ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಬೊಂಬೆ ಹೇಳುತೈತೆ ಹಾಡು ಹೇಳಿದ ಅಶ್ವಿನಿ…ನೋಡಿ ಚಿಂದಿ ವಿಡಿಯೋ

8,670

ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ರವರ ಪುಣ್ಯ ಸ್ಮರಣೆಯ ಸಂದರ್ಭದಲ್ಲಿ ಅವರ  ಕನಸಿನ ಸಿನಿಮಾ ಗಂಧದಗುಡಿ ಬಿಡುಗಡೆಯಾಯಿತು. ಹೌದು ಅಪ್ಪು ರವರು ಬಹಳ ಇಷ್ಟಪಟ್ಟು ಮಾಡಿದ ಸಾಕ್ಷ್ಯ ಚಿತ್ರ ಇದಾಗಿದ್ದು ಅಪ್ಪು ರವರನ್ನು ಸಿನಿಮಾದಲ್ಲಿ ನೈಜ್ಯವಾಗಿ ನೋಡಬಹುದಾಗಿತ್ತು. ಇನ್ನು  ಅಭಿಮಾನಿಗಳು ಅಪ್ಪುನ ಕೊನೆ ಬಾರಿ ತೆರೆ ಮೇಲೆ ಕಣ್ತುಂಬಿಕೊಂಡಿದ್ದು ಇನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಮೊದಲ ಬಾರಿಗೆ ಸಿನಿಮಾ ಬಗ್ಗೆ ಸಂದರ್ಶನದಲ್ಲಿ ಮತನಾಡಿದ್ದರು.

ಹೌದು ಪತಿ ಅಗಲಿಕೆಯ ನೋವಿನಿಂದ ಇನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಇನ್ನು ಕೂಡ ಹೊರಬಂದಿಲ್ಲ. ಕಳೆದೊಂದು ವರ್ಷದಿಂದ ಅಪ್ಪು ನೆನೆದು ಕಣ್ಣೀರು ಹಾಕದ ದಿನವಿಲ್ಲ ಎನ್ನಬಹುದು. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಕಾರ್ಯಕ್ರಮಗಳಲ್ಲಿ ಅಶ್ವಿನಿ ವೇದಿಕೆ ಏರಿದರೂ ಎಲ್ಲೂ ಮಾತನಾಡಿರಲಿಲ್ಲ. ಬಹುತೇಕ ವೇದಿಕೆಗಳಲ್ಲಿ ಮೈಕ್‌ ಹಿಡಿದು ಧನ್ಯವಾದ ಹೇಳಿ ಮಾತು ಮುಗಿಸಿದ್ದರು.

ಇನ್ನು  ಪುನೀತ ಪರ್ವ ಕಾರ್ಯಕ್ರಮದಲ್ಲಿ ಮಾತನಾಡುವ ನಿರೀಕ್ಷೆ ಇತ್ತು. ಆದರೆ ಮಾತನಾಡಲಿಲ್ಲ. ಕುಟುಂಬ ಸದಸ್ಯರೆಲ್ಲಾ ಬೊಂಬೆ ಹೇಳುತೈತೆ ಹಾಡು ಹಾಡುತ್ತಿದ್ದಂತೆ ದುಃಖ ಉಮ್ಮಳಿಸಿ ಅಳುತ್ತಲೇ ವೇದಿಕೆಯಿಂದ ಹೊರಟುಬಿಟ್ಟಿದ್ದರು. ಹೌದು ಬೊಂಬೆ ಹೇಳುತೈತೆ ಹಾಡು ಹೇಳುತ್ತಿದ್ದಂತೆ ಅಶ್ವಿನಿ ಹಾಗೂ ಮಗಳು ವಂದಿತಾ ಭಾವುಕಾರದ ಕ್ಷಣವನ್ನು ಲೇಖಕಿಯ ಕೆಳಗಿರುವ ವಿಡಿಯೋದಲ್ಲಿ ನೋಡಬಹುದು.

 

ಇನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಇದುವರೆಗೆ ಯಾವುದೇ ಸಂದರ್ಶನದಲ್ಲಿ ಮಾತನಾಡಿರಲಿಲ್ಲ. ಹೌದು ಹಿಂದೆ ಜಾಹೀರಾತು ಒಂದಕ್ಕೆ ಅಪ್ಪು ಜೊತೆ ಸೇರಿ ಮಾತನಾಡಿದ್ದು ಬಿಟ್ಟರೆ ಮಾಧ್ಯಮಗಳ ಸಂದರ್ಶನಗಳಿಂದ ಸದಾ ದೂರವೇ ಉಳಿದಿದ್ದರು. ಹೌದು ಆದರೆ ಗಂಧದಗುಡಿ ಬಿಡುಗಡೆ  ಹೊಸ್ತಿಲಲ್ಲಿದ್ದ ಸಂದರ್ಭದಲ್ಲಿ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಸಿನಿಮಾ ಬಗ್ಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸಂದರ್ಶನ ಮಾಡಿದ್ದರು. ಪಿಆರ್‌ಕೆ ಆಡಿಯೋ ಯೂಟ್ಯೂಬ್‌ ಚಾನಲ್‌ನಲ್ಲಿ ಅದು ಅಪ್‌ಲೋಡ್ ಆಗಿದೆ. ಗಂಧದಗುಡಿ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾಗಿರುವುದರಿಂದ ಅಶ್ವಿನಿ ಮಾತನಾಡಿದ್ದಾರೆ.

