ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಡಿಬಾಸ್ ಮಗನ ಸ್ಕೂಲ್ ಫೀಸ್ ಎಷ್ಟು ಗೊತ್ತಾ…ಯಾವ ನಟನೂ ಲೆಕ್ಕಕ್ಕಿಲ್ಲ ನೋಡಿ

46,256

dDarshan son school fees: ಕನ್ನಡ ಚಿತ್ರರಂಗದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲಿ ಕ್ರಾಂತಿ ಸಿನಿಮಾ ಕೂಡ ಒಂದಾಗಿದ್ದು ಕಳೆದ ಕೆಲವು ದಿನಗಳಿಂದ ಕ್ರಾಂತಿ ಸಿನಿಮಾ ರಿಲೀಸ್ ಬಗ್ಗೆ ಅಪ್‌ಡೇಟ್ ನೀಡುವಂತೆ ಅಭಿಮಾನಿಗಳು ಒತ್ತಾಯ ಮಾಡಿದ್ದರು. ಹೌದು ಅದಕ್ಕೀಗ ಚಿತ್ರತಂಡ ಸ್ಪಷನೆ ನೀಡಿದ್ದು ದರ್ಶನ್ ಅಭಿನಯದ ಕ್ರಾಂತಿ ಸಿನಿಮಾ ರಿಲೀಸ್‌ ಬಗ್ಗೆ ಗೊಂದಲವಿತ್ತು.

ಸದ್ಯ ಇದೇ ಕನ್ನಡ ರಾಜ್ಯೋತ್ಸವಕ್ಕೆ ಸಿನಿಮಾ ರಿಲೀಸ್ ಆಗುತ್ತೆ ಅನ್ನೋ ಗುಲ್ಲೆದ್ದೆತ್ತು. ಇನ್ನೊಂದು ಕಡೆ ಇನ್ನೂ ಸಿನಿಮಾ ಮುಗಿದಿಲ್ಲ. ರಿಲೀಸ್ ತಡವಾಗುತ್ತೆ ಎನ್ನಲಾಗುತ್ತಿತ್ತು. ಸದ್ಯ ಅದೆಲ್ಲದಕ್ಕೂ ತೆರೆ ಎಳೆದಿದ್ದು 2023 ಜನವರಿ 26ಕ್ಕೆ ಸಿನಿಮಾ ರಿಲೀಸ್ ಆಗುತ್ತೆ ಎಂದು ಕ್ರಾಂತಿ ತಂಡ ಹೇಳಿದೆ.

ಹಾಗೇ ಕ್ರಾಂತಿ ಪ್ಯಾನ್ ಇಂಡಿಯಾ ಸಿನಿಮಾ ಹೌದಾ ಅಲ್ವಾ? ಅನ್ನೋ ಗೊಂದಲಕ್ಕೂ ತೆರೆ ಬಿದ್ದಿಡು ಸ್ವತ: ದರ್ಶನ್ ಕ್ರಾಂತಿಯನ್ನು ಏನು? ಪ್ಯಾನ್ ಇಂಡಿಯಾ ಹೌದಾ ಅಲ್ವಾ? ಸಿನಿಮಾ ಕಥೆಯೇನು? ಅನ್ನೋದನ್ನು ಸವಿಸ್ತಾರವಾಗಿ ಬಿಡಿಸಿ ಇಟ್ಟಿದ್ದಾರೆ. ಅಲ್ಲದೇ ಶಿಕ್ಷಣ ವ್ಯವಸ್ಥೆ ಕುರಿತು ಕೂಡ ಮಾತನಾಡಿದ ದಚ್ಚು ಮಗನ ಶಾಲೆಯ ಫೀಸ್ ಬಗ್ಗೆ ಕೂಡ ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ದಚ್ಚು ನಾವು ಪ್ರಮುಖವಾಗಿ ಕನ್ನಡ ಸಿನಿಮಾ ಮಾಡುತ್ತಿದ್ದು ಪ್ಯಾನ್ ಇಂಡಿಯಾ ಸಿನಿಮಾವನ್ನೆಲ್ಲಾ ನಾವು ಯೋಚನೆ ಮಾಡಿಲ್ಲ. ನಾವು ಡಬ್ ಮಾಡುತ್ತೇವೆ ಕೊಡುತ್ತೇವೆ. ನಾವು ಅಲ್ಲಿಗೆ ಯಾವ ಪ್ರಚಾರಕ್ಕೂ ಕೂಡ ಹೋಗೋದಿಲ್ಲ. ನಾನಂತೂ ಹೋಗುತ್ತಿಲ್ಲ. ಸಾಕು ನಾನು ಇಲ್ಲಿ ಪ್ರಚಾರ ಮಾಡಿಕೊಳ್ಳುತ್ತೇನೆ.
ಮೇರಾ ಕುತ್ತಾ ಮೇರಾ ಗಲಿಮೇ ಶೇರ್. ಆ ಜಾತಿಗೆ ಸೇರಿದವನು ನಾನು ಎಂದು ದರ್ಶನ್ ಪ್ಯಾನ್ ಇಂಡಿಯಾ ಬಗ್ಗೆ ಮಾಹಿತಿ ನೀಡಿದ್ದಾರೆ. ಬಿ ಸುರೇಶ್ ಕ್ಲಾಸಿ ಡೈರೆಕ್ಟರ್ ಅನ್ನಬಹುದಾಗಿದ್ದು ಹರಿಕೃಷ್ಣ ಮಾಸಿ ಡೈರೆಕ್ಟರ್ ಅಂತ ಹೇಳಬಹುದು.

