ವಾರ್ತಾ ಮಂಜರಿ
Trending Stories, Viral News, Gossips & Everything in Kannada

ತನ್ನ ಮದುವೆಯ ಆಲ್ಬಮ್ ನೋಡುತ್ತಿರುವ ನಟಿ ಅದಿತಿ ಪ್ರಭುದೇವ…ವಿಡಿಯೋ

185
ನಮ್ಮ ಕನ್ನಡ ಚಲನಚಿತ್ರರಂಗದ ನಟಿ ಅದಿತಿ ಪ್ರಭುದೇವ ರವರು ತಮ್ಮ ಆಸೆಯಂತೇ ಯುವ ರೈತ ಹಾಗೂ ಉದ್ಯಮಿ ಆಗಿ ಕೆಲಸ ನಿರ್ವಹಿಸುತ್ತಿರುವ ಯಶಸ್ ಪಾಟ್ಲಾ ಅವರ ಜತೆ ಸಪ್ತಪದಿ ತುಳಿದಿದ್ದು ನವೆಂಬರ್ 28  ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದಿತಿ ಪ್ರಭುದೇವ ಹಾಗೂ ಯಶಸ್ ಪಾಟ್ಲಾ ವಿವಾಹ ಅದ್ಧೂರಿಯಾಗಿ ನೆರವೇರಿದೆ ಎನ್ನಬಹುದು.
ಇನ್ನು ಕಳೆದ ವರ್ಷವೇ ನಿಶ್ವಿತಾರ್ಥಾವಾಗಿದ್ದ ಈ ಜೋಡಿ ಇದೀಗ ವೈವಾಹಿಕ ಜೀವಕ್ಕೆ ಕಾಲಿಟ್ಟಿದ್ದು  ನವೆಂಬರ್ 27  ರಂದು ಬೆಂಗಳೂರಿನ ಅರಮನೆಮ ಮೈದಾನದಲ್ಲಿ ನಡೆದ ಅದಿತಿ ಪ್ರಭುದೇವ ಹಾಗೂ ಯಶಸ್ ಅವರ ಅದ್ಧೂರಿಯಾದ ಆರತಕ್ಷತೆ ಕಾರ್ಯಕ್ರಮ ಜರುಗಿತು. ಹೌದು ಈ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಯಶ್ ರಾಧಿಕಾ ಪಂಡಿತ್ ಶ್ರೀನಗರ ಕಿಟ್ಟಿ ಮೇಘಾ ಶೆಟ್ಟಿ ಹಾಗೂ ಇತರೆ ಕಲಾವಿದರು ಸೇರಿದಂತೆ ರಾಜಕೀಯ ಕ್ಷೇತ್ರದ ಹಲವು ಗಣ್ಯರೂ ಕೂಡ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿ ನವ ಜೋಡಿಗೆ ಶುಭ ಕೋರಿದರು.
ಇನ್ನು ಸೋಮವಾರ  ಬೆಳಗ್ಗೆ 9 ಗಂಟೆಯಿಂದ 10.32ರವರೆಗೆ ಇದ್ದ ಮುಹೂರ್ತದ ಸಂದರ್ಭದಲ್ಲಿ  ಯಶಸ್ ಅದಿತಿ ಪ್ರಭುದೇವ ಅವರಿಗೆ ಮಾಂಗಲ್ಯ ಕಟ್ಟಿದ್ದು ನೆರೆದಿದ್ದ ಕುಟುಂಬಸ್ಥರು ಸ್ನೇಹಿತರು ಮತ್ತು ಸೆಲೆಬ್ರಿಟಿಗಳು ಅಕ್ಷತೆ ಹಾಕಿ ನೂರಾರು ಕಾಲ ಸುಖವಾಗಿ ಬಾಳಿ ಎಂದು ನವ ಜೋಡಿಗೆ ಹರಸಿದ್ದಾರೆ. ಸದ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಅದಿತಿ ತಾಳಿ ಕಟ್ಟಿಸಿಕೊಂಡ ಫೋಟೊ ಹಾಗೂ ವಿಡಿಯೊಗಳು ಸಾಮಾಜಿಕ ಜಾಲತಾಣದ ತುಂಬಾ ವೈರಲ್ ಆಗಿವೆ.
