ವಾರ್ತಾ ಮಂಜರಿ
Trending Stories, Viral News, Gossips & Everything in Kannada

Dboss Darshan: ನಟ ದೇವರಾಜ್ ಬರ್ತಡೆಗೆ ಮನೆಗೆ ಹೋಗಿ ಸರ್ಪ್ರೈಸ್ ಗಿಫ್ಟ್ ಕೊಟ್ಟ ದರ್ಶನ್

ಗಣ್ಯ ವ್ಯಕ್ತಿಗಳೊಡನೆ ಬಹಳ ಸೊಗಸಾದ ಬಾಂಧವ್ಯವನ್ನು ಹೊಂದಿರುವ ನಟ Dboss Drashan  ರಬರು ಪ್ರತಿಯೊಬ್ಬರ ಹುಟ್ಟುಹಬ್ಬವನ್ನು ಸ್ವತ ತಾವೇ ಖುದ್ದಾಗಿ ಹೋಗಿ ಆಚರಿಸುವ ವಾಡಿಕೆ ಬೆಳೆಸಿಕೊಂಡಿದ್ದಾರೆ.

161

ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದಂತ  ಛಾಪು ಮೂಡಿಸಿದ್ದ ನಟ ಎಂದರೆ ದೇವರಾಜ್ ರವರು. ಆ ಕಾಲದಲ್ಲಿ ಅದಾಗಲೇ ಕನ್ನಡ ಚಿತ್ರರಂಗದಲ್ಲಿ ಶಶಿ ಕುಮಾರ್ ರವಿಚಂದ್ರನ್ ಶಿವ ರಾಜ್ ಕುಮಾರ್ ರಮೇಶ್ ಅರವಿಂದ್ ಸೇರಿದಂತೆ ಅನೇಕರು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದು ಬಹುಬೇಡಿಕೆಯ ನಟರಾಗಿದ್ದರು. ಹೌದು ಆ ಸಮಯದಲ್ಲಿ ಯಾವ ನಟರೂ ಕೂಡ ಅಷ್ಟಾಗಿ ಹೆಸರು ಮಾಡುತ್ತಿರಲಿಲ್ಲ ಮತ್ತು ಅವರ ಸಿನಿಮಾಗಳು ಕೂಡ ದೊಡ್ಡಮಟ್ಟದಲ್ಲಿ ಸಕ್ಸಸ್ ಕಾಣುತ್ತಿರಲಿಲ್ಲ ಆದರೆ ಆ ಸಮಯದಲ್ಲಿ ಖಳನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸ್ಟಾರ್ Devaraj ಅವರು ತಮ್ಮ ಕಂಚಿನ ಕಂಠ ಹಾಗೂ ವಿಶೇಷ ಅಭಿನಯದಿಂದ ಚಿತ್ರರಂಗದಲ್ಲಿ ಯಶಸ್ವಿ ಖಳನಾಯಕನಾಗಿ ಎಲ್ಲರ ಗಮನ ಸೆಳೆದಿದ್ದರು.

ಅದರಲ್ಲಿಯೂ ರವಿಚಂದ್ರನ್ ಅವರ ಸಾಕಷ್ಟು ಸಿನಿಮಾಗಳಲ್ಲಿ ಖಳನಾಯಕನಾಗಿ ಕಾಣಿಸಿಕೊಂಡಿರುವ ದೇವರಾಜ್ ರವರು ಅಂದಿನ ನಿರ್ದೇಶಕ ನಿರ್ಮಾಪಕರ ಮೊದಲ ಆಯ್ಕೆಯಾಗಿದ್ದರು. ನಂತರ ಪರಿಪೂರ್ಣ ನಾಯಕ ನಟನಾಗಿ ತಮ್ಮ ಜೀವನವನ್ನು ರೂಪಿಸಿಕೊಂಡಿದ್ದು ಇದರ ಜೊತೆಗೆ ಹಾಸ್ಯ ಪಾತ್ರಗಳಿಗೂ ಕೂಡ ಜೀವ ತುಂಬುತ್ತಾ ಚಿತ್ರರಂಗದಲ್ಲಿ ಬಹುಮುಖ ಪ್ರತಿಭೆಯಾಗಿ ತಮ್ಮನ್ನು ತಾವು ರೂಪಿಸಿಕೊಂಡಿದ್ದಾರೆ. ಸದ್ಯ ಈಗಲೂ ಕೂಡ ಚಿತ್ರರಂಗದಲ್ಲಿ ನಿರತವಾಗಿರುವ ದೇವರಾಜ್ ರವರು ಪೋಷಕ ಪಾತ್ರದಲ್ಲಿ ಕಾಣಿಸಿ ಕೊಳ್ಳುತ್ತಿದ್ದು ತಾರಕ್ ಟಗರು ಹಾಗೂ ರಾಬರ್ಟ್ ಸಿನಿಮಾಗಳಲ್ಲಿ ಇವರ ಮನೋಜ್ಞ ಅಭಿನಯ ಇಂದಿನ ಯುವ ಪೀಳಿಗೆಗಳ ಮನ ಗೆದ್ದಿದೆ ಎಂದೇ ಹೇಳಬಹುದು.

