ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಕನ್ನಡ ಬಂದರೂ ಮಾತಾಡದೆ ನಾಟಕ ಮಾಡಿದ ದೀಪಿಕಾ ಪಡುಕೋಣೆ…ವಿಡಿಯೋ

4,971

ಹಿಂದಿ ಚಿತ್ರರಂಗದ ಬ್ಲಾಕ್‌ಬಸ್ಟರ್‌ ಸಿನಿಮಾವೊಂದು ಇತ್ತೀಚೆಗಷ್ಟೇ 16 ನೇ ವರ್ಷದ ವಾರ್ಷಿಕೋತ್ಸವ ಆಚರಿಸಿಕೊಂಡುತ್ತು. ಹೌದು 2007ರ ನವೆಂಬರ್ 9 ರಂದು ಶಾರುಖ್ ಖಾನ್ ಅವರ ನಟನೆಯ ಫರಾಹ್ ಖಾನ್ ನಿರ್ದೇಶನದ ಓಂ ಶಾಂತಿ ಓಂ ಚಲನಚಿತ್ರ ಬಿಡುಗಡೆಯಾಯಿತು ಹಾಗೂ ಯಶಸ್ವಿ ಪ್ರದರ್ಶನ ಕಂಡಿತ್ತು.
ಶಾರುಖ್ ಖಾನ್ ಅವರ ಮೈಕಟ್ಟು ಅಥವಾ ದೀವಾಂಗಿ ಹಾಡಿನಲ್ಲಿನ ಬೃಹತ್ ಅತಿಥಿ ಪಾತ್ರಗಳ ಪರಿಚಯ ಮಾತ್ರವಲ್ಲ ದೀಪಿಕಾ ಪಡುಕೋಣೆ ಅವರ ಲಾಂಚ್‌ಪ್ಯಾಡ್‌ಗಾಗಿ ಓಂ ಶಾಂತಿ ಓಂ ಸಿನಿಮಾ ಭಾರತೀಯ ಚಿತ್ರರಂಗದ ವಾರ್ಷಿಕೋತ್ಸವಗಳಲ್ಲಿ ಎಂದೆಂದಿಗೂ ಅಚ್ಚಳಿಯದೆ ಉಳಿದಿದೆ ಎನ್ನಬಹುದು.

ಶ್ರೇಯಸ್ ತಲ್ಪಾಡೆ ಅರ್ಜುನ್ ರಾಂಪಾಲ್ ಮತ್ತು ಕಿರಣ್ ಖೇರ್ ನಟಿಸಿದ ಸಿನಿಮಾದ 16 ನೇ ವಾರ್ಷಿಕೋತ್ಸವವನ್ನು ಆಚರಿಸುವುದಷ್ಟೇ ಅಲ್ಲದೆ ಅಭಿಮಾನಿಗಳು ದೀಪಿಕಾ ಪಡುಕೋಣೆ ಅವರ ಚಿತ್ರರಂಗಕ್ಕೆ ಪ್ರವೇಶದ 16 ನೇ ವಾರ್ಷಿಕೋತ್ಸವ ಹಾಗೂ ವೃತ್ತಿ ಜೀವನದ ಆರಂಭವನ್ನು ಆಚರಿಸಿದ್ದಾರೆ. ಅಂದಿನಿಂದ ಹ್ಯಾಪಿ ನ್ಯೂ ಇಯರ್ ಚೆನ್ನೈ ಎಕ್ಸ್‌ಪ್ರೆಸ್ ಮತ್ತು ಪಠಾಣ್ ಸೇರಿದಂತೆ ಅನೇಕ ಚಿತ್ರಗಳಲ್ಲಿ ಶಾರುಖ್ ಖಾನ್ ಮತ್ತು ದೀಪಿಕಾ ನಟಿಸಿದ್ದಾರೆ. ಶಾರುಖ್ ಖಾನ್ ಕೂಡ ದೀಪಿಕಾ ಅವರಿಗೆ ಶುಭಾಶಯ ಕೋರಿದ್ದು ವಿಶೇಷ.

ಸದ್ಯ ಈ ಕುರಿತು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದಿರುವ ಅವರು 16 ಅದ್ಭುತ ವರ್ಷಗಳ ಶ್ರೇಷ್ಠತೆ ಪರಿಶ್ರಮ ನಿಮ್ಮೊಂದಿಗೆ ಅದ್ಭುತ ನಟನೆಗಳು ಮತ್ತು ಬೆಚ್ಚಗಿನ ಅಪ್ಪುಗೆಗಳು! ಇಲ್ಲಿ ನಿಮ್ಮನ್ನು ನೋಡುತ್ತಿದೆ.ನಿಮ್ಮನ್ನು ನೋಡುತ್ತಿದೆ ಮತ್ತು ನಿಮ್ಮನ್ನು ನೋಡುತ್ತಲೇ ಇದೆ ಮತ್ತು ಇನ್ನೂ ನಿಮ್ಮನ್ನು ನೋಡುತ್ತಲೇ ಇದೆ. ಎಂದು ಬರೆದಿರುವ ಅವರು ದೀಪಿಕಾ ಮತ್ತು ತಮ್ಮ ನಟನೆಯ ಸಿನಿಮಾಗಳ ಸ್ಕ್ರೀನ್ ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ.

