ವಾರ್ತಾ ಮಂಜರಿ
Trending Stories, Viral News, Gossips & Everything in Kannada

Rekha Jagadeesh: ಮಗನ ಮೇಲೆ ಬಂದ ಆರೋಪದ ಬಗ್ಗೆ ಬೇರೆ ಸತ್ಯ ತಿಳಿಸಿದ ಅಪ್ಪು ಪಪ್ಪು ಖ್ಯಾತಿ ನಟನ ತಾಯಿ

ಸದ್ಯ ಇದೀಗ ಮತ್ತೆ ಶ್ರೀಮಂತಿಕೆಯ ಅಮಲು ಮುಂದುವರೆದಿದ್ದು ಚಿತ್ರರಂಗದ ಖ್ಯಾತ ಹಾಗೂ ಜನಪ್ರಿಯ ನಿರ್ಮಾಪಕನ ಮಗನಿಂದ ಮತ್ತೆ ಕಿರಿಕ್ ನಡೆದಿದೆ ಎನ್ನಲಾಗಿದೆ.

377

ಸದ್ಯ ಇದೀಗ ಮತ್ತೆ ಶ್ರೀಮಂತಿಕೆಯ ಅಮಲು ಮುಂದುವರೆದಿದ್ದು ಚಿತ್ರರಂಗದ ಖ್ಯಾತ ಹಾಗೂ ಜನಪ್ರಿಯ ನಿರ್ಮಾಪಕನ ಮಗನಿಂದ ಮತ್ತೆ ಕಿರಿಕ್ ನಡೆದಿದೆ ಎನ್ನಲಾಗಿದೆ. ಹೌದು ಎರಡ್ಮೂರು ಚಿತ್ರದಲ್ಲಿ ನಟಿಸಿರುವ ನಿರ್ಮಾಪಕನ ಪುತ್ರ ಇದೀಗ ಮತ್ತೆ ಕಿರಿಕ್ ಮಾಡಿದ್ದಯ ತನ್ನ ಮಗ ತಪ್ಪು ಮಾಡಿದ್ರೂ ಆತನ ಅಪ್ಪ ಕ್ಯಾರೆ ಎನ್ನುತ್ತಿಲ್ಲ. ಹೌದು ಕಂಡ ಕಂಡ ಮಹಿಳೆಯರ ಜೊತೆ ಕಿರಿಕ್ ಮಾಡುತ್ತಿರುವ ಈತ ನಿನ್ನನ್ನು ಕೆಡಿಸುತ್ತೀನಿ ಎಂದು ಅವಾಜ್ ಹಾಕುತ್ತಾನಂತೆ.

ಈ ಹಿಂದೆ ದೂರು ದಾಖಲಾಗಿ ಅವಾಂತರವಾದ್ರೂ ಈ ನಿರ್ಮಾಪಕರ ಪುತ್ರ ಬುದ್ದಿ ಕಲಿತ್ತಿಲ್ಲ ಅಪ್ಪನ ಶ್ರೀಮಂತಿಕೆಯಿಂದ ಮಗ ಪೋಲಿ ಬಿದಿದ್ದು ಅಹಂಕಾರದಿಂದ ಜನರನ್ನು ನೋಡಿ ಅವರ ಮೇಲೆ ದರ್ಪ ಮೆರೆಯುತ್ತಿದ್ದಾನಂತೆ. ಈ ಹಿಂದೆ ಖ್ಯಾತ ನಿರ್ಮಾಪಕನ ಮಧ್ಯಸ್ಥಿಕೆಯಲ್ಲಿ ಪ್ರಕರಣ ಸುಖಾಂತ್ಯಗೊಂಡಿತದ್ದು ಆದರೆ ಈಗ ಈತನ ಮೇಲೆ ಅಸಭ್ಯ ವರ್ತನೆ ಸೇರಿ ಹಲವು ಪ್ರಕರಣಗಳಿವೆ.

ಹೌದು ಮಹಿಳೆಗೆ ಸೀರೆ ಬಿಚ್ಚಿ ಹೊಡೀತಿನಿ ಆ ರೀತಿ ಮಾಡ್ತಿನಿ ಎಂದೆಲ್ಲಾ ಅವಾಜ್ ಹಾಕಿದ್ದು ಗಂಡನ ಎದುರೇ ಆತನ ಪತ್ನಿಗೆ ಸೀರೆ ಬಿಚ್ಚಿ ಹೊಡಿತಿನಿ ಎಂದು ಅವಾಜ್ ಹಾಕಿದ್ದಾನಂತೆ. ಹೌದು ಸಿನಿಮಾಗಳಲ್ಲಿ ಹೀರೋ ಆಗಿ ನಟಿಸಿದ್ದವನೇ ಈಗ ವಿಲನ್ ಆಗಿದ್ದು ಮೊದಲು ಕಂಡಕಂಡವರ ಮೇಲೆ ದರ್ಪ ಮಾಡ್ತಿದ್ದವನಂತೆ. ಸದ್ಯ ಈಗ ಬೆಳೆಯುತ್ತಿದ್ದಂತೆ ಕೆಡುಸುತ್ತೀನಿ ಎಂದು ಅವಾಜ್ ಹಾಕಿದ್ದಾನಂತೆ.

