Roopesh Rajanna: ಬಿಗ್ಬಾಸ್ ಮನೆಗೆ ಯಾವತ್ತೂ ಕಾಲಿಡಲ್ಲ ಎಂದಿದ್ದ ರೂಪೇಶ್ ರಾಜಣ್ಣ, ಮತ್ತೆ ಬಂದಿದ್ದೇಕೆ ಕಾರಣ ಬಯಲಿಗೆ
ರೂಪೇಶ್ ಈ ಹಿಂದೆ ನೀಡಿದ ಹೇಳಿಕೆ ಹಾಗೂ ಈಗ ಬಿಗ್ ಬಾಸ್ ಗೆ ತಾವೇ ಸ್ವತಃ ಹೋಗುವುದರ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ.
ಸಾಕಷ್ಟು ವೇದಿಕೆಗಳ ಮೇಲೆ ಕನ್ನಡದ ಪರ ಧ್ವನಿ ಎತ್ತಿದಂತಹ ರೂಪೇಶ್ ರಾಜಣ್ಣ ರವರು ಸದ್ಯ ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ 9 ಶೋಗೆ ಕಾಲಿಟ್ಟಿದ್ದು ಈ ಹಿಂದೆ ಕಿಚ್ಚ ಸುದೀಪ್ ರವರು ಜಡ್ಜ್ ಆಗಿದ್ದಂತಹ ಕಾರ್ಯಕ್ರಮದಲ್ಲಿ ಹಾಡು ಹಾಡಿದ್ದ ರೂಪೇಶ್ ರಾಜಣ್ಣ ಇದೀಗ ಬಿಗ್ ಬಾಸ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ಮುಂದೆ ಮುಖಾಮುಖಿಯಾಗಿದ್ದಾರೆ. ನೀವು ಕನ್ನಡದ ಬಗ್ಗೆ ಧ್ವನಿ ಎತ್ತಿದ್ರಿ ಅದು ಒಮ್ಮೆಯೇ ಏಳು ಕೋಟಿ ಜನರಿಗೆ ಗೊತ್ತಾಗಿದ್ದು ಬುರ್ಜ್ ಖಲೀಫಾ ಕಟ್ಟಡದ ಮೇಲೆ ಕನ್ನಡದ ಬಾವುಟ ಹಾರಿಸಿದ್ರಿ.
ಸಮಸ್ತ ಕರ್ನಾಟಕದ ಪರವಾಗಿ ನಾನು ನಿಮಗೆ ಧನ್ಯವಾದ ಹೇಳುತ್ತಿದ್ದು ನನಗೆ ಕೋಪ ಜಾಸ್ತಿ ಅಳೋದು ಕಮ್ಮಿ. ಆದರೆ ಕೋಪ ಬಂದರೆ ಮಾತ್ರ ಯಾರಿಗೂ ಬರದಷ್ಟು ಕೋಪ ಬರತ್ತದೆ ಎಂದಿರುವ Roopesh Rajanna ನಾನು ಕನ್ನಡದ ಪರ ಹೋರಾಟ ಮಾಡುತ್ತೇನೆ. ಹಾಗಂತ ಬೇರೆ ಭಾಷೆಯನ್ನು ವಿರೋಧಿಸುತ್ತೇನೆ ಎಂದರ್ಥವಲ್ಲ. ಬೇರೆ ಭಾಷೆಯನ್ನು ಹೇರಿಕೆ ಮಾಡಿದರೆ ಸಹಿಸೋದಿಲ್ಲ ಎಂದಿದ್ದಾರೆ ರೂಪೇಶ್ ರಾಜಣ್ಣ.ಸದ್ಯ ಬಿಗ್ ಬಾಸ್ ಮನೆಯೊಳಗೂ ಕೂಡ ಕೆಲವು ಹೋರಟ ಮಾಡಿತ್ತಾ ಮನೆಯ ಸದಸ್ಯರ ಕೆಂಗಣ್ಣಿಗೆ ತುತ್ತಾಗಿರುವ ರೂಪೇಶ್ ರಾಜಣ್ಣ ಈ ಹಿಂದೆ ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ ಸಾಕಷ್ಟು ಮಾತನಾಡಿದ್ದರು.
