ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಅಪ್ಪು ಸಮಾಧಿ ಬಳಿ ಎಲ್ಲರನ್ನೂ ಅರೆಸ್ಟ್ ಮಾಡಿಸಿ ಎಂದ ಸಾಧು ಕೋಕಿಲ…ಆಗಿದ್ದೆ ಬೇರೆ

23,955

ಕನ್ನಡ ಚಿತ್ರರಂಗದಲ್ಲಿ ತಮ್ಮ ಅದ್ಭುತ ನಟನೆ ಕಾಮಿಡಿ ಪಂಚಿಂಗ್ ಡೈಲಾಗ್ ವಿಶಿಷ್ಟ ಅಭಿನಯ ಮತ್ತು ಸಂಗೀತದ ಮೂಲಕ ಕನ್ನಡಿಗರಿಗೆ ಹೆಚ್ಚಿನ ಅಪರಿಚಿತರಾದವರು ಹಾಸ್ಯ ದಿಗ್ಗಜ ಸಾಧು ಕೋಕಿಲ ರವರು. ಚಿತ್ರರಂಗಕ್ಕೆ ಉತ್ತಮವಾದ ಸಂಗೀತವನ್ನು ನೀಡುವುದರ ಜೊತೆಗೆ ದಶಕಗಳಿಂದಲೂ ಕೂಡ ಸಿನಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತಿಳಿಸುತ್ತಿರುವ ಈ ನಟ ಅತ್ಯಂತ ಜನಪ್ರಿಯರಾಗಿದ್ದು ಅವರ ವಿಶೇಷ ಮ್ಯಾನರಿಸಂ ಹಾಗೂ ಬೆಳ್ಳಿತೆರೆಯ ಮೇಲೆ ಎಂಟ್ರಿ ಕೊಟ್ಟರೆ ಸಾಕು ಚಿತ್ರಮಂದಿರದಲ್ಲಿ ಕುಳಿತಿರುವ ಪ್ರೇಕ್ಷಕರು ಎದ್ದು ನಿಂತು ವಿಶಲ್ ಒಡೆಯುತ್ತಾರೆ.

ಹೌದು ಅವರು ಸಂಗೀತ ಸಂಯೋಜನೆ ಮಾಡಿರುವುದು ಕೆಲವೇ ಕೆಲವು ಸಿನಿಮಾಗಳಾದರೂ ಅವರು ನೀಡಿರುವ ಹಾಡುಗಳು ಇಂದಿಗೂ ಕೂಡ ಸೂಪರ್ ಹಿಟ್ ಎನ್ನಬಹುದು. ಕೇವಲ ಹಾಸ್ಯ ಕಲಾವಿದನಾಗದೆ ಸಂಗೀತ ಸಂಯೋಜನೆ ಮಾಡುತ್ತಾ ನಾಯಕ ನಟನಾಗಿ ಅಭಿನಯಿಸುತ್ತಾ ಕೆಲವೊಂದು ಸಿನಿಮಾಗಳನ್ನು ನಿರ್ದೇಶನವನ್ನು ಸಹ ಈ ಹಾಸ್ಯ ಮಹಾರಾಜ್ ಮಾಡಿದ್ದಾರೆ. ಇಂದಿಗೂ ಕೂಡ ಅವರ ಕಾಲ್ ಶೀಟ್ ಗಾಗಿ ನಿರ್ದೇಶಕರು ಕಾಯುತ್ತಾರೆ .

ಹಾಸ್ಯ ಮಹಾರಾಜ್ ಸಾಧು ಕೋಕಿಲಾ ಅವರು ಮಾರ್ಚ್ 24 1966 ರಂದು ನಮ್ಮ ಬೆಂಗಳೂರಿನಲ್ಲಿ ಜನಿಸಿದ್ದು ಇವರ ತಂದೆಯ ಹೆಸರು ನಟೇಶ್ ಮತ್ತು ತಾಯಿಯ ಹೆಸರು ಮಂಗಳಾ ಎಂದು. ಸಾಧು ಕೋಕಿಲ ಅವರು ಹಾಸ್ಯ ನಟ ಮಾತ್ರವಲ್ಲದೇ ಸಂಗೀತ ನಿರ್ದೇಶಕ ಸಿನಿಮಾ ನಿರ್ದೇಶಕ ಮತ್ತು ಸಿನಿಮಾ ನಿರ್ಮಾಪಕ ಕೂಡ ಆಗಿದ್ದು ಇವರು ಸಾಕಷ್ಟು ಸಿನಿಮಾಗಳಿಗೆ ಹಾಡುಗಳನ್ನು ಕೂಡ ರಚಿಸಿರುವುದು ವಿಶೇಷವಾಗಿದ್ದು ಜೊತೆಗೆ ನಿರ್ದೇಶನ ಮತ್ತು ನಿರ್ಮಾಣದ ಕೆಲಸವನ್ನು ಕೂಡ ಮಾಡಿದ್ದಾರೆ.

