ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಗಂಧದಗುಡಿ ಅಪ್ಪು ಕೊನೆ ಸಿನೆಮಾ ಅಲ್ಲ..ಶಿವಣ್ಣ ಕೊಟ್ರು ಊಹಿಸದ ಸಿಹಿಸುದ್ದಿ

65,953

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಣ್ಣಾವ್ರ ಮಗನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರೂ ಕೂಡ ತನ್ನದೇ ಆದ ಸ್ಟಾರ್‌ಡಂ ಅನ್ನು ಕಟ್ಟಿಕೊಂಡಂತಹ ನಟ ಎನ್ನಬಹುದು. ಹೌದು ಸ್ಟಾರ್ ನಟರ ಮಕ್ಕಳೆಲ್ಲಾ ಸುಲಭವಾಗಿ ಸ್ಟಾರ್‌ ಆಗಿಬಿಡಲು ಸಾಧ್ಯವಿಲ್ಲ. ಒಳ್ಳೆಯ ಕಲೆ ಇದ್ದರೆ ಹಾಗೂ ಜನರು ಮೆಚ್ಚಿಕೊಳ್ಳುವಂತ ಚಿತ್ರ ಮಾಡಿದರೆ ಮಾತ್ರ ಸ್ಟಾರ್ ನಟರ ಮಕ್ಕಳು ಕೂಡ ಸ್ಟಾರ್ ಆಗುತ್ತಾರೆ.

ಇದಕ್ಕೆ ಅತ್ಯುತ್ತಮ ಉದಾಹರಣೆ ಪವರ್ ಸ್ಟಾರ್‌ ಪುನೀತ್ ರಾಜ್‌ಕುಮಾರ್ ಎನ್ನಬಹುದು . ಹೀಗೆ ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿ ಚಿತ್ರರಂಗದ ಪ್ರಮುಖ ಸ್ಟಾರ್ ನಟನಾಗಿ ಗುರುತಿಸಿಕೊಂಡ ಪುನೀತ್ ರಾಜ್‌ಕುಮಾರ್ ಜೊತೆ ಕೆಲಸ ಮಾಡುವುದು ಕನ್ನಡ ಚಲನಚಿತ್ರರಂಗದ ಪ್ರತಿಯೊಬ್ಬ ನಿರ್ದೇಶಕನ ಕನಸು ಎಂದೇ ಹೇಳಬಹುದಾಗಿದೆ. ಪುನೀತ್ ಚಿತ್ರವೊಂದರ ಚಿತ್ರೀಕರಣದಲ್ಲಿ ಬ್ಯುಸಿ ಇದ್ದರೆ ಹಲವಾರು ಚಿತ್ರಗಳ ಕತೆ ಕೇಳಿ ಸಹಿ ಹಾಕುತ್ತಿದ್ದರು. ಹೌದು ಹೋಮ್ ಬ್ಯಾನರ್ ಮೂಲಕ ಲಾಂಚ್ ಆದ ಪುನೀತ್ ರಾಜ್‌ಕುಮಾರ್ ಮೇಲೆ ಕೋಟಿ ಕೋಟಿ ಸುರಿಯಲು ಕೂಡ ನಿರ್ಮಾಪಕರು ಸಹ ತುದಿಗಾಲಲ್ಲಿ ನಿಂತಿದ್ದರು.

