ಇಡೀ ಭಾರತೀಯ ಚಿತ್ರರಂಗ ಮಾತ್ರವಲ್ಲದೇ ವಿಶ್ವಾದ್ಯಂತ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳನ್ನು ಸಂಪಾದಿಸಿರುವ ನಟ ಎಂದರೆ ಸೂಪರ್ ಸ್ಟಾರ್ ರಜನಿಕಾಂತ್ ರವರು. ಹೌದು ಒಂದು ಕಾಲದಲ್ಲಿ ಭಾರತೀಯ ಸಿನಿ ರಂಗದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟ ಎಂಬ ಖ್ಯಾತಿಯನ್ನು ಕೂಡ ಪಡೆದುಕೊಂಡಿದ್ದ ಇವರು ಮೊದಮಿದಲು ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿದ್ದರು.
ಹೌದು ರಜನಿ ಇಂದು ಸೂಪರ್ ಸ್ಟಾರ್ ಪಟ್ಟದಲ್ಲಿದ್ದಾರೆ ಎಂದರೆ ಅದು ನಿಜಕ್ಕೂ ಅನೇಕರಿಗೆ ಸ್ಫೂರ್ತಿ ಎಂಸು ಹೇಳಿದರೆ ತಪ್ಪಾಗಲಾರದು. ಅಂದ ಹಾಗೆ ರಜನಿಕಾಂತ್ ರವರ ಮೂಲ ಹೆಸರು ಶಿವಾಜಿ ರಾವ್ ಗಾಯಕ್ವಾಡ್ ಎಂಬುದಾಗಿದ್ದು ಬೆಂಗಳೂರಿನ ಮರಾಠಿ ಕುಟುಂಬದಲ್ಲಿ ಜನಿಸಿದ್ದಾರೆ. ಇನ್ನು ರಜನಿಕಾಂತ್ ರವರು ಕಂಡಕ್ಟರ್ ಆಗುವುದಕ್ಕೂ ಮೊದಲು ಜೀವನಕ್ಕಾಗಿ ಕೂಲಿ ಕಾರ್ಪೆಂಟರ್ ವೃತ್ತಿ ಮಾಡಿದ್ದರು.
ಇದಾದ ಬಳಿಕ ಬಿಟಿಎಸ್ ಬಸ್ನಲ್ಲಿ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸಿದ್ದು ಕಂಡಕ್ಟರ್ ವೃತ್ತಿ ಮಾಡಬೇಕಾದರೆ ಜೊತೆ ಜೊತೆಗೆ ನಾಟಕಗಳಲ್ಲಿಯೂ ಕೂಡ ನಟಿಸುತ್ತಿದ್ದರಂತೆ. ನಂತರ ಸಿನಿಮಾ ಮೇಲಿನ ಆಸ್ತಿಯಿಂದ ಮದ್ರಾಸಿಗೆ ಹೋಗಿ ನಟನೆಯಲ್ಲಿ ಡಿಪ್ಲೋಮಾ ಸಹ ಪಡೆದ ರಜನಿ ಆ ನಂತರ 1975ರಲ್ಲಿ ಕೆ ಬಾಲಚಂದಿರ್ ನಿರ್ದೇಶನದ ಅಪೂರ್ವ ರಾಗಂಗಳ್ ಎಂಬ ಸಿನಿಮಾದ ಮೂಲಕ ಪ್ರಪ್ರಥಮ ಬಾರಿಗೆ ಸಿನಿಮಾದಲ್ಲಿ ಅಭಿನಯಿಸುತ್ತಾರೆ.
ಹೌದು ಸಕಲ ಕಲವಲ್ಲಬ ಕಮಲ್ ಹಾಸನ್ ರವರು ನಾಯಕರಾಗಿದ್ದ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದ ಸೂಪರ್ ಸ್ಟಾರ್ ರಜನಿಕಾಂತ್ ರವರು ನಂತರ ಕನ್ನಡದಲ್ಲಿ ಸಿನಿ ಜರ್ನಿ ಆರಂಭಿಸುತ್ತಾರೆ.ಹೌದು ಕನ್ನಡ ಸೇರಿದಂತೆ ತೆಲುಗು ಮತ್ತು ತಮಿಳು ಇಂಡಸ್ಟ್ರಿಯಲ್ಲಿ ಹೆಚ್ಚು ಸಿನಿಮಾಗಳನ್ನು ಮಾಡಿದ್ದು ದಿನಕಳೆದಂತೆ ತಮಿಳಿನಲ್ಲಿ ಶಾಶ್ವತವಾಗಿ ನೆಲೆಯೂರುತ್ತಾರೆ.
ಹೌದು ಸೂಪರ್ ಸ್ಟಾರ್ ಎಂಬ ಪಟ್ಟ ಸಹ ಅಲಂಕರಿಸಿರುಬ ರಜನಿಕಾಂತ್ ರವರುನಟಿಯ ಮೇಲೆ ಆಸಕ್ತಿ ಬೆಳೆಸಿಕೊಂಡು ಅವಕಾಶ ಅರಸಿ ಮದ್ರಾಸ್ ಗೆ ಹೋದ ರಜನಿ ಕೈಯಲ್ಲೇ ದುಡ್ಡಿಲ್ಲದೆ ಒಂದು ಬಿಲ್ಡಿಂಗ್ ಮೇಲೆ ಇದ್ದ ಗುಡಿಸಲು ಬಾಡಿಗೆಗೆ ಪಡೆದು ವಾಸವಾಗಿದ್ದಂತೆ. ಸದ್ಯ ಈಗ ಅಪ್ಪು ಕಾರ್ಯಕ್ರಮಕ್ಕೆ ಬರಲು ರಜನಿ ಕೇಳಿದ ಸಂಭಾವನೆ ಸಡ್ಡು ಮಾಡುತ್ತದೆ. ಸೆಲೆಬ್ರೆಟಿ ಎಂದಮೇಲೆ ಅವರಿಗೆ ಇಂತಿಷ್ಟು ಚಾರ್ಜ್ ಅಂತಾ ಇರುತ್ತದೆ ಆದರೆ ರಜನಿ ಈ ಕಾರ್ಯಕ್ರಮಕ್ಕೆ ಯಾವುದೇ ಹಣ ಪಡೆದಿಲ್ಲ ಎನ್ನಲಾಗಿದೆ