ಅಷ್ಟಕ್ಕೂ ಈತ ಯಾರು ಗೊತ್ತೆ? ಅಪ್ಪು ಪಪ್ಪು ಸಿನಿಮಾದ ಹೀರೋ. ಹೌದು ರೇಖಾ ಜಗದೀಶ್ ಹಾಗು ಸೌಂದರ್ಯ ಜಗದೀಶ್ ಪುತ್ರ ಸೇಹೀತ್. ಈತ ತನ್ನ ಸಹಚರರ ಜೊತೆಗೆ ಜಾಗ್ವಾರ್ ಕಾರ್‍ನಲ್ಲಿ ಬಂದು ದಂಪತಿಗಳನ್ನು ಅಡ್ಡ ಗಟ್ಟಿ ಅವಾಜ್ ಹಾಕಿದ್ದು ಕಾರು ಓಡಿಸುವ ವಿಚಾರವಾಗಿ ಕಿರಿಕ್ ಮಾಡಿದ್ದಾನಂತೆ. ಹೌದು ಕೆಟ್ಟ ಶಬ್ಧಗಳಿಂದ ನಿಂದಿಸಿದಕ್ಕೆ ಅನ್ನಪೂರ್ಣ ಮತ್ತು ರಜತ್ ಗೌಡ ದಂಪತಿ ಪ್ರಶ್ನಿಸಿದ್ದರು. ಹೀಗೆ ಪ್ರಶ್ನಿಸಿದಕ್ಕೆ ಸ್ನೇಹಿತ್ ಹಾಗೂ ಆತನ ಸಹಚರರು ಸೇರಿ ಮಹಿಳೆಯನ್ನು ಕಾರಿನಿಂದ ಹೊರಗೆಳೆದು ದರ್ಪ ನಡೆಸಿದ್ದಾರಂತೆ.

ಇವರಿಂದ ತಪ್ಪಿಸಿಕೊಂಡು ಹೋಗುವಾಗ ಬೆನ್ನಟ್ಟಿ ಮನೆ ಬಳಿ ಬಂದು ನಿನ್ನನ್ನು ಕೆಡಿಸುತ್ತೀನಿ ಅಂತಾ ಅವಾಜ್ ಹಾಕಿದ್ದಾನಂತೆ. ಈ ಬಗ್ಗೆ ಮಹಾಲಕ್ಷ್ಮಿ ಲೇಔಟ್‍ನಲ್ಲಿ ದೂರು ದಾಖಲಾಗಿದೆ. ಈ ಸಂಬಂಧ ಸ್ನೇಹಿತ ತಂದೆ ಸೌಂದರ್ಯ ಜಗದೀಶ್ ಹಾಗೂ Rekha Jagadeesh  ಖಾಸಗಿ ಹೋಟೆಲ್​ನಲ್ಲಿ ಸುದ್ದಿಗೋಷ್ಠಿ ನಡೆಸಿ ನನ್ನ ಮಗ ಭವಿಷ್ಯ ಹಾಳು ಮಾಡೋದಿಕ್ಕೆ ಅನ್ನಪೂರ್ಣ ಈ ರೀತಿ ಮಾಡುತ್ತಾ ಇದ್ದಾರೆ ಅಂತಾ ಆರೋಪಿಸಿದ್ದಾರೆ. ಬೆಳಗ್ಗೆಯಿಂದ ನಾನು ಮಾಧ್ಯಮಗಳನ್ನ ನೋಡುತ್ತಿದ್ದೇವೆ.

