ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಸೂರ್ಯವಂಶ ಚಿತ್ರದ ನಟಿ ಇಶಾ ಕೊಪ್ಪಿಕರ್ ಏನಾದರು ಗೊತ್ತಾ…ನೋಡಿ ಒಮ್ಮೆ

6,470

ಇಶಾ ಕೊಪ್ಪಿಕರ್ ಅವರು 1976ರಲ್ಲಿ ಜನಿಸಿದರು. ನಂತರ ಇವರು 1998ರಲ್ಲಿ ಚಂದ್ರಲೇಖ ಎಂಬ ತೆಲುಗು ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡುತ್ತಾರೆ. ನಂತರ ಇವರು ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ಹಲವಾರು ಸಿನಿಮಾಗಳನ್ನು ಮಾಡುತ್ತಾರೆ. ಅದೇ ರೀತಿ ಕನ್ನಡದಲ್ಲಿ ಸೂರ್ಯವಂಶ, ಓ ನನ್ನ ನಲ್ಲೆ, ಹೂ ಅಂತೀಯ ಊಹೂ ಅಂತೀಯಾ ಎಂಬ ಸಿನಿಮಾಗಳಲ್ಲಿ ನಟಿಸಿದರು. ಆದರೆ ಇವರಿಗೆ ಕನ್ನಡ ಚಿತ್ರರಂಗದಲ್ಲಿ ಯಶಸ್ಸನ್ನು ತಂದುಕೊಟ್ಟಿದ್ದು ಓ ನನ್ನ ನಲ್ಲೆ ಹಾಗೂ ಸೂರ್ಯವಂಶ ಸಿನಿಮಾ. ಇನ್ನು ಇವರು ಐದು ಭಾಷೆಗಳಲ್ಲಿ ಸುಮಾರು 50ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಇನ್ನು ಚಿತ್ರರಂಗದಲ್ಲಿ ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ನಟಿ ಇಶಾ ಕೊಪ್ಪಿಕರ್ ಅವರು ಮಧ್ಯದಲ್ಲಿ ಸಿನಿಮಾರಂಗದಿಂದ ದೂರ ಉಳಿದಿದ್ದರು. ಹೌದು ಈಶ ಕೊಪ್ಪಿಕರ್ ಅವರು ಕಾಸ್ಟಿಂಗ್ ಕೌಚ್ ವಿರುದ್ಧ ಧ್ವನಿಯೆತ್ತಿದ್ದರು. ಹೀಗಾಗಿಯೇ ಅವರಿಗೆ ಸಿನಿಮಾ ಅವಕಾಶಗಳು ಕಡಿಮೆ ಸಿಗುತ್ತಿದ್ದವು ಎಂದು ಅವರು ಹೇಳಿದ್ದಾರೆ. ಇದೇ ಕಾರಣಕ್ಕಾಗಿಯೇ ಅವರು ಸಿನಿಮಾರಂಗದಿಂದ ದೂರ ಉಳಿದಿದ್ದರು.

ಆದರೆ 2019ರಲ್ಲಿ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಅಭಿನಯಿಸಿದ ಕವಚ ಎಂಬ ಸಿನಿಮಾದಲ್ಲಿ ನಟಿಸುವ ಮೂಲಕ ಮತ್ತೆ ಚಿತ್ರರಂಗಕ್ಕೆ ಮರಳಿದ್ದರು. ಆದರೂ ಕೂಡ ಇವರಿಗೆ ಇದೀಗ ಅವಕಾಶಗಳು ಕಮ್ಮಿ ಸಿಗುತ್ತಿವೆ.ಇನ್ನು ಇವರ ವೈಯಕ್ತಿಕ ಜೀವನಕ್ಕೆ ಬರುವುದಾದರೆ ಇವರು ಖ್ಯಾತ ಉದ್ಯಮಿ ಟಿಮ್ಮಿ ನಾರಂಗ ಎಂಬುವರೊಂದಿಗೆ 2009ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಈ ದಂಪತಿಗಳಿಗೆ ಇದೀಗ ರಿಯಾನ ಎಂಬ ಹೆಣ್ಣು ಮಗಳಿದ್ದಾಳೆ. ಪ್ರಸ್ತುತವಾಗಿ ಈ ಕುಟುಂಬ ಮುಂಬೈ ನಗರದಲ್ಲಿ ನೆಲೆಸಿದೆ. ಇದೀಗ ನಟಿ ಇಶಾ ಕೊಪ್ಪಿಕರ್ ಅವರು ತಮ್ಮ ಚಿಕ್ಕ ಕುಟುಂಬವನ್ನು ಪಾಲನೆ ಪೋಷಣೆ ಮಾಡುತ್ತಾ ಸುಖವಾಗಿದ್ದಾರೆ. ಇನ್ನೊಬ್ಬರು ಉತ್ತಮ ಅವಕಾಶಗಳು ದೊರೆತರೆ ಮತ್ತೆ ಚಿತ್ರಗಳಲ್ಲಿ ನಟಿಸುತ್ತೇನೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಜೀವನದುದ್ದಕ್ಕೂ ಕೂಡ ನನ್ನ ನಟನೆಯನ್ನು ಮಾತ್ರ ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಏನೇ ಆಗಲಿ ಅವರು ಒಬ್ಬರು ಉತ್ತಮ ನಟಿಯಾಗಿದ್ದು ಮತ್ತೆ ಚಿತ್ರರಂಗಕ್ಕೆ ಮರಳಲಿ.