ಸಾಮಾನ್ಯವಾಗಿ ಪ್ರತಿ ರಾಜ್ಯದವರಿಗೂ ಹಾಗೂ ಪ್ರತಿ ಊರಿನವರಿಗೂ ಕೂಡ ತಮ್ಮ ತಮ್ಮ ರಾಜ್ಯ ಭಾಷೆಯ ಮೇಲೆ ಅಭಿಮಾನ ಇರುತ್ತದೆ. ಹೌದು ಅದೇ ರೀತಿಯಾಗಿ ಕನ್ನಡಿಗರಾದ ನಮಗೆ ನಮ್ಮ ಭಾಷೆಯ ಮೇಲೆ ಸದಾ ಪ್ರೀತಿ ಅಭಿಮಾನ ಇದ್ದೇ ಇರುತ್ತದೆ. ಇನ್ನು ಹೊರರಾಜ್ಯದಲ್ಲಿ ವಿದೇಶದಲ್ಲಿ ಕನ್ನಡ ಮಾತನಾಡುವವರನ್ನು ಕಂಡಾಗ ಅವರು ನಮಗೆ ಪರಿಚಯವಿಲ್ಲದಿದ್ದರೂ ಕೂಡ ಮಾತನಾಡಿಸುತ್ತೇವೆ.
ಅದೇ ರೀತಿ ಇತರ ಭಾಷೆಯ ಟಿವಿ ಕಾರ್ಯಕ್ರಮಗಳಲ್ಲಿ ಕನ್ನಡ ಕೇಳಿದರೆ ಅದರಿಂದಾಗುವ ಸಂತೋಷ ಅಷ್ಟಿಷ್ಟಲ್ಲ. ಹೌದು ಕನ್ನಡದ ಅನೇಕ ನಟಿಯರು ಇಂದು ಪರಭಾಷೆಯಲ್ಲಿ ದೊಡ್ಡ ಹೆಸರು ಮಾಡಿದ್ದು ಇವರಲ್ಲಿ ಕೆಲವರು ಕನ್ನಡದ ಬಗ್ಗೆ ತೋರುವ ತಾತ್ಸಾರಕ್ಕೆ ಆಗ್ಗಾಗ್ಗೆ ಟೀಕೆಗೆ ಗುರಿಯಾಗುತ್ತಾರೆ. ಇನ್ನು ಕೆಲವು ನಟಿಯರು ಕನ್ನಡದ ಮೇಲಿನ ಅಭಿಮಾನವನ್ನು ಎಂದಿಗೂ ಮರೆಯುವುದಿಲ್ಲ. ಹೌದುವ ಐಶ್ವರ್ಯ ರೈ ಶಿಲ್ಪಾ ಶೆಟ್ಟಿ ಪೂಜಾ ಹೆಗ್ಡೆಯಂಥ ನಟಿಯರು ಕರ್ನಾಟಕಕ್ಕೆ ಸೇರಿದವರಾದರೂ ಚಿಕ್ಕ ವಯಸ್ಸಿನಲ್ಲೇ ಹೊರರಾಜ್ಯಕ್ಕೆ ಹೋಗಿ ಸೆಟಲ್ ಆಗಿರುವುದರಿಂದ ಕನ್ನಡ ಅರ್ಥವಾದರೂ ಮಾತನಾಡಲು ಬರುವುದಿಲ್ಲ.
ಆದರೆ ಈ ಹಿಂದೆ ಹಿಂದಿ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕನ್ನಡ ಮಾತನಾಡಿ ಕನ್ನಡಿಗರ ಹೃದಯ ಗೆದ್ದಿದ್ದರು. ಹೌದು ಸೋನಿ ವಾಹಿನಿಯಲ್ಲಿ ಪ್ರತಿ ಶನಿವಾರ ಹಾಗೂ ಭಾನುವಾರ ಸೂಪರ್ ಡ್ಯಾನ್ಸರ್ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು.
ಈ ಆಡಿಷನ್ನಲ್ಲಿ ಬೆಳಗಾವಿಯ ಪೃಥ್ವಿರಾಜ್ ಅಶೋಕ್ ಕೊಂಗಾರಿ ಎಂಬ ಬಾಲಕ ಭಾಗವಹಿಸಿದ್ದು ಈ ಕಾರ್ಯಕ್ರಮದಲ್ಲಿ ಶಿಲ್ಪಾ ಶೆಟ್ಟಿ ಬಾಲಿವುಡ್ ಕೊರಿಯೋಗ್ರಾಫರ್ ಗೀತಾ ಕಪೂರ್ ಹಾಗೂ ನಿರ್ದೇಶಕ ಅನುರಾಗ್ ಬಸು ತೀರ್ಪುಗಾರರಾಗಿದ್ದರು. ವೇದಿಕೆಗೆ ಬಂದ ಬಾಲಕ ನಾನು ಕರ್ನಾಟಕದ ಬೆಳಗಾವಿಯಿಂದ ಬಂದಿದ್ದೇನೆ ಎಂದು ಹೇಳುತ್ತಿದ್ದಂತೆ ಥ್ರಿಲ್ ಆದ ನಟಿ ಶಿಲ್ಪಾ ಶೆಟ್ಟಿ ಹೋ ಬೆಳಗಾವಿಯಿಂದ ಬಂದಿದ್ದೀರ ಕನ್ನಡಿಗ ಎಂದು ಬಹಳ ಉದ್ಘರಿಸಿದರು.