ನನ್ನ ಮಗನಿಗೆ ತುಂಬಾ ತೊಂದರೆಯಾಗಿದ್ದು ಈ ಹಿಂದೆ ಕಂಪ್ಲೇಂಟ್ ಕೊಟ್ಟು ತೊಂದರೆ ಕೊಟ್ರು. ನಮ್ಮ ಮಗನ ಕೆರಿಯರ್ ಹಾಳು ಮಾಡೋದಕ್ಕೆ ಟ್ರೈ ಮಾಡ್ತಿದ್ದಾರೆ. ಸುಖಾ ಸುಮ್ಮನೆ ಸುಳ್ಳು ಕಂಪ್ಲೇಂಟ್ ಕೊಟ್ಟು ನಮ್ಮ ನೆಮ್ಮದಿ ಹಾಳು ಮಾಡುತ್ತಿದ್ದಾರೆ. ಯಾಕೆ ಈ ರೀತಿ ಮಾಡ್ತಿದ್ದಾರೋ ಗೊತ್ತಿಲ್ಲ. ರಕ್ಷಿತ್ ನಮ್ಮ ಚಾಲಕ. ಆತನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದಿದ್ದಾರೆ.

ರಕ್ಷಿತ್ ನಮ್ಮ ಬಳಿ ಹಲವು ಬಾರಿ ಹೇಳಿದ್ದು ಆಮೇಲೆ ರಕ್ಷಿತ್ ಕಂಪ್ಲೆಂಟ್ ಕೊಟ್ಟಿದ್ದಾರೆ. ಇನ್ನು ರಜತ್ ಮತ್ತು ಶಮಂತ್ ಮೇಲೆ ದೂರು ಕೊಟ್ಟಿದ್ರೂ. ದೂರನ್ನ ಹಿಂಪಡೆಯಲು ಬೆದರಿಕೆ ಹಾಕಿದ್ರು. ಆದರೆ ದೂರನ್ನ ರಕ್ಷಿತ್ ಹಿಂಪಡೆಯಲು ನಿರಾಕರಿಸಿದ್ದರು. ಅದಕ್ಕೆ ಅವರು ಎರಡು ದಿನಗಳ ನಂತರ ಹೋಗಿ ಸುಳ್ಳು ದೂರು ಕೊಟ್ಟಿದ್ದಾರೆ. ರಜತ್ ಪತ್ನಿ ಮೇಲೆ ನನ್ನ ಮಗ ಹಲ್ಲೆ ಮಾಡಿದ್ದಾನೆ ಅಂತಾ ಸುಳ್ಳು ಕೇಸ್ ಕೊಟ್ಟಿದ್ದಾರೆ. ಆದರೆ ಆ ಸಮಯದಲ್ಲಿ ನನ್ನ ಮಗ ಇರಲೇ ಇಲ್ಲ. ಅದಕ್ಕೆ ನನ್ನ ಬಳಿಯೂ ಸಾಕ್ಷಿ ಇದೆ ಅಂತಾ ಆರೋಪಗಳನ್ನ ಸೌಂದರ್ಯ ಜಗದೀಶ್ ಮಾಡಿದ್ದಾರೆ.

ತಮ್ಮ ಮಗನ ಬಗ್ಗೆ ಮಾತನಾಡಿದ ಅವರು ಅವನಿಗೆ ಒಂದು ಕೆಟ್ಟ ಅಭ್ಯಾಸ ಇಲ್ಲ. ಅವನ ಮುಂದಿನ ಭವಿಷ್ಯಕ್ಕೆ ಏನು ಬೇಕು ಅದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾನೆ. ಯಾರದೇ ವಿಷಯ ಬಂದರೂ ಸ್ನೇಹಿತ್‌ ಜಗದೀಶ್ ಎಂದು ಅವನ ಮೇಲೆ ಆರೋಪ ಮಾಡುತ್ತಾರೆ. ಅವನು ಇನ್ನು ಸ್ಟೂಡೆಂಟ್‌ ಮುಗ್ಧ ಅವನು ಅವನು ಇನ್ನೂ ಬೆಳೆಯೋದಿದೆ. ಅವನಿಗೆ ಒಂದು ಬದುಕಿದೆ. ಅವನು ಕೆಟ್ಟವನಲ್ಲ. ಸೀರೆ ಬಿಚ್ಚುವಷ್ಟು ಕೆಟ್ಟವನಲ್ಲ ಅವನು ತುಂಬಾ ಒಳ್ಳೆಯವನು ಚಿನ್ನ ಅವನು ಅಂತವನ ಬಗ್ಗೆ ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಇವರಿಂದದ ನಮಗೆ ಬದುಕೋಕೆ ಆಗುತ್ತಿಲ್ಲ ಎಂದಿದ್ದಾರೆ. ಒಟ್ಟಾರೆ ಈ ಪ್ರಕರಣ ಯಾವ ಹಂತ ತಲುಪುತ್ತದೋ ಕಾದು ನೋಡಬೇಕಿದೆ.