ವಾರ್ತಾ ಮಂಜರಿ
Trending Stories, Viral News, Gossips & Everything in Kannada

Ravinder: ಮದುವೆಯಾದ ಎರಡೇ ವಾರಕ್ಕೆ ಅಧಿಕೃತವಾಗಿ ಸಿಹಿಸುದ್ದಿ ಕೊಟ್ಟ ನಟ ರವಿಂದ್ರ್ ಹಾಗು ಮಹಾಲಕ್ಷ್ಮಿ

ಹೌದು ಬಿಗ್ ಬಾಸ್ ಸೀಸನ್ 6 ಇನ್ನೇನು ಆರಂಭವಾಗಲಿದ್ದು ಮದುವೆಯಾಗಿ ಈ ಜೋಡಿ ಇನ್ನು ಹಲವು ಸ್ಥಳಗಳಿಗೆ ಭೇಟಿ ನೀಡುವುದರ ಬದಲಿಗೆ ನೇರವಾಗಿ ಬಿಗ್ ಬಾಸ್ ಮನೆಗೆ ಹೋಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ

3,545

ಸಾಮಾನ್ಯವಾಗಿ ಪ್ರೀತಿಗೆ ಕಣ್ಣಿಲ್ಲ ಎಂಬುವಂತಹ ಮಾತಿದೆ. ಹೌದು ಪ್ರೀತಿ ಯಾವಗ ಯಾರ ಮೇಲೆ ಯಾವ ರೀತಿ ಆಗುತ್ತದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಇನ್ನು ಪ್ರೀತಿಸುವವರು ಅಂದ ಚಂದ ಜಾತಿ ಹೀಗೆ ಯಾವುದನ್ನು ಕೂಡ ನೋಡವುದಿಲ್ಲ. ಕೆಲವರು ಪೋಷಕರನ್ನ ಎದುರು ಹಾಕಿಕೊಂಡು ಮದುವೆಯಾಗಿ ಸಂಸಾರ ಚೆನ್ನಾಗಿ ಮಾಡಿದ್ದು ಇದೆ, ಇನ್ನೂ ಹಲವು ಜೋಡಿ ಮದುವೆಯಾದ ಮೂರೇ ತಿಂಗಳಿಗೆ ಹಿಂತಿರುಗಿ ಓಡಿ ಬಂದಿದ್ದು ಇದೆ.

ಯಾರು ಸಂಸಾರ ಎಂಬ ನೌಕೆಯನ್ನು ಚೆನ್ನಾಗಿ ಅಳೆದು ತೂಗುತ್ತಾರೋ ಅವರ ಜೀವನ ಬಂಡಿ ಕೂಡ ಚೆನ್ನಾಗಿ ಸಾಗುತ್ತದೆ. ಇನ್ನು ಮದುವೆ ಎಂಬುದು ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ ಎಂಬ ಮಾತಿದೆ. ಅಂತೆಯೆ ಕಳೆದ ಒಂದು ತಿಂಗಳಿಂದ ಸ್ಟಾರ್ ಜೋಡಿ ಒಂದು ವಿವಾಹವಾಗಿ ಸಾಮಾಜಿಕ ಜಾಲತಾಣದಲ್ಲಿ ಹಾಟ್ ಟಾಪಿಕ್ ಆಗಿದ್ದು ಈ ಜೋಡಿ ನೋಡಿ ಮೆಚ್ಚಿಕೊಂಡವರಿಗಿಂತ ಟ್ರೋಲ್ ಮಾಡಿದವರೇ ಜಾಸ್ತಿಯಾಗಿದ್ದಾರೆ.

