Gicchi Giligili Nivedita Gowda : ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ ಗಿಚ್ಚಿ ಗಿಲಿಗಿಲಿ ಶೋ ಕಳೆದ ವರುಷ ಸೆಪ್ಟೆಂಬರ್ ತಿಂಗಳಿನಲ್ಲಿಯೇ ಅಂತ್ಯವಾಯಿತು. ಇನ್ನು ಈ ಕಾರ್ಯಕ್ರಮದ ಫಿನಾಲೆಯಲ್ಲಿ ವಂಶಿಕಾ ಅಂಜನಿ ಕಶ್ಯಪ್ ಹಾಗೂ ಶಿವು ವಿನ್ ಆಗಿದ್ದು 5 ತಿಂಗಳ ಕಾಲ ಈ ಶೋ ನಡೆದುಬಂದಿತ್ತು.
ಟ್ರೋಫಿ ಗೆದ್ದ ಬಳಿಕ ವಂಶಿಕಾ ಮತ್ತೆ ಸೂಪರ್ ಸ್ಟಾರ್ ಆಗಿದ್ದು ಕಿರುತೆರೆ ಮೂಲಕ ಆಕೆಗೆ ಸಿಕ್ಕಾಪಟ್ಟೆ ಜನಪ್ರಿಯತೆ ಸಿಕ್ಕಿದೆ. ಅವಳ ಚುರುಕುತನಕ್ಕೆ ಎಲ್ಲರೂ ಬೆರಗಾಗಿದ್ದು ಈ ಶೋ ಗೆದ್ದಿದ್ದು ತುಂಬ ಖುಷಿ ಆಗಿದೆ ಎಂದು ಆಕೆ ನಗು ಚೆಲ್ಲಿದ್ದಳು. ಶಿವು ಜೊತೆ ಇನ್ಸ್ಟಾಗ್ರಾಮ್ನಲ್ಲಿ ಲೈವ್ ಬಂದಿದ್ದ ವಂಶಿಕಾ ತನ್ನ ಮಾತುಗಳನ್ನು ಹಂಚಿಕೊಂಡು ಎಲ್ಲರಿಗೂ ಖುಷಿ ನೀಡಿದಳು.
ಅನೇಕ ಸ್ಕಿಟ್ಗಳ ಮೂಲಕವಾಗಿ ಪ್ರೇಕ್ಷಕರನ್ನು ರಂಜಿಸಿದ್ದ ವಂಶಿಕಾ ಮತ್ತು ಶಿವು ವಿನ್ ಆಗಿರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದ್ದು ಈ ಶೋಗೆ ಮೊದಲು ಮಂಜು ಪಾವಗಡ ಅವರು ನಿರೂಪಕನಾಗಿದ್ದರು. ತದನಂತರ ನಿರಂಜನ್ ದೇಶಪಾಂಡೆ ಬಂದರು. 10 ಜೋಡಿಗಳಾಗಿ 20 ಕಲಾವಿದರು ಇದರಲ್ಲಿ ಪರ್ಫಾರ್ಮೆನ್ಸ್ ನೀಡಿ ಗಮನ ಸೆಳೆದಿದ್ದರು. ಅಂತಿಮವಾಗಿ ಶಿವು-ವಂಶಿಕಾ ಜೋಡಿಗೆ ಗಿಚ್ಚಿ ಗಿಲಿಗಿಲಿ ಟ್ರೋಫಿ ಸಿಕ್ಕಿತು. ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ನಟನೆಗೆ ಎಲ್ಲರೂ ಮನ ಸೋತಿದ್ದು ಶೋ ಗೆಲ್ಲಿಸಿದ ಎಲ್ಲರಿಗೂ ಆಕೆ ಪ್ರೀತಿಭರಿತವಾಗಿ ಧನ್ಯವಾದ ಅರ್ಪಿಸಿದ್ದಳು.
ಲವ್ ಯೂ ಎನ್ನುತ್ತ ತನ್ನ ಅಭಿಮಾನಿಗಳಿಗೆ ಆಕೆ ಫ್ಲೈಯಿಂಗ್ ಕಿಸ್ ನೀಡಿದ್ದು ಕನ್ನಡದ ಕಿರುತೆರೆಯಲ್ಲಿ ವಂಶಿಕಾಗೆ ಇದು ಎರಡನೇ ಗೆಲುವು. ಈ ಹಿಂದೆ ನನ್ನಮ್ಮ ಸೂಪರ್ ಸ್ಟಾರ್ ಶೋನಲ್ಲೂ ಆಕೆ ವಿನ್ನರ್ ಆಗಿದ್ದಳು. ಆ ಶೋ ಮೂಲಕ ಆಕೆಗೆ ಸಿಕ್ಕಾಪಟ್ಟೆ ಜನಪ್ರಿಯತೆ ಸಿಕ್ಕಿತ್ತು. ನಂತರ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದಲ್ಲೂ ವಂಶಿಕಾ ಎಲ್ಲರ ಮನ ಗೆದ್ದಳು. ಇನ್ನು ವಂಶಿಕಾ ಜೊತೆ ನಿವೇದಿತಾ ಗೌಡ ರವರ ಕಾಮಿಡಿ ಕೂಡ ಎಲ್ಲರಿಗೂ ಮಜಾ ನೀಡಿತ್ತು. ಸದ್ಯ ಇದೀಗ ಗಿಚ್ಚಿ ಗಿಲಿಗಿಲಿ ಸೀಸನ್ 2 ಪ್ರಾರಂಭವಾಗಲಿದೆ.
ಈ ನಡುವೆ ಸೀಸನ್ ಒಂದರ ಬೊಂಬಾಟ್ ಕಾಮಿಡಿ ಸ್ಕಿಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು
ಸಿನಿಮಾಗಳಲ್ಲಿ ನಾವೆಲ್ಲಾ ಎಂತೆಂತಹಾ ವಿಲನ್ ಗಳನ್ನು ನೋಡಿರುತ್ತೀವಿ. ಆದರೆ ಇಲ್ಲೊಬ್ಬ ವಿಲನ್ ಗೆ ಎಲ್ಲಿಯೂ ಅವಕಾಶ ಸಿಗದೆ ತಾನೇ ಸೈಕೋ ಆಗಿ ಮನೆಯವರಿಗೆಲ್ಲಾ ಹೇಗೆಲ್ಲಾ ಕಾಟ ಕೊಡ್ತಿದ್ದಾನೆ ಎಂಸು ತೋರಿಸಿಕೊಟ್ಟಿದ್ದಾರೆ ಗೊಬ್ಬರಗಾಲ ನಿವೇದಿತಾ ಅನನ್ಯಾ ಅಮರ್ ಹಾಗೂ ಸುನೀತ್ ಅವರು. ಒಮ್ಮೆ ನೀವು ಈ ಕಾಮಿಡಿ ನೋಡಿ ನಿಮ್ಮ ಅನಿಸಿಕೆಯನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.