ನಿರ್ದೇಶಕ ಸಂತೋಷ್ ಆನಂದರಾಮ್ ತಮ್ಮ ಚಿತ್ರ ಜೀವನದಲ್ಲಿ ಬಿಗ್ ಹಿಟ್ ಸಿನಿಮಾಗಳನ್ನೆ ಕೊಟ್ಟಿದ್ದು ಪವರ್ ಸ್ಟಾರ್ ಪುನೀತ್ ಅವರ ಜೊತೆಗಿನ ರಾಜಕುಮಾರ ಸೂಪರ್ ಡೂಪರ್ ಹಿಟ್ ಸಿನಿಮಾ ಅಂತ ಎಲ್ಲರಿಗೂ ಗೊತ್ತಿರೋ ವಿಚಾರವೇ ಆಗಿದೆ.
ಯುವರತ್ನ ಸಿನಿಮಾ ಏನು ಕಡಿಮೆನೆ? ಈ ಚಿತ್ರದ ಮೂಲಕವೂ ಅಪ್ಪು-ಆನಂದರಾಮ್ ಜೋಡಿ ಮೋಡಿ ಮಾಡಿದ್ದು ಕೇವಲ 8 ವರ್ಷದ ಒಡನಾಟದಲ್ಲಿ ಸಂತೋಷ್ ಆನಂದರಾಮ್ ಚಿತ್ರ ಜೀವನದಲ್ಲಿ ಸಾಕಷ್ಟು ನೆನಪುಗಳನ್ನ ಬಿಟ್ಟು ಹೋಗಿದ್ದಾರೆ. ಹೌದು ಹೀಗಿರೋವಾಗ ಅಪ್ಪು ಕಟ್ಟಕಡೆಯ ಗಂಧದ ಗುಡಿ ಸಿನಿಮಾದ ಬಗ್ಗೆನೂ ಸಂತೋಷ್ ಆನಂದರಾಮ್ ಒಂದಷ್ಟು ಮಾತನಾಡಿದ್ದು ನಾವು ನೀವು ಸೇರಿ ಕನ್ನಡದ ಈ ವಿಶೇಷ ಗಂಧದ ಗುಡಿ ಸಿನಿಮಾ ನೋಡೋಣ ಅಂತಲೂ ಹೇಳಿದ್ದಾರೆ.
ಇನ್ನು ಡೈರೆಕ್ಟರ್ ಸಂತೋಷ್ ಆನಂದರಾಮ್ ಕನ್ನಡ ಚಿತ್ರರಂಗಕಂಡ ವಿಶೇಷ ನಿರ್ದೇಶಕರೇ ಆಗಿದ್ದು ತಮ್ಮ ಮಿಸ್ಟರ್ ಆ್ಯಂಡ್ ಮಿಸಸ್ ಸಿನಿಮಾ ಮೂಲಕ ಜನರಿಗೆ ಬೇರೆ ರೀತಿಯ ಎಂಟರಟೈನಮೆಂಟ್ ಕೊಟ್ಟಿರೋದು ಗೊತ್ತೆ ಇದೆ.ಇನ್ನು ಅಪ್ಪು ಪ್ರತಿನಿಧಿ ಎಂದ ಸಂತೋಷ್ ಆನಂದರಾಮ್ಇದೇ ನಿರ್ದೇಶಕ ರಾಜಕುಮಾರ ದಂತಹ ಹೆಸರು ಇಟ್ಟುಕೊಂಡು ಎಂತಹ ಸಿನಿಮಾ ಮಾಡ್ತಾರೆ ಅನ್ನೊ ಪ್ರಶ್ನೆ ಕೂಡ ಇತ್ತು. ಹೌದು ಆದರೆ ಸಂತೋಷ್ ಆನಂದರಾಮ್ ಅದ್ಭುತ ಚಿತ್ರವನ್ನೇ ಕೊಟ್ಟರು.
