ವಾರ್ತಾ ಮಂಜರಿ
Trending Stories, Viral News, Gossips & Everything in Kannada

ನಟ ಪ್ರೇಮ್ ಮಗಳ ವಾಯ್ಸ್ ಹೇಗಿದೆ ನೋಡಿ…ಚಿಂದಿ ವಿಡಿಯೋ

5,091

ಸಾಮಾಜಿಕ ಜಾಲತಾಣದಲ್ಲಿ ಕಳೆದ ವರುಷ ಸಾಂಪ್ರದಾಯಿಕ ಸಲ್ವಾರ್, ಸೀರೆ ಉಟ್ಟುಕೊಂಡಿರುವ ಹುಡುಗಿಯೋಬ್ಬರು ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುವುದರ ಜೊತೆಗೆ ಸಖತ್ ಸುದ್ದಿ ಮಾಡಿತ್ತು. ಇನ್ನು ಹುಡುಗಿ ಕನ್ನಡ ಚಿತ್ರರಂಗದ ಸ್ಟಾರ್ ನಟನ ಮಗಳು ಎಂಬುದು ವಿಶೇಷ.

ಹೌದು ಸಾಮಾಜಿಕ ಜಾಲತಾಣವೇ ಹಾಗೆ ಇಲ್ಲಿ ಸಾಕಷ್ಟು ವಿಚಾರಗಳು ವೈರಲ್ ಆಗುತ್ತಲೇ ಇದ್ದು ನೋಡುಗರ ಗಮನ ಸೆಳೆಯುತ್ತಲೇ ಇರುತ್ತವೆ. ಅದರಲ್ಲೂ ನಟ-ನಟಿಯರ ಫೋಟೋ ಹಾಗೂ ವಿಡಿಯೋಗಳು ಅವರ ಫ್ಯಾನ್ಸ್ ಪೇಜ್ ಗಳಲ್ಲಿ ಹರಿದಾಡುವ ಮೂಲಕ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತದೆ. ಅಂತೆಯೇ ಚೆಂದನವನದ ಸ್ಟಾರ್ ನಟನ ಮಗಳ ಫೋಟೋವೊಂದು ದೊಡ್ಡ ಮಟ್ಟದಲಿ ವೈರಲ್ ಆಗಿದೆ. ಹಾಗಾದರೆ ಯಾರು ಆ ನಟ ಗೊತ್ತೆ.

ಕನ್ನಡ ಚಿತ್ರರಂಗದಲ್ಲಿ ಬಿಡುಗಡೆಯಾದ ಸಮಯದಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿದ ಸಿನಿಮಾ ಎಂದರೆ ನೆನಪಿರಲಿ ಸಿನಿಮಾ. ಈ ಸಿನಿಮಾ ಮೂಲಕ ಕನ್ನಡ ಚಿತ್ರರಂಗದ ಭರವಸೆ ನಟನಾಗಿ ಪಾದಾರ್ಪಣೆ ಮಾಡಿದವರು ನಟ ಪ್ರೇಮ್ ಅವರು. ಇದೀಗ ಪ್ರೇಮ್ ಅವರು ಸಂಸಾರಿಕ ಜೀವನದಲ್ಲಿ ನೆಮ್ಮದಿಯಾಗಿದ್ದು, ಅವರಿಗೆ ಓರ್ವ ಮಗಳು ಕೂಡ ಇದ್ದಾಳ.ಆಕೆಯ ಹೆಸರು ಅಮೃತಾ.

ನೋಡಲು ಬಹಳ ಮುದ್ದುಮುದ್ದಾಗಿರುವ ಅಮೃತಾ ಇಂಜಿನಿಯರಿಂಗ್ ವ್ಯಾಸಾಂಗ ಮಾಡುತ್ತಿದ್ದಾಳೆ. ಅಲ್ಲದೇ ಆಕೆಗೆ ತಮ್ಮ ಶಿಕ್ಷಣದ ಕಡೆ ಸಿಕ್ಕಾಪಟ್ಟೆ ಆಸಕ್ತಿಯಿದೆಯಂತೆ. ಇನ್ನು ಅಮೃತಾ 10ನೇ ತರಗತಿಯಲ್ಲಿ 90%ಕ್ಕಿಂತ ಹೆಚ್ಚು ಅಂಕ ಗಳಿಸಿದ್ದು,ಅಪ್ಪನ ಪ್ರೀತಿಯ ಮಗಳಾಗಿದ್ದಾಳೆ. ಇದೀಗ ಪ್ರೇಮ್ ಮಗಳ ವಿಡಿಯೋ ನೋಡಿ.