ಹೌದು ತಮಿಳು ಖ್ಯಾತ ನಿರ್ಮಾಪಕ ರವೀಂದ್ರ ಮತ್ತು ನಿರೂಪಕಿ ಹಾಗೂ ಧಾರಾವಾಹಿಯ ನಟಿ ಆಗಿರುವ ಮಹಾಲಕ್ಷ್ಮಿ ರವರ ಮದುವೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿರುವುದು ತಮಗೂ ಕೂಡ ತಿಳಿದಿರುತ್ತದೆ. ಹೌದು ತಮಿಳಿನ ಧಾರಾವಾಹಿಯನ್ನು ನಿರ್ಮಿಸುತ್ತಿದ್ದ ರವೀಂದರ್ ಅವರು ಅದೇ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಮಹಾಲಕ್ಷ್ಮಿ ರವರನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಇನ್ನು ರವೀಂದರ್ ರವರು ದಡೂತಿ ವ್ಯಕ್ತಿ . ಇತ್ತ ಇಷ್ಟು ಸುಂದರವಾಗಿರುವ ಮಹಾಲಕ್ಷ್ಮಿ ಅಂಥವರನ್ನ ಮದುವೆಯಾಗಿದ್ದು ಯಾಕೆ ಎಂದು ಜನ ಪ್ರಶ್ನಿಸಿದ್ರು.

 

ಇನ್ನು ಸಾಕಷ್ಟು ಜನ ದುಡ್ಡಿಗಾಗಿಯೇ ಮಹಾಲಕ್ಷ್ಮಿ Ravinder ಅವರನ್ನು ಮದುವೆಯಾಗಿದ್ದಾರೆ ಎಂದು ಟ್ರೊಲ್ ಮಾಡಿದ್ದು ಆದರೆ ಟ್ರೋಲಿಗರ ಮಾತಿಗೆಲ್ಲ ತಲೆ ಕೆಡಿಸಿಕೊಳ್ಳದ ಈ ಕಪಲ್ ತಮ್ಮ ಮದುವೆಯ ಮಧುರ ಕ್ಷಣಗಳನ್ನು ಸಖತ್ ಎಂಜಾಯ್ ಮಾಡುತ್ತಿದೆ.ರವೀಂದರ್ ಅವರು ತಮ್ಮ ಮದುವೆಯಾದ ಬಳಿಕ ತುಸು ಹೆಚ್ಚು ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿದ್ದಾರೆ ಎಂದೇ ಹೇಳಬಹುದು. ಹೌದು ಈಗಾಗಲೇ ತಮ್ಮ ಮದುವೆಯ ನಂತರದ ಸುಮಧುರ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಮದುವೆಯಾಗುತ್ತಿದ್ದ ಹಾಗೆ ರವೀಂದರ್ ಅವರು ಮಹಾಲಕ್ಷ್ಮಿ ಅವರನ್ನ ಕರೆದುಕೊಂಡು ಸಾಕಷ್ಟು ದೇವಾಲಯಗಳನ್ನು ಕೂಡ ಸುತ್ತಿದ್ದಾರೆ.

ravinder,producer ravinder,ravinder mahalakshmi wedding,producer ravinder chandrasekar,mahalakshmi ravinder,ravinder mahalakshmi,ravinder chandrasekaran,producer ravinder interview,producer ravinder about bigg boss,bigboss,ravindar mahalakshmi marriage,ravinder and mahalakshmi in bigg boss
Courtesy: News18