 

ಇನ್ನು ಪಿಆರ್‌ಕೆ ಪ್ರೊಡಕ್ಷನ್ ಹಾಗೂ ಮಡ್‌ಸ್ಕಿಪರ್ ಬ್ಯಾನರ್‌ನಲ್ಲಿ ಈ ವೈಲ್ಡ್ ಡಾಕ್ಯು ಸಿನಿಮಾ ನಿರ್ಮಾಣ ಆಗಿದ್ದು ಪುನೀತ ಪರ್ವ ಕಾರ್ಯಕ್ರಮದ ಬಗ್ಗೆ ಮಾತನಾಡುತ್ತಾ ಸಂದರ್ಶನ ಆರಂಭವಾಯಿತು. ಪುನೀತ ಪರ್ವ ಮಾಡಿದ್ದು ಅಭಿಮಾನಿಗಳಿಗಾಗಿ. ಒಂದು ಲಕ್ಷಕ್ಕೂ ಹೆಚ್ಚು ಜನ ಬಂದಿದ್ದರು.

ಎಲ್ಲಾ ಇಂಡಸ್ಟ್ರಿಯವರು ಬಂದು ಬೆಂಬಲ ಸೂಚಿಸಿದರು. ಮನಸ್ಸು ತುಂಬಿ ಬಂತು.  ಅಪ್ಪು ಲಾಸ್ಟ್ ಈವೆಂಟ್ ಸಕ್ಸಸ್ ಆಯ್ತು ಎನ್ನುವ ಖುಷಿ ಕೂಡ ಆಯಿತು. ಅಭಿಮಾನಿಗಳಿಗೆ ನಾವು ನಮ್ಮ ಕುಟುಂಬ ಯಾವಾಗಲೂ ಚಿರಋಣಿ ಆಗಿರುತ್ತದೆ. ಅಭಿಮಾನಿಗಳು ಸರ್ಕಾರ ಹಾಗೂ ಪೊಲೀಸ್ ಇಲಾಖೆ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು ಎಂದಿದ್ದಾರೆ.

ಇನ್ನು ಅಪ್ಪಾಜಿ ಹಾಗೂ ಶಿವಣ್ಣ ಗಂಧದಗುಡಿ ಟೈಟಲ್‌ನಲ್ಲಿ ಸಿನಿಮಾ ಮಾಡಿದ್ದು ಚರ್ಚೆಯ ವೇಳೆ ಗಂಧದಗುಡಿ ಇಡಬೇಕು ಎಂದು ತೀರ್ಮಾನಿಸಲಾಯಿತು. ಇಲ್ಲಿ ಹೀಗೆ ಮಾಡಬೇಕು ಹಾಗೆ ಮಾಡಬೇಕು ಎಂದು ಶೂಟ್ ಮಾಡಿಲ್ಲ. ಹೌದು ಅಪ್ಪು ಜರ್ನಿಯನ್ನು ಸೆರೆಹಿಡಿಯಲಾಗಿದ್ದು  ನನಗೆ ತುಂಬಾ ಹೆಮ್ಮೆ ಎನಿಸುತ್ತದೆ.

ಕರ್ನಾಟಕವನ್ನು ತಮ್ಮ ಮೂಲಕ ತೋರಿಸಬೇಕು ಎನ್ನುವ ಅವರ ಕನಸಿನ ಬಗ್ಗೆ ಹೆಮ್ಮೆ ಇದೆ. ಗಂಧದಗುಡಿ ಚಿತ್ರವನ್ನು ತೆರೆಮೇಲೆ ನೋಡಿದಾಗ ಅವರು ಅವರಾಗಿಯೇ ಇದ್ದರು. ಮೇಕಪ್ ಇರಲಿಲ್ಲ  ಜಾಸ್ತಿ ಜನ ಇರಲಿಲ್ಲ. ಪ್ರತಿ ಶೆಡ್ಯೂಲ್‌ಗೆ ಹೋಗುವಾಗ ಬಹಳ ಖುಷಿಯಾಗಿ ಇರುತ್ತಿದ್ದರು ಎಂದಿದ್ದಾರೆ ಅಶ್ವಿನಿ.