ಹೌದು ಬಿಗ್ ಬಾಸ್ ನ್ನ ಕನ್ನಡದಲ್ಲಿಯೇ ಬರೆಯಬೇಕು ಎಂದು ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದು ಅಷ್ಟೇ ಅಲ್ಲದೆ ಬಿಗ್ ಬಾಸ್ ಎನ್ನುವ ಹೆಸರನ್ನು ಕನ್ನಡದಲ್ಲಿ ಬರೆಯಲ್ಲ ಅಂದ ಮೇಲೆ ಬಿಗ್ ಬಾಸ್ ಮನೆಯಲ್ಲಿ ಮಾತ್ರ ಕನ್ನಡದಲ್ಲಿ ಮಾತನಾಡಿ ಎಂದು ಯಾಕೆ ಹೇಳುತ್ತೀರಾ ಎಂದೆಲ್ಲ ಬಿಗ್ ಬಾಸ್ ಬಗ್ಗೆ ಸಾಕಷ್ಟು ಟೀಕೆ ಮಾಡಿದ್ದರು. ಅಲ್ಲದೇ ರಾಜಣ್ಣ ಅವರ ಕಂಪ್ಲೈಂಟ್ ಅಲ್ಲಿನ ಆಯೋಜಕರು ಕನ್ನಡದಲ್ಲಿ ಹೆಸರು ಇದ್ದರೆ ನಮಗೆ ಜಾಹಿರಾತು ಬರಲ್ಲ ಕಮಾಯಿ ಆಗಲ್ಲ ಎಂದು ಹೇಳಿದ್ದರಂತೆ.
ರಾಜಣ್ಣ ಅವರು ಹೀಗೆ ಮಾತನಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು ಸದ್ಯ ಇದೀಗ ಅದೇ ರಾಜಣ್ಣ ಬಿಗ್ ಬಾಸ್ ಮನೆ ಸೇರಿದ್ದಾರೆ. ಹಾಗಾಗಿ ರೂಪೇಶ್ ಈ ಹಿಂದೆ ನೀಡಿದ ಹೇಳಿಕೆ ಹಾಗೂ ಈಗ ಬಿಗ್ ಬಾಸ್ ಗೆ ತಾವೇ ಸ್ವತಃ ಹೋಗುವುದರ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ. ಬಿಗ್ ಬಾಸ್ ಬಗ್ಗೆ ಕೆಟ್ಟದಾಗಿ ಮಾತನಾಡಿದ ರೂಪೇಶ್ ರಾಜಣ್ಣ ರವರೇ ಇಂದು ಬಿಗ್ ಬಾಸ್ ಮನೆಯಲ್ಲಿ ಆಟವಾಡಲು ಹೋಗಿದ್ದು ನಿಜಕ್ಖೂ ಜನರಿಗೆ ಶಾಕಿಂಗ್ ಆಗಿದ್ದು ಹೊರಗಡೆ ಇದ್ದಾಗಲೆಲ್ಲಾ ಬಿಗ್ ಬಾಸ್ ಗೆ ಬೈದಿದ್ದ ರಾಜಣ್ಣ ಈಗ ಹೇಗೆ ಮನೆಯೊಳಗೆ ಹೋಗಲು ಸಾಧ್ಯವಾಯಿತು
. ಹಾಗಾದರೆ ಇವರ ಹೋರಾಟಗಳೆಲ್ಲವೂ ಕೂಡ ಬೂಟಾಟಿಕೆನಾ ಅಂತಲೇ ಜನ ಮಾತನಾಡಿಕೊಳ್ಳುತ್ತಿದ್ದು ಇನ್ನು ರೂಪೇಶ್ ಅವರ ಬಗ್ಗೆ ಇನ್ನೊಂದು ಬಗೆಯ ಟ್ರೋಲ್ ಕೂಡ ಆಗುತ್ತಿದೆ. ಹೌದು ಬಿಗ್ ಬಾಸ್ ಮನೆಯ ಒಳಗಿರುವ ಸ್ಪರ್ಧಿಗಳೇ ಕನ್ನಡ ಪರ ಹೋರಾಟಗಾರನಿಗೆ ಕನ್ನಡ ಕಲಿಸಲು ಹೊರಟಿದ್ದು ಈ ಬಾರಿಯ ಬಿಗ್ ಬಾಸ್ ಗೆ ಮತ್ತೆ ಬಂದಿರುವ ನಟಿ ದೀಪಿಕಾ ದಾಸ್ ರವರು ಬಾಟಲಿಗೆ ಶೀಶ/ಶೀಶೆ ಅಂತಲೂ ಹೇಳುತ್ತಾರೆ ಎಂದು ಹೇಳಿದ್ದಕ್ಕೆ ಇದು ನನಗೆ ಗೊತ್ತಿಲ್ಲ ಎಂದಿದ್ದಾರೆ ರೂಪೇಶ್ ರವರು. ಈ ಕಾರಣದಿಂದಾಗಿ ಇದೂ ಕೂಡ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದು ಕನ್ನಡ ಕನ್ನಡ ಅಂತ ಬಾಯಿಬಡಿದುಕೊಳ್ಳುವ ರೂಪೇಶ್ ರಾಜಣ್ಣಗೆ ಇಷ್ಟು ಸಣ್ಣ ಕನ್ನಡ ಪದವೂ ಗೊತ್ತಿಲ್ಲವೇ? ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.