ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಡಿಬಾಸ್ ಜೋಕ್ ಕೇಳಿ ನಕ್ಕ ರಚಿತಾರಾಮ್…ಚಿಂದಿ ವಿಡಿಯೋ

358

Darshan Rachita Ram Funny Conversation Video: ಚೆಂದನವನದ ಖ್ಯಾತ ನಟಿಯರ ಪೈಕಿ ಗುಳಿಕೆನ್ನಿ ಸುಂದರಿ ರಚಿತಾ ರಾಮ್ ರವರು ಸದ್ಯ ಮುಂಚಣಿಯಲ್ಲಿ ಇದ್ದು ದರ್ಶನ್ ಅಭಿನಯದ ಬುಲ್ ಬುಲ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಚಿತಾ ರಾಮ್ ರವರು ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ ಎನ್ನಬಹುದು. ಹೌದು ಅವರ ಪಯಣ ಇದೀಹ ಕ್ರಾಂತಿ ಯವರಿಗೂ ಮುನ್ನಡೆಯುತ್ತಿದೆ. ಬುಲ್ ಬುಲ್ ಚಿತ್ರ ಇವರಿಗೆ ದೊಡ್ಡ ಹೆಸರು ಹಾಗೂ ಯಶಸ್ಸು ತಂದು ಕೊಟ್ಟಿದ್ದು ಆ ನಂತರ ಸಾಲು ಸಾಲು ಚಿತ್ರಗಳಲ್ಲಿ ಕೂಡ ರಚಿತಾ ಬ್ಯುಸಿ ಆಗಿಬಿಟ್ಟರು.

ಅಲ್ಲದೇ ಸಾಲು ಸಾಲು ಕನ್ನಡ ಚಿತ್ರಗಳಲ್ಲಿ ನಟನೆಯನ್ನ ಸಹ ಮಾಡಿರುವ ರಚಿತಾ ರಾಮ್ ರವರು ಸದ್ಯಕ್ಕೆ ಕನ್ನಡ ಚಿತ್ರರಂಗದ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದು ಕನ್ನಡ ಚಿತ್ರರಂಗದ ಬಹುತೇಕ ನಾಯಕ ನಟರ ಜೊತೆಗ ನಟನೆ ಮಾಡಿರುವ ರಚಿತಾ ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟಿ ಎಂದೇ ಹೇಳಿಬಹುದಾಗಿದೆ. ನಟಿ ರಚಿತಾ ರಾಮ್ ರವರು ಸಂಭಾವನೆಯ ವಿಚಾರದಲ್ಲಿಯೂ ಕೂಡ ಬಹಳ ಮೇಲೆ ಇದ್ದಾರೆ ಎನ್ನಲಾಗುತ್ತಿದ್ದು ಇತರೆ ಕನ್ನಡದ ನಟಿಯರಿಗೆ ಹೋಲಿಕೆ ಮಾಡಿದರೆ ನಟಿ ರಚಿತಾ ರಾಮ್ ರವರ ಸಂಭಾವನೆ ಕೂಡ ಬಹಳ ಜಾಸ್ತಿಯಿದೆ.

ರಚಿತಾ ರವರು 2ನೇ ಅಕ್ಟೋಬರ್ 1992ರಂದು ಜನಿಸಿದ್ದು ಭಾರತೀಯ ಶಾಸ್ತ್ರೀಯ ಭರತನಾಟ್ಯ ನೃತ್ಯಗಾರ್ತಿ ಕೂಡ ಆಗಿದ್ದಾರೆ. ಸುಮಾರು 40 ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದು ಅವರ ತಂದೆ ಕೂಡ ಭಾರತೀಯ ಶಾಸ್ತ್ರೀಯ ಭರತನಾಟ್ಯ ನೃತ್ಯಗಾರರಾಗಿದ್ದರು. ಇನ್ನು ಅವರ ತಂದೆಯವರು 500ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದು ಕಿರುತೆರೆಯಲ್ಲಿ ಉದಯ ವಾಹಿನಿಯ ನಂದಿನಿ ಖ್ಯಾತಿಯ ನಟಿ ನಿತ್ಯಾ ರಾಮ್ ರವರು ರಚಿತಾ ರಾಮ್ ಅವರ ಸಹೋದರಿ. ಕನ್ನಡ ಚಿತ್ರರಂಗದಲ್ಲಿ ಡಿಂಪಲ್ ಕ್ವೀನ್ ಎಂದೇ ಕರೆಯಲ್ಪಡುವ ರಚಿತಾ ರಾಮ್ ಸದ್ಯ ನಿರ್ಮಾಪಕರ ಮೊದಲ ಆಯ್ಕೆಯ ನಟಿಯಾಗಿದ್ದಾರೆ.

