ಸದ್ಯ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿ ಕಾಂತಾರ ಚಿತ್ರವು ದೇಶದ ಇತಿಹಾಸ ಪುಟದಲ್ಲಿ ತನ್ನದೇ ಅಚ್ಚನ್ನು ಕೊರಿದಿದ್ದು ಸದ್ಯ ಚಿತ್ರವನ್ನು ಒಮ್ಮೆ ವೀಕ್ಷಿಸಿದವರು ಮತ್ತೊಮ್ಮೆ ಅವರಿವರ ಜೊತೆಗೂಡಿ ಹೋಗಿ ಸಿನಿಮಾವನ್ನು ವೀಕ್ಷಿಸಿ ಬಂದ ವಿಷಯ ಇದೀಗ ಚಿತ್ರಮಂದಿರದ ಹೊರಗಡೆ ನಿಂತವರನ್ನು ಮಾತನಾಡಿಸಿದಾಗ ತಿಳಿದುಬಂದಿದೆ. ಹೌದು ಕೇವಲ ಜನರಿಂದಲೇ ಪ್ರಚಾರಗೊಂಡ ಈ ಚಿತ್ರವು ಎಲ್ಲ ಚಿತ್ರಮಂದಿರಗಳಲ್ಲಿ ಹೌಸ್ ಪುಲ್ಲಾಗಿ ತೆರೆ ಕಾಂಡಿದ್ದು ಈಗಾಗಲೇ 400 ಕೋಟಿ ಬಾಚಿದೆ.
ಕಾಂತಾರ ಸಿನಿಮಾವೂ ಒಂದು ದಂತಕಥೆಯಾಗಿದ್ದು ಈ ಕಥೆಗೆ ಬಣ್ಣ ಹಚ್ಚಿ ಪಾತ್ರಕ್ಕೆ ಪೂರ್ಣ ಗೌರವ ಕೊಡುವಂತೆ ನಟಿಸಿ ಈ ಚಿತ್ರದ ಕಲಾವಿದರು ಜನರ ಹೃದಯಪೂರ್ವಕ ಚಪ್ಪಾಳೆಯನ್ನು ಪಡೆದಿದ್ದಾರೆ. ಹೌದು ಮಲೆನಾಡಿನ ಸೊಗಡು ದೈವದ ಭಕ್ತಿ ಸಾರುವ ಹಾಡುಗಳು ಕರಾವಳಿಯ ರಂಗುಲೇಪಿಸಿದ ಹೆಜ್ಜೆಗಳು ನಂಬಿಕೆಯ ಹಲವಾರು ಭಾವಗಳು ಇವೆಲ್ಲವನ್ನು ಸರಿಯಾಗಿ ಜೋಡಿಸಿ ತೆರೆಕಂಡ ಈ ಚಿತ್ರವು ದಿನದಿಂದ ದಿನಕ್ಕೆ ಹೆಚ್ಚೆಚ್ಚು ಜನರನ್ನು ತನ್ನತ್ತ ಸೆಳೆಯುತ್ತಿದ್ದು ಹೊಂಬಾಳೆ ಫಿಲಂಸ್ ಈ ಚಿತ್ರವನ್ನು ಹಲವಾರು ಭಾಷೆಗಳಲ್ಲಿ ಬಿಡುಗಡೆ ಮಾಡಲಿದೆ.
ರಿಷಬ್ ಶೆಟ್ಟಿ ಅವರೊಂದಿಗೆ ಕಾಂತಾರ ಚಿತ್ರದಲ್ಲಿ ಜೋಡಿಯಾಗಿ ಕಾಣಿಸಿಕೊಂಡ ನಟಿ ಸಪ್ತಮಿ ಗೌಡ. ಸಾಂಪ್ರದಾಯಿಕ ಹಳ್ಳಿಯಲ್ಲಿ ಪ್ರಿಯತಮನ ಸಹಾಯ ಪಡೆದು ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುವ ಯುವತಿಯ ಪಾತ್ರ ಇವರದ್ದಾಗಿದ್ದು ಸಿಂಗಾರ ಸಿರಿಯೇ ಎಂಬ ಹಾಡಿಗೆ ತಕ್ಕನಾದ ರೂಪ ಇವರದು. ಹೌದು ಇವರ ಮೊದಲ ಚಿತ್ರ ಪಾಪ್ಕಾರ್ನ್ ಮಂಕಿ ಟೈಗರ್ ನಿಂದಲೇ ಫೇಮಸ್ ಆಗಿದ್ದು ಈಗ ಕಾಂತಾರ ಚಿತ್ರದ ಮೂಲಕ ಸಪ್ತಮಿ ಗೌಡ ಅವರು ಅಭಿಮಾನಿ ಬಳಗವನ್ನು ವಿಸ್ತರಿಸಿಕೊಂಡಿದ್ದಾರೆ.
ಸಪ್ತಮಿ ಗೌಡ ಅವರು ಮೂಲತಃ ಬೆಂಗಳೂರಿನವರಾಗಿದ್ದು ಇವರ ತಂದೆ ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಹೌದು ಸಪ್ತಮಿ ಗೌಡ ಇವರು ಬ್ಯಾಂಗಲೋರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸಿವಿಲ್ ಇಂಜಿನಿಯರಿಂಗ್ ಓದಿದ್ದು ಇವರು ರಾಷ್ಟ್ರೀಯ ಮಟ್ಟದ ಈಜುಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ.
ಚಿತ್ರರಂಗದ ಎರಡನೇ ಹೆಜ್ಜೆಯಲ್ಲಿಯೇ ಅದ್ಭುತವಾಗಿ ನಟಿಸಿ ಸಕ್ಸಸ್ ಕಂಡಿದ್ದು ಕೋಟಿ ಕೋಟಿ ಗಳಿಕೆ ಮಾಡಿದ ಕಾಂತಾರ ಚಿತ್ರದಲ್ಲಿ ನಾಯಕಿಯ ಪಾತ್ರಕ್ಕೆ ಸಪ್ತಮಿ ಗೌಡ ಅವರು ಬರೋಬ್ಬರಿ ಐವತ್ತು ಲಕ್ಷ ರೂಪಾಯಿಗಳನ್ನು ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಸದ್ಯ ದೊಡ್ಡ ಯಶಸ್ಸಿನ ಬಳಿಕ ಮೊದಲ ಬಾರಿಗೆ ನಟಿ ಮಂಗಳೂರಿಗೆ ಭೇಟಿ ನೀಡಿದ್ದು ಈ ವೇಳೆ ತುಳುವಿನಲ್ಲಿ ಹೇಗೆ ಮಾತನಾಡಿದ್ದಾರೆ ನೀವೆ ನೋಡಿ.