ಇನ್ನು ಇವರ ಜೀವನದ ಬಗ್ಗೆ ಹೇಳಬೇಕೆಂದರೆ ನಟ ಸಾಧುಕೋಕಿಲಾ ಅವರು ಸಿನಿಮಾ ರಂಗಕ್ಕೆ ಬರುವ ಮುನ್ನಾ ಇವರು ಕಂಪೋಸರ್ ಆಗಿ ಕೆಲಸ ಮಾಡಿದ್ದರು. ಬಳಿಕ 1992 ರಲ್ಲಿ ಕನ್ನಡ ಚಿತ್ರದ ಮೂಲಕ ಮೊದಲನೆಯದಾಗಿ ಅಭಿನಯ ಕೂಡ ಮಾಡಿದ್ದು ಇವರು ಬಹುತೇಕ ಕನ್ನಡ ಸಿನಿಮಾದ ಎಲ್ಲಾ ದೊಡ್ಡ ದೊಡ್ಡ ನಟರ ಸಿನಿಮಾಗಳಲ್ಲಿ ಕೂಡ ಅಭಿನಯಿಸಿದ್ದಾರೆ ಎಂದರೆ ಹೇಳಬಹುದು.

ಇನ್ನು ಸಾಧುಕೋಕಿಲ ಅವರ ವೃತ್ತಿ ಜೀವನದ ಬೆಸ್ಟ್ ಸಿನಿಮಾಗಳೆಂದರೆ
ಓಂ ಓ ಮಲ್ಲಿಗೆ ಕಿಲಾಡಿ ಏಕಾಂಗಿ ಚಂದು ನಾಗರಹಾವು ಅಣ್ಣತಂಗಿ ರಾಕ್ಷಸ ನಮ್ಮಣ್ಣ ಸುಂಟರಗಾಳಿ ಸಿಕ್ಸರ್ ಸ್ನೇಹನಾ ಪ್ರೀತಿನಾ ನೀ ಟಾಟಾ ನಾ ಬಿರ್ಲಾ ಸಂಗಮ ಸವಾರಿ ವಾಯುಪುತ್ರ ಸೂಪರ್ ಪೃಥ್ವಿ ಪೊರ್ಕ ಜಮಾನಾ ಯಾರೇ ಕೂಗಾಡಲಿ ರೋಮಿಯೋ ಜಾನು ಗೂಗ್ಲಿ ಆಟೋರಾಜ ಮೈನಾ ಮಿಸ್ಟರ್ & ಮಿಸಸ್ ರಾಮಾಚಾರಿ ಗಜಕೇಸರಿ ಪವರ್ ರನ್ನ ಬಲೆ ಜೋಡಿ ಕೋಟಿಗೊಬ್ಬ 2 ಮುಂಗಾರು ಮಳೆ 2 ತಾಯಿಗೆ ತಕ್ಕ ಮಗ ಒಡೆಯ ಯುವರತ್ನ ಇನ್ನೂ ಸುಮಾರು ಚಿತ್ರಗಳಲ್ಲಿ ಅಭಿನಯಿಸಿ ಖ್ಯಾತಿ ಪಡೆದಿದ್ದಾರೆ.

ಇನ್ನು ನಟ ಸಾಧು ಕೋಕಿಲಾ ಅವರು ಸುಮಾರು 350 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯ ಮಾಡಿದ್ದು ತಮ್ಮ ಅಭಿಮಾನಿಗಳಿಂದ ಸೈ ಅನಿಸಿಕೊಂಡಿದ್ದಾರೆ. ಇದರ ಜೊತೆಗೆ ಸಾಧು ಕೋಕಿಲ ಅವರು ಮೊದಲನೆಯದಾಗಿ 2003 ರಲ್ಲಿ ಉಪೇಂದ್ರ ಅಭಿನಯದ ರಕ್ತ ಕಣ್ಣೀರು ಚಿತ್ರವನ್ನು ನಿರ್ದೇಶನ ಮಾಡಿದ್ದ ಇದಾದ ಬಳಿಕ ರಾಕ್ಷಸ ಸುಂಟರಗಾಳಿ ಅನಾಥರುಗಂಗೆ ಬಾರೆ ತುಂಗೆ ಬಾರೆ ದೇವ್ರು ಮಿಸ್ಟರ್ ತೀರ್ಥ ಶೌರ್ಯ ಪೊಲೀಸ್ ಸ್ಟೋರಿ 3 ಸೂಪರ್ ರಂಗ ಬಲೆ ಜೋಡಿ ಚಿತ್ರಗಳನ್ನು ಕೂಡ ನಿರ್ದೇಶನ ಮಾಡಿದ್ದಾರೆ.

ಸದ್ಯ ಇದೀಗ ಸಾಧು ಮಹಾರಾಜ್ ಏಕಾಏಕಿ ಗರಂ ಆಗಿದ್ದು ಫೋಟಿ ತೆಗೆದುಕೊಳ್ಳುವ ಬಂದ ಅಭಿಮಾನಿಗೆ ಫೋಟೋ ಡಿಲೀಟ್ ಮಾಡಲಿಲ್ಲ ಅಂದರೆ ಅರೆಸ್ಟ್ ಮಾಡಿ ಸರ್ ಎಂದು ಪೋಲಿಸರಿಗೆ ಮನವಿ ಮಾಡಿದ್ದಾರೆ. ನಂತರ ಏನಾಯಿತು ಗೊತ್ತಾ? ನೀವೆ ನೋಡಿ.