ಇನ್ನು ಅದಿತಿ ಪ್ರಭುದೇವ ಹಾಗೂ ಯಶಸ್ ಮದುವೆ ಸಮಾರಂಭಕ್ಕೆ ಸಿ ಎಂ ಬಸವರಾಜ ಬೊಮ್ಮಾಯಿ ಮುಖ್ಯ ಅತಿಥಿಯಾಗಿ ಆಗಿಮಿಸಿದ್ದು  ನವ ಜೋಡಿಗೆ ಶುಭಕೋರಿದ ಬಳಿಕ ಸಿ ಎಂ ಮಾಧ್ಯಮಗಳಿಗೆ ಅದಿತಿ ತಮ್ಮ ಸಂಬಂಧಿ ಅನ್ನುವ ಸಂಗತಿಯನ್ನು ರಿವೀಲ್ ಮಾಡಿದ್ದರು. ಹೌದು  ಅದಿತಿ ಮತ್ತು ಅವರ ಕುಟುಂಬದ ಎಲ್ಲಾ ಸದಸ್ಯರು ನನಗೆ ಆತ್ಮೀಯವಾಗಿ ಕರೆದಿದ್ದು ಹೀಗಾಗಿ ಬಂದು ಅವರಿಗೆ ಶುಭಾಶಯಗಳನ್ನು ಹೇಳಿದ್ದೇನೆ. ನಮ್ಮ ತಾಯಿ ಕಡೆಯಿಂದಾನೂ ಸಂಬಂಧ ಆಗಬೇಕಿದ್ದು ಹೀಗಾಗಿ ಬಂದು ಹಾರೈಸಿದ್ದೇನೆ. ಅವರ ಬದುಕು ಒಳ್ಳೆಯದಾಗಲಿ ಅಂತ ನಿಮ್ಮ ಮೂಲಕನೂ ಹಾರೈಸುತ್ತೇನೆ ಎಂದು  ಬೊಮ್ಮಾಯಿ ಹೇಳಿದ್ದಾರೆ.
ಇನ್ನು ಅದಿತಿ ಪ್ರಭುದೇವ ಮತ್ತು ಯಶಸ್ ಆರತಕ್ಷತೆ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಯಶ್ ಹಾಗೂ ರಾಧಿಕಾ ಯಶ್ ಗಂಡು ಹೆಣ್ಣಿಗೆ ಒಳ್ಳೆಯದಾಗಲಿ ನೂರಾರು ವರ್ಷ ಚೆನ್ನಾಗಿರಲಿ ಎಂದು ಆಶಿಸಿದ್ದು ಇನ್ನು ನಟಿ ಅದಿತಿ ಪ್ರಭುದೇವ ಹಾಗೂ ಯಶಸ್ ವಿವಾಹದ ಫೊಟೊಗಳು ಹೊರಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಬಹಳಾನೇ ವೈರಲ್ ಆಗಿವೆ.
ಹೌದು ಈ ಫೋಟೊಗಳನ್ನು ಟ್ವಿಟರ್  ಫೇಸ್‌ಬುಕ್‌ ಹಾಗೂ ಇನ್ಸ್ಟಾಗ್ರಾಮ್ ಖಾತೆಗಳಲ್ಲಿ ಹಂಚಿಕೊಳ್ಳುತ್ತಿರುವ ನೆಟ್ಟಿಗರು ನವ ಜೋಡಿಗೆ ಶುಭಾಶಯ ಕೋರುತ್ತಿದ್ದು ಅಭಿಮಾನಿಗಳು ಮಾತ್ರವಲ್ಲದೆ ಹಲವಾರು ಸೆಲೆಬ್ರಿಟಿಗಳೂ ಸಹ ಅದಿತಿಗೆ ಮದುವೆಯ ಶುಭಾಶಯ ಕೋರಿದ್ದಾರೆ. ಸದ್ಯ ಮದುವೆಯಾದ ಕೇವಲ 2 ದಿನಕ್ಕೆ ಮದುವೆಯ ಆಲ್ಬಮ್ ನವಜೋಡಿಗಳ ಕೈಗೆ ದೊರಕಿದ್ದು ತಮ್ಮ ಮದುವೆಯ ಕ್ಷಣವನ್ನು ಅಧಿತಿ ಹೇಗೆ ಸವಿದಿದ್ದಾರೆ ನೀವೆ ಕೆಳಗಿನ ವಿಡಿಯೋದಲ್ಲಿ ನೋಡಿ.