Rashmika Mandanna: ಕಿರಿಕ್ ಪಾರ್ಟಿ ಚಿತ್ರದ ಬಗ್ಗೆ ಇದುವರೆಗೂ ಗೊತ್ತಿರದ ಘಟನೆ ಕೊನೆಗೂ ಹೊರಹಾಕಿದ ರಶ್ಮಿಕಾ
ಸದ್ಯ ಇದೀಗ ನಟಿ ರಶ್ಮಿಕಾ ಮಂದಣ್ಣ ರವರು ಚಥುರ್ಭಾಷಾ ನಟಿಯಾಗಿದ್ದು ಕನ್ನಡದಲ್ಲಿ ಈಗಾಗಲೇ ಕೆಲವು ಸಿನಿಮಾಗಳಲ್ಲಿ ನಟಿಸಿರುವ ರಶ್ಮಿಕಾ ಮಂದಣ್ಣ ತೆಲುಗು ತಮಿಳು ಹಿಂದಿ ಭಾಷೆಗಳಲ್ಲಿ ಬೇಡಿಕೆ ಹೊಂದಿದ್ದಾರೆ.
ಸದ್ಯ ಇದೀಗ ನಟಿ ರಶ್ಮಿಕಾ ಮಂದಣ್ಣ ರವರು ಚಥುರ್ಭಾಷಾ ನಟಿಯಾಗಿದ್ದು ಕನ್ನಡದಲ್ಲಿ ಈಗಾಗಲೇ ಕೆಲವು ಸಿನಿಮಾಗಳಲ್ಲಿ ನಟಿಸಿರುವ ರಶ್ಮಿಕಾ ಮಂದಣ್ಣ ತೆಲುಗು ತಮಿಳು ಹಿಂದಿ ಭಾಷೆಗಳಲ್ಲಿ ಬೇಡಿಕೆ ಹೊಂದಿದ್ದಾರೆ. ಶೀಘ್ರದಲ್ಲಿಯೇ ಮಲಯಾಳಂಗೂ ಕೂಡ ಕಾಲಿಡಲಿದ್ದಾರೆ ಈ Rashmika Mandanna . ಇನ್ನು ತೆಲುಗು ತಮಿಳಿನಲ್ಲಿ ಹಿಟ್ ಆದ ಬಳಿಕ ಇದೀಗ ಬಾಲಿವುಡ್ನತ್ತ ಮುಖ ಮಾಡಿರುವ ರಶ್ಮಿಕಾ ಮಂದಣ್ಣ ರವರು ಬಾಲಿವುಡ್ನಲ್ಲಿಯೇ ನೆಲೆ ನಿಲ್ಲುವ ಯೋಜನೆಯಲ್ಲಿದ್ದು ಇದೇ ಕಾರಣಕ್ಕೆ ಖಾಸಗಿ ತರಬೇತುದಾರರನ್ನು ಇರಿಸಿಕೊಂಡು ಹಿಂದಿ ಕಲಿಯುತ್ತಿದ್ದಾರೆ ಇದರ ಜೊತೆಗೆ ಹಲವು ಹಿಂದಿ ಚಾನೆಲ್ಗಳಿಗೆ ಯೂಟ್ಯೂಬ್ ಚಾನೆಲ್ಗಳಿಗೂ ಕೂಡ ಸಂದರ್ಶನಗಳನ್ನು ನೀಡುತ್ತಿದ್ದಾರೆ.
ಸದ್ಯ ಇದೀಗ ಜನಪ್ರಿಯ ಹಿಂದಿ ಯೂಟ್ಯೂಬ್ ಚಾನೆಲ್ ಆಗಿರುವ ಮಾಷೆಬಲ್ ಇಂಡಿಯಾಗಾಗಿ ರಶ್ಮಿಕಾ ಮಂದಣ್ಣ ಸಂದರ್ಶನ ನೀಡಿದ್ದು ತಮ್ಮ ಮೊದಲ ಸಿನಿಮಾ ಕಿರಿಕ್ ಪಾರ್ಟಿ ಬಗ್ಗೆ ಮಾತನಾಡಿದ್ದಾರೆ. ಹೌದು ಕಿರಿಕ್ ಪಾರ್ಟಿ ತಂಡದವರು ನನ್ನನ್ನು ಸಿನಿಮಾಕ್ಕೆ ಹಾಕಿಕೊಳ್ಳಲು ಹಿಂದೆ ಬಿದ್ದಿದ್ದರು ನಾನೇ ಅವಾಯ್ಡ್ ಮಾಡುತ್ತಿದ್ದೆ ಎಂಬರ್ಥದಲ್ಲಿ ಮಾತನಾಡಿ ಮತ್ತೆ ವಿವಾದದಲ್ಲಿದ್ದಾರೆ.
