ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ತೆಲುಗು ಚಿತ್ರರಂಗದ ಖ್ಯಾತ ನಟಿ ಸಮಂತಾ ಕೆಲವು ತಿಂಗಳುಗಳಿಂದ ಮೌನಕ್ಕೆ ಜಾರಿಬಿಟ್ಟಿದ್ದರು. ಹೌದು ಸಮಂತಾರವರಿಗೆ ಏನಾಯಿತು ಎಂದು ಅಭಿಮಾನಿಗಳು ಆತಂಕಗೊಂಡಿದ್ದು ಸಮಂತಾರವರಿಗೆ ಆರೋಗ್ಯ ಸಮಸ್ಯೆ ಎದುರಾಗಿದೆ ಎಂಬ ಸುದ್ದಿ ಕೂಡ ಹರಿದಾಡಿತ್ತು. ಸದ್ಯ ಇದೀಗ ಅದನ್ನು ಸ್ವತಃ ಸಮಂತಾ ರವರೇ ಖಾತ್ರಿಪಡಿಸಿದ್ದು ಆಕೆಯ ನಟನೆಯ ಯಶೋಧ ಸಿನಿಮಾದ ಟ್ರೈಲರ್ ಎರಡು ದಿನ ಹಿಂದಷ್ಟೆ ಬಿಡುಗಡೆ ಆಗಿದೆ.
ಹೌದು ಟ್ರೈಲರ್ ಬಗ್ಗೆ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು ತಮ್ಮ ಸಿನಿಮಾದ ಟ್ರೈಲರ್ ಅನ್ನು ಮೆಚ್ಚಿಕೊಂಡಿರುವ ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ಸಮಂತಾ ಧನ್ಯವಾದ ಹೇಳಿದ್ದಾರೆ. ಆದರೆ ಅದರ ಜೊತೆಗೆ ತಾವು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಯ ಬಗ್ಗೆ ಕೂಡ ಹೇಳಿಕೊಂಡಿದ್ದಾರೆ.
ಇನ್ನು ಅಪರೂಪದ ಕಾಯಿಲೆಯಿಂದ ಬಳಲುತ್ತಿರುವುದಾಗಿ ನಟಿ ಸಮಂತಾ ಹೇಳಿಕೊಂಡಿದ್ದು ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವ ಫೋಟೊವನ್ನು ಸಮಂತಾ ರವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಇದರ ಜೊತೆಗೆ ಅಭಿಮಾನಿಗಳಿಗಾಗಿ ಪತ್ರವನ್ನೂ ಕೂಡ ಬರೆದಿದ್ದಾರೆ.
ಹೌದು ಈ ಕುರಿತು ಬರೆದಿಕೊಂಡಿರುವ ಅವರು
ನನ್ನ ಯಶೋಧ ಚಿತ್ರದ ಟ್ರೈಲರ್ಗೆ ನೀವು ನೀಡಿರುವ ಪ್ರೀತಿ ಖುಷಿ ತಂದಿದ್ದು ನೀವು ತೋರಿಸುವ ಈ ಪ್ರೀತಿಯೇ ನನ್ನನ್ನು ಗಟ್ಟಿಗೊಳಿಸುತ್ತದೆ. ಜೀವನವು ನನಗೆ ಎದುರು ಮಾಡುವ ಕಷ್ಟಗಳೊಟ್ಟಿಗೆ ಹೋರಾಡಲು ಧೈರ್ಯ ತುಂಬುತ್ತಿದ್ದು ಕೆಲವು ತಿಂಗಳ ಹಿಂದಿನಿಂದ ನಾನು ಮಯೋಸಿಟ್ಸ್ ಹೆಸರಿನ ಕಾಯಿಲೆಯಿಂದ ಬಳಲುತ್ತಿದ್ದೇನೆ. ಇದರಿಂದ ಹೊರಬಂದ ಬಳಿಕ ನಿಮ್ಮೊಂದಿಗೆ ವಿಷಯ ಹಂಚಿಕೊಳ್ಳೋಣ ಎಂದಿದ್ದರೆ ಆದರೆ ಗುಣಮುಖವಾಗುವುದು ತಡವಾಗುತ್ತಿದೆ ಎಂದಿದ್ದಾರೆ ನಟಿ ಸಮಂತಾ.
