ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಮೊದಲ ಸೀನ್ ನಲ್ಲೆ ಮಾಲಾಶ್ರೀ ಮಗಳ ಆಕ್ಟಿಂಗ್ ಹೇಗಿತ್ತು ನೋಡಿ…ವಿಡಿಯೋ

2,839

Malashree Daughter Cute Acting: ಕನ್ನಡ ಚಿತ್ರರಂಗದ ಕೋಟಿ ನಿರ್ಮಾಪಕ ರಾಮು ಮತ್ತು ಕನಸಿನ ರಾಣಿ ಮಾಲಾಶ್ರೀ ಅವರ ಪುತ್ರಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ 56ನೇ ಸಿನಿಮಾದಲ್ಲಿ ಮಾಲಾಶ್ರೀ ಪುತ್ರಿ ಚಿತ್ರರಂಗ ಪ್ರವೇಶ ಮಾಡುತ್ತಿದ್ದಾರೆ. ಹೌದು ಈಗಾಗಲೇ ಮೊದಲ ಸಿನಿಮಾದ ಮುಹೂರ್ತ ಕೂಡ ನಡೆದಿದ್ದು ಅನನ್ಯಾ ಎಂಬ ಮೂಲ ಹೆಸರನ್ನು ರಾಧನಾ ರಾಮ್ ಎಂದು ಬದಲಾಯಿಸಿಕೊಂಡು ಸ್ಯಾಂಡಲ್‌ವುಡ್‌ಗೆ ಕಾಲಿಡುತ್ತಿದ್ದಾರೆ.

ಹೌದು ರಾಧನಾ ರಾಮ್ ನಾಲ್ಕೈದು ವರ್ಷಗಳಿಂದ ಹೀರೊಯಿನ್ ಆಗೋಕೆ ಬೇಕಾಗಿರುವ ತರಬೇತಿಯನ್ನು ಪಡೆಯುತ್ತಿದ್ದು ಮುಂಬೈನಲ್ಲಿ ಕಳೆದ ಎರಡು ವರ್ಷಗಳಿಂದ ನಟನೆಯಲ್ಲಿ ಟ್ರೈನಿಂಗ್ ಕೂಡ ಪಡೆದುಕೊಂಡಿದ್ದಾರೆ. 13 ವರ್ಷವಿರುಗಾಗಲೇ ರಾಧನಾ ಸಿನಿಮಾರಂಗಕ್ಕೆ ಎಂಟ್ರಿ ಕೊಡುವ ನಿರ್ಧಾರ ಮಾಡಿದ್ದು ಚಿತ್ರದಲ್ಲಿ ನಟಿಸಬೇಕು ಅಂತ ಮಗಳು ಹೇಳುತ್ತಿದ್ದಂತೆ ಮಾಲಾಶ್ರೀ ಮೊದಲು ಫೋಟೊಶೂಟ್ ಮಾಡಿಸಿದ್ದರು.

ಹೌದು ಇಲ್ಲಿಂದ ಮಗಳನ್ನು ಚಿತ್ರರಂಗಕ್ಕೆ ಪರಿಚಯಿಸಲು ತೆರೆಮರೆಯಲ್ಲಿ ಸಿದ್ದತೆಗಳು ನಡೆದಿದ್ದು ಅಂದ್ಹಾಗೆ ಮಾಲಾಶ್ರೀ 15ನೇ ವಯಸ್ಸಿನಲ್ಲಿಯೇ ನಂಜುಂಡಿ ಕಲ್ಯಾಣ ಸಿನಿಮಾ ಮೂಲಕ ಹೀರೊಯಿನ್ ಆಗಿ ಎಂಟ್ರಿ ಕೊಟ್ಟಿದ್ದರು. ಇದೀಗ ಅವರ ಮಗಳು ಎಷ್ಟನೇ ವಯಸ್ಸಿಗೆ ಎಂಟ್ರಿ ಕೊಟ್ಟಿದ್ದಾರೆ ಅನ್ನುವ ಕುತೂಹಲವಿದ್ದು ಅದಕ್ಕೆ ಕನಸಿನ ರಾಣಿಯೇ ಉತ್ತರ ಕೊಟ್ಟಿದ್ದಾರೆ.