ಇನ್ನು ಕೊನೆಯದಾಗಿ ರಾಕೆಟ್ರಿ ಮತ್ತು ಬ್ರಹ್ಮಾಸ್ತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಶಾರುಖ್ ಖಾನ್ ಡುಂಕಿ (ರಾಜ್‌ಕುಮಾರ್ ಹಿರಾನಿ) ಮತ್ತು ಜವಾನ್ (ಅಟ್ಲಿ) ಸಿನಿಮಾಗಳ ಬಿಡುಗಡೆಗೆ ಕಾಯುತ್ತಿದ್ದಾರೆ. ಈ ನಡುವೆ ಕನ್ನಡಿಗರಿಗೆ ಇಷ್ಟವಾಗುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಹ್ಯಾಪಿ ನ್ಯೂ ಇಯರ್ ಸಿನಿಮಾ ಬಿಡುಗಡೆ ವೇಳೆ ದಿಪೀಕಾ ಹಾಗೂ ಕಿಂಗ್ ಖಾನ್ ಕನ್ನಡದಲ್ಲಿ ಮಾತನಾಡಿದ್ದು ನಿಜಕ್ಕೂ ಇದು ಕ್ಯೂಟ್ ಎನಿಸಿದೆ. ಈ ವಿಡಿಯೋ ಲೇಖನಿಯ ಕೆಳಗೆ ಹಂಚಿಕೊಳ್ಳಲಾಗಿದ್ದು ವಿಡಿಯೋ ನೋಡಿ ನಿಮ್ಮ ಅನಿಸಿಕೆಯನ್ನು ಕಮೆಂಟ್ ಮೂಲಕ ತಿಳಿಸಿ.

ಇನ್ನು ಹಲವು ಹಿಟ್ ಚಿತ್ರಗಳನ್ನು ನೀಡಿರುವ ಶಾರುಖ್ ಖಾನ್ ಸಿನಿಮಾ ತೆರೆಕಾಣದೆ ನಾಲ್ಕು ವರ್ಷಗಳು ಕಳೆದಿವೆ. ಒಂದು ದೊಡ್ಡ ಬ್ರೇಕ್ ತೆಗೆದುಕೊಂಡಿದ್ದ ಅವರು ಮತ್ತೆ ಸಿನಿಮಾ ರಂಗದಲ್ಲಿ ಬ್ಯುಸಿ ಆಗಿದ್ದಾರೆ. ಒಟ್ಟೊಟ್ಟಿಗೆ ಮೂರು ಚಿತ್ರಗಳ ಶೂಟಿಂಗ್​ನಲ್ಲಿ ಅವರು ಬ್ಯುಸಿ ಆಗಿದ್ದು ಪಠಾಣ್​ ಚಿತ್ರದ ಬಗ್ಗೆ ಈಗಾಗಲೇ ಅಧಿಕೃತ ಘೋಷಣೆ ಆಗಿದೆ. ಸಿದ್ದಾರ್ಥ್ ಆನಂದ್ ನಿರ್ದೇಶನದ ಈ ಸಿನಿಮಾಗೆ ದೀಪಿಕಾ ನಾಯಕಿ.

ತಮಿಳು ನಿರ್ದೇಶಕ ಅಟ್ಲೀ ನಿರ್ದೇಶನದ ಸಿನಿಮಾ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬರಬೇಕಿದೆ. ಇತ್ತೀಚೆಗೆ ರಾಜ್​ಕುಮಾರ್ ಹಿರಾನಿ ಜತೆಗೆ ಶಾರುಖ್ ಕೈ ಜೋಡಿಸಿರುವ ವಿಚಾರ ಅಧಿಕೃತವಾಗಿತ್ತು. ಈಗ ಸೆಟ್​ನ ಫೋಟೋ ಒಂದು ವೈರಲ್ ಆಗಿದೆ. ರಾಜ್​ಕುಮಾರ್ ಹಿರಾನಿ ಜೊತೆ ಶಾರುಖ್ ಖಾನ್ ಇದೇ ಮೊದಲ ಬಾರಿಗೆ ಕೆಲಸ ಮಾಡುತ್ತಿದ್ದು ಸಂಜಯ್ ದತ್ ಆಮಿರ್ ಖಾನ್ ಜತೆಗೆ ಈ ಮೊದಲು ಹಿರಾನಿ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ಒಂದು ಪ್ರೋಮೋ ವಿಡಿಯೋ ಹಂಚಿಕೊಳ್ಳುವ ಮೂಲಕ ಈ ಬಗ್ಗೆ ಘೋಷಣೆ ಮಾಡಲಾಗಿತ್ತು. ಈ ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲ ಅಭಿಮಾನಿಗಳಲ್ಲಿದೆ.