ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಮಾಲೀಕರಾದಂತಹ ಮುಖೇಶ್ ಅಂಬಾನಿ (Mukesh Ambani) ಹಾಹೂ ನೀತಾ ಅಂಬಾನಿ (Nita Ambani) ಯವರ ಮನೆಯಲ್ಲಿ ಸದ್ಯ ಹಬ್ಬದ (Festival) ವಾತಾವರಣ ನಿರ್ಮಾಣವಾಗಿದ್ದು ಮುಕೇಶ್ ಹಾಗೂ ನೀತಾ ಅಂಬಾನಿ ಅವರ ಕಿರಿಯ ಪುತ್ರರಾದ ಅನಂತ್ ಅಂಬಾನಿ (Anant Ambani) ಶೀಘ್ರದಲ್ಲೇ ವಿವಾಹವಾಗಲಿದ್ದಾರೆ (Marriage).
ಜನವರಿ 19 ರಂದು ಉದ್ಯಮಿ ವೀರೇನ್ ಮರ್ಚೆಂಟ್(Viren Merchant)ರವರ ಪುತ್ರಿ ರಾಧಿಕಾ ಮರ್ಚೆಂಟ್ (Radhika Merchant)ರವರ ಜೊತೆ ಅನಂತ್ ನಿಶ್ಚಿತಾರ್ಥ (Engagement) ಮಾಡಿಕೊಂಡಿದ್ದು ಇಬ್ಬರ ನಿಶ್ಚಿತಾರ್ಥದ ಹಲವು ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿದ್ದು ಸದ್ಯ ಈ ನಿಶ್ಚಿತಾರ್ಥದಲ್ಲಿ ಮುಕೇಶ್ ಅಂಬಾನಿ ತನ್ನ ಪತ್ನಿ ಹಾಗೂ ಕುಟುಂಬದ ಜೊತೆ ಮಾಡಿರುವ ಡಾನ್ಸ್ ವೈರಲ್ ಆಗುತ್ತಿದೆ.
ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅಂಬಾನಿ ಹೌಸ್ ಆಂಟಿಲಿಯಾದಲ್ಲಿ ಬಹಳ ಸಂಭ್ರಮದಿಂದ ನಿಶ್ಚಿತಾರ್ಥ ಮಾಡಿಕೊಂಡಿದ್ದು ಇದೀಗ ನಿಶ್ಚಿತಾರ್ಥದ ಇನ್ ಸೈಡ್ ವಿಡಿಯೋವೊಂದು ವೈರಲ್ ಆಗಿದೆ. ಹೌದು ಇದರಲ್ಲಿ ಇಡೀ ಅಂಬಾನಿ ಕುಟುಂಬ ತಮ್ಮ ಕಿರಿಯ ಸೊಸೆಯನ್ನು ಸ್ವಾಗತಿಸಿ ನೃತ್ಯ ಮಾಡುವುದನ್ನು ನೋಡಬಹುದಾಗಿದ್ದು ಮುಖೇಶ್ ಅಂಬಾನಿ ನೀತಾ ಅಂಬಾನಿ ಆಕಾಶ್ ಅಂಬಾನಿ ಅವರ ಪತ್ನಿ ಶ್ಲೋಕಾ ಮೆಹ್ತಾ ಮಗಳು ಇಶಾ ಅಂಬಾನಿ ಹಾಗೂ ಅವರ ಪತಿ ಆನಂದ್ ಪಿರಮಲ್ ವೇದಿಕೆಯಲ್ಲಿ ಒಟ್ಟಿಗೆ ನೃತ್ಯ ಮಾಡಿದ್ದಾರೆ. ದಿಲ್ ಸೇ ದಿಲ್ ಕಿ ಸಾಗೈ ಎಂಬ ಬಾಲಿವುಡ್ ಹಾಡಿಗೆ ಎಲ್ಲರೂ ಸಂಭ್ರಮದಿಂದ ಕುಣಿದು ಕುಪ್ಪಳಿಸಿದ್ದಾರೆ.
ಇನ್ನು ನಿಶ್ಚಿತಾರ್ಥದ ಮತ್ತೊಂದು ವಿಡಿಯೋ ಹೊರಬಿದ್ದಿದ್ದು ಈ ವಿಡಿಯೋದಲ್ಲಿ ಅನಂತ್ ಮತ್ತು ರಾಧಿಕಾ ವೇದಿಕೆ ಮೇಲೆ ನಿಂತಿದ್ದು ಅವರ ಸಾಕುನಾಯಿ ಓಡಿ ಬಂದು ಈ ಜೋಡಿಗೆ ರಿಂಗ್ ನೀಡಿದೆ. ಹೌದು ಇದಾದ ಬಳಿಕ ನವಜೋಡಿಗಳೊಂದಿಗೆ ನಿಶ್ಚಿತಾರ್ಥದಲ್ಲಿ ಹಾಜರಿದ್ದ ಎಲ್ಲಾ ಜನರೂ ದೇವ ದೇವ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇನ್ನು ಈ ಸರ್ಪ್ರೈಜ್ ಕಂಡು ವೇದಿಕೆಯಲ್ಲಿದ್ದ ಅನಂತ್ ಮತ್ತು ರಾಧಿಕಾ ಮುಖದಲ್ಲಿ ಖುಷಿ ಮನೆ ಮಾಡಿದ್ದು ಈ ಎರಡೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಲೈಕ್ ಪಡೆಯುತ್ತಿವೆ. ಹೌದು ಎಲ್ಲರೂ ಕಾಮೆಂಟ್ ಮಾಡುವ ಮೂಲಕ ನವ ಜೋಡಿಗೆ ಶುಭ ಕೋರುತ್ತಿದ್ದಾರೆ.