Arun Sagar: ಬಿಗ್ಬಾಸ್ ಮನೆಯಲ್ಲಿ ಅರುಣ್ ಸಾಗರ್ ಗೆ ವಾರ್ನಿಂಗ್ ಕೊಟ್ಟ ಸುದೀಪ್, ಮುಖ ಮೂತಿ ನೋಡದೆ ಹೇಳಿದ್ದೆ ಬೇರೆ
ನಮ್ಮ ಕನ್ನಡ ಚಿತ್ರರಂಗದಲ್ಲಿ ಕಲಾ ನಿರ್ದೇಶಕರಾಗಿ ಹಾಗೂ ನಟರಾಗಿ ಎಲ್ಲರಿಗೂ ಚಿರಪರಿಚಿತರಾದವರು ಅರುಣ್ ಸಾಗರ್.
ನಮ್ಮ ಕನ್ನಡ ಚಿತ್ರರಂಗದಲ್ಲಿ ಕಲಾ ನಿರ್ದೇಶಕರಾಗಿ ಹಾಗೂ ನಟರಾಗಿ ಎಲ್ಲರಿಗೂ ಚಿರಪರಿಚಿತರಾದವರು ಅರುಣ್ ಸಾಗರ್. ಅವರು ಮಾಡುತ್ತಿದ್ದ ಕಾಮಿಡಿ ಪ್ರೋಗ್ರಾಂಗಳನ್ನು ಜನರು ಇಂದಿಗು ಕೂಡ ಮರೆತಿಲ್ಲ.ಈ ಸಾಲಿನಲ್ಲಿ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಜಾ ವಿಥ್ ಸೃಜಾ ಕಾರ್ಯಕ್ರಮ ಇವರಿಗೆ ಭಾರಿ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ನಂತರ ಕನ್ನಡದ ದೊಡ್ಡ ರಿಯಾಲಿಟಿ ಶೋ ಆದಂತಹ ಬಿಗ್ ಬಾಸ್ ಅವೃತ್ತಿ ಒಂದರಲ್ಲಿ ಭಾಗವಹಿಸಿದ್ದ ಇವರು ಸತತವಾಗಿ ನೂರು ದಿನಗಳ ಕಾಲ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿ ಬಿಟ್ಟಿದ್ದರು.
ಅದೆಷ್ಟೋ ಜನ Arun Sagar ಅವರನ್ನು ನೋಡುವ ಸಲುವಾಗಿ ಬಿಗ್ ಬಾಸ್ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದರು. ಇನ್ನು ಮೊದಲ ಅವೃತ್ತಿಯಲ್ಲಿ ರನ್ನರ್ ಆಗಿ ಹೊರ ಬಂದಿದ್ದ ಇವರು ಅಪಾರ ಜನಪ್ರಿಯತೆಗೆ ಗಳಿಸಿಕೊಂಡಿದ್ದು ಆದರೆ ಸಾಮಾಜಿಕ ಜಾಲತಾಣದಲ್ಲಿ ಅರುಣ್ ಸಾಗರ್ ಅವರು ಗೆಲ್ಲಬೇಕಿತ್ತು ಎಂದು ಎಷ್ಟೊ ಅಭಿಮಾನಿಗಳು ಬೇಸರವನ್ನು ವ್ಯಕ್ತಪಡಿಸಿದ್ದರು. ಅರುಣ್ ಸಾಗರ್ ಇದ್ದ ಕಡೆ ಕಾಮಿಡಿಗೆ ಬರವೆ ಇಲ್ಲ ಎಂಬಂತೆ ಸಾಕಷ್ಟು ಕಾರ್ಯಕ್ರಮಗಳಿಗೆ ವಿಶೇಷ ಅತಿಥಿಯಾಗಿ ಹೋದ ಇವರು ಅಲ್ಲಿಯೂ ಸಹ ಎಲ್ಲರಿಗೂ ರಸದೌತಣ ನೀಡುವಲ್ಲಿ ಯಶಸ್ವಿಯಾಗುತ್ತಿದ್ದರು.
ಮೊದ ಮೊದಲು ಸುದೀಪ್ ಅವರ ಬಹುತೇಕ ಸಿನಿಮಾಗಳಲ್ಲಿ ಕಾಮಿಡಿ ನಟನಾಗಿ ಕಾಣಿಸಿಕೊಳ್ಳುತ್ತಿದ್ದ ಇವರು ಸಾಕಷ್ಟು ಸಿನಿಮಾಗಳಲ್ಲಿ ವಿಲನ್ ಆಗಿ ಕೂಡ ಅಭಿನಯಿಸಿದ್ದಾರೆ.ಆದರೆ ಇತ್ತೀಚಿನ ದಿನಗಳಲ್ಲಿ ತೆರೆಯ ಮೇಲೆ ಅರುಣ್ ಕಾಣಿಸಿಕೊಳ್ಳುತ್ತಿಲ್ಲ. ಅವರೇ ಸಿನಿಮಾದಿಂದ ದೂರ ಉಳಿದಿದ್ದಾರೋ ಅಥವಾ ಅವರಿಗೆ ಅವಕಾಶ ಸಿಗುತ್ತಿಲ್ಲವೋ ತಿಳಿದು ಬಂದಿಲ್ಲ. ಸದ್ಯ ಇದೀಗ ಅರುಣ್ ಸಾಗರ್ ಪ್ರವೀಣರ ಲಿಸ್ಟ್ ನಲ್ಲಿ ಬಿಗ್ ಬಾಸ್ ಸೀಸನ್ 9 ಕ್ಕೆ ಎಂಟ್ರಿ ಕೊಟ್ಟಿದ್ದು ಮೊದಲ ವಾರವೇ ಪ್ರೇಕ್ಷಕರಿಗೆ ಮನರಂಜನೆ ನೀಡಿದ್ದಾರೆ.