ಸದ್ಯ ಕಿಂಗ್ ಮೇಕರ್ ಎನಿಸಿಕೊಂಡಿರುವ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಓರ್ವ ನಟನಿಗೆ ಅತಿ ಹೆಚ್ಚಾಗಿ ಚಿತ್ರವನ್ನು ನಿರ್ಮಿಸಿದೆ ಎಂದರೆ ಅದು ಪುನೀತ್ ರಾಜ್‌ಕುಮಾರ್ ಅವರಿಗೆ ಮಾತ್ರ ಎನ್ನಬಹುದು . ಹೀಗೆ ದೊಡ್ಡ ದೊಡ್ಡ ಬ್ಯಾನರ್‌ಗಳಿಂದ ಹಾಗೂ ನಿರ್ದೇಶಕರಿಂದ ಬೃಹತ್ ಬೇಡಿಕೆ ಹೊಂದಿದ್ದ ನಟ ಪುನೀತ್ ರಾಜ್‌ಕುಮಾರ್ ಅಗಲಿಕೆ ನಂತರ ಅವರು ನಟಿಸಬೇಕಿದ್ದ ಹಲವಾರು ಚಿತ್ರಗಳು ಹಾಗೆಯೇ ಉಳಿದುಕೊಂಡಿದ್ದು ಕೆಲವು ಚಿತ್ರಗಳು ಘೋಷಣೆಯಾಗಿದ್ದರೆ ಇನ್ನೂ ಕೆಲ ಚಿತ್ರಗಳು ಘೋಷಣೆಯಾಗಿರಲಿಲ್ಲ.

ಹೊಂಬಾಳೆ ಫಿಲ್ಮ್ಸ್ ಜೊತೆ ಸುಮಾರು ಮೂರು ಬಾರಿ ಕೈ ಜೋಡಿಸಿದ್ದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ರವರು ನಾಲ್ಕನೇ ಚಿತ್ರವೊಂದರಲ್ಲಿ ಅಭಿನಯಿಸಲು ಸಿದ್ಧರಾಗಿದ್ದರು. ಹೌದು ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ಲೂಸಿಯಾ ಪವನ್ ನಿರ್ದೇಶನದ ದ್ವಿತ್ವ ಚಿತ್ರದಲ್ಲಿ ಪುನೀತ್ ನಟಿಸಬೇಕಿದ್ದು ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸಗಳೂ ಕೂಡ ಆರಂಭಗೊಂಡಿದ್ದವು.

ಇನ್ನು ಇದೇ ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ರಾಜಕುಮಾರ ಯುವರತ್ನ ಬಳಿಕ ಸಂತೋಷ್ ಆನಂದ್ ರಾಮ್ ಮತ್ತು ಪುನೀತ್ ಕಾಂಬಿನೇಷನ್ ಚಿತ್ರ ಸೆಟ್ಟೇರಬೇಕಿತ್ತು. ಹೌದು ಎರಡು ಒಳ್ಳೆಯ ಸಂದೇಶವಿರುವ ಚಿತ್ರಗಳನ್ನು ನೀಡಿದ್ದ ಅಪ್ಪು – ಸಂತೋಷ್ ಜೋಡಿ ಮೂರನೇ ಬಾರಿಗೆ ಕೈಜೋಡಿಸುವ ಕನಸು ಇದೀಗ ಕನಸಾಗಿಯೇ ಉಳಿದುಬಿಟ್ಟಿದೆ.Like Father Like Son: Karnataka Bids Teary Farewell To 'Appu' Puneet  Rajkumar Like They Did For

ಇನ್ನು ಪುನೀತ್ ರಾಜ್‌ಕುಮಾರ್ ಕತೆ ಕೇಳಿ ಗ್ರೀನ್ ಸಿಗ್ನಲ್ ನೀಡಿದ್ದ ಮತ್ತೆರಡು ಚಿತ್ರಗಳೆಂದರೆ ಒಂದು ನಿರ್ದೇಶಕ ಕೃಷ್ಣ ನಿರ್ದೇಶನದ ಸಿನಿಮಾ ಹಾಗೂ ಮತ್ತೊಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹೋದರ ದಿನಕರ್ ತೂಗುದೀಪ ನಿರ್ದೇಶನದ ಚಿತ್ರ. ಈ ಎರಡೂ ಪ್ರಾಜೆಕ್ಟ್‌ಗಳೂ ಕೂಡ ಅಪ್ಪು ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದ್ದು ಕೃಷ್ಣ ನಿರ್ದೇಶನದ ಚಿತ್ರದಲ್ಲಿ ಪುನೀತ್ ಆರ್ಮಿ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕಿತ್ತು.

