ಜೀ ಕನ್ನಡ (Zee Kannada) ವಾಹಿನಿಯ ಜನಪ್ರಿಯ ಧಾರಾವಾಹಿ(Serial) ಸತ್ಯ (Satya) ಧಾರಾವಾಹಿಯಲ್ಲಿ ಕಾರ್ತಿಕ್ (Karthik) ಪಾತ್ರ ಮಾಡುತ್ತಿರುವ ಸಾಗರ್ ಬಿಳಿಗೌಡ (Sagar Bili Gowda) ರವರು ಸಿರಿ ರಾಜು(Siri Raju) ಎಂಬುವವರ ಜೊತೆಗೆ ದಾಂಪತ್ಯ ಜೀವನಕ್ಕೆ(Marriage) ಕಾಲಿಟ್ಟಿದ್ದು ಸಾಗರ್ ಬಿಳಿಗೌಡ ರವರ ವಿವಾಹಕ್ಕೆ ಸಿನಿರಂಗದ ಗಣ್ಯರು ಹಾಗೂ ಆತ್ಮೀಯರು ಭಾಗಿಯಾಗಿದ್ದರು.
ಹಿರಿಯ ನಟಿ ಗಿರಿಜಾ ಲೋಕೇಶ್ (Girija Lokesh) ಕೂಡ ಮದುವೆಯಲ್ಲಿ ಭಾಗಿಯಾಗಿ ನವ ಜೋಡಿಗೆ ಶುಭಾಶಯ ಕೋರಿದ್ದು ಇನ್ನು ನಟಿ ಮತ್ತು ಮಾಡೆಲ್ ಆಗಿರುವ ಸಿರಿ ರಾಜು ಜೊತೆ ಸಾಗರ್ ಬಿಳಿಗೌಡ ಅವರು ತಮ್ಮ ಮುಂದಿನ ಪಯಣ ಶುರು ಮಾಡಿದ್ದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸದ್ಯ ಸಾಗರ್ ಬಿಳಿಗೌಡ ಹಾಗೂ ಸಿರಿ ಯವರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು ಅಭಿಮಾನಿಗಳು ಕೂಡ ಒಳ್ಳೆಯದಾಗಲಿ ಎಂದು ವಿಶ್ ಮಾಡಿದ್ದಾರೆ.ಧಾರಾವಾಹಿಯಲ್ಲಿ ಕಾರ್ತಿಕ್ ದು ಮುಗ್ಧತೆ ಇರುವ ಪಾತ್ರವಾಗಿದ್ದು ಅದನ್ನು ನೋಡಿ ಸತ್ಯ ಇವನಿಗೆ ಅಮುಲ್ ಬೇಬಿ ಎಂದು ಹೆಸರಿಟ್ಟಿದ್ದಳು.
ಅವರು ಅದೇ ತರ ನಟನೆ ಮಾಡ್ತಾ ಇದ್ದಾರೆ. ಇನ್ನು ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದ ಸಾಗರ್ ಬಿಳಿಗೌಡ ಹಾಗೂ ಸಿರಿ ರಾಜು ಬೆಂಗಳೂರಿನಲ್ಲಿ ಮದುವೆ ಆಗಿದ್ದು ಸಿರಿ ರಾಜು ಮಾಡೆಲ್ ಕಮ್ ನಟಿ. ಇವರು ಉದ್ಯಮಿ ಕೂಡ ಹೌದು. ಸಿರಿ ರಾಜು ಅವರು ಈವೆಂಟ್ ಕಂಪನಿಯನ್ನ ನಡೆಸುತ್ತಿದ್ದಾರೆ.
ಇನ್ನು ಖಾಸಗಿ ವಾಹಿನಿಯ ಇವೆಂಟ್‍ನಲ್ಲಿ ಸಾಗರ್ ಸಿರಿ ರಾಜು ಸ್ನೇಹವಾಗಿದ್ದು 2 ಕುಟುಂಬದವರು ಮಾತನಾಡಿಕೊಂಡು ಮದುವೆ ಮಾಡಿದ್ದಾರೆ. ಇದು ಅರೆಂಜ್ ಮ್ಯಾರೇಜ್. ಇನ್ನು ಸಿರಿ ರಾಜು ಅವರು ಸಹ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಹೆಚ್ಚಾಗಿ ಇವರು ತೆಲುಗಿನಲ್ಲಿ ನಟಿಸಿದ್ದಾರೆ. ಮದುವೆ ಬಳಿಕ ನಟನೆ ಮಾಡ್ತಾರೋ ಇಲ್ವೋ ಗೊತ್ತಿಲ್ಲ. ಸದ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಕ್ಯೂಟ್ ವಿಡಿಯೋವೊಂದು ವೈರಲ್ ಆಗಿದ್ದು ಈ ವಿಡಿಯೋ ಎಲ್ಲರ ಗಮನ ಸೆಳೆಯುತ್ತಿದೆ. ಹೌದು ಮದುವೆಯಲ್ಲಿ ಸಾಗರ್ ಗೆ ಆಕ್ಷತೆ ಹಾಕಲೂ ಸಿರಿ ಬಹಳ ಪರದಾಡಿದ್ದು ಈ ಕ್ಯೂಟ್ ವಿಡಿಯೋವನ್ನ ಲೇಖನಿಯ ಕೆಳಗೆ ತಾವು ಕೂಡ ನೋಡಬಹುದು.