ಕನ್ನಡ ಚಿತ್ರರಂಗದ ಪವರ್ ಕನ್ನಡಿಗರ ಮನೆ ಮಗ ಕರ್ನಾಟಕರತ್ನ ಡಾ. ಪುನೀತ್ ರಾಜಕುಮಾರ್ ರವರು ನಮ್ಮನ್ನು ಅಗಲಿ ಸರಿ ಸುಮಾರು ಅದಾಗಲೇಒಂದು ವರುಷ ಕಳೆದಿದ್ದು ನಟ ಪುನೀತ್ ರಾಜ್ ಕುಮಾರ್ ಅವರು ಎಲ್ಲರಿಗೂ ಬಹಳ ಅಚ್ಚು ಮೆಚ್ಚುದ ನಟರಾಗಿದ್ದರು. ಇನ್ನೂ ಅಪ್ಪು ಅವರ ಪತ್ನಿ ಅವರ ಜೀವಕ್ಕೆ ಜೇವವಾಗಿದ್ದ ಅವರ ಧರ್ಮಪತ್ನಿ ಅಶ್ವಿನಿಯವರು ಕೂಡ ಅಪ್ಪು ಅವರಂತೆಯೇ ಎಲ್ಲರಿಗೂ ಕೂಡ ಅಷ್ಟೇ ಅಚ್ಚುಮೆಚ್ಚು ಎನ್ನಬಹುದು.
ಇನ್ನು ಈ ಇಬ್ಬರು ದಂಪತಿಗಳಿಗೆ ಒಂದೇ ರೀತಿಯಾದಂತಹ ಗುಣವಿದ್ದು ಅಶ್ವಿನಿ ಹಾಗೂ ಅಪ್ಪು ಇಬ್ಬರು ಸಹ ಸರಳತೆಯ ಮನಸ್ಸನ್ನು ಹೊಂದಿದ್ದು ಇನ್ನೂ ಅಪ್ಪು ಅಂತೆಯೇ ಪತ್ನಿ ಅಶ್ವಿನಿ ಅವರಿಗೂ ಸಹ ಸರಳ ವ್ಯಕ್ತಿತ್ವವನ್ನು ಹೊಂದಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಅಶ್ವಿನಿ ಮೇಡಂ ಅವರಿಗೆ ಎಲ್ಲರ ಜೊತೆಯಲ್ಲಿ ಬೆರೆಯುವುದು ಎಂದರೆ ಬಹಳ ಇಷ್ಟ.
ಇನ್ನು ಕನ್ನಡ ಚಿತ್ರರಂಗದ ರೆಬೆಲ್ ಸ್ಟಾರ್ ಖ್ಯಾತಿಯ ಅಂಬರೀಶ್ ಅಗಲಿ ಈಗಾಗಲೇ 4 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್ ಸಮಾಧಿಗೆ ತೆರಳಿ ಸುಮಲತಾ ಅಂಬರೀಶ್ ಮಗ ಅಭಿಷೇಕ್ ಸೇರಿ ಚಿತ್ರರಂಗದ ಹಲವು ಗಣ್ಯರು ಪೂಜೆ ಸಲ್ಲಿಸಿದರು. ಈ ವೇಳೆ ಅಂಬರೀಶ್ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ವಿಚಾರವಾಗಿ ಮಾತನಾಡಿದ ಸಂಸದೆ ಪುನೀತ್ಗೆ ಸಿಕ್ಕ ಗೌರವ ಅಂಬರೀಶ್ ಅವ್ರಿಗೂ ಸಿಗುತ್ತೆ ನನಗೆ ನಂಬಿಕೆ ಇದೆ ಎಂದು ಹೇಳಿದರು. ಅಪ್ಪುಗೆ ಕರ್ನಾಟಕ ರತ್ನ ಸಿಕ್ಕಿದ್ರೆ ಅಂಬರೀಶ್ಗೂ ಸಿಕ್ಕಂತೆಯೇ.
ಅಂಬರೀಶ್ ಅವರಿಗೆ ಏನು ಗೌರವ ಸಿಗಬೇಕಿತ್ತೋ ಅದು ಸಿಕ್ಕೇ ಸಿಕ್ಕುತ್ತೆ ಎಂಬ ಭರವಸೆ ಇದೆ. ಅದು ಆಗಲೇ ಸಿಕ್ಕಿದೆ. ಅದು ಜನರ ಪ್ರೀತಿ ಅದೇ ದೊಡ್ಡ ಪ್ರಶಸ್ತಿ. ಅಪ್ಪುಗೆ ಕರ್ನಾಟಕ ರತ್ನ ಸಿಕ್ಕಿದ್ರೆ ಅಂಬರೀಶ್ಗೂ ಸಿಕ್ಕಿದಂಗೆ ಅನ್ನೋದು ನನ್ನ ಅಭಿಪ್ರಾಯ. ಅದರಲ್ಲಿ ಯಾವುದೇ ಭೇದಭಾವ ಇಲ್ಲ. ಒಂದು ವೇಳೆ ಅಂಬರೀಶ್ ಈಗ ಇದ್ದಿದ್ರೆ ಅವ್ರಿಗೆ ಸಿಗೋದ್ಕಿಂತ ಅಪ್ಪುಗೆ ಪ್ರಶಸ್ತಿ ಕೊಟ್ಟಿರೋದಕ್ಕೆ ಅವರು ಹೆಮ್ಮೆ ಪಡ್ತಿದ್ರು ಸಂತೋಷ ಪಡ್ತಿದ್ರು ಎಂದು ಸುಮಲತಾ ಅಂಬರೀಶ್ ಹೇಳಿದರು. ಅಭಿಮಾನಿಗಳು ಕೂಡ ಇದೇ ರೀತಿಯ ಭಾವನೆಗಳನ್ನು ಅಳವಡಿಸಿಕೊಳ್ಳಬೇಕೆಂದು ಮನವಿ ಮಾಡುತ್ತೇನೆ ಎಂದರು.