Surya: ನಟ ಸೂರ್ಯನಿಗೆ ರಾಷ್ಟ್ರಪ್ರಶಸ್ತಿ ಕೊಡುವಾಗ ಫೋಟೋ ತೆಗೆದ ಪತ್ನಿ ಜ್ಯೋತಿಕಾ , ವಿಡಿಯೋ ವೈರಲ್
ಸದ್ಯ ಇಂದು ನಟ ಸೂರ್ಯ ರವರ ಬಗ್ಗೆ ಮಾತನಾಡಲು ಒಂದು ಕಾರಣವಿದೆ. ಹೌದು 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಇಂದು ದೆಹಲಿಯಲ್ಲಿ ನಡೆದಿದ್ದು ಅದ್ಭುತ ನಟನೆಗಾಗಿ ಸೂರ್ಯ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿ ಪ್ರದಾನ ಮಾಡಿದರು.
ನಟ ಸೂರ್ಯ, ಬಹುಶಃ ಈ ಹೆಸರನ್ನ ಕೇಳದೇ ಇರುವ ಒಬ್ಬನೇಒಬ್ಬ ಸಿನಿ ರಸಿಕ ಕೂಡ ಇಲ್ಲ ಎನ್ನಬಹುದು. ಹೌದು ತಮಿಳು ಚಿತ್ರರಂಗದಲ್ಲಿ ನೈಜ ನಟನೆ ನೈಜ ಆಧಾರಿತ ಸಿನಿಮಾಗಳನ್ನು ಮಾಡುವ ಮೂಲಕ ತನ್ನದೇ ಆದ ಛಾಪು ಮೂಡಿಸಿರುವ ನಟ ಸೂರ್ಯ ರವರು ಸುಮಾರು ಎರಡು ದಶಕಗಳಿಂದ ಅಕ್ಷರಶಃ ತಮಿಳು ಚಿತ್ರರಂಗವನ್ನು ಆಳುತ್ತಿದ್ದಾರೆ. ಕೇವಲ ತಮಿಳು ಮಾತ್ರವಲ್ಲದೇ ಇಡೀ ಭಾರತಾದ್ಯಂತ ಅಭಿಮಾನಿ ಬಳಗ ಹೊಂದಿರುವ ಸೂರ್ಯ ಸಮಾಜ ಸೇವೆಯಲ್ಲೂ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಅಂದಿನ ಕಾಲದ ತಮಿಳು ಚಿತ್ರರಂಗದ ಖ್ಯಾತ ನಟ ಶಿವಕುಮಾರ್ ರವರ ಮಗನೇ ಈ ಸೂರ್ಯ ಕುಮಾರ್. ದೊಡ್ಡ ಸ್ಟಾರ್ ನಟನ ಮಗನಾಗಿದ್ದರೂ ಕೂಡ ಸೂರ್ಯರವರಿಗೆ ಯಶಸ್ಸು ಅಷ್ಟು ಸುಲಭವಾಗಿ ಧಕ್ಕಲಿಲ್ಲ. ಹೌದು ತನ್ನ ಸ್ವಂತ ಪ್ರತಿಭೆಯಿಂದ ಸಿನಿಮಾ ರಂಗದಲ್ಲಿ ಮೇಲೆ ಬಂದು ಈಗ ತನ್ನದೇ ಆದ ಇಮೇಜ್ ಹೊಂದಿದ್ದಾರೆ.ಇನ್ನು ಸೂರ್ಯ ರವರ ತಂದೆ 60ರ ದಶಕದಲ್ಲಿಯೇ ಹೀರೋ ಆಗಿ ಖ್ಯಾತರಾಗಿದ್ದು ಆದರೆ ತಂದೆಯ ಹೆಸರು ಪ್ರಭಾವ ಬಳಸದೇ ಏನಾದರೂ ಕೂಡ ಮಾಡಲೇಬೇಕು ಎಂಬ ಛಲ ತೊಟ್ಟಿದ್ದ ಸೂರ್ಯ ರವರು.
ಒಂದು ವರ್ಷಗಳ ಕಾಲ ಗಾರ್ಮೆಂಟ್ ಎಕ್ಸ್ ಫೋರ್ಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿದ್ದು ಮೊದಲ ತಿಂಗಳು ಸಿಕ್ಕಿದ ಒಂದು ಸಾವಿರ ರೂಪಾಯಿ ಸಂಬಳದಲ್ಲಿ ತನ್ನ ತಾಯಿಗೆ ಸೀರೆಯನ್ನು ಕೊಂಡೊಯ್ದಿದ್ದರು. ಆದರೆ ಮಾತ್ರ ಆ ಕೆಲಸದಲ್ಲಿ ಅವರಿಗೆ ತೃಪ್ತಿ ಸಿಗಲಿಲ್ಲ. ಇನ್ನು ಕೆಲವು ಸಿನಿಮಾ ಆಫರ್ ಗಳನ್ನು ತಿರಸ್ಕರಿಸಿದ Surya ರವರು 1997 ರಲ್ಲಿ ಮಣಿರತ್ನಂ ರವರ ನಿರ್ಮಾಣದ ಸಿನಿಮಾವೊಂದರಲ್ಲಿ ನಾಯಕ ನಟನಾಗಿ ಚಿತ್ರರಂಗ ಪ್ರವೇಶ ಮಾಡಿದರು. ದೊಡ್ಡ ಸ್ಟಾರ್ ನಟನ ಮಗನಾಗಿದ್ದರೂ ಕೂಡ ಸೂರ್ಯರವರಿಗೆ ಯಶಸ್ಸು ಅಷ್ಟು ಬೇಗ ಸಿಕ್ಕಿರಲಿಲ್ಲ. ಆರಂಭದಲ್ಲಿ ಹಲವು ಸಿನಿಮಾಗಳು ಯಶಸ್ಸು ಗಳಿಸಿಲ್ಲವಾಗಿತ್ತು.