ಹೌದು ಇದಲ್ಲದೆ ರಚಿತಾರಾಮ್ ರವರು ಕಿರುತೆರೆಯ ರಿಯಾಲಿಟಿ ಶೋಗಳಾದ ಕಾಮಿಡಿ ಟಾಕೀಸ್ ಮಜಾಭಾರತ- 2 ಡ್ರಾಮಾ ಜ್ಯೂನಿಯರ್ಸ್ ಕಾರ್ಯಕ್ರಮಗಳಲ್ಲಿ ಕೂಡ ತೀರ್ಪುಗಾರರಾಗಿಯೂ ಕೂಡ ಕೆಲಸ ಮಾಡಿದ್ದಾರೆ. ಇನ್ನು ಇದಲ್ಲದೆ ರಚಿತಾ ನಿರ್ಮಾಪಕಿಯಾಗಿಯೂ ಕೂಡ ಯಶಸ್ಸುಗಳಿಸಿದ್ದು ಶ್ರೀ ಮಹಾದೇವ ಹಾಗೂ ಪ್ರಜ್ವಲ್ ದೇವರಾಜ್‌ರವರ ಪತ್ನಿ ರಾಗಿಣಿ ಅಭಿನಯದ ರಿಷಭಪ್ರಿಯ ಎಂಬ ಕಿರು ಚಿತ್ರವನ್ನು ನಿರ್ಮಿಸಿ ಚಿತ್ರ ನಿರ್ಮಾಣದಲ್ಲಿ ಮೊದಲ ಪ್ರಯತ್ನ ಮಾಡಿದ್ದರು. ಇನ್ನು ಇದೊಂದು ಮ್ಯೂಸಿಕಲ್ ಕಿರುಚಿತ್ರವಾಗಿದ್ದು ಸೈಮಾ ಕಿರುಚಿತ್ರ ಸ್ಫರ್ಧೆಯಲ್ಲಿ ಮೂರು ವಿಭಾಗದಲ್ಲಿ ಕೂಡ ಪ್ರಶಸ್ತಿಯನ್ನು ಕೂಡ ಪಡೆದಿತ್ತು.

ರಾಜ್ಯದಲ್ಲಿ ಬಹಳ ಅಭಿಮಾನಿ ಬಳಗವನ್ನ ಹೊಂದಿರುವ ರಚಿತಾ ರವರ ಚಿತ್ರವನ್ನ ನೋಡಲು ಜನರು ಬಹಳ ಕಾತುರದಿಂದ ಕಾಯುತ್ತಿದ್ದು ಕನ್ನಡ ಚಿತ್ರರಂಗದಲ್ಲಿ ಡಿಂಪಲ್ ಕ್ವೀನ್ ಎಂದೇ ಕರೆಯಲ್ಪಡುವ ಗುಳಿ ಕೆನ್ನೆ ಸುಂದರಿ ಚಂದನವನದ ಪ್ರಮುಖ ನಾಯಕ ನಟಿ ಕೂಡ ಹೌದು. ಕನ್ನಡದ ಎಲ್ಲಾ ಪ್ರಮುಖ ನಟರೊಂದಿಗೆ ಕೂಡ ತೆರೆ ಹಂಚಿಕೊಂಡಿರುವ ರಚಿತಾರಾಮ್ 2013 ರಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದು ಚಿತ್ರದ ಅಡಿಷನ್‌ಗಾಗಿ ಬಂದ 200 ಕ್ಕೂ ಹೆಚ್ಚು ಯುವತಿಯರಲ್ಲಿ ರಚಿತಾ ಆಯ್ಕೆಯಾದರು.

ಈ ಚಿತ್ರದಲ್ಲಿ ತಮ್ಮ ಉತ್ತಮ ಸಂಭಾಷಣೆ ಮತ್ತು ಮುಗ್ಧ ನಟನೆಯಿಂದ ಪ್ರೇಕ್ಷಕರ ಮತ್ತು ವಿಮರ್ಶಕರ ಅಪಾರ ಮೆಚ್ಚುಗೆ ಪಡೆದರು. ಇನ್ನು ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನ ಹೊಂದಿರುವ ರಚಿತಾ ರಾಮ್ ಅವರು ಒಂದು ಚಿತ್ರಕ್ಕೆ 35 ರಿಂದ 40 ಲಕ್ಷ ರೂಪಾಯಿ ಸಂಭಾವನೆಯನ್ನ ಪಡೆಯುತ್ತಿದ್ದು ರಾಜ್ಯದಲ್ಲಿ ಮಾತ್ರವಲ್ಲದೆ ಬೇರೆ ರಾಜ್ಯದಲ್ಲಿ ಕೂಡ ಅಪಾರ ಸಂಖ್ಯೆಯ ಅಭಿಮಾನಿಗಳನ್ನ ಹೊಂದಿರುವ ರಚಿತಾ ಅವರು ಇಷ್ಟು ಸಂಭಾವನೆಯನ್ನ ಪಡೆದುಕೊಳ್ಳುತ್ತಾರೆ.

ಸದ್ಯ ನಟಿ ಕ್ರಾಂತಿ ಸಿನಿಮಾದ ಪ್ರಚಾರದಲ್ಲಿ ಬ್ಯೂಸಿಯಾಗಿದ್ದು ಇದೀಗ ದರ್ಶನ್ ಹಾಗೂ ರಚಿತಾ ರವರ ಫನ್ನಿ ಮಾತುಕಥೆಯೊಂದು ವೈರಲ್ ಆಗುತ್ತಿದೆ. ಅದು ಯಾವುದು ಅಂತೀರ? ನೀವೆ ಕೆಳಗಿನ ವಿಡಿಯೋ ನೋಡಿ.