ಇನ್ನು ಆ ಬಾಲಕನೊಂದಿಗೆ ತಮಗೆ ಬರುವ ಅಲ್ಪ ಸ್ವಲ್ಪ ಕನ್ನಡದಲ್ಲೇ ಮಾತನಾಡಿದ್ದು ಬಾಲಕನ ಪರ್ಫಾಮೆನ್ಸ್ ನೋಡಿದ ಬಳಿಕ ಕೂಡಾ ನಿಮ್ಮ ಡ್ಯಾನ್ಸ್ ತುಂಬಾ ಚೆನ್ನಾಗಿತ್ತು ಎಂದು ಕನ್ನಡದಲ್ಲೇ ಮಾತನಾಡಿದರು. ಬಾಲಕನ ತಂದೆಯೊಂದಿಗೆ ಕೂಡಾ ಚೆನ್ನಾಗಿದ್ದೀರಾ..? ಎಂದು ಮಾತನಾಡಿ ಸಂತೋಷ ವ್ಯಕ್ತಪಡಿಸಿದ್ದುನಶಿಲ್ಪಾ ಶೆಟ್ಟಿ ಪ್ರತಿ ಬಾರಿ ಕನ್ನಡ ಮಾತನಾಡುವಾಗಲೂ ನಾನೂ ಒಬ್ಬ ಕನ್ನಡತಿ ಎಂಬ ಭಾವನೆ ಅವರ ಮೊಗದಲ್ಲಿ ಎದ್ದು ಕಾಣುತ್ತಿತ್ತು. ಹೌದು ನಾನು ಕನ್ನಡದಲ್ಲಿ ಮೂರು ಸಿನಿಮಾಗಳಲ್ಲಿ ನಟಿಸಿದ್ದೇನೆ. ಕನ್ನಡ ಮಾತನಾಡಲು ಬರದಿದ್ದರೂ ಕನ್ನಡ ಅರ್ಥವಾಗುತ್ತದೆ ಎಂದು ಗೀತಾ ಕಪೂರ್ ಅವರೊಂದಿಗೆ ಕರಾವಳಿ ಚೆಲುವೆ ಹೇಳಿಕೊಂಡರು.
ಅಷ್ಟೇ ಅಲ್ಲದೆವಪೃಥ್ವಿರಾಜ್ ಡ್ಯಾನ್ಸ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಬಾಲಕನನ್ನು ಮುಂದಿನ ರೌಂಡ್ಗೆ ಆಯ್ಕೆ ಕೂಡಾ ಮಾಡಿದರು. ಮಂಗಳೂರಿನ ಸುರೇಂದ್ರ ಶೆಟ್ಟಿ ಹಾಗೂ ಸುನಂದಾ ಶೆಟ್ಟಿ ದಂಪತಿಗೆ ಮಂಗಳೂರಿನಲ್ಲಿ ಜನಿಸಿದ ಶಿಲ್ಪಾ ಶೆಟ್ಟಿ ಬೆಳೆದದ್ದು ಮುಂಬೈ ಹಾಗೂ ಪಶ್ಚಿಮ ಬಂಗಾಳದಲ್ಲಿ.
ಶಿಲ್ಪಾ ಶೆಟ್ಟಿ ಮೊದಲ ಹೆಸರು ಅಶ್ವಿನಿ ಶೆಟ್ಟಿ. ಬಾಜಿಗರ್ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ ಶಿಲ್ಪಾ ಪ್ರೀತ್ಸೋದ್ ತಪ್ಪಾ, ಒಂದಾಗೋಣ ಬಾ ಹಾಗೂ ಆಟೋ ಶಂಕರ್ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ವಿಡಿಯೋ ವೈರಲ್ ಆಗಿದ್ದು ಇದೇ ಹಿಂದಿ ಕಾರ್ಯಕ್ರಮದಲ್ಲಿ ಶಿಲ್ಪಾ ಶೆಟ್ಟಿ ತುಳು ಬಾಷೆಯಲ್ಲಿ ಹೇಗೆ ಮಾತನಾಡಿದ್ದಾರೆ ನೋಡಿ.