ನಟಿ ಮಾಲಾಶ್ರೀ ನಂಜುಂಡಿ ಕಲ್ಯಾಣ ಸಿನಿಮಾ ಮಾಡುವುದಕ್ಕೂ ಮುನ್ನ ತಮಿಳು ಹಾಗೂ ತೆಲುಗು ಭಾಷೆಯ ಸಿನಿಮಾಗಳಲ್ಲಿ ಚಿಕ್ಕಪುಟ್ಟ ಪಾತ್ರಗಳನ್ನು ಮಾಡಿದ್ದರು. ಹೌದು ಆದರೆ ಪೂರ್ಣ ಪ್ರಮಾಣ ಹೀರೊಯಿನ್ ಆಗಿ ಚಿತ್ರರಂಗ ಪ್ರವೇಶ ಮಾಡಿದ್ದು ನಂಜುಂಡಿ ಕಲ್ಯಾಣ ಚಿತ್ರದಿಂದ.

ಈ ಕಾರಣಕ್ಕೆ ಮಗಳು ಸಿನಿಮಾರಂಗ ಪ್ರವೇಶ ಮಾಡುವ ವೇಳೆ ಆ ಜರ್ನಿಯನ್ನು ನೆನಪಿಸಿಕೊಂಡಿದ್ದು ನಾನು ಇಲ್ಲಿ ಕೂರುವುದಕ್ಕೆ ಕಾರಣ ಪಾರ್ವತಮ್ಮ ರಾಜ್‌ಕುಮಾರ್ ಮತ್ತು ಜನರ ಪ್ರೀತಿ. ಇವತ್ತು ನನಗೆ ಜೀವನ ಕೊಟ್ಟ ಈ ಚಿತ್ರರಂಗಕ್ಕೆ ನನ್ನ ಮಗಳು ಕಾಲಿಡುತ್ತಿದ್ದಾಳೆ. ನಿಮ್ಮೆಲ್ಲರ ಆಶೀರ್ವಾದ ನಿಮ್ಮ ವಿಶ್ವಾಸ ಪ್ರೀತಿ ನನಗಿಂತ ಹೆಚ್ಚು ಕೊಡಬೇಕು ಅಂತ ಸ್ವಾರ್ಥದಿಂದ ಕೇಳಿಕೊಳ್ಳುತ್ತಿದ್ದೇನೆ ಜನರನ್ನು ಕೇಳಿಕೊಂಡಿದ್ದಾರೆ.

ಇನ್ನು ನಂಜುಂಡಿ ಕಲ್ಯಾಣ ಸಿನಿಮಾದಲ್ಲಿ ಮಾಲಾಶ್ರೀ ಹೀರೊಯಿನ್ ಆದಾಗ ಅವರಿಗೆ ಕೇವಲ 15 ವರ್ಷ. ಸದ್ಯ ಈಗ ಅವರ ಪುತ್ರಿ ರಾಧನಾ ರಾಮ್ ಚಿತ್ರರಂಗ ಪ್ರವೇಶ ಮಾಡಿದ್ದು ಹೀಗಾಗಿ ಅವರ ವಯಸ್ಸಿನ ಬಗ್ಗೆನೂ ಚರ್ಚೆಯಾಗಿತ್ತು. ಇದಕ್ಕೆ ಮಾಲಾಶ್ರೀಯವರೇ ಉತ್ತರ ನೀಡಿದ್ದು ನಾನು ನಂಜುಂಡಿ ಕಲ್ಯಾಣ ಸಿನಿಮಾ ಮಾಡುವಾಗ ನನಗೆ 15 ವರ್ಷ. ಆಗ ತುಂಬಾ ಚಿಕ್ಕವಳಿದ್ದೆ. ನನ್ನ ಮಗಳಿಗೀಗ 21 ವರ್ಷ. ಈಗ ಅವರು ಸಿನಿಮಾ ಮಾಡುತ್ತಿದ್ದು ನನ್ನ ಜೊತೆ ಮೊದಲು ರಾಕ್‌ಲೈನ್ ಪ್ರೊಡಕ್ಷನ್ ಸಿನಿಮಾ ಮಾಡಿದ್ದರು. ಈಗ ನನ್ನ ಮಗಳು ಮೊದಲ ಸಿನಿಮಾವನ್ನು ಅವರ ಪ್ರೊಡಕ್ಷನ್‌ನಲ್ಲಿ ಶುರು ಮಾಡಿದ್ದಾರೆ. ಅದರಲ್ಲೂ ಕೂಡ ದರ್ಶನ್ ಸಿನಿಮಾದೊಂದಿಗೆ ಲಾಂಚ್ ಆಗ್ತಿದ್ದಾರೆ ಅಂದಾಗ ತುಂಬಾನೇ ಖುಷಿಯಾಗಿದೆ ಎನ್ನುತ್ತಾರೆ ಮಾಲಾಶ್ರೀ ಯವರು.