ಇದಕ್ಕಾಗಿ ಬೇಕಾದ ಪೂರ್ವ ಮಾಹಿತಿಗಳನ್ನು ಕಲೆಹಾಕುವ ಕೆಲಸಕ್ಕೆ ಇಳಿದಿದ್ದರು ನಿರ್ದೇಶಕ ಕೃಷ್ಣ ರವರು. ಅತ್ತ ದಿನಕರ್ ತೂಗುದೀಪ ನಿರ್ದೇಶನದ ಚಿತ್ರ ಬಹುದಿನಗಳ ನಂತರ ಬರಲಿರುವ ರಾಜ್ ಮತ್ತು ತೂಗುದೀಪ ಕುಟುಂಬದ ಕಾಂಬಿನೇಷನ್ ಚಿತ್ರ ಎಂಬ ಕಾರಣದಿಂದ ಬಹಳ ನಿರೀಕ್ಷೆ ಕೂಡ ಹುಟ್ಟುಹಾಕಿತ್ತು. ಇನ್ನು ಪುನೀತ್ ರಾಜ್ ಕುಮಾರ್ ಅವರಿಗಾಗಿ ನಿರ್ದೇಶಕ ಮಂಸೋರೆ ಮಿಷನ್ ಕೊಲಂಬಸ್ ಎಂಬ ಚಿತ್ರವನ್ನು ಪುನೀತ್ ರಾಜ್ ಕುಮಾರ್ ಅವರಿಗೆ ನಿರ್ದೇಶಿಸಲು ಯೋಜನೆ ಹಾಕಿಕೊಂಡಿದ್ದರು.

ಇತ್ತೀಚೆಗಷ್ಟೆ ಕಾಂತಾರ ಚಿತ್ರವನ್ನು ಡೇಟ್ ಸಮಸ್ಯೆಯಿಂದ ಕೈಬಿಟ್ಟಿದ್ದ ಪುನೀತ್ ರಾಜ್ ಕುಮಾರ್ ಮುಂದೊಂದು ದಿನ ಬೇರೆ ಚಿತ್ರದಲ್ಲಿ ಕೆಲಸ ಮಾಡೋಣ ಎಂದು ರಿಷಬ್ ಶೆಟ್ಟಿ ಬಳಿ ಹೇಳಿದ್ದರು. ಹೀಗೆ ಅಪ್ಪು ಅಭಿನಯಿಸಬೇಕಿದ್ದ ಸಾಲು ಸಾಲು ಚಿತ್ರಗಳು ಬಿಡುಗಡೆಗೂ ಮುನ್ನವೇ ನಿಂತುಹೋಗಿವೆ.

ಆದರೆ ಇದೀಗ ಆಶ್ಚರ್ಯಕರ ಸುದ್ದಿಯೊಂದು ಹೊರ ಬಂದಿದೆ. ಸದ್ಯ ಅಪ್ಪು ಕೊನೆಯ ಸಿನಿಮಾ ಗಂಧದ ಗುಡಿ ಎಂದುಕೊಂಡಿದ್ದ ಅಭಿಮಾನಿಗಳಿಗೆ ಸಿಹಿ ಸುದ್ದಿ ಬಂದಿದ್ದು ಇನ್ನು ಮುಂದೆ ಅಪ್ಪು ಸಿನಿಮಾ ತೆರೆಕಾಣಲಿದೆಯಂತೆ. ಹೌದು ಅದು ಹೇಗೆ ಅಂತೀರಾ? ಇನ್ನುಮುಂದೆ ಅಪ್ಪು ಅವರ ಗ್ರಾಫಿಕ್ ಸಿನಿಮಾ ಬರಲಿದ್ದು ಈಗಾಗಲೇ ಸಕಲ ತಯಾರಿ ಕೂಡ ನಡೆಸಲಾಗಿದೆಯಂತೆ. ವಿದೇಶದಿಂದ ತಂತ್ರಜ್ಞಾನರನ್ನು ಕರೆಸಿ ಅಪ್ಪು ರವರ ಗ್ರಾಫಿಕ್ಸ್ ಸಿನಿಮಾ ತಯಾರು ಮಾಡುತ್ತಿದ್ದು ಅಧಿಕೃತ ಮಾಹಿತಿಗಾಗಿ ಕಾಯಬೇಕಿದೆಯಷ್ಟೆ.