ಯಜಮಾನ ನೋಡಿದಾಗ ನಿಮಗೆ ಏನು ಅನಿಸುತ್ತದೆ ಇತ್ತ ಕ್ಲಾಸು ಇದೆ. ಅತ್ತ ಮಾಸ್ ಇದೆ ಅಂತ ಅನಿಸುತ್ತೆ. ಹರಿ ಪಕ್ಕಾ ಮಾಸ್. ಅವರಿಗೆ ಕ್ಲಾಸ್ ಎಲ್ಲಾ ಬರಲ್ಲ. ಹರಿ ಮಾತು ಎತ್ತಿದರೆ ಮೇಲೆನೇ ಹಾರುತ್ತಿರಬೇಕು. ಇವರು ಹಾಗಲ್ಲ ಕೆಳಗಡೆಯಿಂದ ಹೋಗಿ ಅಂತಾರೆ. ಸದ್ಯ ಇವರಿಬ್ಬರ ಕಾಂಬಿನೇಷನ್‌ನಲ್ಲಿ ಮಾಡಿದಂತಹ ಸಿನಿಮಾ. ಜನರಿಗೆ ಚಪ್ಪಾಳೆ ಹೊಡೆಯುವುದಕ್ಕೆ ಶಿಳ್ಳೆ ಹೊಡೆಯುವುದಕ್ಕೆ ಕೂಗಾಡುವುದಕ್ಕೆ ಕಿರುಚಾಡುವುದಕ್ಕೆ ಹಾಗೇ ಒಂದು ನೀತಿ ಕಥೆ ಹೇಳುವುದಕ್ಕೆ ಕ್ರಾಂತಿ ಸಿನಿಮಾವಿದೆ ಎಂದಿದ್ದಾರೆ.

ಇನ್ನು ಶಿಕ್ಷಣದ ವ್ಯವಸ್ಥೆ ಕುರಿತು ಮಾತನಾಡಿರುವ ದರ್ಶನ್ ರವರು ಹೊರಗಡೆ ನಾನು ನೋಡಿದ್ದೇನೆ. ಯುರೋಪ್ ಆಗಬಹುದು. ಯುಎಸ್ ಆಗಬಹುದು. ಶಿಕ್ಷಣ ಮತ್ತು ಆರೋಗ್ಯ ಎರಡೂ ಅಲ್ಲಿ ಉಚಿತ. ತಾರಕ್ ಶೂಟ್ ಮಾಡುವಾಗ ವೆನಿಸ್‌ಗೆ ಹೋಗಿದ್ದೆ. ಪ್ಲಾಸ್ಟಿಕ್ ರೈಸ್ ಅಂತ ಚೀನಾದ ಅಕ್ಕಿಯನ್ನೇ ನಿಲ್ಲಿಸಿಬಿಟ್ರು.

ಯಾಕೆ ನಿಲ್ಲಿಸಿದ್ರು ಅಂದ್ರೆ ಆ ಅಕ್ಕಿ ತಿಂದು ಏನಾದ್ರೂ ಆದ್ರೆ ಆಸ್ಪತ್ರೆಗೆ ನಾನು ದುಡ್ಡು ಕಟ್ಟಬೇಕಲ್ಲಾ ಅಂತ ನಿಲ್ಲಿಸಿತ್ತು. ನಮ್ಮಲ್ಲಿ ಅದು ಇಲ್ಲವಲ್ಲ. ಇಲ್ಲಿ ನಾನು ಸಿನಿಮಾ ಮಾಡಿದ ಕೂಡಲೇ ಎಜುಕೇಷನ್ ಸಿಸ್ಟಮ್ ಬದಲಾಗುತ್ತೆ ಅಂತಲ್ಲ. ಇವತ್ತು ಹಸು ಕರ ಹಾಕಿದ್ರೆ ಎರಡು ವರ್ಷ ಬೇಕು. ಅಲ್ಲಿವರೆಗೂ ಕಾಯ್ಬೇಕು.

ನಾನು ಓದ ಬೇಕಾಗಿದ್ದರೆ ನಲವತ್ತರಿಂದ ಐವತ್ತು ರೂಪಾಯಿ ಫೀಸ್ ಇತ್ತು.ಆದರೆ ಇಂದು ನಾನು ನನ್ನ ಮಗನನ್ನು ಓದಿಸುತ್ತಿದ್ದೇನೆ ಅವನಿಗೆ ವರ್ಷಕ್ಕೆ 8ಲಕ್ಷ ರೂ ಫೀಸ್ ಇದೆ. ಈಗ ಎಷ್ಟೋ ಜನ ಇಂಜಿನಿಯರ್ ಗಳು ಡಾಕ್ಟರ್ ಗಳು ಸರ್ಕಾರಿ ಶಾಲೆಯಿಂದ ನೇ ಬಂದಿದ್ದಾರೆ.

ಸರ್ಕಾರಿ ಹಾಗೂ ಖಾಸಗಿ ಶಾಲೆಗಿಂತ ಆಗುತ್ತಿರುವ ಕೆಲವು ಕಷ್ಟಗಳ ಕುರಿತು ಸಿನಿಮಾದಲ್ಲಿ ತೋರಿಸಲಾಗಿದೆ ಎಂದು ಹೇಳಿದ್ದಾರ ಡಿ ಬಾಸ್ ದರ್ಶನ್. ಒಟ್ಟಾರೆಯಾಗಿ ಕ್ರಾಂತಿ ಸಿನಿಮಾ ಶಿಕ್ಷಣ ವ್ಯವಸ್ಥೆಯ ಕುರಿತು ಇರಲಿದೆ ಎಂಬುದು ದರ್ಶನ್ ರವರ ಮಾತಿನಿಂದ ಕಂಡುಬಂದಿದ್ದು ಸಿನಿಮಾಗಾಗಿ ಜನವರಿ ತಿಂಗಳ ವರೆಗೂ ಕಾಯಬೇಕಿದೆ.