಹುದು. ಹೌದು ದುಃಖದಿಂದ ಬಳಲಿದ್ದ ಸರ್ಜಾ ಮನೆತನಕ್ಕೆ ಕೊಂಚಮಟ್ಟಿಗೆ ಚೇತರಿಕೆ ನೀಡಿದ್ದು ಚಿರು ಸರ್ಜಾ ರವರ ಪುತ್ರ ರಾಯನ್ ರಾಜ್ ಸರ್ಜಾ.
ಇನ್ನು ಇತ್ತೀಚಿಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಧ್ರುವ ಸರ್ಜಾ ರವರು ತಾವು ತಂದೆ ಆಗಲಿದ್ದೇನೆ ಎಂಬುದಾಗಿ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದು ತಮ್ಮ ಪತ್ನಿ ಪ್ರೇರಣಶಂಕರ್ ರವರ ಸೀಮಂತ ಶಾಸ್ತ್ರವನ್ನು ಕೂಡ ಅದ್ದೂರಿಯಾಗಿ ಶಾಸ್ತ್ರೋಕ್ತವಾಗಿ ಕುಟುಂಬಸ್ಥರು ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ಮಾಡಿದ್ದರು. ಹೌದು ನವರಾತ್ರಿಯ ಸಂದರ್ಭದಲ್ಲಿ ಮಗುವಿನ ಜನನ ಆಗಲಿದೆ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ ಎಂಬುದನ್ನು ಕೂಡ ಈ ಸಂದರ್ಭದಲ್ಲಿ ಎಲ್ಲರೊಂದಿಗೆ ಹಂಚಿಕೊಂಡಿದ್ದರು.
ಕೊನೆಗೂ ಆ ಸಂತೋಷದ ಸುದ್ದಿಯನ್ನು ಧ್ರುವ ಸರ್ಜಾ ಅವರು ಅಧಿಕೃತವಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಆಸೆಯಂತೆಯೇ ಹೆಣ್ಣು ಮಗುವಿನ ತಂದೆಯಾಗಿದ್ದಾರೆ ಎಂಬುದಾಗಿ ತಿಳಿಸಿದ್ದು ನಾರ್ಮಲ್ ಡೆಲಿವರಿಯ ಮೂಲಕ ಮಗುವನ್ನು ಪಡೆದಿದ್ದಾರೆ ಎಂಬುದನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸದ್ಯ ದಂಪತಿಗಳಿಬ್ಬರು ಮಗುವಿನ ಆರೈಕೆಯಲ್ಲಿದ್ದು ಈ ನಡುವೆ ಹೊಸ ವರುಷದ ದಿನ ಮುದ್ದಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹೌದು ಹೊಸ ವರುಷದ ಪ್ರಯುಕ್ತ ಪತ್ನಿಗೆ ಪ್ರೀತಿಯಿಂದ ಧ್ರುವ ಹೇಗೆ ಕೇಕ್ ತಿನ್ನಿಸುತ್ತಿದ್ದಾರೆ ನೀವೆ ಲೇಖನಿಯ ಕೆಳಗಿನ ವಿಡಿಯೋದಲ್ಲಿ ನೋಡಿ.
ಇನ್ನು ಸ್ಯಾಂಡಲ್ವುಡ್ನ ಕ್ರಿಯೆಟಿವ್ ಡೈರೆಕ್ಟರ್ ಪ್ರೇಮ್ ನಿರ್ದೇಶನದಲ್ಲಿ ಕೆಡಿ ಸಿನಿಮಾ ಮೂಡಿ ಬರುತ್ತಿದ್ದು ಧ್ರುವ ಸರ್ಜಾ ಸಿನಿಮಾಗೆ ಕ್ರೇಜಿ ಸ್ಟಾರ್ ರವಿಚಂದ್ರನ್ ಎಂಟ್ರಿ ಕೊಡ್ತಿದ್ದಾರೆ. ಸದ್ಯ ಇದೀಗ ರವಿಚಂದ್ರನ್ ಅವರ ಸಿನಿಮಾ ಫಸ್ಟ್ ಲುಕ್ ರಿವೀಲ್ ಆಗಿದ್ದು ಕೆವಿಎನ್ ನಿರ್ಮಾಣದ ಧ್ರುವ ಸರ್ಜಾ ಮತ್ತು ನಿರ್ದೇಶಕ ಪ್ರೇಮ್ ಕಾಂಬಿನೇಷನ್ ಸಿನಿಮಾ ಕೆಡಿ ಸಖತ್ ಸದ್ದು ಮಾಡ್ತಿದೆ.
ಚಿತ್ರದ ಟೈಟಲ್ ಮೂಲಕ ಕ್ಯೂರಿಯಸ್ ಹುಟ್ಟು ಹಾಕಿರುವ ಈ ಸಿನಿಮಾ ಬಗ್ಗೆ ಫ್ಯಾನ್ಸ್ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದು ಸಂಜಯ್ ದತ್ ಶಿಲ್ಪಾ ಶೆಟ್ಟಿ ಈ ಸಿನಿಮಾಗೆ ಎಂಟ್ರಿ ಕೊಡುತ್ತಾರೆ ಎಂಬ ಸುದ್ದಿಯ ಬೆನ್ನಲ್ಲೇ ಈಗ ರವಿಚಂದ್ರನ್ ಕೆಡಿ ಸಿನಿಮಾದಲ್ಲಿನ ಫಸ್ಟ್ ಲುಕ್ ಬಿಡುಗಡೆಯಾಗಿದೆ.