ರಾಜಕುಮಾರ ಸಿನಿಮಾ ಬಂದ ಮೇಲೆ ಅಪ್ಪು ಮತ್ತು ಸಂತೋಷ್ ಜೋಡಿ ಮೇಲೆ ಭಾರಿ ನಿರೀಕ್ಷೆ ಕೂಡ ಹುಟ್ಟಿಕೊಂಡಿದ್ದು ಆಗಲೇ ತಯಾರಾಗಿರೋದೇ ಯುವರತ್ನ ಸಿನಿಮಾ. ಹೌದು ಈ ಸಿನಿಮಾ ಕೂಡ ಯುವಕರ ಮನಸನ್ನ ಕದ್ದೇ ಬಿಡ್ತು.ಅಪ್ಪು ಸರ್ ಜೊತೆ ನಾನು ಮಾಡಿರೊದು ಎರಡೇ ಸಿನಿಮಾಗಳುಇದರ ಮುಂದೆ ಈಗ ಬರೀ ನೆನಪುಗಳೇ ಉಳಿದಿವೆ. ಇನ್ನು ಅಪ್ಪು ಜೊತೆಗೆ ಮಾಡಿರೊ ಎರಡೇ ಎರಡು ಚಿತ್ರಗಳು ಡೈರೆಕ್ಟರ್ ಸಂತೋಷ್ ಆನಂದರಾಮ್ ಅವರಿಗೆ ಸಾಕಷ್ಟು ಅಪ್ಪು ನೆನಪುಗಳನ್ನ ಕಟ್ಟಿಕೊಟ್ಟಿದೆ.
ಸದ್ಯ ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿಯೇ ಅಪ್ಪು ಹೊರಟು ಹೋದ ನೋವಿನಲ್ಲಿಯೇ ಎಲ್ಲರೂ ಅಪ್ಪು ಆದರ್ಶನಗಳನ್ನ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ರೆಡಿ ಆಗಿದ್ದು ನಾನೂ ಅಪ್ಪು ಪ್ರತಿನಿಧಿ ಅಂತಲೇ ಡೈರೆಕ್ಟರ್ ಸಂತೋಷ್ ಆನಂದರಾಮ್ ಹೇಳಿದ್ದಾರೆ. ಇನ್ನು ಪವರ್ ಸ್ಟಾರ್ ಪುನಿತ್ ರಾಜಕುಮಾರ್ ಇದ್ದದ್ದೇ ಹಾಗಲ್ಲವೇ? ಎಲ್ಲರ ಮನಸ್ಸಿನಲ್ಲಿಯ ಉಳಿದಿರೋ ಅಪ್ಪು ಜೊತೆಗಿನ ಒಡನಾಟದ ಒಂದಷ್ಟು ಮಾತುಗಳನ್ನ ಡೈರೆಕ್ಟರ್ ಸಂತೋಷ್ ಆನಂದರಾಮ್ ಹಂಚಿಕೊಳ್ಳುತ್ತಿರುತ್ತಾರೆ.
ನಾನೂ ಅಪ್ಪು ಪ್ರತಿನಿಧಿ. ಪುನೀತ್ ರಾಜಕುಮಾರ್ ಜೊತೆಗೆ ನಾನು ಮಾಡಿರೋದು ಕೇವಲ ಎರಡೇ ಸಿನಿಮಾಗಳು. ಆದರೆ 8 ವರ್ಷ ಇವರ ಜೊತೆಗಿದ್ದ ಖುಷಿ ಇದೆ. ಈ 8 ವರ್ಷದಲ್ಲಿ ಪುನೀತ್ ರಾಜಕುಮಾರ್ ಜೊತೆಗೆ ಸಾಕಷ್ಟು ಒಡನಾಟ ಬೆಳೆದಿತ್ತು ಎಂದು ಸಂತೋಷ್ ಆನಂದರಾಮ್ ಹೇಳಿಕೊಂಡಿದ್ದಾರೆ. ಈ ನಡುವೆ ಸಂತೋಷ ಆನಂದ್ ರಾಮ್ ರವರ ಮದುವೆಯಲ್ಲಿ ಅಪ್ಪು ಕೊಟ್ಟ ಉಡುಗೊರೆ ವೈರಲ್ ಆಗುತ್ತಿದ್ದು ಅಷ್ಟಕ್ಕೂ ಅಪ್ಪು ಕೊಟ್ಟ ದುಬಾರಿ ಉಡುಗೊರೆ ಏನು ಗೊತ್ತಾ? ನೀವೆ ನೋಡಿ.