ಇನ್ನು ಸದಾ ಧೈರ್ಯವಾಗಿ ಮುನ್ನುಗ್ಗುತ್ತ ಗಟ್ಟಿಯಾಗಿ ಇರುತ್ತಿದ್ದ ನನಗೆ ನನ್ನ ದುರ್ಬಲತೆಗಳನ್ನು ಒಪ್ಪಿಕೊಳ್ಳುವುದು ಈಗಲೂ ಕಷ್ಟವೆ. ನಾನು ಸಂಪೂರ್ಣವಾಗಿ ಈ ಕಾಯಿಲೆಯಿಂದ ಗುಣಮುಖವಾಗುತ್ತೇನೆ ಎಂಬ ವಿಶ್ವಾಸವನ್ನು ವೈದ್ಯರು ವ್ಯಕ್ತಪಡಿಸಿದ್ದು ದೈಹಿಕವಾಗಿ ಮಾನಸಿಕವಾಗಿ ಒಳ್ಳೆಯ ಮತ್ತು ಕೆಟ್ಟ ಎರಡೂ ರೀತಿಯ ದಿನಗಳನ್ನು ನಾನು ಕಂಡಿದ್ದೇನೆ. ಒಂದು ಸಮಯವಿತ್ತು ಇದನ್ನು ನನ್ನಿಂದ ಇನ್ನೊಂದು ಕ್ಷಣವೂ ಸಹಿಸಲಾಗುವುದಿಲ್ಲ ಎನಿಸಿತ್ತು. ಆದರೆ ಆ ಕೆಟ್ಟ ಗಳಿಗೆ ಈಗಿಲ್ಲ. ಚೇತರಿಸಿಕೊಳ್ಳುತ್ತಿದ್ದೇನೆ ಎಂದಿದ್ದಾರೆ ನಟಿ ಸಮಂತಾ.
ಹೌದು ನಟಿ ಸಮಂತಾ ರವರಿಗೆ ಮಯೋಸಿಟ್ಸ್ ಎಂಬ ಕಾಯಿಲೆ ಉಂಟಾಗಿದ್ದು ಈ ಕಾಯಿಲೆಯಿಂದ ನಿಲ್ಲಲು ತೊಂದರೆ ಆಗುತ್ತದೆಯಂತೆ. ತುಸು ಸಮಯ ನಿಂತರೆ ಸುಸ್ತೆನಿಸಿಬಿಡುತ್ತದೆ. ಕೂತರೆ ಏಳಲು ಬಹಳ ತ್ರಾಸ ಪಡಬೇಕಾಗುತ್ತಿದ್ದು ಕೈಗಳನ್ನು ಮೇಲೆತ್ತಲು ಕೂಡ ಬಹಳ ಕಷ್ಟಪಡಬೇಕಾಗುತ್ತದೆ. ಏನನ್ನಾದರು ನುಂಗಲು ಕಷ್ಟ ಉಸಿರಾಟವೂ ಕಷ್ಟವಾಗುತ್ತಿದ್ದು ಕೆಲವು ವಾರಗಳ ವರೆಗೆ ಮೈ-ಕೈ ನೋವು ಇರುತ್ತದೆ.
ಮಯೋಸಿಟ್ಸ್ ನಲ್ಲಿ ಬೇರೆ-ಬೇರೆ ವಿಧಾನಗಳಿವೆ ಆದರೆ ಸಮಂತಾಗೆ ಯಾವ ವಿಧದ ಮಯೋಸಿಟ್ಸ್ ಆಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಸದ್ಯ ಸಮಂತಾ ನಟನೆಯ ಯಶೋಧ ಸಿನಿಮಾದ ಟ್ರೈಲರ್ ಎರಡು ದಿನದ ಹಿಂದೆ ಬಿಡುಗಡೆಯಾಗಿದ್ದು ಥ್ರಿಲ್ಲರ್ ಕತೆಯನ್ನು ಸಿನಿಮಾ ಒಳಗೊಂಡಿದೆ. ಇನ್ನು ಬಾಡಿಗೆ ತಾಯಿಯ ಪಾತ್ರದಲ್ಲಿ ಸಮಂತಾ ನಟಿಸುತ್ತಿದ್ದು ಇದರ ಹೊರತಾಗಿ ಹಲವು ಸಿನಿಮಾಗಳಲ್ಲಿ ಕೂಡ ಸಮಂತಾ ನಟಿಸುತ್ತಿದ್ದಾರೆ.
ಶಾಕುಂತಲಂ ಸಿನಿಮಾ ಬಹುತೇಕ ಮುಗಿದಿದ್ದು ವಿಜಯ್ ದೇವರಕೊಂಡ ಜೊತೆಗೆ ಖುಷಿ ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ. ಬಾಲಿವುಡ್ ಸಿನಿಮಾವೊಂದರಲ್ಲಿ ನಟಿಸುತ್ತಿದ್ದು ಇಂಗ್ಲೀಷ್ನ ಅರೇಂಜ್ಮೆಂಟ್ಸ್ ಆಫ್ ಲವ್ ಸಿನಿಮಾದಲ್ಲಿಯೂ ಕೂಡ ಸಮಂತಾ ನಟಿಸುತ್ತಿದ್ದಾರೆ.