ತದನಂತರ 2001ರಲ್ಲಿ ತೆರೆಕಂಡ ನಂದಾ ಸಿನಿಮಾ ಸೂರ್ಯರವರಿಗೆ ದೊಡ್ಡ ಮಟ್ಟದ ಬ್ರೇಕ್ ನೀಡಿದ್ದು ತಮಿಳುನಾಡು ರಾಜ್ಯ ಪ್ರಶಸ್ತಿ ಕೂಡಾ ದೊರಕಿತ್ತು. ಹೌದು ಸಿನಿ ಜೀವನದಲ್ಲಿ ಸೂರ್ಯ ಅವರಿಗೆ ಟರ್ನಿಂಗ್ ಪಾಯಿಂಟ್ ಕೊಟ್ಟಿದ್ದೇ ಈ ಸಿನಿಮಾ. ಆ ಬಳಿಕ ಹಿಂತಿರುಗಿ ನೋಡಿದ್ದೇ ಇಲ್ಲ. ಸೂರ್ಯ ರವರ ನಟನೆಯ ಬಹುತೇಕ ಎಲ್ಲ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಲಾಗಿದ್ದು ಅವರ ತಮ್ಮ ಕಾರ್ತಿಕ್ ಕೂಡ ತಮಿಳಿನ ಸ್ಟಾರ್ ನಟರಾಗಿ ಮಿಂಚುತ್ತಿದ್ದಾರೆ.
ಸದ್ಯ ಇಂದು ನಟ ಸೂರ್ಯ ರವರ ಬಗ್ಗೆ ಮಾತನಾಡಲು ಒಂದು ಕಾರಣವಿದೆ. ಹೌದು 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಇಂದು ದೆಹಲಿಯಲ್ಲಿ ನಡೆದಿದ್ದು ಅದ್ಭುತ ನಟನೆಗಾಗಿ ಸೂರ್ಯ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿ ಪ್ರದಾನ ಮಾಡಿದರು. ಹೌದು ಈ ಅದ್ಭುತ ಕ್ಷಣವನ್ನು ಸ್ಟಾರ್ ದಂಪತಿ ಪರಸ್ಪರ ಫೋಟೋದಲ್ಲಿ ಸೆರೆ ಹಿಡಿದು ಖುಷಿಪಟ್ಟಿದ್ದಾರೆ.ಸೆಪ್ಟೆಂಬರ್ 30 ರಂದು ದೆಹಲಿಯ ವಿಗ್ಯಾನ್ ಭವನದಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದ್ದಯ ಜ್ಯೋತಿಕಾ ಅವರಿಗೆ ಸೂರರೈ ಪೊಟ್ರು ಚಿತ್ರಕ್ಕಾಗಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಲಭಿಸಿತು.
ಕನ್ನಡದ ಅತ್ಯುತ್ತಮ ಪರಿಸರ ಸಂರಕ್ಷಣಾ ಚಿತ್ರವಾಗಿ ತಲೆದಂಡ ಅತ್ಯುತ್ತಮ ಆಡಿಯೋಗ್ರಫಿಗಾಗಿ ಡೊಳ್ಳು ಚಿತ್ರ ಸಾಂಸ್ಕೃತಿಕ ವಿಭಾಗದಲ್ಲಿ ಗಿರೀಶ್ ಕಾಸರವಳ್ಳಿ ನಿರ್ದೇಶನದ ನಾದದ ನವನೀತ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗಿದ್ದು ಇನ್ನು ಪ್ರಶಸ್ತಿ ಸ್ವೀಕರಿಸಲು ದೇಶಾದ್ಯಂತದ ಚಲನಚಿತ್ರ ಕಲಾವಿದರು ಹಾಗೂ ನಟರು ಸಮಾರಂಭದಲ್ಲಿ ಭಾಗಿಯಾಗಿದ್ದರು.
ಹಿರಿಯ ನಟಿ ಆಶಾ ಪರೇಖ್ ಅವರು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದರು. ಶಿವರಂಜನಿ ಸೇರಿದಂತೆ ಹಲವು ಚಲನಚಿತ್ರ ಕಲಾವಿದರುಗಳು 2020 ರ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದು ನಿರ್ದೇಶಕರಾದ ಸುಧಾ ಕೊಂಗರ ವಸಂತ್ ಮಂಡೇಲಾ ನಿರ್ದೇಶಕ ಮಡೋನ್ ಅಶ್ವಿನ್ ಸಂಗೀತ ಸಂಯೋಜಕ ಜಿ.ವಿ. ಪ್ರಕಾಶ್ ಕುಮಾರ್ ಎಸ್.ಥಮನ್ (ವೈಕುಂಡಪುರಂ ಲೋ – ತೆಲುಗು) ಮತ್ತಿತರರು ಭಾಗವಹಿಸಿ ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಿದ್ದಾರೆ.