ಇದು ಅನಿರೀಕ್ಷಿತವಾಗಿ ನನಗೆ ಸಿಕ್ಕಿದ ಆಫರ್ ಆಗಿದ್ದು ಈಗ ಈ ಸಿನಿಮಾ ಮಾಡುತ್ತಿದ್ದೇನೆ ಅಂತ ಅರಗಿಸಿಕೊಳ್ಳುತ್ತಿದ್ದೇನೆ. ದರ್ಶನ್ ಅವರೊಂದಿಗೆ ಹಾಗೂ ರಾಕ್‌ಲೈನ್ ಪ್ರೊಡಕ್ಷನ್ ಅವರೊಂದಿಗೆ ಮಾಡುತ್ತಿದ್ದೇನೆ ಅಂತ ಅನಿಸುತ್ತಿದೆ. ನಾನು ತುಂಬಾ ಚಿಕ್ಕವಳಿದ್ದಾಗ ನಾಚಿಕೆ ಸ್ವಭಾವವಿತ್ತು. ಈಗ ತರಬೇತಿ ತೆಗೆದುಕೊಂಡು ಆಸಕ್ತಿ ಇಟ್ಟುಕೊಂಡು ಬಂದಿದ್ದೇನೆ ಎಂದು ರಾಧನಾ ಮೊದಲ ಸಿನಿಮಾ ಬಗ್ಗೆ ಮಾತಾಡಿದ್ದಾರೆ.

ಅಂದ್ಹಾಗೆ ಕೋಟಿ ನಿರ್ಮಾಪಕ ರಾಮು ಅವರೇ ತಮ್ಮ ಮಗಳಿಗೆ ರಾಧನಾ ರಾಮ್ ಅಂತ ಹೆಸರು ಇಟ್ಟಿದ್ದು ಸಿನಿಮಾ ಇಂಡಸ್ಟ್ರಿಗೆ ಬರುವಾಗ ಹೆಸರು ಬದಲಾವಣೆ ಮಾಡೋಣ ಅಂತ ಅವರೇ ಹೇಳಿದ್ದರು. ಅದರಂತೆಯೇ ಮಗಳಿಗೆ ಹೆಸರನ್ನು ಬದಲಾವಣೆ ಮಾಡಿದ್ದಾರೆ. ರಾ ಸೆಂಟಿಮೆಂಟ್ ಏನೂ ಇಲ್ಲ ಅಂತ ಮಾಲಾಶ್ರೀ ಸ್ಪಷ್ಟಪಡಿಸಿದ್ದು ರಾಧನಾ ರಾಮ್ ಅವರನ್ನು ಮನೆಯಲ್ಲಿ ಅನಿ ಅಂತಲೇ ಕರೆಯುತ್ತಾರೆ. ಇನ್ನೊಂದು ಇಂಟ್ರೆಸ್ಟಿಂಗ್ ವಿಷಯ ಅಂತದರೆ ರಾಧನಾ ಈಗಾಗಲೇ ರವಿಚಂದ್ರನ್ ನಟಿಸಿದ್ದ ಮಲ್ಲ ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸಿದ್ದರು. ಇನ್ನು D56 ಸಿನಿಮಾದ ಫರ್ಸ್ಟ್ ಶಾಟ್ ನಲ್ಲಿ ರಾಧನಾ ಹೇಗೆ ನಟಿಸಿದ್ದಾರೆ ಗೊತ್ತಾ? ನೀವೆ ನೋಡಿ.