ಕನ್ನಡ ಚಿತ್ರರಂಗದ ಕಂಚಿನ ಕಂಠದ ನಾಯಕ ಹಾಗೂ ಗಾಯಕ ವಸಿಷ್ಠ ಸಿಂಹ ಮತ್ತು ಮೂಗುತಿ ಸುಂದರಿ ನಟಿ ಹರಿಪ್ರಿಯಾ ಮದ್ವೆ ಆಗ್ತಾರೆ ಅನ್ನೋ ಗಾಸಿಪ್ ಗುಲ್ಲೆದಿದ್ದೆ. ಹೌದು ಡಿಸೆಂಬರ್ ನಲ್ಲಿ ಈ ಜೋಡಿ ನಿಶ್ಚಿತಾರ್ಥ ಆಗುತ್ತಾರೆ ಮುಂದಿನ ವರ್ಷ ಮದ್ವೆ ಕೂಡ ಆಗ್ತಾರೆ ಅನ್ನೋ ಮಾತಿದ್ದು ಅದರೆ ಈ ವಿಚಾರ ನಿಜಾನೋ ಸುಳ್ಳೋ ಅನ್ನೋದರ ಬಗ್ಗೆ ಇನ್ನೂ ಕ್ಲಾರಿಟಿ ಸಿಕ್ಕಿಲ್ಲ. ಹಾಗಾದ್ರೆ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಮದಯವೆ ಬಗ್ಗೆ ಹರಿದಾಡುತ್ತಿರುವ ವಿಚಾರದ ಹಿಂದಿನ ಅಸಲಿಯತ್ತೇನು? ನಿಜಕ್ಕೂ ಈ ಜೋಡಿ ಮದುವೆ ಮಾತು ಮುನ್ನೆಲೆಗೆ ಬಂದಿದ್ದು ಯಾಕೇ ಅಂತ ನೋಡೋಣ ಬನ್ನಿ
ಹರಿಪ್ರಿಯಾ ರವರು ಸ್ಯಾಂಡಲ್ವುಡ್ನ ನೀರ್ದೋಸೆ ಬೆಡಗಿ. ಹೌದು ಫಿಲ್ಟರ್ ಇಲ್ಲದೆ ಡೈಲಾಗ್ ಹೊಡೆದು ಪಡ್ಡೆ ಹೈಕ್ಳ ಎದೆ ಲಬ್ ಡಬ್ ಎನ್ನುವಂತೆ ನಟಿಸುವ ಚೆಲುವೆಯಾಗಿದ್ದು ಈಕೆಯ ಸೌಂದರ್ಯಕ್ಕೆ ತುಸು ನೊಂದು ಬೆಂದ ಹರೆಯದ ಗಂಡ್ ಹೈಕ್ಳು ಬೊಗಸೆ ತುಂಬಾ ಆಸೆ ತುಂಬಿಕೊಂಡು ಓಡಾಡುತ್ತಾರೆ. ಹೌದು ಹರಿಪ್ರಿಯಾಗಾಗಿ ಅದೆಷ್ಟೋ ಹುಡುಗರ ಹೃದಯ ಹಪಹಪಿಸಿದೆಯೋ ಗೊತ್ತಿಲ್ಲ. ಆದರೆ ಇಷ್ಟು ದಿನ ಯಾರ ಕೈಗೂ ಸಿಗದೆ ಚಿಟ್ಟೆಯಂತೆ ಹಾರಾಡ್ತಿದ್ದ ಹರಿಪ್ರಿಯಾ ರವರು ಈಗ ಮದುವೆ ಆಗುತ್ತಿದ್ದಾರಾ? ಗಾಂಧಿನಗರದಲ್ಲಿ ಹೀಗೊಂದು ಗುಲ್ಲು ಸಖತ್ ಸದ್ದು ಮಾಡುತ್ತಿದೆ.
ಇಷ್ಟು ದಿನ ನೀರ್ ದೋಸೆ ಚೆಲುವೆ ನಾನು ಸಿಂಗಲ್ ಸಿಂಗಲ್ ಎನ್ನುತ್ತಿದ್ದರು. ಆದರೆ ಈಗ ಹರಿಪ್ರಿಯಾ ನೀರ್ದೋಸೆಗೆ ಆಲೂಗೆಡ್ಡ ಪಲ್ಯದಂತ ಹುಡುಗ ಸಿಕ್ಕಿದ್ದಾನಂತೆ. ಹೌದು ಹರಿಪ್ರಿಯಾ ಇನ್ನೆರಡು ತಿಂಗಳಲ್ಲಿ ಮದುವೆನೂ ಅಗುತ್ತಿದ್ದಾರೆ ಎನ್ನಲಾಗಿದ್ದು ಹೀಗೊಂದು ಸುದ್ದಿ ಹರಿದಾಡುತ್ತಿದೆ. ಅದು ಇತ್ತೀಚೆಗಷ್ಟೆ ಹರಿಪ್ರಿಯಾ ಮೂಗು ಚುಚ್ಚಿಸಿಕೊಂಡ ವೀಡಿಯೋ ಒಂದು ವೈರಲ್ ಆದ ಮೇಲೆ ಹರಿಪ್ರಿಯಾ ಮದುವೆ ಸುದ್ದಿ ಮುನ್ನೆಲೆಗೆ ಬಂದಿದೆ.
