ನಮ್ಮ ಕನ್ನಡ ಕಿರುತೆರೆಯ ಜೀ ಕನ್ನಡ (Zee Kannada) ವಾಹಿನಿಯೂ ತಮ್ಮ ಪ್ರೀತಿಯ ಪ್ರೇಕ್ಷಕರಿಗೆ (Audience) ಮನರಂಜನೆ (Entertainment) ನೀಡುವುದರಲ್ಲಿ ಸದಾ ಮುಂದೆ ಇರುತ್ತದೆ ಎನ್ನಬಹುದು. ಇನ್ನು ಜೀ ಕನ್ನಡದಲ್ಲಿ ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19 (SA RI GA MA PA Lil Champs) ನಡೆಯುತ್ತಿದ್ದು 18 ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್‍ಗಳನ್ನು(Season) ಯಶಸ್ವಿಯಾಗಿ ಪೂರೈಸಿರುವ ಜೀ ಕನ್ನಡ ವಾಹಿನಿ ಸದ್ಯ ಇದೀಗ 19ನೇ ಸೀಸನ್ ನಡೆಸುತ್ತಿದೆ.
18 ಸೀಸನ್‍ಗಳಲ್ಲಿ ಅದೆಷ್ಟೋ ಪುಟ್ಟ ಪುಟ್ಟ ಹಾಡುಗಾರರು (Singers) ಇಲ್ಲಿ ಬಂದು ಕಲಿತು ಯಶಸ್ವಿಯಾಗಿದ್ದು ಅದೆಷ್ಟೋ ಜನ ತಮ್ಮ ಬದುಕು ಕೂಡ ಕಟ್ಟಿಕೊಂಡಿದ್ದಾರೆ ಅಲ್ಲದೇ ಚಿತ್ರರಂಗದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇನ್ನು ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19ಗೆ ದಿಯಾ ಹೆಗಡೆ (Diya Hegde) ಎನ್ನುವ ಹುಡುಗಿ ಆಯ್ಕೆ (Select) ಆಗಿದ್ದಾಳೆ.
ಆದರೆ ಮಾತ್ರ ಈಕೆ ಸ್ಪರ್ಧಿ ಅಲ್ಲ. ವಿಶೇಷ ಸ್ಪರ್ಧಿ ಆಗಿ ಬಂದಿದ್ದು ಹಾಡು ಚೆನ್ನಾಗಿ ಹಾಡ್ತಾಳೆ. ತನ್ನ ಮಾತಿನ ಮೂಲಕ ಮೋಡಿ ಮಾಡಿದ್ದಾಳೆ. ಅಲ್ಲದೇ ಈ ಬಾರಿ ಚಿತ್ರ ಗಾನೋತ್ಸವ ನಡೆಯುತ್ತಿದ್ದು ಗಾಯಕಿ ಚಿತ್ರ ಅವರು ಬಂದಿದ್ದರು. ಹೌದು ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19 ನಲ್ಲಿ ಚಿತ್ರ ಗಾನೋತ್ಸವ ನಡೆಯುತ್ತಿದ್ದು ಕಾರ್ಯಕ್ರಮಕ್ಕೆ ಗಾಯಕಿ ಚಿತ್ರ ಅವರು ಬಂದಿದ್ದರು. ಎಲ್ಲಾ ಮಕ್ಕಳು ಚಿತ್ರಮ್ಮ ಹಾಡಿದ ಹಾಡುಗಳನ್ನು ಹಾಡಿದ್ದಾರೆ. ಮಕ್ಕಳ ಹಾಡುಗಳನ್ನು ಕೇಳಿ ಚಿತ್ರ ಮೇಡಂ ಖುಷಿಯಾಗಿದ್ದಾರೆ. ನನ್ನ ದಿಯಾ ಡ್ರೀಮ್ ಫಾರೆಸ್ಟ್ ಗೆ ದೇವತೆ ತರ ಹಾಡ್ತಾ ಹಾಡ್ತಾ ಬಂದ್ರು. ಅವರು ಯಾರು ಅಂತ ನೋಡಿದ್ರೆ ಚಿತ್ರಮ್ಮ. ಚಿತ್ರಮ್ಮ ಅಲ್ಲಿಗೆ ಬಂದಾಗ ಏನ್ ಆಯ್ತು ಗೊತ್ತಾ ಎಂದು ಹಾಡು ಶುರು ಮಾಡ್ತಾಳೆ ದಿಯಾ.
ನಮ್ಮ ಪ್ರೀತಿಯ ಚಿತ್ರ ಅಮ್ಮ ಬನಕ್ಕೆ ಬಂದಿದ್ದರು.ಅಲ್ಲಿ ಇದ್ದ ಜೀವಿಗಳೆಲ್ಲಾ ಬೆರಗು ಆಗಿದ್ವು.ಗಿಡದಲ್ಲಿ ಬಿಟ್ಟ ಮಲ್ಲಿಗೆ ಹೂವು ಮುದುಡಿ ಕೂತಿತ್ತು.ಚಿತ್ರ ಅಮ್ಮನ ನಗುವ ಕಂಡು ಅರಳೇ ಬಿಟ್ಟಿತ್ತು.ಕೋಗಿಲೆ ಒಂದು ಮರದ ಮೇಲೆ ನೋಡ್ತಾ ಕೂತಿತ್ತುಚಿತ್ರ ಅಮ್ಮನ ಜೊತೆಗೆ ಬಂದು ಡೂಯೆಟ್ ಹಾಡಿತ್ತು
ನವಿಲು ಒಂದು ನೃತ್ಯ ಮಾಡಲು ಕಾದು ಕೂತಿತ್ತು ಚಿತ್ರ ಅಮ್ಮನ ಹಾಡು ಕೇಳಿ ಗರಿಯ ಬಿಚ್ಚಿತ್ತುಜಿಂಕೆಯೊಂದು ಹಾರಿ ಬಂದು ಇಣುಕಿ ನೋಡ್ತಿತ್ತು.
ಚಿತ್ರಅಮ್ಮನ ತಾಳ ಕೇಳಿ ಥೈ ಥೈ ಕುಣಿದಿತ್ತು.ಜೇನುಗಳೆಲ್ಲ ಗೂಡು ಕಟ್ಟಿ ಸಿಹಿ ತುಂಬಿತ್ತುಚಿತ್ರ ಅಮ್ಮನ ಕಂಠದ ಜೊತೆ ಬೆರಸಿ ಉಣಿಸಿತ್ತುಲಿಟಲ್ ಹೆಗಡೆ ದಿಯಾ ಹೆಗಡೆ ಅಲ್ಲೇ ನಿಂತಿದ್ಲುಓಡಿ ಹೋಗಿ ಚಿತ್ರ ಅಮ್ಮನ ಅಪ್ಪಿಕೊಂಡಿದ್ಲು.ಎಂದು ದಿಯಾ ಹೆಗಡೆ ಹಾಡು ಹೇಳಿದಳು. ಆಗ ಚಿತ್ರ ಅಮ್ಮ ನಿಜವಾಗ್ಲೂ ದಿಯಾರನ್ನು ಅಪ್ಪಿಕೊಂಡು ಖುಷಿ ಪಟ್ಟು ದೃಷ್ಟಿ ತೆಗೆದರು. ಈ ನಡುವೆ ದಿಯಾಳ ವಿಶೇಷ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ದಿಯಾ ಲಲಿತಾ ಸಹಸ್ರನಾಮವನ್ನು ಎಷ್ಟೋ ಲೀಲಾ ಜಾಲವಾಗಿ ಹಾಡಿದ್ದಾಳೆ ನೀವೆ ನೋಡಿ.