ಇನ್ನು ಗಂಡ ಹೆಂಡತಿ ದೃಷ್ಟಿಯಾಗಬಾರದು ಎಂದು ದೇವರಿಗೆ ಕೈ ಮುಗಿಯುತ್ತಿದ್ದಾರೆ ಎಂದು ಕಮೆಂಟ್ ಮಾಡಲಾಗಿದ್ದು ಇನ್ನು ತಾವು ಎಲ್ಲೇ ಹೋದರು ಅದರ ಫೋಟೋಗಳನ್ನ ತೆಗೆದು ರವೀಂದರ್ ರವರು ತಮ್ಮ ಸಾಮಾಜಿಕ ಖಾತೆಯಲ್ಲಿ ಹಂಚಿಕೊಳ್ಳುತ್ತಾರೆ. ಮದುವೆಯಾಗುತ್ತಿದ್ದ ಹಾಗೆ ದೇವಸ್ಥಾನಕ್ಕೂ ಕೂಡ ಭೇಟಿ ನೀಡಿದ ನಂತರ ಮಹಾಲಕ್ಷ್ಮಿ ಹಾಗೂ ರವೀಂದರ್ ಜೋಡಿ ಅಮೆರಿಕಾಕ್ಕೂ ಹಾರಿತ್ತು. ನಂತರ ಹಿಂತಿರುಗಿದ ಮಹಾಲಕ್ಷ್ಮಿ ಶೂಟಿಂಗ್ ನಲ್ಲಿ ಮತ್ತೆ ಬ್ಯುಸಿಯಾಗಿದ್ದಾರೆ.

ಅಂದ ಹಾಗೆ ಪತ್ನಿ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದರೆ ನನಗೆ ಊಟ ಕೊಡುವ ಕೆಲಸ ಅಂತ ರವೀಂದರ್ ತಮಾಷೆಯಾಗಿ ಇನ್ಸ್ಟಾಗ್ರಾಮ್ ನಲ್ಲಿಯೂ ಕೂಡ ಬರೆದುಕೊಂಡಿದ್ದು ಸದ್ಯ ಇದೀಗ ಸಿಕ್ಕಾಪಟ್ಟೆ ಟ್ರೆಂಡ್ ಆಗಿರುವ ರವೀಂದ್ರ ಹಾಗೂ ಮಹಾಲಕ್ಷ್ಮಿ ಜೋಡಿ ಶಾಕಿಂಗ್ ಸುದ್ದಿ ಎಂದು ಕೊಟ್ಟಿದೆ. ಹೌದು ಇತ್ತೀಚಿಗಷ್ಟೆ ಸಂದರ್ಶನ ಒಂದರಲ್ಲಿ ಮಾತನಾಡಿದ ರವೀಂದರ್ ರವರು ತಮ್ಮ ಮುಂದಿನ ನಡೆಯ ಬಗ್ಗೆ ಸಣ್ಣ ಹಿಂಟ್ ಕೊಟ್ಟಿದ್ದು ಇದು ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಸೆನ್ಸೇಷನ್ ಕ್ರಿಯೇಟ್ ಮಾಡಿದೆ.

ಹೌದು ಬಿಗ್ ಬಾಸ್ ಸೀಸನ್ 6 ಇನ್ನೇನು ಆರಂಭವಾಗಲಿದ್ದು ಮದುವೆಯಾಗಿ ಈ ಜೋಡಿ ಇನ್ನು ಹಲವು ಸ್ಥಳಗಳಿಗೆ ಭೇಟಿ ನೀಡುವುದರ ಬದಲಿಗೆ ನೇರವಾಗಿ ಬಿಗ್ ಬಾಸ್ ಮನೆಗೆ ಹೋಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹೌದು ಬಿಗ್ ಬಾಸ್ ಮನೆಯಲ್ಲಿ ಈ ಜೋಡಿ ಹೇಗಿರುತ್ತಾರೆ ಅಂತ ನೋಡೋದಕ್ಕೆ ಅಭಿಮಾನಿಗಳು ಕಾತುರರಾಗಿದ್ದು ವಿ ಆರ್ ವೇಟಿಂಗ್ ಅಂತ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಟ್ರೆಂಡಿಂಗ್ ಜೋಡಿ ಬಿಗ್ ಬಾಸ್ ಮನೆಯಲ್ಲೂ ಕಾಣುವುದಕ್ಕೆ ಅವಕಾಶ ಸಿಗುತ್ತಾ ಎನ್ನುವುದೇ ಎಲ್ಲರ ಪ್ರಶ್ನೆಯಾಗಿದೆ.