ಸದ್ಯ ಬಿಗ್ ಬಾಸ್ ಕನ್ನಡ ಸೀಸನ್ 9 ಶೋನಲ್ಲಿ ಅರುಣ್ ಸಾಗರ್ ರವರು ಈಗಾಗಲೇ ಅದ್ಭುತವಾದ ಎಂಟರ್ಟೇನರ್ ಎನಿಸಿಕೊಂಡಿದ್ದು ಆದರೆ ಟಾಸ್ಕ್ ವಿಚಾರ ಬಂದಾಗ ಗಂಭೀರವಾಗಿ ಇರೋದಿಲ್ಲ ಎಂಬ ಆರೋಪ ಇತ್ತು. ಇದೇ ಕಾರಣ ಇಟ್ಟುಕೊಂಡು ಅರುಣ್ ಸಾಗರ್ ರವರಿಗೆ ರೂಪೇಶ್ ಶೆಟ್ಟಿ ಅವರು ಕಳಪೆ ಪಟ್ಟ ಕೊಟ್ಟಿದ್ದು ಈ ಬಗ್ಗೆ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಚರ್ಚೆಯಾಗಿದೆ.
ಹೌದು ಅರುಣ್ ಸಾಗರ್ ಅವರು ಅದ್ಭುತವಾದ ಎಂಟರ್ಟೇನರ್. ಆದರೆ ಬಿಗ್ ಬಾಸ್ ಮನೆಯಲ್ಲಿ ಎಲ್ಲವನ್ನು ಈಸಿಯಾಗಿ ತೆಗೆದುಕೊಳ್ಳೋಕೆ ಹೋಗಬೇಡಿ. ಎಲ್ಲಿ ಟಾಸ್ಕ್ನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೋ ಅಲ್ಲಿ ನೀವು ಕಪಿಚೇಷ್ಟೆ ಮಾಡಿದ್ರಿ ಎಂದು ಕಿಚ್ಚ ಸುದೀಪ್ ಹೇಳಿದ್ದು ಆರ್ಯವರ್ಧನ್ ಗುರೂಜಿ ಅವರ ಮಾತು ಕೇಳಿ ನವಾಜ್ಗೆ ಕೋಪ ಬರುತ್ತಿತ್ತು. ಅದನ್ನು ತಡೆಯಲು ಹೋಗಿ ಕಪಿಚೇಷ್ಟೆ ಮಾಡಿದೆ ಎಂದು ಅರುಣ್ ಸಾಗರ್ ಅವರು ಉತ್ತರ ನೀಡಿದ್ದಾರೆ.
ನವಾಜ್ಗೆ ಬರುತ್ತಿದ್ದ ಕೋಪ ತಡೆಯಲು ನಾನೇನೋ ಮಾಡಿದೆ ಎಂದರೆ ತಪ್ಪಾಗಿ ಕಾಣೋರು ಯಾರು? ನಾಯಕರಾಗಬೇಕಿರೋ ಜಾಗದಲ್ಲಿ ಜೋಕರ್ ಆಗೋಕೆ ಹೋಗಬೇಡಿ ಜೋಕರ್ ಆಗೋ ಜಾಗದಲ್ಲಿ ನಾಯಕರಾಗೋಕೆ ಹೋಗಬೇಡಿ ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದಾರೆ. ಫಿರಮಿಡ್ ಟಾಸ್ಕ್ನಲ್ಲಿ ಅರುಣ್ ಸಾಗರ್ ಅವರು ಸರಿಯಾಗಿ ಪ್ರಯತ್ನಪಡದೆ ತನ್ನ ಹತ್ತಿರ ಆಗೋದಿಲ್ಲ ಎಂದು ನವಾಜ್ ಜೊತೆ ಸೇರಿ ಹಾಡು ಹೇಳುವುದು ಅಣುಕಿಸುವುದು ಹಾಗೂ ಡ್ಯಾನ್ಸ್ ಮಾಡಲು ಆರಂಭಿಸಿದರು.
ಅರುಣ್ ನವಾಜ್ ಅವರು ಗೆಲ್ಲುತ್ತಾರೆ ಅಂತ ಬೆಟ್ ಕಟ್ಟಿದ್ದರಿಂದ ಮಯೂರಿ ಸಾನ್ಯಾ ಅಯ್ಯರ್ ಅವರಿಗೂ ಕೂಡ ಭಾರೀ ಬೇಜಾರಾಯ್ತು.ಅರುಣ್ ನಡೆ ನೋಡಿ, ಅರುಣ್ ಸಾಗರ್ ಅವರು ಆರ್ಟ್ ಡೈರೆಕ್ಟರ್ ಅಲ್ವಾ? ನನಗೆ ಅರುಣ್ ಸಾಗರ್ ಮೇಲೆ ಸಖತ್ ಗೌರವವಿದೆ ಹೀಗೆಲ್ಲ ಮಾಡಿದರೆ ಹೇಗೆ? ಬಿಗ್ ಬಾಸ್ ಶೋಗೆ ಅವಮಾನ ಮಾಡಿದ ಹಾಗಲ್ವಾ? ಅರುಣ್ ಸರ್ ಈ ತರ ಮಾಡಿ ಗೌರವ ಕಳೆದುಕೊಳ್ತಿದ್ದಾರೆ ಎಂದು ಸಾನ್ಯಾ ಅಯ್ಯರ್ ಅವರು ಹೇಳಿದ್ದರು. ಆಗ ಮಯೂರಿ ಕೂಡ ಇದು ಬಿಗ್ ಬಾಸ್ಗೆ ಮಾಡಿದ ಅವಮಾನ ಎಂದರು.