ಇಮ್ನು ತಮಗೆಲ್ಲರಿಗೂ ತಿಳಿದಿರುವ ಹಾಗೆ ಚಿತ್ರರಂಗದ ಪ್ರತಿಯೊಬ್ಬ ಗಣ್ಯ ವ್ಯಕ್ತಿಗಳೊಡನೆ ಬಹಳ ಸೊಗಸಾದ ಬಾಂಧವ್ಯವನ್ನು ಹೊಂದಿರುವ ನಟ Dboss Darshan ಪ್ರತಿಯೊಬ್ಬರ ಹುಟ್ಟುಹಬ್ಬವನ್ನು ಸ್ವತ ತಾವೇ ಖುದ್ದಾಗಿ ಹೋಗಿ ಆಚರಿಸುವ ವಾಡಿಕೆ ಬೆಳೆಸಿಕೊಂಡಿದ್ದಾರೆ. ಅದರಂತೆಯೇ ಕಳೆದ ಕೆಲವು ದಿನಗಳ ಹಿಂದೆ ಸುಮಲತಾರವರ ಹುಟ್ಟುಹಬ್ಬದಲ್ಲಿ ಭಾಗಿಯಾಗಿದಂತಹ ದರ್ಶನ್  ಸದ್ಯ  ಹೀರೋ ದೇವರಾಜ್ ರವರ ಹುಟ್ಟು ಹಬ್ಬದಲ್ಲಿ ಕಾಣಿಸಿಕೊಂಡಿದ್ದರು. ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂತಹ ಅತ್ಯದ್ಭುತ ಹೃದಯೀ ಎಂಬ ಮಾಹಿತಿ ತಮ್ಮೆಲ್ಲರಿಗೂ ತಿಳಿದೇ ಇದೆ. ಹೌದು ಕಷ್ಟ ಎಂದು ಬೇಡಿ ಬಂದವರನ್ನು ಎಂದಿಗೂ ಬರಿಗೈಯಲ್ಲಿ ಕಳಿಸಿದವರಲ್ಲ ನಮ್ಮ ಈ ದಾಸ.

darshan,challenging star darshan,prajwal devaraj,darshan and prajwal devaraj,darshan thoogudeep,darshan devaraj,darshan wife,devaraj about darshan,devraj on darshan,darshan in devaraj birthday
Courtesy: Times Of India

ಹೀಗೆ ಪ್ರತಿಯೊಬ್ಬರನ್ನು ಬಹಳ ಆತ್ಮೀಯತೆಯಿಂದ ಮಾತನಾಡಿಸುವಂತಹ ದರ್ಶನ ಈ ಹಿಂದೆ ಮಂಡ್ಯದ ಗಂಡು ರೆಬಲ್ ಸ್ಟಾರ್ ಅಂಬರೀಶ್ ಅವರ ಕುಟುಂಬದೊಡನೆ ದೊಡ್ಡ ಮಟ್ಟದ ಬಾಂಧವ್ಯವನ್ನು ಬೆಳಸಿಕೊಂಡಿದ್ದರು. ಹೌದು ಆದರೆ ಅಂಬರೀಶ್ ಅವರು ಅಗಲಿದ ಬಳಿಕ ಅವರ ಮಗ ಅಭಿಷೇಕ್ ಅವರ ಜವಾಬ್ದಾರಿಯನ್ನು ಹೊತ್ತು ಬೆನ್ನೆಲುಬಾಗಿ ನಿಂತಿದ್ದು ಅದರಂತೆಯೇ  ಸ್ಟಾರ್ ದೇವರಾಜ್ ಅವರ ಕುಟುಂಬದೊಂದಿಗೆ ಆರು ದಿನಗಳ ಹಿಂದೆ ನಡೆದಂತಹ ಬರ್ತಡೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಹೌದು ತನ್ನ ಪ್ರೀತಿಯ ಅಣ್ಣನಾದ ದೇವರಾಜ್ ರವರಿಗೆ ಕೊಡುವ ಸಲುವಾಗಿ ದರ್ಶನವರು ರೆಸಾರ್ಟ್ ಒಂದರಲ್ಲಿ ದೇವರಾಜ್ ರವರ ಆತ್ಮೀಯ ಸ್ನೇಹಿತರು ಹಾಗೂ ಕುಟುಂಬದವರನ್ನೆಲ್ಲಾ ಒಂದೇ ಕಡೆ ಸೇರಿಸಿಯೇ ಬಹಳಾನೇ ಅದ್ದೂರಿಯಾಗಿ ಬರ್ತಡೆ ಮಾಡಿ ಕಾರ್ ಗಿಫ್ಟ್ ಕೊಟ್ಟಿದ್ದಾರೆ ಎನ್ನಲಾಗಿದೆ . ಇದನ್ನು ಕಂಡಂತಹ ದೇವರಾಜ್ ಅವರು ಭಾವುಕರಾಗುತ್ತ ದರ್ಶನ್ ರವರನ್ನು ತಬ್ಬಿ ಅತ್ತಿದ್ದು ಇನ್ನು ಆ ರೆಸಾರ್ಟ್ ನಲ್ಲಿ ಪ್ರಜ್ವಲ್ ದೇವರಾಜ್ ಪ್ರಣವ್ ದೇವರಾಜ್ ಹಾಗು ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಮತ್ತು ನಟ ದೇವರಾಜ್ ಅವರ ಪ್ರೀತಿಯ ಮಡದಿ ಬಹಳ ವಿಶೇಷವಾಗಿ ಕಾಣಿಸಿಕೊಂಡರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.