ಹರಿಪ್ರಿಯಾ ಇತ್ತೀಚೆಗಷ್ಟೆ ತನ್ನ ನೀರ್ದೋಸೆಯಂತ ಮೃದಯವಾದ ಮೂಗಿಗೆ ಮೂಗುತಿ ಚುಚ್ಚಿಸಿಕೊಂಡಿದ್ದು ಈ ವೀಡಿಯೋದಲ್ಲಿ ಹರಿಪ್ರಿಯಾ ಮದುವೆ ಆಗೋ ಹುಡುಗನ ಸುಳಿವು ಇದೆ ಅಂತ ಗಾಂಧಿನಗರದಲ್ಲಿ ಟಾಕ್ ಶುರುವಾಗಿದೆ.
ಹೌದು ವೀಡಿಯೋವನ್ನ ಸೂಕ್ಷ್ಮವಾಗಿ ಗಮನಿಸಿದರೆ ಆ ಸುಳಿವು ಗೊತ್ತಾಗುತ್ತದೆ. ಹರಿಪ್ರಿಯಾ ಮೂಗು ಚುಚ್ಚಿಸಿಕೊಳ್ಳುವಾಗ ಮೂಗುತಿ ಎಲ್ಲಿರಬೇಕು ಅಂತ ಪಕ್ಕದಲ್ಲಿರೋ ಹುಡುಗನೊಬ್ಬ ಮಾರ್ಕ್ ಮಾಡಿ ತೋರಿಸ್ತಾರೆ. ಹೌದು ಅಷ್ಟೆ ಅಲ್ಲ ಹರಿಪ್ರಿಯಾ ಅವರಿಗೆ ಮೂಗು ಚುಚ್ಚಿದ ಬಳಿಕ ನೋವಿನಿಂದ ಆಳುತ್ತಾರೆ. ಆಗ ಪಕ್ಕದಲ್ಲೇ ಇದ್ದ ಹುಡುಗ ಹರಿಪ್ರಿಯಾರನ್ನ ಅಪ್ಪಿಕೊಂಡು ಹಣೆಗೆ ಮುತ್ತಿಟ್ಟಿದ್ದು ಸಮಾಧಾನ ಮಾಡುತ್ತಾರೆ. ಆ ಹುಡುಗ ಯಾರು ಅಂತ ಸೂಕ್ಷ್ಮವಾಗಿ ಗಮನಿಸಿದ್ರೆ ಅಲ್ಲಿ ಕಾಣಿಸೋದು ಕಂಚಿನ ಕಂಠದ ನಟ ಸ್ಯಾಂಡಲ್ವುಡ್ನ ಚಿಟ್ಟೆ ವಸಿಷ್ಠ ಸಿಂಹ..
ಇನ್ನು ಸ್ಯಾಂಡಲ್ವುಡ್ನಲ್ಲಿ ಹರಿಪ್ರಿಯಾ- ವಸಿಷ್ಠ ಸಿಂಹ ಜೋಡಿ ತಾರಾ ದಂಪತಿಗಳಾಗುತ್ತಿದ್ದಾರಾ.? ಹೌದು ಎನ್ನುತ್ತಿವೆ ಹರಿಪ್ರಿಯಾ ವಸಿಷ್ಠ ಸಿಂಹ ಆಪ್ತ ಮೂಲಗಳು. ಹೌದು ಇವರಿಬ್ಬರು ಯಾರಿಗೂ ಗೊತ್ತಾಗದ ಹಾಗೆ ಲವ್ ಮಾಡುತ್ತಿದ್ದಾರಂತೆ. ಆದರೆ ಹರಿಪಪ್ರಿಯ ಮಾತ್ರ ಇಬ್ಬರ ಲವ್ ಸೀಕ್ರೆಟ್ ಅನ್ನ ಗೊತ್ತಾಗೋಕೆ ಮತ್ತೊಂದು ಸುಳಿವು ನೀಡಿದ್ದಾರೆ. ಅದು ತನ್ನ ಇನ್ಸ್ಸ್ಟಾ ಗ್ರಾಂ ಖಾತೆಯಲ್ಲಿ ವಸಿಷ್ಠ ಸಿಂಹನ ಜತೆ ಡಾನ್ಸ್ ಮಾಡೋ ವೀಡಿಯೋ ಹಂಚಿಕೊಂಡು ಇವರು ನನ್ನ ಪಾರ್ಟ್ನರ್ ಜೊತೆಗಾರ ಅಂತ ಬರೆದುಕೊಂಡಿದ್ದಾರೆ.