ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಸಾಗರ್ ಬಿಳಿಗೌಡ ಅರಿಶಿನ ಶಾಸ್ತ್ರ ನೋಡಿ..ಚಿಂದಿ ವಿಡಿಯೋ

348
Join WhatsApp
Google News
Join Telegram
Join Instagram

ಜೀ ಕನ್ನಡ (Zee Kannada) ವಾಹಿನಿಯ ಸತ್ಯ ಧಾರವಾಹಿಯಲ್ಲಿ ಅಮೂಲ್ ಬೇಬಿ ಕಾರ್ತಿಕ್(Karthik) ಆಗಿ ಸಾಗರ್ ಬಿಳಿ ಗೌಡ (Sagar Bili Gowda) ಅವರು ಅಭಿನಯಿಸಿದ್ದು ಇನ್ನು ಸತ್ಯ (Satya) ಧಾರವಾಹಿಯಲ್ಲಿ ಕಾರ್ತಿಕ್ ಮದುವೆ(Marriage) ನಡೆದಿತ್ತು. ಹೌದು ಆದರೆ ಇದೀಗ ನಿಜ ಜೀವನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ನಟ ಸಾಗರ್ ಬಿಳಿ ಗೌಡ ಅವರು ತಮ್ಮ ಬ್ಯಾಚುಲರ್ ಲೈಫ್ ಗೆ ಗುಡ್ ಬೈ ಹೇಳಿ ಸಿರಿ ರಾಜು (Siri Raju) ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಸಿರಿ ರಾಜು ಅವರು ಮಾಡೆಲ್ ಕಮ್ ನಟಿಯಾಗಿದ್ದು (Model/Actress) ಇವರು ಉದ್ಯಮಿ ಕೂಡ ಹೌದು. ನಟಿ ಸಿರಿ ರಾಜು ಅವರಿಗೆ ತಮ್ಮದೇ ಆದ ಇವೆಂಟ್(Event) ಕಂಪನಿ ಕೂಡ ಇದ್ದು ಹಾಗೆಯೇ ಸಿರಿ ರಾಜು ಅವರು ನಟ ವಿಜಯ ರಾಘವೇಂದ್ರ (Vijaya Ragavendra) ಅವರ ಜೊತೆಗೆ FIR 6 to 6 ಎನ್ನುವ ಸಿನಿಮಾದಲ್ಲಿ ಕೂಡ ಅಭಿನಯ ಮಾಡುತ್ತಿದ್ದಾರೆ. ಇನ್ನು ನಿಶ್ಚಿತಾರ್ಥದ (engagement) ಹಿನ್ನೆಲೆಯಲ್ಲಿ ಸಿರಿ ರಾಜು ಅವರು ನಾನು ಮದುವೆಯಾಗುತ್ತಿರುವ ಅತ್ಯುತ್ತಮ ವ್ಯಕ್ತಿಯನ್ನು ಪರಿಚಯಿಸುತ್ತಿದ್ದೇನೆ ಎಂದು ತಮ್ಮ ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ಬರೆದುಕೊಂಡಿದ್ದರು.

ಸದ್ಯ ಸಾಗರ್ ಬಿಳಿಗೌಡ (Sagar Biligowda) ಮತ್ತು ನಟಿ ಸಿರಿ ರಾಜು (Siriraju) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು ವಸಿಷ್ಠ ಸಿಂಹ (Vasiata Simha) ಮತ್ತು ಹರಿಪ್ರಿಯಾ (Haripriya) ಮದುವೆಯ ದಿನವೇ ಕಿರುತೆರೆ ನಟ ಸಾಗರ್ ಬಿಳಿಗೌಡ ಮತ್ತು ಸಿರಿ ಕೂಡ (ಜ.26)ರಂದು ಮದುವೆ (Wedding) ಆಗಿದ್ದಾರೆ.
ಸಾಗರ್ ಮತ್ತು ಸಿರಿ ರಾಜು ಭೇಟಿ ಅನಿರಿಕ್ಷಿತ ಭೇಟಿಯೇ ಮದುವೆ ಎಂಬ ಬಂಧದವರೆಗೂ ತಂದು ನಿಲ್ಲಿಸಿದೆ. ಖಾಸಗಿ ವಾಹಿನಿಯ ಇವೆಂಟ್‌ನಲ್ಲಿ ಸಾಗರ್- ಸಿರಿ ಪರಿಚಯವಾಯ್ತು. ಇಬ್ಬರ ನಡುವೆ ಒಳ್ಳೆಯ ಫ್ರೆಂಡ್‌ಶಿಪ್‌ಯಿತ್ತು. ಆದರೆ ಮದುವೆ ಆಗುವ ಆಲೋಚನೆ ಇಬ್ಬರಿಗೂ ಇರಲಿಲ್ಲ. ಇದು ಪಕ್ಕಾ ಅರೆಂಜ್ ಮ್ಯಾರೇಜ್ ಆಗಿದೆ.

ಇನ್ನು ಸಾಗರ್ ಬಿಳಿ ಗೌಡ ಅವರು ಕಿರುತೆರೆಗೆ ಬರುವ ಮುನ್ನ ಎಂಎಂಸಿ ಕಂಪನಿ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ತದನಂತರ ಇವರಿಗೆ ನಟನೆಯಲ್ಲಿ ಆಸಕ್ತಿ ಇದ್ದ ಕಾರಣ ಕಿನ್ನರಿ ಧಾರಾವಾಹಿಯಲ್ಲಿ ಒಂದು ಪೋಷಕ ಪಾತ್ರದಲ್ಲಿ ಅಭಿನಯ ಮಾಡಿದರು.ಇದಾದ ಮೇಲೆ ಮನಸಾರೆ ಎನ್ನುವ ಸಿರಿಯಲ್ ನಲ್ಲಿ ಯುವರಾಜ್ ಎನ್ನುವ ಪಾತ್ರದಲ್ಲಿ ತುಂಬಾ ಮಿಂಚಿದರು. ತದನಂತರ ಸತ್ಯ ಧಾರಾವಾಹಿಯಲ್ಲಿ ಹೀರೋ ಪಾತ್ರದಲ್ಲಿ ಅಭಿನಯ ಮಾಡಿದ್ದಾರೆ.

ಕಳೆದ ತಿಂಗಳು ನವೆಂಬರ್‌ನಲ್ಲಿ ಸಿರಿ ರಾಜು ಮತ್ತು ಸಾಗರ್ ಎಂಗೇಜ್‌ಮೆಂಟ್ ನಡೆದಿತ್ತು. ಇದೀಗ ಜ.26ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಜೆಪಿ ನಗರದಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಸಾಗರ್ ನಟಿ ಸಿರಿ ಜೋಡಿ ಮದುವೆಯಾಗಿದ್ದಾರೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಸಿರಿ ರಾಜು ರವರ ಅರಿಶಿನ ಶಾಸ್ತ್ರದ ವಿಡಿಯೋ ಭಾರಿ ವೈರಲ್ ಆಗುತ್ತಿದ್ದು ಈ ಕ್ಯೂಟ್ ವಿಡಿಯೋವನ್ನ ಲೇಖನಿಯ ಕೆಳಗೆ ನೋಡಬಹುದು.