ನಾನು ಆಗಷ್ಟೆ ಫ್ರೆಶ್ ಫೇಸ್ ಕಾಂಟೆಸ್ಟ್ ಗೆದ್ದಿದ್ದು ನನ್ನ ಒಂದು ಚಿತ್ರ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಹೌದು ಅದರಲ್ಲಿ ಬಹಳ ಕೆಟ್ಟದಾಗಿ ನಾನು ಕಾಣುತ್ತಿದೆ. ಅದೇ ಸಮಯಕ್ಕೆ ಕಿರಿಕ್ ಪಾರ್ಟಿ ತಂಡದವರು ನಾಯಕಿಗಾಗಿ ಹುಡುಕುತ್ತಿದ್ದರು. ಅವರಿಗೆ ಸಣ್ಣ ವಯಸ್ಸಿನ ಆದರೆ ಮೆಚ್ಯೂರ್ಡ್ ಮುಖದ ನಟಿ ಬೇಕಾಗಿದ್ದು ಅವರು ನನ್ನ ಫೋಟೊ ನೋಡಿ ನನಗೆ ಕರೆ ಮಾಡಿದರು. ಆದರೆ ಅದೊಂದು ಫ್ರಾಂಕ್ ಕಾಲ್ ಎಂದುಕೊಂಡು ನನಗೆ ನಟಿಸುವುದು ಇಷ್ಟವಿಲ್ಲ ಎಂದು ಹೇಳಿ ಕಟ್ ಮಾಡಿ ನಂಬರ್ ಅವನನ್ನು (?!) ಬ್ಲಾಕ್ ಮಾಡಿಬಿಟ್ಟೆ ಎಂದಿದ್ದಾರೆ.

ಆ ನಂತರ ಅವರು ನನ್ನ ಗೆಳೆಯರನ್ನೆಲ್ಲ ಸಂಪರ್ಕಿಸಿದ್ದು ಆಕೆಯೊಂದಿಗೆ ಮಾತನಾಡಿಸಿ ಎಂದು ಕೇಳಿದರು. ಕೊನೆಗೆ ಅವರು ನನ್ನ ಟೀಚರ್ ಅನ್ನು ಸಹ ಭೇಟಿ ಮಾಡಿದ್ದು ನಾವು ರಶ್ಮಿಕಾ ಅನ್ನು ಹುಡುಕಿದ್ದೇವೆ ಆಕೆ ನಿಮ್ಮದೇ ಕಾಲೇಜಿನ ಹುಡುಗಿ ಎಂಬುದು ಗೊತ್ತು ಆಕೆಗೆ ನಮ್ಮನ್ನು ಒಮ್ಮೆ ಭೇಟಿ ಮಾಡುವಂತೆ ಹೇಳಿ ಎಂದು ಕೇಳಿಕೊಂಡರು ಎಂದಿದ್ದರು. ಟೀಚರ್ ನನ್ನನ್ನು ಕರೆಸಿ ಯಾಕೆ ಹೀಗೆ ಅವರನ್ನು ಕಾಡಿಸುತ್ತಿದ್ದೀಯ ಒಮ್ಮೆ ಭೇಟಿ ಮಾಡು ಅದರಲ್ಲಿ ಕಳೆದುಕೊಳ್ಳುವುದೇನು? ಎಂದರು. ನಾನೂ ಕೂಡ ನನ್ನ ಟೀಚರ್ ಮಾತಿನ ಮೇಲಿನ ಗೌರವಕ್ಕೆ ನಿರ್ದೇಶಕರನ್ನು ಮತ್ತು ನಿರ್ಮಾಪಕರನ್ನು ಭೇಟಿಯಾದೆ ಎಂದಿದ್ದಾರೆ ರಶ್ಮಿಕಾ ಮಂದಣ್ಣ.
ಇನ್ನು ನಿರ್ದೇಶಕ ಹಾಗೂ ನಿರ್ಮಾಪಕರನ್ನು (ರಕ್ಷಿತ್ ಶೆಟ್ಟಿ, ರಿಷಬ್ ಹೆಸರು ಹೇಳಲಿಲ್ಲ ರಶ್ಮಿಕಾ) ಭೇಟಿಯಾದಾಗಿ ಆದರೆ ಅವರು ಸಹಜವಾಗಿಯೇ ನನ್ನೊಟ್ಟಿಗೆ ಮಾತನಾಡಿದರು. ಆದರೆ ಅಲ್ಲಿ ಕ್ಯಾಮೆರಾ ಒಂದನ್ನು ಇಟ್ಟಿದ್ದು ಮಾತುಕತೆ ಆದ ಮೇಲೆ ಆ ವಿಡಿಯೋವನ್ನು ನೋಡಿ ಈಕೆ ಸರಿಯಾಗಿ ಸೂಟ್ ಆಗುತ್ತಾಳೆ ಎಂದುಕೊಂಡರು. ಹೌದು ಬಳಿಕ ಸಿನಿಮಾದ ಡೈಲಾಗ್ಗಳನ್ನು ನೀಡಿ ಓದಲು ಹೇಳಿದ್ದು ಅಂತೆಯೇ ನಾನು ಸಹಜವಾಗಿ ಓದಿದೆ.
ಇದೇ ನಮಗೆ ಬೇಕಾಗಿರುವುದು ಎಂದಿದ್ದು ಸರಿ ಎಂದು ನಾನೂ ಸಹ ಒಪ್ಪಿಕೊಂಡೆ ಹಾಗೆಯೇ ಸಿನಿಮಾ ಸಹ ಮುಗಿದು ಹೋಯಿತು. ಆದರೆ ಸಿನಿಮಾ ಬಿಡುಗಡೆ ಆದಾಗ ಸೂಪರ್ ಡೂಪರ್ ಹಿಟ್ ಆಯಿತು. ಜನ ನನ್ನನ್ನು ಗುರುತಿಸಿದ್ದು ಆಕೆ ಇನ್ನೂ ಹೆಚ್ಚು ಸಿನಿಮಾಗಳಲ್ಲಿ ನಟಿಸಬೇಕು ಎಂದು ಕೇಳಿದರು. ಹಾಗೆಯೇ ನಾನೂ ನಟಿಸುತ್ತಾ ಹೋದೆ ಎಂದಿದ್ದಾರೆ ರಶ್ಮಿಕಾ ಮಂದಣ್ಣ.